ಕಾರ್ಕಳದ ಪರ್ಪಲೆ ಶಕ್ತಿ ಪೀಠದಲ್ಲಿ ನಡೆದ ಸಿದ್ದಿ ಸಾಧಕರ ಪವಾಡಕ್ಕೆ ದಂಗಾದ ಜನತೆ.!
ಕಾರ್ಕಳ: ಕಾರ್ಕಳ ತಾಲೂಕಿನ ಅತ್ತೂರು ಪರ್ಪಲೆ ಗಿರಿ ಕಲ್ಕುಡ ಕ್ಷೇತ್ರ ಅದ ಪುನರುತ್ಥಾನ ನಿಮಿತ್ತ ನಡೆಯುತ್ತಿರುವ ಅಷ್ಟ ಮಂಗಲ ಪ್ರಶ್ನಾ ಚಿಂತನೆಯ ಎರಡನೇ ಹಂತದ ಕೊನೆಯ ದಿನವಾದ ಇಂದು ಶ್ರೀ ಕ್ಷೇತ್ರಕ್ಕೆ ಬೈರಾಗಿಯೋರ್ವರು ಭೇಟಿ ನೀಡಿದ್ದಾರೆ.
ಅಯೋಧ್ಯೆ, ಹರಿದ್ವಾರ,ರಾಜಸ್ಥಾನ, ಕೇದರನಾಥ, ಹಿಮಾಲಯಗಳೆಲ್ಲೆಡೆ ಅಖಾಡ ಹೊಂದಿರುವ ವೈಷ್ಣವ ಪಂಥದ ಅವಧೂತ ಬೈರಾಗಿ ಶ್ರೀ ಕೇಶವದಾಸ ತ್ಯಾಗಿ ಮಹರಾಜ್ ರವರು ಅನಿರೀಕ್ಷಿತವಾಗಿ ಪರ್ಪಲೆ ಗಿರಿಯಲ್ಲಿ ನಡೆಯುತ್ತಿರುವ ಪ್ರಶ್ನಾ ಚಿಂತನೆ ಸ್ಥಳಕ್ಕೆ ಭೇಟಿ ನೀಡಿ ಭಗವದ್ಭಕ್ತರಿಗೆ ಆಶೀರ್ವಚನ ನೀಡಿದರು.
ಅಲ್ಲಿಂದ ಶ್ರೀ ಕ್ಷೇತ್ರದ ಶಕ್ತಿ ಪೀಠವಾಗಿರುವ ಪರ್ಪಲೆ ಗುಹೆಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು..
ಯಾವುದೇ ಪೂರ್ವತಯಾರಿ ಇಲ್ಲದೆ ಆ ಮಹಾತ್ಮರನ್ನು ಗುರುಪೀಠ ಮತ್ತು ಗುರು ಪಾದುಕೆಯ ಸನ್ನಿಧಾನ ಇರುವ ಪರ್ಪಲೆ ಗುಹೆಗೆ ಕರೆದುಕೊಂಡು ಹೋಗಲಾಯಿತು.ಅಲ್ಲಿ ಅವರೊಂದಿಗೆ ಹೋದ ಹಿಂದೂ ಕಾರ್ಯಕರ್ತರು ಅವಧೂತ ಬೈರಾಗಿಯವರು ಪಾದುಕೆಗೆ ಪೂಜೆ ಸಲ್ಲಿಸಲು ಅಪೇಕ್ಷಿಸಿದ್ದರು.
ಆದರೇ ಆ ಗುಹೆಯಲ್ಲಿ ಎಣ್ಣೆಯಾಗಲೀ, ಬತ್ತಿಯಾಗಲೀ, ಇರಲಿಲ್ಲ…ಅಲ್ಲಿದ್ದ ಯಾವುದೇ ವ್ಯಕ್ತಿಯಲ್ಲೂ ಕೂಡ ಆ ಪೂಜೆಗೆ ಬೇಕಾದ ಸರಂಜಾಮುಗಳು ಇರಲಿಲ್ಲ ಎಣ್ಣೆ,ಬತ್ತಿ ತರಲು ಕಾಡಿನಿಂದ ನಾಡಿಗೆ ಹೋಗಬೇಕು…ಛೇ, ಕರ್ಪೂರವಾದರೂ ಇದ್ದಿದ್ದರೆ ಎಂದು ಕಾರ್ಯಕರ್ತರು ತಮ್ಮಲ್ಲೇ ಗೊಣಗುತ್ತಿದ್ದರು..
ಆಗ ಆ ಹಿಮಾಲಯದ ಸಿದ್ದಿ ಸಾಧಕರು ಒಮ್ಮೆಲೇ ಕ್ಯಾ ಹುವಾ ಪೂಜಾ ಕರ್ನೇ ಕೇಲಿಯೇ ಕಪೂರ್ ನಹೀ ಹೈ ಕ್ಯಾ ??
ಮಾಚೀಸ್ ತೋ ಹೈ ?ಎಂದು ಪ್ರಶ್ನಿಸಿದರು..ಆಗ ಕಾರ್ಯಕರ್ತರು ಮಾಚೀಸ್ ಹೈ ಲೇಕೀನ್ ಕಪೂರ್ ನಹೀ ಹೈ ಎಂದು ಉತ್ತರಿಸಿದರು..
ಆಗ ಆ ಬೈರಾಗಿ ಸಿದ್ದಿ ಸಾಧಕರು ಪವಾಡದ ಒಂದು ಝಲಕ್ ಅನ್ನು ಅನಾವರಣಗೊಳಿಸಿದರು..
ಬೆತ್ತಲೆ ದೇಹದ, ಬರಿ ಕೈಯ ಆ ಅವಧೂತರು ಗುರುಪೀಠದಲ್ಲಿರುವ ಮಣ್ಣನ್ನು ಚಿಟಿಕೆಯಲ್ಲಿ ತೆಗೆದುಕೊಂಡರು..
ನೆರೆದ ಕಾರ್ಯಕರ್ತರು ಅವಧೂತರು ಆ ಮಣ್ಣನ್ನು ಆ ಪಾದುಕೆಗೆ ಲೇಪಿಸುತ್ತಾರೆ ಅಥವಾ ಅದನ್ನು ನಮಗೆ ಪ್ರಸಾದ ರೂಪದಲ್ಲಿ ಕೊಡುತ್ತಾರೆ ಎಂಬ ಜಿಜ್ಞಾಸೆಯಲ್ಲಿರುವಾಗಲೇ..
ಆ ಚಿಟಿಕೆ ಮಣ್ಣನ್ನು ನೆಲದಲ್ಲಿಟ್ಟು ಬೆಂಕಿ ಕೊಟ್ಟು ಬಿಟ್ಟರು, ನೆರೆದವರಿಗೆ ಒಂದು ಕ್ಷಣ ಏನಾಯ್ತು, ಎಂಬುದೇ ಗೊತ್ತಾಗಲಿಲ್ಲ.
ಅಷ್ಟೊತ್ತಿಗೆ ಆ ಒಂದು ಚಿಟಿಕೆ ಮಣ್ಣು “ಕರ್ಪೂರ” ಆಗಿ ಉರಿಯುತ್ತಿತ್ತು 🙏🙏.ಆ ಚಿಟಿಕೆ ಮಣ್ಣು ಕರ್ಪೂರ ಆದದ್ದು ಹೇಗೆ ಎಂಬುದು ಈಗಲೂ ಅಲ್ಲಿ ಉಪಸ್ಥಿತರಿದ್ದವರಲ್ಲಿ ಕೊರೆಯುತ್ತಿರುವ ಪ್ರಶ್ನೆ…
ಈ ಪ್ರಶ್ನೆಗೆ ಉತ್ತರವನ್ನು ಬೈರಾಗಿಯವರನ್ನೇ ಕೇಳಲು ಅವರ ಎದುರಿಗೆ ಕೂತವನು ಆ ಪ್ರಶ್ನೆಯೊಂದನ್ನು ಬಿಟ್ಟು ಬೇರೆಲ್ಲಾ ವಿಚಾರವನ್ನು ಪ್ರಸ್ತಾಪಿಸಿದ್ದರು.
ಆ ನಂತರ ಅವಧೂತರು ಬೆಳಕು ಇರುವ ಗುಹೆಯ ಬಾಗಿಲ ಬಳಿ ಧ್ಯಾನ ಭಂಗಿಯಲ್ಲಿ ಕೂತುಕೊಂಡರು…
ಅವರ ಜೊತೆಗೆ ಬಂದಿದ್ದ ಕಾರ್ಯಕರ್ತರು ಗುಹೆಯನ್ನು ಸಂದರ್ಶಿಸುತ್ತಾ ಕತ್ತಲೆ ಗುಹೆಯ ಒಳಗಡೆಯ ಮೇಲ್ಬಾಗ ತಲುಪಿದ್ದರು..
ಮೇಲ್ಬಾಗ ತಲುಪಿ ಕೆಳಮುಖ ನೋಡುವಾಗ ಅವದೂತರು ಕೆಳಗಡೆ ಗುಹೆಯ ಬಾಗಿಲಲ್ಲೇ ಕುಳಿತುಕೊಂಡಿದ್ದರು…
ಆದರೇ ಅವರನ್ನು ನೋಡಿ ಮುಖ ತಿರುಗಿಸಿದ ಅರೆಕ್ಷಣವೇ ಅವರು ಗುಹೆಯ ಮೇಲ್ಬಾಗದಲ್ಲಿ ಕಾರ್ಯಕರ್ತರ ಪಕ್ಕದಲ್ಲಿ ಬಂದು ನಿಂತಿದ್ದರು..
ಅವರು ಆ ಕತ್ತಲ ಗುಹೆಯಲ್ಲಿ ಬೆಳಕಿನ ಕಿರು ಕಿರಣವೂ ಇರದೆ ಇದ್ದಾಗಲೂ ಅಷ್ಟು ವೇಗದಲ್ಲಿ ಹೇಗೆ ಮೇಲ್ಬಾಗಕ್ಕೆ ತಲುಪಿದರು ಎಂಬುದು ಮಾತ್ರ ನಿಗೂಢಾತಿನಿಗೂಢ.
ಹಿಮಾಲಯದ ನಾಗಾಸಾಧುಗಳ ಪವಾಡ,ಸಿದ್ದಿಕಲೆಗಳ ಬಗ್ಗೆ ಕೇಳಿ ತಿಳಿದಿದ್ದವರಿಗಂತೂ ಕಣ್ಣಾರೆ ಅವರ ಪವಾಡಗಳನ್ನು ಕಾಣುವ ಭಾಗ್ಯ ಒದಗಿ ಬಂದಿತ್ತು ..