Wednesday, October 20, 2021

ಸೋರೆಕಾಯಿ ಜ್ಯೂಸ್‌ ಕುಡಿದು ಆಸ್ಪತ್ರೆ ಸೇರಿದ ಬಾಲಿವುಡ್‌ ನಟಿ

ಮುಂಬೈ: ಸೋರೆಕಾಯಿ ಜ್ಯೂಸ್‌ ಕುಡಿದರೆ ವಿಟಮಿನ್‌ ಜಾಸ್ತಿ ಸಿಗುತ್ತದೆ ಎಂದು ಜ್ಯೂಸ್‌ ಕುಡಿದ ಬಾಲಿವುಡ್‌ ನಟಿ ಕೊನೆಗೆ ಐಸಿಯುಗೆ ದಾಖಲಾಗಿದ್ದಾಳೆ.

ಮೂಲತಃ ಬರಹಗಾರ್ತಿ, ನಟಿ ಮತ್ತು ಸಿನಿಮಾ ನಿರ್ಮಾಪಕಿಯಾಗಿರುವ ತಾಹಿರಾ ಕಶ್ಯಪ್ ಸೊರೆಕಾಯಿ ಕುಡಿಯುವುದರಿಂದ ದೇಹಕ್ಕೆ ಅತಿ ಹೆಚ್ಚು ವಿಟಮಿನ್ ಸಿಗುತ್ತದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ವಿಷಯ ಹಂಚಿಕೊಂಡಿದ್ದರು.

ಆದರೆ ಇದೀಗ ಅದೇ ಸೊರೆಕಾಯಿ ಜ್ಯೂಸ್ ಕುಡಿದು ಅವರೇ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಈ ಬಗ್ಗೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿರುವ ಅವರು,

ಸೋರೆಕಾಯಿ ಜ್ಯೂಸ್‌ನಲ್ಲಿ ವಿಟಮಿನ್‌ ಇರುವುದು ಹಾಗೂ ಇದರ ಸೇವನೆಯಿಂದ ತೂಕ ಇಳಿಯುವುದು ಎಲ್ಲವೂ ನಿಜ. ಆದರೆ ಒಂದೇ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು.

ಅದೇನೆಂದರೆ, ಸೋರೆಕಾಯಿಯನ್ನು ಮೊದಲು ತಿಂದು ನೋಡಬೇಕು. ಇದು ತುಂಬಾ ಕಹಿಯಾಗಿದ್ದರೆ ದಯವಿಟ್ಟು ಯಾವುದೋ ಕಾರಣಕ್ಕೂ ಅದರ ಜ್ಯೂಸ್‌ ಮಾಡುವ ಸಾಹಸ ಮಾಡಬೇಡಿ.

ಏಕೆಂದರೆ ಕಹಿ ಸೋರೆಕಾಯಿ ಜ್ಯೂಸ್ ಕುಡಿಯುವುದು ವಿಷಕ್ಕೆ ಸಮ.

ಇದು ಗೊತ್ತಿಲ್ಲದೇ ನಾನು ಕುಡಿದಿದ್ದೆ ಎಂದರು. ಈ ಬಾರಿ ಸೇವಿಸಿದಾಗ ನನಗೆ 17 ಬಾರಿ ವಾಂತಿಯಾಯಿತು.

ರಕ್ತ ಪರೀಕ್ಷೆ ಮಾಡಿಸಿದಾಗ ರಕ್ತದೊತ್ತಡ 40 ಕ್ಕೆ ಇಳಿದಿತ್ತು. ನಂತರ ವೈದ್ಯರಿಗೆ ವಿಷಯ ತಿಳಿಸಿದಾಗ ಈ ರೀತಿ ನೀವು ಜ್ಯೂಸ್‌ ಕುಡಿದದ್ದು ಸೈನೈಡ್‌ಗೆ ಸಮ ಎಂದರು.

ಪ್ರತಿಯೊಬ್ಬರು ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು. ಅದೇನೆಂದರೆ, ಸೋರೆಕಾಯಿಯನ್ನು ಮೊದಲು ತಿಂದು ನೋಡಬೇಕು.

ಇದು ತುಂಬಾ ಕಹಿಯಾಗಿದ್ದರೆ ದಯವಿಟ್ಟು ಯಾವುದೋ ಕಾರಣಕ್ಕೂ ಅದರ ಜ್ಯೂಸ್‌ ಮಾಡುವ ಸಾಹಸ ಮಾಡಬೇಡಿ. ಏಕೆಂದರೆ ಕಹಿ ಸೋರೆಕಾಯಿ ಜ್ಯೂಸ್ ಕುಡಿಯುವುದು ವಿಷಕ್ಕೆ ಸಮ.

ಈ ರೀತಿ ಕಹಿ ಸೋರೆಕಾಯಿಯ ಜ್ಯೂಸ್‌ ಕುಡಿಯುವುದರಿಂದ ಬಹುತೇಕರು ಅನಾರೋಗ್ಯಪೀಡಿತರಾಗಿದ್ದಾರೆ ಎಂದಿರುವ ನಟಿ, ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...