Connect with us

    DAKSHINA KANNADA

    ಬಿಎಸ ವೈ-ಈಶ್ವರಪ್ಪ ನಡುವಿನ ವೈಮನಸ್ಸು ಶೀಘ್ರ ಶಮನವಾಗಲಿದೆ; ನಳಿನ್ ಕಟೀಲ್ ..!

    Published

    on

    ಮಂಗಳೂರು:  ಮಾದ್ಯಮಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ “ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯವಹಾರಗಳಲ್ಲಿ ಹಸ್ತಕ್ಷೇಪ ವಿಚಾರ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ಬರೆದ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಈಶ್ವರಪ್ಪ ಅವರನ್ನು ಭೇಟಿಯಾಗಿ  ತಾನೇ ಖುದ್ದು ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.

    “ಮನಮೋಹನ್‌ ಸಿಂಗ್‌‌ ಅವರು ಪ್ರಧಾನಿಯಾಗಿದ್ದ ಸಂದರ್ಭ ರಾಹುಲ್‌ ಗಾಂಧಿ ಅವರು ತಮ್ಮದೇ ಸರ್ಕಾರದ ಸುಗ್ರೀವಾಜ್ಞೆಯ ಪ್ರತಿಯನ್ನು  ಅವರ ಮುಂದೆಯೇ ಹರಿದು ಹಾಕಿರುವುದನ್ನು ಸಿದ್ದರಾಮಯ್ಯನವರು ಅರ್ಥಮಾಡಿಕೊಳ್ಳಬೇಕೆಂದರು.

    ಯತ್ನಾಳ್ ಹಾಗೂ ಈಶ್ವರಪ್ಪರವರ ವಿಷಯ ಬೇರೆ ಬೇರೆ ಈಶ್ವರಪ್ಪ ಅವರು ಮಂತ್ರಿ ಮತ್ತು ಯತ್ನಾಳ್ ಅವರು ಶಾಸಕ ಹಾಗಾಗಿ ಶಾಸಕ ಯತ್ನಾಳ್ ಅವರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ ಅದಕ್ಕವರು ಉತ್ತರಿಸುತ್ತಾರೆ ಎಂದರು.

    ಇದೇ ಸಂದರ್ಭ ಉಪಚುನಾವಣೆ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಇದೇ ವೇಳೆ ಸಿಡಿ  ತನಿಖೆ ನಡೆಯುತ್ತಿದೆ ಕಾನೂನು ತೊಡಕಿರುವುದರಿಂದ  ಈ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದರು.

    DAKSHINA KANNADA

    ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಮಾರಾಟವಾಗಿಲ್ಲ; ಅಧೀಕ್ಷಕರಿಂದ ಸ್ಪಷ್ಟನೆ

    Published

    on

    ಮಂಗಳೂರು: ಮಂಗಳೂರಿನ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ತನ್ನ ಮಗು ಮಾರಾಟವಾಗಿದೆ ಎಂದು ಭವ್ಯಾ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿರುವುದು. ಆಕೆಯ ಈ ಆರೋಪವು ಸಂಪೂರ್ಣ ನಿರಾಧಾರವಾಗಿದೆ ಎಂದು ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.

    ಆಗಸ್ಟ್‌ 18ರಂದು ಬೆಳಗ್ಗೆ 9.58ಕ್ಕೆ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಭವ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗುವಿಗೆ ಒಂದು ಕಣ್ಣು ಗುಡ್ಡೆ ಇಲ್ಲದಿರುವುದನ್ನು ತಜ್ಞರು ಆಕೆಗೆ ತಿಳಿಸಿದ ಸಂದರ್ಭ ಆ ಶಿಶು ತನ್ನದಲ್ಲವೆಂದು ಆಕೆ ನಿರಾಕರಿಸಿದ್ದರು. ತನ್ನ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ಅದಲು ಬದಲು ಮಾಡಿದ್ದಾರೆ ಎಂದು ಸುಳ್ಳು ಆರೋಪವನ್ನು ಹೊರಿಸಿದ್ದರು. ಈ ವಿಚಾರದಲ್ಲಿ ಪೊಲೀಸ್ ತನಿಖೆ ನಡೆದು ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಡಿಎನ್‌ಎ ಪರೀಕ್ಷೆ ಮಾಡುವ ಸಲುವಾಗಿ ಪ್ರಕ್ರಿಯೆಯನ್ನು ನಡೆಸಲಾಗಿದೆ.

    ಡಿಎನ್‌ಎ ಪರೀಕ್ಷೆಯ ವರದಿಯನ್ನು ನೇರವಾಗಿ ತನಿಖಾಧಿಕಾರಿಗಳ ಮೂಲಕ ನ್ಯಾಯಾಲಯಕ್ಕೆ ಸಂಬಂಧಿತರು ನೀಡಿದ್ದರು. ಈ ಮಧ್ಯೆ ಭವ್ಯಾ ಅವರ ಮಗು ದ.ಕ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ. ಇತ್ತೀಚಿನ ಎರಡು ದಿನಗಳಲ್ಲಿ ಭವ್ಯಾ ತನ್ನ ಶಿಶುವನ್ನು ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಮಾರಾಟ ಮಾಡಿರುತ್ತಾರೆ ಎಂದು ಮಾನಹಾನಿಕರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸುತ್ತಾ, ಸಮಾಜದಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಅಲ್ಲದೆ ಹೆರಿಗೆ ಮತ್ತು ಸ್ತ್ರೀರೋಗ ಸಂಬಂಧ ವಿಚಾರದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಸರಕಾರಿ ಸ್ವಾಮ್ಯದ ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಕಳಂಕವನ್ನು ತರುವ ವಿಚಾರಗಳು ಖೇದಕರ. ಈ ಪ್ರಕರಣವು ನ್ಯಾಯಾಲಯದ ಪರಾಮರ್ಶೆಯ ಹಂತದಲ್ಲಿರುವ ಕಾರಣ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

    Continue Reading

    BELTHANGADY

    ದಿಡುಪೆ: ಆ*ತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾ*ವು

    Published

    on

    ದಿಡುಪೆ: ಮಿತ್ತಬಾಗಿಲು ನೆಲ್ಲಿಗುಡ್ಡೆ ನಿವಾಸಿ ರಿಶಿ (17) ಸಾ*ವನ್ನಪ್ಪಿರುವ ಘಟನೆ 26 ರಂದು ಮಂಗಳವಾರ (ನ.26) ನಡೆದಿದೆ.

    ರಾಜೇಶ್ ಅರುಣಾ ದಂಪತಿ ಮಗಳಾದ ರಿಶಿ ಕಳೆದ ವಾರ 20 ರಂದು ಮನೆಯಲ್ಲಿ ಆ*ತ್ಮಹತ್ಯೆಗೆ ಯತ್ನಿಸಿದ್ದು ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

    ಇದನ್ನೂ ಓದಿ : ರಜೆಗೆ ಎಂದು ಊರಿಗೆ ಬಂದಿದ್ದ ಯೋಧ ಕೆರೆಗೆ ಹಾರಿ ಆತ್ಮಹತ್ಯೆ!

     

    ಚಿಕಿತ್ಸೆ ಫಲಕಾರಿಯಾಗದೆ ನ. 26 ರಂದು ನಿ*ಧನ ಹೊಂದಿದ್ದಾರೆ. ಆ*ತ್ಮಹತ್ಯೆಗೆ ಸೂಕ್ತ ಕಾರಣವೇನೆಂದು ತಿಳಿದು ಬಾರದ ಹಿನ್ನಲೆ, ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಗೆಜ್ಜೆ ಹಸ್ತಾಂತರ, ಚೌಕಿ ಪೂಜೆಯೊಂದಿಗೆ ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಆರಂಭ

    Published

    on

    ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ, ಯಕ್ಷಗಾನ ಮಂಡಳಿಯ ಆರೂ ಮೇಳಗಳ ಸೇವೆಯಾಟ ದೇವಳದ ರಥಬೀದಿಯಲ್ಲಿ ನಡೆಯಿತು. ನಿನ್ನೆ (ನ.25) ಸಂಜೆ ದೇವಳದ ಗೋಪುರದಲ್ಲಿ ಆರೂ ಮೇಳಗಳ ಪ್ರಧಾನ ಭಾಗವತರಿಂದ ತಾಳಮದ್ದಳೆ ಮತ್ತು ಗೆಜ್ಜೆ ಹಸ್ತಾಂತರ ನಂತರ ಚೌಕಿ ಪೂಜೆ, ಸೇವೆಯಾಟ ‘ಪಾಂಡಾಶ್ವಮೇಧ’ ನಡೆಯಿತು.

    ಈ ಸಂದರ್ಭ ವೇದವ್ಯಾಸ ತಂತ್ರಿ, ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಅತ್ತೂರು ಬೈಲು ವೆಂಕಟರಾಜ ಉಡುಪ, ಹರಿ ಉಡುಪ ಮೂಡುಮನೆ, ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಸಚಿವ ರಮಾನಾಥ ರೈ, ದೇವಸ್ಯ ಹಾಗೂ ಕೊಡೆತ್ತೂರುಗುತ್ತು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷರಾದ ನಿತಿನ್ ಶೆಟ್ಟಿ ಕೊಡೆತ್ತೂರುಗುತ್ತು, ಗಣೇಶ್ ವಿ. ಶೆಟ್ಟಿ ಐಕಳ, ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ ಎಕ್ಕಾರು, ಪ್ರದೀಪ್ ಕುಮಾರ್ ಶೆಟ್ಟಿ ಎಕ್ಕಾರು, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಮತ್ತಿತರ ಹಿರಿಯ ಗಣ್ಯರು ಉಪಸ್ಥಿತರಿದ್ದರು. ಈ ಬಾರಿಯೂ ಕಟೀಲು ಮೇಳದ ಯಕ್ಷಗಾನ ಬಯಲಾಟಗಳು ಕಾಲಮಿತಿಯಲ್ಲಿ ನಡೆಯಲಿವೆ.

    Continue Reading

    LATEST NEWS

    Trending