Connect with us

    BIG BOSS

    BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಎಲಿಮಿನೇಷನ್‌ ಇರುತ್ತಾ, ಇಲ್ವೋ..?

    Published

    on

    ಬೆಂಗಳೂರು: ಬಿಗ್ ಬಾಸ್‌ ಮನೆಯಿಂದ ಇಂದು ಯಾರು ಆಚೆ ಬರಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಿಗಿದೆ.

    ವಾರದ ಕಥೆಯಲ್ಲಿ ಕಿಚ್ಚ ಸುದೀಪ್‌ ಈ ವಾರ ನಡೆದ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಯಾರು ಯಾರು ಏನೇನು ತಪ್ಪು ಮಾಡಿದ್ದಾರೆ. ಮನೆಮಂದಿ ಎಡವಿದ್ದೆಲ್ಲಿ ಹೀಗೆ ಕಿಚ್ಚ ದೊಡ್ಮನೆಗೆ ಎಚ್ಚರಿಕೆ ಜತೆ ಆಟದ ಗಂಭೀರತೆಯ ಬಗ್ಗೆ ಮಾತನಾಡಿದ್ದಾರೆ. ಈ ವಾರ ದೊಡ್ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್‌ ಆಗಿದ್ದರು. ಭವ್ಯ, ಮೋಕ್ಷಿತಾ, ಚೈತ್ರಾ, ಧರ್ಮ, ತ್ರಿವಿಕ್ರಮ್, ಧನರಾಜ್, ಸುರೇಶ್ ನಾಮಿನೇಟ್ ಆಗಿದ್ದರು.

    ಈ ಪೈಕಿ ಮೋಕ್ಷಿತಾ, ತ್ರಿವಿಕ್ರಮ್‌ ಅವರು ನಿನ್ನೆಯ ಸಂಚಿಕೆಯಲ್ಲಿ ಸೇಫ್‌ ಆಗಿದ್ದಾರೆ. ಇನ್ನುಳಿದವರ ಪೈಕಿ ಯಾರು ಆಚೆ ಬರಲಿದ್ದಾರೆ ಎನ್ನುವುದರ ಬಗ್ಗೆ ವೀಕ್ಷಕರು ಚರ್ಚೆ ಆರಂಭಿಸಿದ್ದಾರೆ. ಕೆಲವರು ಭವ್ಯ, ಗೌತಮಿ ಆಚೆ ಬರಬೇಕೆಂದು ಕಮೆಂಟ್‌ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

    ಈ ವಾರ ಎಲಿಮಿನೇಷನ್‌ ಇರುತ್ತಾ, ಇಲ್ವೋ..?

    ಈ ವಾರ ವೋಟಿಂಗ್‌ ಲೈನ್ ತೆರೆದು ಇರುವುದಿಲ್ಲವೆಂದು ಬಿಗ್‌ ಬಾಸ್‌ ಕಾರ್ಯಕ್ರಮದ ವೇಳೆ ಟಿವಿಯಲ್ಲಿ‌ ಹಾಕಲಾಗಿತ್ತು. ಆ ನಿಟ್ಟಿನಲ್ಲಿ ಈ ವಾರ ಯಾವುದೇ ಎಲಿಮಿನೇಷನ್‌ ಇರುವುದಿಲ್ಲವೆಂದು ಹೇಳಲಾಗುತ್ತಿದೆ.

    ಮುಂದಿನ ವಾರ ದೊಡ್ಮನೆಯಿಂದ ಮಿಡ್‌ ವೀಕ್‌ ಎಲಿಮಿನೇಷನ್‌ ಅಥವಾ ಡಬಲ್‌ ಎಲಿಮಿನೇಷನ್‌ ಇದ್ದರೆ ಅಚ್ಚರಿಪಡಬೇಕಿಲ್ಲ. ಯಾವುದಕ್ಕೂ ಮುಂದಿನ ಎಲಿಮಿನೇಷನ್‌ ವರೆಗೆ ಕಾದು ನೋಡಬೇಕಿದೆ.

    BIG BOSS

    BBK11: ಎರಡನೇ ಬಾರಿಗೆ ಜೈಲು ಪಾಲಾದ ಚೈತ್ರಾ ಕುಂದಾಪುರ

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 11ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 12 ಮಂದಿ ಉಳಿದುಕೊಂಡಿದ್ದಾರೆ. ಇದೇ ಹೊತ್ತಲ್ಲಿ 10ನೇ ವಾರದಲ್ಲಿ ಬಿಗ್​ಬಾಸ್​ ಮನೆಯ ಕ್ಯಾಪ್ಟನ್ ಆಗಿ ಗೌತಮಿ ಜಾಧವ್​ ಹೊರ ಹೊಮ್ಮಿದ್ದಾರೆ.

    ಆದರೆ ಈಗ ಬಿಗ್​ಬಾಸ್​ ಮನೆಯ ಸ್ಪರ್ಧಿಗಳ ಒಮ್ಮತ ನಿರ್ಧಾರ ಮೇಲೆ ಉತ್ತಮ ಹಾಗೂ ಕಳಪೆ ಪಟ್ಟವನ್ನು ನೀಡಲಾಗಿದೆ. ಕಲರ್ಸ್​ ಕನ್ನಡ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಿದೆ. ರಿಲೀಸ್ ಮಾಡಿದ ಆ ಪ್ರೋಮೋದಲ್ಲಿ ಚೈತ್ರಾ ಕುಂದಾಪುರಗೆ ಮನೆ ಮಂದಿ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ.

    ಕಳಪೆ ಪಟ್ಟವನ್ನು ಕೊಟ್ಟಿದ್ದಕ್ಕೆ ಏಕಾಏಕಿ ಕೋಪಗೊಂಡ ಚೈತ್ರಾ ಉಳಿದ ಸ್ಪರ್ಧಿಗಳ ಮೇಲೆ ಕೂಗಾಡಿದ್ದಾರೆ. ನಾನು ನಿಮಗೆಲ್ಲಾ ಈಸಿಯಾಗಿ ಟಾರ್ಗೆಟ್ ಆಗಿದ್ದೀನಿ ಅಲ್ವಾ ಅಂತ ತಮ್ಮ ಮಾತನ್ನು ಶುರು ಮಾಡಿದ್ರು, ಆ ಕೂಡಲೇ ಮಂಜಣ್ಣ ಹೆಚ್ಚು ಮಾತನಾಡದೇ ಕಳಪೆಗೆ ರಿಸನ್​ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.

    ಇದಾದ ಬಳಿಕ ಮನೆಯ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ತಮ್ಮ ಅಭಿಪ್ರಯಾವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೂ ಸುಮ್ಮನಿರದ ಚೈತ್ರಾ ಕುಂದಾಪುರ ಜೋರಾಗಿ ಗಲಾಟೆ ಮಾಡುತ್ತಲೇ ಕಳಪೆ ಪಟ್ಟವನ್ನು ಸ್ವೀಕರಿಸಿ ಜೈಲಿಗೆ ಹೋಗಿದ್ದಾರೆ. ಇದು ಎರಡನೇ ಬಾರಿಗೆ ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್​ ಮನೆಯ ಜೈಲು ಪಾಲಾಗಿದ್ದಾರೆ. ಜೈಲಿಗೆ ಹೋದ ಕೂಡಲೇ ಚೈತ್ರಾ, ಮೋಕ್ಷಿತಾ ಹಾಗೂ ಐಶ್ವರ್ಯಾ ಮುಂದೆ ಮಂಜಣ್ಣ ತಮ್ಮ ಟೀಮ್​ಗೆ ಕಣ್ ಸನ್ನೆ ಮಾಡಿದ್ರು ಅಂತ ಹೇಳಿದ್ದಾರೆ. ಅದಕ್ಕೆ ಐಶ್ವರ್ಯಾ ಶಾಕ್​ ಆಗಿದ್ದಾರೆ. ಇನ್ನೂ ಬಿಗ್​ಬಾಸ್​ ಅವರ ಮುಂದಿನ ಆದೇಶದವರೆಗೂ ಚೈತ್ರಾ ಜೈಲಿನಲ್ಲೇ ಇರಬೇಕಾಗುತ್ತದೆ.

    Continue Reading

    BIG BOSS

    ಮೋಕ್ಷಿತಾಗೆ ಭಾರೀ ಮುಖಭಂಗ.. ಕೈಯಾರೆ ಗೌತಮಿಯನ್ನು ಕ್ಯಾಪ್ಟನ್ QUEEN ಆಗಿ ಮಾಡಿದ ಪೈ..!

    Published

    on

    ಒಂಟಿ ಹಿಡಿತದ ಮೂಲಕ ತಮ್ಮದೇ ಲೋಕದ ಜಿದ್ದಿನಲ್ಲಿ ಮುಳುಗಿದಂತೆ ಕಾಣ್ತಿರುವ ಮೋಕ್ಷಿತಾಗೆ ಬಿಗ್​ಬಾಸ್​ ಮನೆಯಲ್ಲಿ ಭಾರೀ ಮುಖಭಂಗ ಆಗಿದೆ. ಗೌತಮಿ, ಮಂಜು ಜೊತೆಗಿನ ಕಿತ್ತಾಟದಿಂದ ಇನ್ನೂ ಹೊರ ಬಾರದ ಅವರು, ಆಟದಲ್ಲಿ ತುಂಬಾ ಹಿಂದೆ ಬಿದ್ದಿದ್ದಾರೆ. ಇದೀಗ ಕ್ಯಾಪ್ಟನ್ಸಿ ವಿಚಾರದಲ್ಲಿ ಭಾರೀ ಮುಜುಗರ ಎದುರಿಸಿದ್ದಾರೆ.

    ಆಗಿದ್ದೇನು..?

    ಈ ವಾರ ಬಿಗ್​ಬಾಸ್ ನೀಡಿದ ಟಾಸ್ಕ್​​ನಲ್ಲಿ ಮೋಕ್ಷಿತಾ ಅವರಿದ್ದ ತಂಡವು ಹೆಚ್ಚು ಅಂಕಗಳನ್ನು ಗಳಿಸಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗಿತ್ತು. ಮುಂದಿನ ವಾರಕ್ಕೆ ನಾಯಕರಾಗಲು ಬಿಗ್​ಬಾಸ್ ಟಾಸ್ಕ್​​ ನೀಡುವ ಮೊದಲು ರೂಲ್ಸ್ ಹೇಳಿದ್ದರು. ಅದೆನಂದರೆ, ಕ್ಯಾಪ್ಟನ್ಸಿ ಟಾಸ್ಕ್​​​ ಸ್ಪರ್ಧಿಗಳು ಎದುರಾಳಿ ತಂಡದ ಸದಸ್ಯರ ಸಹಾಯ ಪಡೆದು ಟಾಸ್ಕ್​ ಆಡಬೇಕು. ಸ್ಪರ್ಧಿಗಳು ಇತರೆ ಸದಸ್ಯರನ್ನು ಮನವೊಲಿಸುವ ಮೂಲಕ ಅವರ ಸಹಾಯ ಪಡೆದು ಕ್ಯಾಪ್ಟನ್ ರೇಸ್​ಗೆ ಇಳಿಯಬೇಕು ಎಂದಿದ್ದರು. ಅದರಂತೆಯೇ, ಉಳಿದ ಸ್ಪರ್ಧಿಗಳು ತಮಗೆ ಬೇಕಾದ ಸದಸ್ಯರನ್ನು ಆಯ್ಕೆ ಮಾಡಿಕೊಳ್ತಾರೆ. ಆಗ ಮೋಕ್ಷಿತಾ, ಗೌತಮಿ ಜಾಧವ್​​​ ಅವರನ್ನು ಮನವೊಲಿಸುವ ಸಂದಿಗ್ಧತೆ ಬರುತ್ತದೆ.

    ಅದಕ್ಕೆ ಮೋಕ್ಷಿತಾ ಒಪ್ಪುವುದಿಲ್ಲ. ನನಗೆ ಆತ್ಮಗೌರವ ಮುಖ್ಯ. ನಾನು ಕ್ಯಾಪ್ಟನ್ ಆಗಲು ಅವಳ (ಗೌತಮಿ) ಸಹಾಯ ಪಡೆಯುವ ಅಗತ್ಯತೆ ನನಗೆ ಇಲ್ಲ. ಅಂತಹ ಸಂದರ್ಭ ಬಂದರೆ ನಾನು ಕ್ಯಾಪ್ಟನ್ಸಿ ರೇಸ್​ನಿಂದ ಹೊರ ಇರ್ತೇನೆ. ಬೇಕಿದ್ದರೆ ಬಿಗ್​​ಬಾಸ್ ಇವತ್ತೇ ನನ್ನನ್ನು ಮನೆಯಿಂದ ಕಳುಹಿಸಿದ್ದರೂ ಹೊರ ಹೋಗ್ತೇನೆ ಎಂದಿದ್ದರು. ಆದರೂ ಬಿಗ್​ಬಾಸ್​ ಮೋಕ್ಷಿತಾಗೆ ಎಚ್ಚರಿಕೆಯನ್ನು ನೀಡಿ, ಕ್ಯಾಪ್ಟನ್ಸಿ ಟಾಸ್ಕ್​ಗೆ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದ್ದರು. ಮೋಕ್ಷಿತಾ ತಮ್ಮ ಒಂಟಿ ಹಿಡಿತವನ್ನು ಬಿಡಲಿಲ್ಲ. ಪರಿಣಾಮ ಮೋಕ್ಷಿತಾ ಕ್ಯಾಪ್ಟನ್ಸಿ ಟಾಸ್ಕ್​​ನಿಂದ ಹೊರ ಬೀಳಬೇಕಾಯಿತು.

    ಮೋಕ್ಷಿತಾರ ನಿರ್ಧಾರದ ಫಲವಾಗಿ ಗೌತಮಿ ಜಾಧವ್​​ಗೆ ಬಂಗಾರದಂಥ ಅವಕಾಶ ಸಿಕ್ಕಿತ್ತು. ಇದನ್ನೂ ಎರಡೂ ಕೈಗಳಿಂದ ಬಾಚಿಕೊಂಡ ಗೌತಮಿ ಮುಂದಿನ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಮೋಕ್ಷಿತಾಗೆ ಕಪಾಳಮೋಕ್ಷ ಆದಂತೆ ಆಗಿದೆ. ಇನ್ನು, ಈ ಎಪಿಸೋಡ್​ ಇಂದು ರಾತ್ರಿ ಪ್ರಸಾರ ಆಗಲಿದೆ. ಗೌತಮಿ ಅವರು ಕ್ಯಾಪ್ಟನ್​ ಆಗಿ ನಾಯಕನ ರೂಮ್​ಗೆ ಎಂಟ್ರಿ ನೀಡುವ ದೃಶ್ಯವನ್ನು ಪ್ರೊಮೋದಲ್ಲಿ ತೋರಿಸಲಾಗಿದೆ.

    Continue Reading

    bangalore

    ಎರಡನೇ ಪತ್ನಿಯನ್ನು ಕೊಂ*ದು ಮೂರನೇ ಮದುವೆಗೆ ಸಿದ್ದತೆ ಮಾಡುತ್ತಿದ್ದವನಿಗೆ ಪೊಲೀಸರ ಶಾಕ್ !

    Published

    on

    ಮಂಗಳೂರು/ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ಮಾಡುತ್ತಿದ್ದ ಆರೋಪಿಯು ಪತ್ನಿಯನ್ನು ಕೊ*ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಅನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.


    ಈ ಘಟನೆ ಕಳೆದ ತಿಂಗಳು ನಡೆದಿದ್ದು, ಸರ್ಜಾಪುರ ಪೊಲೀಸರ ಕಾರ್ಯಾಚರಣೆಯಿಂದ ಪತ್ನಿಯನ್ನು ಕೊಂ*ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಿಹಾರ ಮೂಲದ ಮಹಮ್ಮದ್ ನಸೀಮ್ (39) ಬಂಧಿತ ಆರೋಪಿಯಾಗಿದ್ದು, ಬಿಹಾರ ಮೂಲದ ರುಮೇಶ್ ಖಾತುನ್ (22) ಕೊ*ಲೆಯಾದ ಮಹಿಳೆಯಾಗಿದ್ದಾಳೆ.

    ಇದನ್ನೂ ಓದಿ: ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !

    ಕೊಲೆ ಮಾಡಿದ ಬಳಿಕ ಆರೋಪಿ, ಪತ್ನಿಯ ಶ*ವವನ್ನು ವಿವಸ್ತ್ರಗೊಳಿಸಿ ಹಗ್ಗದಿಂದ ಕೈ ಕಾಲು ಕಟ್ಟಿ ಯಾರಿಗೂ ಅನುಮಾನ ಬಾರದಂತೆ ಚರಂಡಿಗೆ ಎಸೆದು ಬಿಹಾರಕ್ಕೆ ಎಸ್ಕೇಪ್ ಆಗಿದ್ದನು. ಶವ ಕೊಳೆತು ದುರ್ವಾಸನೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ಕೊಲೆ ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ತನಿಖೆ ಮುಂದುವರಿಸಿದರು. ಆರೋಪಿಯ ಜಾಡು ಹಿಡಿದು ಬಿಹಾರಕ್ಕೆ ತೆರಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಆರೋಪಿ ಮಹಮ್ಮದ್ ನಸೀಮ್ ಮೂರನೇ ಮದುವೆ ಸಂಭ್ರಮದಲ್ಲಿದ್ದ. ಪೊಲೀಸರು ಮದುವೆ ಮನೆಯಲ್ಲಿಯೇ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

    Continue Reading

    LATEST NEWS

    Trending