Connect with us

    LATEST NEWS

    Watch Video: ಜ್ಯೂಸ್ ಹೆಸರಿನಲ್ಲಿ ವಿಷ ಕುಡಿಸುತ್ತಿದ್ದಾರೆ ಇವರು:; ಎಚ್ಚರ ತಪ್ಪಿದರೆ ನಿಮ್ಮ ಜೀವಕ್ಕೇ ಗ್ಯಾರಂಟಿ ಇಲ್ಲ!

    Published

    on

    ಜ್ಯೂಸ್ ಹೆಸರಿನಲ್ಲಿ ಮಾರುಕಟ್ಟೆಗೆ ಈಗ ಸ್ಲೋ ಪಾಯಿಸನ್ ಅಂದ್ರೆ ವಿಷ ಎಂಟ್ರಿ ಆಗುತ್ತಿದೆ, ಇದು ನಿಮ್ಮ ಮಕ್ಕಳು ಮತ್ತು ನಿಮ್ಮ ದೇಹಕ್ಕೆ ಸೇರಿದರೆ ಅದರಿಂದ ದೊಡ್ಡ ಸಮಸ್ಯೆ ಗ್ಯಾರಂಟಿ. ಹೀಗೆ ಆಹಾರ ತಜ್ಞರು & ವೈದ್ಯರು ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಜ್ಯೂಸ್ ಬಗ್ಗೆ ವಾರ್ನಿಂಗ್ ಕೊಡುತ್ತಿದ್ದಾರೆ.

    ಅದರಲ್ಲೂ ಜ್ಯೂಸ್‌ಗೆ ಆಯುರ್ವೇದದ ಹೆಸರು ಕೊಟ್ಟು ದಾರಿ ತಪ್ಪಿಸುವ ಜನರು ಕೂಡ ಇದೀಗ ಮಾರುಕಟ್ಟೆಗೆ ಬಂದಿದ್ದು, ಸಾಕಷ್ಟು ದೊಡ್ಡ ಸಮಸ್ಯೆಗಳು ಎದುರಾಗಿ ಒದ್ದಾಡುವ ಪರಿಸ್ಥಿತಿ ಬಂದುಬಿಟ್ಟಿದೆ.

    ಹೌದು, ಗ್ರಾಹಕರಿಗೆ ಮೋಸ ಮಾಡಲು ಅಂತಾನೇ ಹಲವು ಕಂಪನಿಗಳು ಹುಟ್ಟಿಕೊಂಡಿವೆ. ಅದರಲ್ಲೂ ನಿಮ್ಮ ಆರೋಗ್ಯ ಸರಿಯಾಗುತ್ತೆ, ನಿಮ್ಮ ಆರೋಗ್ಯಕ್ಕೆ ಇದು ಉತ್ತಮ ಎನ್ನುತ್ತ ವಿಷವನ್ನೇ ತಿನ್ನಿಸುವ ವಸ್ತುಗಳು ಹೆಚ್ಚಾಗುತ್ತಿವೆ. ಈ ಪೈಕಿ ಜ್ಯೂಸ್‌ಗಳು ಕೂಡ ಆರೋಗಕ್ಕೆ ಭಾರಿ ಡೇಂಜರ್ ಎಂಬ ಆರೋಪವನ್ನ ವೈದ್ಯರು ಮಾಡುತ್ತಾರೆ. ಅದರಲ್ಲೂ ಕೆಲವರು ಈ ನಿಮ್ಮ ಆರೋಗ್ಯದ ಹೆಸರನ್ನೇ ಬಂಡವಾಳ ಮಾಡಿಕೊಂಡು, ವಿಷಕಾರಿ ಜ್ಯೂಸ್ ಮಾರಾಟ ಮಾಡುತ್ತಾರೆ ಹುಷಾರ್ ಅಂತಿದ್ದಾರೆ ವೈದ್ಯರು!

    ವಿಷಕಾರಿ ಜ್ಯೂಸ್ ಮಾರಾಟ?

    ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದು ಇದೀಗ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ರೆಡಿಮೇಡ್ ಜ್ಯೂಸ್ ಲೆಕ್ಕದಲ್ಲಿ, ನಿಮ್ಮ ಆರೋಗ್ಯ ಕಾಪಾಡುವ ಸುಳ್ಳು ಭರವಸೆ ನೀಡುತ್ತಾ ಸ್ಲೋ ಪಾಯಿಸನ್ ಜ್ಯೂಸ್‌ಗಳನ್ನ ಮಾರಾಟ ಮಾಡುತ್ತಿರುವ ಭಾರಿ ಗಂಭೀರ ಆರೋಪ ಮಾಡಲಾಗುತ್ತಿದೆ. ಈ ವಿಡಿಯೋ ನೋಡಿ ಜನರು ಕೂಡ ಆಘಾತಕಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜನರ ಬಳಿ ದುಡ್ಡು ಪಡೆಯುವ ಕೆಲವು ಸಂಸ್ಥೆಗಳು, ಜನಗಳಿಗೇ ಮೋಸ ಮಾಡುತ್ತಿರುವ ಆರೋಪ ಕೂಡ ಕೇಳಿ ಬರುತ್ತಿದೆ.

    ಜ್ಯೂಸ್ ಕುಡಿಯಬೇಡಿ ಅಂತಾರೆ ವೈದ್ಯರು!

    ವೈದ್ಯರು ಹೇಳುವ ಪ್ರಕಾರ ಮನುಷ್ಯನ ದೇಹಕ್ಕೆ ಉತ್ತಮವಾದ ಆಹಾರ ಸಾಕು. ಆದರೆ ಈ ರೀತಿ ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್‌ಗಳು ಮನುಷ್ಯರ ದೇಹಕ್ಕೆ ಉತ್ತಮ ಅಲ್ಲ. ಇದರಿಂದ ಮನುಷ್ಯರಿಗೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಭವಿಷ್ಯದಲ್ಲಿ ದೊಡ್ಡ ದೊಡ್ಡ ರೋಗಗಳು ಕೂಡ ಬರುತ್ತವೆ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಜ್ಯೂಸ್ ಕುಡಿಯಲು ಹೋಗಬಾರದು ಅಂತಾರೆ ಡಾಕ್ಟರ್ಸ್.

    ಒಟ್ನಲ್ಲಿ ಜ್ಯೂಸ್ ಹೆಸರಲ್ಲಿ ಏನೇನೋ ಸೇಲ್ ಮಾಡುವವರ ವಿರುದ್ಧ ಕೂಡ ಸರ್ಕಾರ ಈಗ ಕ್ರಮ ಕೈಗೊಳ್ಳಬೇಕು. ಗೋಬಿ, ಪಾನಿಪುರಿ ರೀತಿ ಜ್ಯೂಸ್‌ಗಳನ್ನ ಕೂಡ ಸರ್ಕಾರ ಲ್ಯಾಬ್‌ನ ಒಳಗೆ ಪರೀಕ್ಷೆ ಮಾಡಿ, ಮನುಷ್ಯರ ಲಿವರ್, ಕಿಡ್ನಿ ಮೇಲೆ ಪ್ರಭಾವ ಬೀರುವ ವಸ್ತುಗಳನ್ನ ಬ್ಯಾನ್ ಮಾಡಬೇಕು ಎಂಬ ಆಗ್ರಹ ಜನರಿಂದ ಕೇಳಿ ಬರುತ್ತಿದೆ. ಹೀಗಾಗಿ ವೈದ್ಯರು ಜ್ಯೂಸ್ ಕುಡಿಯಬೇಡಿ ಅಂತಾ ಹೇಳಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ. ಅಲ್ಲದೆ ಆಯುರ್ವೇದ ಮತ್ತಿತರ ಹೆಸರಲ್ಲಿ ಜ್ಯೂಸ್ ಮಾರುವ ಸಂಸ್ಥೆಗಳ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗುತ್ತಿದೆ.

    Watch Video:

    Click to comment

    Leave a Reply

    Your email address will not be published. Required fields are marked *

    LATEST NEWS

    ಮನೆ ಮುಂದೆ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ ವೃದ್ಧನಿಗೆ ಚಾಕು ಇ*ರಿದ ಚಾಲಕ

    Published

    on

    ಮಂಗಳೂರು/ಬೆಂಗಳೂರು : ಮನೆಯ ಮುಂದೆ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ ವೃದ್ಧನಿದೆ ಚಾ*ಕು ಇರಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸಾಂದರ್ಭಿಕ ಚಿತ್ರ

    ವಿನಾಯಕ ಲೇಔಟ್ ನಿವಾಸಿ ನಿವೃತ್ತ ವಕೀಲ ದಳಪತಿ (70) ಚಾ*ಕು ಇರಿತಕ್ಕೊಳಗಾದ ವೃದ್ಧ. ಸದ್ಯ ಅವರು ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾ*ಕು ಇರಿದು ಪರಾರಿಯಾಗಿದ್ದ ನಾಗರಬಾವಿ 2ನೇ ಹಂತದ ನಿವಾಸಿ ರಾಘವೇಂದ್ರ ಎಂಬಾತನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಏನಿದು ಘಟನೆ?

    ಬುಧವಾರ(ನ.14) ಮಧ್ಯಾಹ್ನ 2 ಗಂಟೆಗೆ ತಮ್ಮ ಮನೆಯ ಮುಂದೆ ಕಾರು ನಿಲ್ಲಿಸಿದ್ದ ರಾಘವೇಂದ್ರನನ್ನು ದಳಪತಿ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ರಾಘವೇಂದ್ರ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

    ಇದನ್ನೂ ಓದಿ : ರಾಜ್ಯದಲ್ಲಿ ಪೈಶಾಚಿಕ ಕೃ*ತ್ಯ; ವೃದ್ಧನಿಂದ ಬಾಲಕಿಯ ಅ*ತ್ಯಾಚಾರ !! 

    ಬಳಿಕ ಗಾಯಗೊಂಡಿದ್ದ ದಳಪತಿಯನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ರಾಜ್ಯದಲ್ಲಿ ಪೈಶಾಚಿಕ ಕೃ*ತ್ಯ; ವೃದ್ಧನಿಂದ ಬಾಲಕಿಯ ಅ*ತ್ಯಾಚಾರ !!

    Published

    on

    ಮಂಗಳೂರು/ಕಲಬುರ್ಗಿ : 15 ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ಅ*ತ್ಯಾಚಾರ ಎಸಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ನರೋಣ ಪಟ್ಟಣದಲ್ಲಿ ನಡೆದಿದೆ.

    ಗೋರಕ್ ನಾಥ ಚೌವ್ಹಾಣ (65) ಆರೋಪಿ ಎಂಬುವುದು ಗುರುತಿಸಲಾಗಿದೆ.

    ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ 15 ವರ್ಷದ ಬಾಲಕಿಯ ಮೇಲೆ ಪಾಪಿ ವೃದ್ಧ ಅ*ತ್ಯಾಚಾರ ಎಸಗಿರುವುದು ಸಾಬೀತಾಗಿದೆ.

     

    ಇದನ್ನೂ ಓದಿ: ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಯುವಕನ ಮೇಲೆರಗಿ ಬಾಲಕಿಯ ರಕ್ಷಿಸಿದ ಕೋತಿಗಳು!

     

    ಆರೋಪಿ ಗೌರವತ್ನಾಥ್‌ನನ್ನು ಪೊಲೀಸರು ಬಂಧಿಸಿದ್ದು, ಘಟನೆ ಕುರಿತಂತೆ ಪೋಕ್ಸೋ ಕಾಯ್ದೆಯಡಿ ನರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ `FIR’ ದಾಖಲು.!

    Published

    on

    ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

    ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕೆ.ಎಸ್. ಈಶ್ವರಪ್ಪ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲೀಮರಿಗೆ ಶೇಕಡಾ 4 ರಷ್ಟು ಮಿಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ. ಇವರೇನು ಹಿಂದುಸ್ಥಾನವನ್ನು ಪಾಕಿಸ್ಥಾನ ಮಾಡಲು ಹೊರಟಿದ್ದಾರ? ಇದು ಹೀಗೆ ಮುಂದುವರೆದರೆ ಕಾಂಗ್ರೆಸಿಗರನ್ನು ಹುಡುಕಿ ಹೊಡೆದು ಕೊಲ್ಲುವಂತಹ ದಿನಗಳು ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಹೆಚ್.ಎಂ.ಸಿದ್ದೇಗೌಡ ಪ್ರಕರಣ ದಾಖಲಿಸಿದ್ದಾರೆ.

    Continue Reading

    LATEST NEWS

    Trending