Connect with us

    LATEST NEWS

    ಅಧಿಕಾರಿಗಳು ಜಡ್ಜ್‌ ಆಗಲು ಸಾಧ್ಯವಿಲ್ಲ : ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಎಚ್ಚರಿಕೆ

    Published

    on

    ನವದೆಹಲಿ: ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿ ಎಚ್ಚರಿಕೆ ನೀಡಿದೆ.

    ಆರೋಪಿಗಳ ಮನೆಗಳನ್ನು ಸರ್ಕಾರಗಳು ಬುಲ್ಡೋಜರ್‌ ಬಳಸಿ ಧ್ವಂಸ ಮಾಡುತ್ತಿರುವನ್ನು ನಿಲ್ಲಿಸಲು ಆದೇಶ ನೀಡುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಈ ಆದೇಶವನ್ನು ಪ್ರಕಟಿಸಿದೆ. ನ್ಯಾ. ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ ಸಾರ್ವಜನಿಕರ ಆಸ್ತಿ ಪಾಸ್ತಿ ನಾಶ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.

    ಒಬ್ಬ ಸಾಮಾನ್ಯ ನಾಗರಿಕನಿಗೆ ಮನೆ ನಿರ್ಮಾಣವು ವರ್ಷಗಳ ಕಠಿಣ ಪರಿಶ್ರಮ, ಕನಸಾಗಿರುತ್ತದೆ. ಮನೆಯು ಭದ್ರತೆ ಮತ್ತು ಭವಿಷ್ಯದ ಸಾಮೂಹಿಕ ಭರವಸೆಯನ್ನು ಸಾಕಾರಗೊಳಿಸುತ್ತದೆ. ಆಶ್ರಯದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಅಂತಹ ಹಕ್ಕನ್ನು ಕಸಿದುಕೊಳ್ಳುವುದು ಸಂಪೂರ್ಣವಾಗಿ ಅಸಾಂವಿಧಾನಿಕ. ಅಪರಾಧಕ್ಕೆ ಶಿಕ್ಷೆಗೊಳಗಾದ ಯಾರೊಬ್ಬರ ವಿರುದ್ಧವೂ ಇಂತಹ ಕ್ರಮ ತೆಗೆದುಕೊಳ್ಳುವಂತಿಲ್ಲ. ಇಂತಹ ಕ್ರಮ ಕಾನೂನು ಬಾಹಿರಬಾಹಿರವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

    ಸುಪ್ರೀಂ ಆದೇಶದಲ್ಲಿ ಏನಿದೆ?

    ಆರೋಪಿಯ ಆಸ್ತಿಯನ್ನು ಕೆಡವಲು ನಿರ್ಧರಿಸುವುದು ಕಾರ್ಯಾಂಗದ ಕೆಲಸವಲ್ಲ. ಸರ್ಕಾರ ನಾಶ ಮಾಡುವ ಆಸ್ತಿಯ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡದೇ ಯಾವುದೇ ಆಸ್ತಿ ನೆಲಸಮವನ್ನು ನಡೆಸಬಾರದು.

    ನೋಟಿಸ್ ಅನ್ನು ಮಾಲೀಕರಿಗೆ ನೋಂದಾಯಿತ ಅಂಚೆ ಮೂಲಕ ನೀಡಬೇಕು. ಅನಧಿಕೃತ ಕಟ್ಟಡವಾಗಿದ್ದರೆ ನಿರ್ಮಾಣದ ಸ್ವರೂಪ, ನಿರ್ದಿಷ್ಟ ಉಲ್ಲಂಘನೆಯ ವಿವರಗಳನ್ನು ನೋಟಿಸ್‌ನಲ್ಲಿ ಉಲ್ಲೇಖಿಸಬೇಕು. ಆಕ್ಷೇಪಣೆ ಸಲ್ಲಿಸಲು ಆರೋಪಿಯ ಮನೆಯವರಿಗೆ ಅವಕಾಶ ನೀಡಬೇಕು. ಕಟ್ಟಡ ತೆರವು ಕಾರ್ಯಚರಣೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಬೇಕು.

    International news

    ರೋಹಿತ್ ಬಿಟ್ಟು, ಕೊಹ್ಲಿ ಆಟೋಗ್ರಾಫ್ ಪಡೆದಿದ್ದೇಕೆ ಆಸ್ಟ್ರೇಲಿಯಾ ಪ್ರಧಾನಿ ?

    Published

    on

    ಮಂಗಳೂರು/ಕ್ಯಾನ್ ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರನ್ನು ಭೇಟಿ ಮಾಡಿತು. ಈ ವೇಳೆ ಆಸೀಸ್ ಪ್ರಧಾನಿ, ಕೊಹ್ಲಿ ಅವರ ಆಟೋಗ್ರಾಫ್ ಪಡೆದುಕೊಂಡಿದ್ದು ತುಂಬಾ ಸದ್ದು ಮಾಡಿತ್ತು.


    ಅಷ್ಟಕ್ಕೂ, ಆಂಥೋನಿ ಆಲ್ಬನೀಸ್ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಅವರನ್ನು ಬಿಟ್ಟು ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆದಿದ್ದೇಕೆ ಎಂಬುದನ್ನು ಸ್ವತಃ ಅವರೇ ರಿವಿಲ್ ಮಾಡಿದ್ದಾರೆ.

    ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ರಹಸ್ಯ ಬಯಲು ! 

    ಈ ಬಗ್ಗೆ ಮಾತನಾಡಿರುವ ಆಲ್ಬನೀಸ್,’ನನ್ನ ಖಾಸಗಿ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅವರು ಕೊಹ್ಲಿಯ ಬಗ್ಗೆ ಎಷ್ಟು ಭಾವೋದ್ರಿಕೃತರಾಗಿದ್ದಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಈಗಾಗೀ ಕೊಹ್ಲಿಯ ಆಟೋಗ್ರಾಫ್ ಕೊಡಿಸಲು ಅವರು ನನ್ನಲ್ಲಿ ಹೇಳಿದ್ದಾರೆ. ಎಂದು ತಿಳಿಸಿದರು.

    ಇನ್ನೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಎರಡನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಾವು ಶುಕ್ರವಾರದಿಂದ ಶುರುವಾಗಲಿದೆ.

    Continue Reading

    LATEST NEWS

    ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದಾಗ ಜೇನು ದಾಳಿ : 23ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

    Published

    on

    ಉತ್ತಕನ್ನಡ : ಶಾಲಾ ಮೈದಾನದಲ್ಲಿ ಮಕ್ಕಳು ತಮ್ಮ ಪಾಡಿಗೆ ತಾವು ಆಟವಾಡುತ್ತಿದ್ದರು. ಈ ವೇಳೆ ಮಕ್ಕಳ ಮೇಲೆ ಜೇನು ದಾಳಿ ಮಾಡಿದೆ. ಇದರಿಂದ 23ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಡಾನ್ ಬಾಸ್ಕೋ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ.

    ಶಾಲಾ ಮೈದಾನದಲ್ಲಿ ಆಡುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ ಮಾಡಿದೆ. ಸುಮಾರು 23ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಒಂದು ಘಟನೆ ನಡೆದಿದೆ. ಶಿರಸಿಯ ಡಾನ್ ಬಾಸ್ಕೋ ಶಾಲಾ ಮೈದಾನದಲ್ಲಿ ಈ ಒಂದು ಘಟನೆ ನಡೆದಿದೆ. ಕೂಡಲೇ ಶಿರಸಿ ತಾಲೂಕು ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಯಿತು.

    Continue Reading

    LATEST NEWS

    ಗೂಗಲ್ ಮ್ಯಾಪ್ ನಂಬಿ ಅವಾಂತರ ; ಕಾಲುವೆಗೆ ಬಿ*ದ್ದ ಕಾರು !!

    Published

    on

    ಮಂಗಳೂರು/ಬರೇಲಿ: ಜಿಪಿಎಸ್ ಮ್ಯಾಪ್ ಮೂಲಕ ಸಾಗಿದ ಕಾರು ಕಾಲುವೆಗೆ ಬಿ*ದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಆದರೆ ಟಾಟಾ ಕಾರು ಈ ಪ್ರಯಾಣಿಕರ ಜೀವ ಉಳಿಸಿದ ಘಟನೆ ಬರೇಲಿಯ ಪಿಲಿಭಿತ್ ಹೆದ್ದಾರಿಯಲ್ಲಿ ನಡೆದಿದೆ.

    ಎಲ್ಲೇ ಹೋಗಬೇಕಿದ್ದರೂ ದಾರಿಯಲ್ಲಿ ಸಿಕ್ಕವರನ್ನು ಕೇಳುವ ಪ್ರಶ್ನೆ ಇಲ್ಲ. ಗೂಗಲ್ ಮ್ಯಾಪ್ ಹಾಕಿದರೆ ಸಾಕು. ಹತ್ತಿರದ ಮಾರ್ಗ, ಕ್ರಮಿಸಬೇಕಾದ ದೂರ, ಸಮಯ ಎಲ್ಲವನ್ನು ಹೇಳುತ್ತೆ. ಆದರೆ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದಂತೆ ಜೀವನ ಸುಲಭವಾಗಬೇಕಿತ್ತು. ಆದರ ಬದಲಾಗಿ ಅ*ಪಾಯವೇ ಹೆಚ್ಚಾಗುತ್ತಿದೆ. ಕಾರಣ ಇದೇ ಜಿಪಿಎಸ್ ಮಾರ್ಗ ನಂಬಿ ತೆರಳುತ್ತಿರುವ ಪ್ರಯಾಣಿಕರು ಅಪಘಾತಕ್ಕೀಡಾಗುತ್ತಿರುವ ಘಟನೆಯೂ ಹೆಚ್ಚಾಗುತ್ತಿದೆ. 10 ದಿನಗಳ ಹಿಂದೆ ಮದುವೆ ಹೊರಟ ಕಾರು ಸೇತುವೆ ಮೇಲಿಂದ ಬಿದ್ದ ಮೂವರು ಪ್ರಾ*ಣಕ್ಕೆ ಕುತ್ತು ತಂದಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ದುರ್ಘಟನೆ ಸಂಭವಿಸಿದೆ.

    ಟಾಟಾ ಟಿಗೋರ್ ಕಾರಿನಲ್ಲಿ ಮೂವರು ಪ್ರಯಾಣ ಆರಂಭಿಸಿದ್ದಾರೆ. ದಾರಿ ಗೊತ್ತಿಲ್ಲದ ಕಾರಣ ಜಿಪಿಎಸ್ ಮ್ಯಾಪ್ ಆನ್ ಮಾಡಿ ವಿಳಾಸ ಹಾಕಿದ್ದಾರೆ. ಬಳಿಕ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಸಾಗಿದ್ದಾರೆ. ಆದರೆ ಬರ್ಕಾಪುರ ಗ್ರಾಮದ ಬಳಿ ಬರುತ್ತಿದ್ದಂತೆ ರಸ್ತೆ ಕಾಮಗಾರಿಗಳು ಎದುರಾಗಿದೆ. ಹೀಗಾಗಿ ರಸ್ತೆ ಸಂಚಾರ ಬದಲಿಸಲಾಗಿತ್ತು. ಆದರೆ ಗೂಗಲ್ ಮ್ಯಾಪ್ ಮಾತ್ರ ನೇರವಾಗಿ ಸಾಗಲು ಸೂಚಿಸಿದ ಕಾರಣ ಅದೇ ದಾರಿಯಲ್ಲಿ ಸಾಗಿದ ಕೆಲವೇ ಕ್ಷಣದಲ್ಲಿ ಕಾಲಾಪುರ ಕಾಲುವೆಗೆ ಕಾರು ಉರುಳಿ ಬಿದ್ದಿದೆ. ವೇಗವಾಗಿ ಸಾಗುತ್ತಿದ್ದ ಕಾರಣ ಅ*ಪಘಾತದ ಪ್ರಮಾಣ ಹೆಚ್ಚಾಗಿದೆ. ಟಾಟಾ ಮೋಟಾರ್ಸ‌ನ ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಸೆಡಾನ್ ಕಾರಾಗಿದ್ದ ಕಾರಣ ಪ್ರಯಾಣಿಕರ ಬದುಕುಳಿದಿದ್ದಾರೆ. ಸಣ್ಣ ಪುಟ್ಟ ಗಾ*ಯಗಳಾಗಿದ್ದರೂ ಮೂವರು ಪ್ರಯಾಣಿಕರ ಜೀ*ವಕ್ಕೆ ಯಾವುದೇ ಅಪಾಯವಾಗಿಲ್ಲ.

     

    ಇದನ್ನೂ ಓದಿ : ಗೂಗಲ್ ಮ್ಯಾಪ್ ನಂಬಿ ಎಡವಟ್ಟು; 50 ಅಡಿ ಆಳಕ್ಕೆ ಕಾರು ಬಿದ್ದು ಮೂವರ ದುರ್ಮ*ರಣ

     

    ಅ*ಪಘಾತ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಮೂವರುು ಪ್ರಯಾಣಿಕರನ್ನು ಕಾರಿನಿಂದ ಹೊರತೆಗೆದಿದ್ದಾರೆ. ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಗಂ*ಭೀರ ಗಾ*ಯಗಳಿಲ್ಲದ ಕಾರಣ ಮೂವರು ಪ್ರಯಾಣಿಕರು ತಪಾಸಣೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇತ್ತ ಕಾರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಲಾಗಿದೆ. ಗೂಗಲ್ ಮ್ಯಾಪ್ ನೀಡಿದ ತಪ್ಪು ಸೂಚನೆಯಿಂದ ಕಾರು ಕಾಲುವೆಗೆ ಮ*ಗುಚಿ ಬಿ*ದ್ದಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.

    Continue Reading

    LATEST NEWS

    Trending