LIFE STYLE AND FASHION
ಸಂಗಾತಿಯಲ್ಲಿ ಈ ಗುಣಗಳಿದ್ರೆ ಹುಷಾರ್ !! ಅವರು ಸೈಕೋ ಆಗಿರ್ಬೋದು..?!
Published
1 week agoon
‘ಸೈಕೋಪಾತ್’ ಎಂಬ ಪದವನ್ನು ಅನೇಕ ಬಾರಿ ಕೇಳಿರಬಹುದು. ಅಪರಾಧ ಸಂಬಂಧಿತ ಸುದ್ದಿಗಳಲ್ಲಿ ಇದನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ. ಸೈಕೋಪಾತ್ ಹೇಗಿರುತ್ತಾನೆ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಜಯಂತ್‌ನ ನೋಡಿ ತಿಳಿದುಕೊಳ್ಳಬಹುದು. ಆದರೆ ವೈಯಕ್ತಿಕ ಜೀವನದಲ್ಲಿ ಅಂತಹ ವ್ಯಕ್ತಿಯನ್ನು ಊಹಿಸುವುದೂ ಅಸಾಧ್ಯ. ಆದರೆ ಯಾರಲ್ಲಾದರೂ, ಅದರಲ್ಲೂ ಮುಖ್ಯವಾಗಿ ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ದರೆ ಎಚ್ಚೆತ್ತುಕೊಳ್ಳೋದು ತುಂಬಾನೆ ಮುಖ್ಯ.
ಯಾವುದೇ ಸಂಬಂಧದಲ್ಲಿ, ಪ್ರೀತಿ, ನಂಬಿಕೆ ಮತ್ತು ಗೌರವವನ್ನು ಹೊಂದಿರುವುದು ತುಂಬಾನೆ ಮುಖ್ಯ. ಇಲ್ಲ ಎಲ್ಲಾ ಸರಿ ಇದೆ, ನನಗೆ ಮಾತ್ರ ಏನೋ ಸರಿ ಇಲ್ಲ ಎಂಬಂತೆ ಅನಿಸುತ್ತೆ ಎಂದು ನಂಬಿಕೊಂಡಿದ್ದರೆ, ಅದು ನಮ್ಮ ನಂಬಿಕೆಯ ವಿಚಾರವಾಗಿರುತ್ತದೆ. ಒಂದು ವೇಳೆ ಸಂಗಾತಿಯಲ್ಲಿ ಅಪನಂಬಿಕೆ, ಸ್ವಾರ್ಥ, ಆಕ್ರಮಣಶೀಲತೆ ಮೊದಲಾದ ಗುಣಗಳಿದ್ದರೆ, ಅಂತವರನ್ನು ಸೈಕೋ ಪಾತ್ ಎಂದು ಗುರುತಿಸಲಾಗುತ್ತದೆ. ಆದರೆ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಜಯಂತ್ ಮಾತ್ರ ಚಿನ್ನುಮರಿ ನನಗಷ್ಟೇ ಬೇಕು, ಆಕೆಯ ಪ್ರೀತಿ ನನಗಷ್ಟೇ ಸೀಮಿತ, ಆಕೆ ನನ್ನ ಜೊತೆ ಮಾತನಾಡಬೇಕು ಎಂದು ಅಂದುಕೊಳ್ಳುವ ಗುಣವೇ, ಅದರ ಜೊತೆಗೆ ಆಕ್ರಮಣಕಾರಿ ಮನೋಭಾವ ಹೊಂದಿರುವುದೇ ಸೈಕೋಪಾತ್.
ನೋವು ನೀಡುತ್ತಾರೆ, ಆದರೆ ಪಶ್ಚಾತ್ತಾಪ ಭಾವವಿರುವುದಿಲ್ಲ
ಮನೋರೋಗಿಗಳು ಯಾರನ್ನಾದರೂ ನೋಯಿಸಬಹುದು, ಆದರೆ ಅವರು ತಮ್ಮ ಕೃತ್ಯಗಳಿಗೆ ಎಂದಿಗೂ ಪಶ್ಚಾತ್ತಾಪ ಪಡೋದಿಲ್ಲ. ಆರ್ಥಿಕವಾಗಿ ನಷ್ಟ ಮಾಡೋದು, ದೈಹಿಕವಾಗಿ ನೋಯಿಸೋದು, ಮಾನಸಿಕವಾಗಿ ಹಿಂಸಿಸೋದು ಇದೆಲ್ಲವೂ ಅವರ ಗುಣವಾಗಿರುತ್ತೆ. ಅವರಿಗೆ ಯಾವುದೇ ರೀತಿಯ ಅನುಕಂಪ ಇರೋದಿಲ್ಲ. ಹೀಗಿರೋವಾಗ, ಸಂಗಾತಿಯು ತಾನು ತಪ್ಪು ಮಾಡಿದ್ದೇನೆ ಅನ್ನೋದನ್ನ ತಿಳಿದ ನಂತರವೂ, ಅದಕ್ಕೆ ವಿಷಾಧಿಸದಿದ್ದರೆ ಆತ ಸೈಕೋ ಅನ್ನೋದನ್ನ ತಿಳಿಯಿರಿ.
ಹೃದಯಗಳನ್ನು ಗೆಲ್ಲಲು ಸಂಗಾತಿಯನ್ನು ಅನುಸರಿಸುವುದು :
‘ಸೈಕೋಪಾತ್ಸ್ ಅಂಡ್ ಲವ್’ ಲೇಖಕಿ ಅಡೆಲೀನ್ ಬರ್ಚ್ ಪ್ರಕಾರ, ಮನೋರೋಗಿಗಳು ಸಂಗಾತಿಯ ಹೃದಯಗಳನ್ನು ಗೆಲ್ಲಲು ಅವರನ್ನ ಅನುಕರಿಸಲು ಪ್ರಾರಂಭಿಸುತ್ತಾರೆ. ಅವರು ನಮ್ಮಂತೆಯೇ ಆಗುತ್ತಾರೆ, ನಮ್ಮಂತೆಯೇ ಆಯ್ಕೆಗಳನ್ನು ಮಾಡ್ತಾರೆ. ಇದನ್ನು ಮಾಡುವ ಮೂಲಕ, ಅವರು ನಮ್ಮ ದೃಷ್ಟಿಯಲ್ಲಿ ಪರ್ಫೆಕ್ಟ್ ವ್ಯಕ್ತಿಯಾಗಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ, ಅವರು ಅಸೂಯೆ, ಅನುಮಾನ ಪಿಶಾಚಿಯೂ ಆಗಿರುತ್ತಾರೆ. ಜೊತೆಗೆ ನಿಮ್ಮನ್ನ ಕಂಟ್ರೋಲ್ ಮಾಡೋದಕ್ಕೆ ಪ್ರಯತ್ನಿಸ್ತಾರೆ.
ಮನೋರೋಗಿಗಳಿಗೆ ಸ್ನೇಹಿತರು ಕಡಿಮೆ :
ಮನೋರೋಗಿಗಳು ತಮ್ಮ ಬಗ್ಗೆ ಮತ್ತು ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ ಯೋಚಿಸುತ್ತಾರೆ, ಆದ್ದರಿಂದ ಅವರು ಬೇರೆ ಯಾರೊಂದಿಗೂ ಹೊಂದಿಕೊಳ್ಳುವುದಿಲ್ಲ, ಅಥವಾ ಅವರಿಗೆ ಹೆಚ್ಚಿನ ಸ್ನೇಹಿತರಿರೋದಿಲ್ಲ. ದೀರ್ಘ ಮತ್ತು ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುವುದು ಅವರಿಗೆ ಕಷ್ಟ. ಅವರು ಯಾರೊಂದಿಗೂ ಕೆಲಸ ಮಾಡಲು ಸಾಧ್ಯವಿಲ್ಲ, ಯಾಕಂದ್ರೆ ಅವರಿಗೆ ಇತರರ ಮೇಲೆ ಅಧಿಕಾರ ಬೇಕು. ಅವರು ತಮ್ಮ ಸ್ವಂತ ಲಾಭಕ್ಕಾಗಿ ತಮ್ಮ ಸಂಗಾತಿಗೆ ಸುಳ್ಳು ಹೇಳುತ್ತಾರೆ ಮತ್ತು ಅವರನ್ನು ನೋಯಿಸುತ್ತಾರೆ.
ಇವರನ್ನ ಗುರುತಿಸುವುದು ಸ್ವಲ್ಪ ಕಷ್ಟ :
ಮನೋರೋಗಿಗಳನ್ನು ಗುರುತಿಸುವುದು ಕಷ್ಟ. ವಾಸ್ತವವಾಗಿ, ಈ ಜನರು ಇತರರ ಹೃದಯಗಳನ್ನು ಹೇಗೆ ಗೆಲ್ಲಬೇಕೆಂದು ತಿಳಿದಿದ್ದಾರೆ ಮತ್ತು ಸುಳ್ಳು ಸಹಾನುಭೂತಿಯನ್ನು ತೋರಿಸುವಲ್ಲಿಯೂ ನಿಪುಣರಾಗಿದ್ದಾರೆ. ಅವರ ವಿಶೇಷತೆಯೆಂದರೆ ಮಾತುಗಾರಿಕೆ. ತಮ್ಮ ಮಾತಿನಿಂದಲೇ ಇನ್ನೊಬ್ಬರನ್ನ ಸೆಳೆಯುವ ಗುಣ ಹೊಂದಿರುತ್ತಾರೆ. ಇನ್ನೊಬ್ಬ ವ್ಯಕ್ತಿ ಇಷ್ಟಪಡುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಬುದ್ಧಿವಂತರಾಗಿ ಕಾಣಬಹುದು. ಆದರೆ ಯಾರಾದರೂ ಅತಿಯಾದ ವಿನಯತೆ, ಅತಿಯಾದ ಒಳ್ಳೆಯತನ ತೋರಿಸಿದರೆ ಅದನ್ನು ನಂಬೋದಕ್ಕೆ ಹೋಗಬೇಡಿ.
LATEST NEWS
ಯಾವೂದೇ ಕಾರಣಕ್ಕೂ ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬಾರದು…!
Published
11 hours agoon
05/12/2024By
NEWS DESK2ಸಾಮಾನ್ಯವಾಗಿ ಎಲ್ಲರೂ ಉಂಗುರ ಬೆರಳಿಗೆ ರಿಂಗ್‌ಗಳನ್ನು ಹಾಕಿಕೊಳ್ಳುತ್ತಾರೆ. ಈಗ ಫ್ಯಾಶನ್ ದೃಷ್ಟಿಯಿಂದ ತೋರು ಬೆರಳು, ಹೆಬ್ಬೆರೆಳು, ಮಧ್ಯದ ಬೆರಳು ಎಲ್ಲವಕ್ಕೂ ರಿಂಗ್ ಧರಿಸುತ್ತಾರೆ. ಆದ್ರೆ ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬಾರದು ಎನ್ನಲಾಗುತ್ತದೆ. ಹಾಗಾದರೆ ಮಧ್ಯದ ಬೆರಳಿಗೆ ಉಂಗುರವನ್ನು ಯಾಕೆ ಹಾಕಬಾರದು ಎಂಬುದು ಇಲ್ಲಿದೆ.
ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಏಕೆ ಧರಿಸಬಾರದು?
ಮಧ್ಯದ ಬೆರಳು, ಕೈಯ ಮಧ್ಯಭಾಗದಲ್ಲಿದೆ. ಸಮತೋಲನ, ಜವಾಬ್ದಾರಿ ಮತ್ತು ನಮ್ಮ ಸ್ವಯಂ ಪ್ರಜ್ಞೆಯನ್ನು ಈ ಬೆರಳು ಪ್ರತಿನಿಧಿಸುತ್ತದೆ. ಇದು ಶನಿ ಗ್ರಹದ ಜೊತೆಗೂ ಸಂಪರ್ಕ ಹೊಂದಿದ್ದು, ಇದು ಶಿಸ್ತು, ರಚನೆ ಮತ್ತು ಕರ್ಮವನ್ನು ನಿಯಂತ್ರಿಸುತ್ತದೆ. ನಮ್ಮ ಜೀವನದಲ್ಲಿ ಕ್ರಮ ಮತ್ತು ಸ್ಥಿರತೆಯನ್ನು ತರಲು ಶನಿಯ ಶಕ್ತಿಯು ಅತ್ಯಗತ್ಯವಾದರೂ, ಈ ಬೆರಳನ್ನು ತುಂಬಾ ಮುತುವರ್ಜಿಯಿಂದ ಕಾಣಲಾಗುತ್ತದೆ.
ಮತ್ತೊಂದೆಡೆ, ಚಿನ್ನವು ಶಕ್ತಿ, ಸಂಪತ್ತು ಮತ್ತು ಯಶಸ್ಸನ್ನು ಪ್ರತಿನಿಧಿಸುವ ಗ್ರಹ ಸೂರ್ಯನೊಂದಿಗೆ ಕೂಡ ಸಂಬಂಧ ಹೊಂದಿದೆ. ಜ್ಯೋತಿಷ್ಯ ನಂಬಿಕೆಗಳ ಸೂರ್ಯ ಮತ್ತು ಶನಿ ಪರಸ್ಪರ ಶತ್ರುಗಳು, ಆದ್ದರಿಂದ, ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದು ಅಶುಭ ಪರಿಣಾಮಗಳನ್ನು ತರುತ್ತದೆ ಎನ್ನಲಾಗಿದೆ.
ತಂದೆ-ಮಗನ ಸಂಬಂಧಕ್ಕೂ ಕುತ್ತು
ಹೆಚ್ಚುವರಿಯಾಗಿ, ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದು ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ಹದಗೆಡಿಸಬಹುದು.
ಒಟ್ಟಿನಲ್ಲಿ ಸೂರ್ಯ ಮತ್ತು ಶನಿಯ ಪ್ರಭಾವ ವಿವಿಧ ರೀತಿಯಲ್ಲಿ ಪ್ರಕಟವಾಗಬಹುದು. ಜೀವನದಲ್ಲಿ ಒತ್ತಡ, ಕೆಟ್ಟ ಭಾವನೆ, ಕೆಲಸದಲ್ಲಿ ಕುಂಠಿತ ಪ್ರಗತಿ ಹೀಗೆ ಕೆಟ್ಟ ಫಲಗಳು ನಿಮ್ಮದಾಗುವ ಸಾಧ್ಯತೆ ಹೆಚ್ಚು.
ಮಧ್ಯದ ಬೆರಳು, ಕೇಂದ್ರ ಅಂಕೆಯಾಗಿದ್ದು, ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ನಮ್ಮ ಇಚ್ಛೆಯನ್ನು ಪ್ರತಿಪಾದಿಸುವ ಸಾಮರ್ಥ್ಯದೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿರುವ ಚಿನ್ನದ ಉಂಗುರವು ಈ ಪ್ರದೇಶಗಳನ್ನು ಸಂಕೀರ್ಣಗೊಳಿಸಬಹುದು, ನಿಮ್ಮ ಆಯ್ಕೆಗಳಲ್ಲಿ ಆತ್ಮವಿಶ್ವಾಸವನ್ನು ಅನುಭವಿಸಲು ಅಥವಾ ನಿಮ್ಮ ಕಾರ್ಯಗಳಲ್ಲಿ ದೃಢತೆಯನ್ನು ಅನುಭವಿಸಲು ಇದು ಕಾರಣವಾಗಬಹುದು.
ಸಂಪತ್ತು ಮತ್ತು ಸಮೃದ್ಧಿಯ ಹರಿವಿಗೆ ಅಡ್ಡಿಯಾಗಬಹುದು
ಇದಲ್ಲದೆ, ಸಾಂಪ್ರದಾಯಿಕ ಜ್ಯೋತಿಷ್ಯ ಮತ್ತು ವೈದಿಕ ಬೋಧನೆಗಳು ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿಯ ನೈಸರ್ಗಿಕ ಹರಿವಿಗೆ ಅಡ್ಡಿಯಾಗಬಹುದು ಎಂದು ಸೂಚಿಸುತ್ತದೆ.
ಮಧ್ಯದ ಬೆರಳು ಸಂಪತ್ತಿನ ಶಕ್ತಿಗಳೊಂದಿಗೆ ಸ್ವಾಭಾವಿಕವಾಗಿ ಹೊಂದಿಕೆಯಾಗದ ಕಾರಣ ಚಿನ್ನವನ್ನು ಇಲ್ಲಿ ಇರಿಸುವುದರಿಂದ ನಿಮ್ಮ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಬಹುದು ಅಥವಾ ನಿಮ್ಮ ಯಶಸ್ಸಿನ ಹಾದಿಯಲ್ಲಿ ಅನಗತ್ಯ ಅಡೆತಡೆಗಳನ್ನು ಉಂಟುಮಾಡಬಹುದು.
ಆದ್ದರಿಂದ, ನಿಮ್ಮ ಮಧ್ಯದ ಬೆರಳಿಗೆ ಚಿನ್ನದ ಉಂಗುರ ಹಾಕುವ ಬದಲು ನಿಮ್ಮ ಉಂಗುರದ ಬೆರಳಿನಲ್ಲಿ ಚಿನ್ನದ ಉಂಗುರು ಧರಿಸಿ.
LATEST NEWS
Hair care: ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!
Published
3 days agoon
03/12/2024By
NEWS DESK2Hair care: ಕೂದಲು ಉದುರುವ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ಇಂದಿನ ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಎಲ್ಲಾ ವಯಸ್ಸಿನವರಲ್ಲಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ. ಮನೆ ಸಲಹೆಗಳನ್ನು ಪಾಲಿಸಿದರೆ ಕೂದಲು ಉದುರುವುದೇ ಇಲ್ಲ ಎನ್ನುತ್ತಾರೆ ತಜ್ಞರು.
ಉದ್ದ ಮತ್ತು ಆರೋಗ್ಯಕರ ಕೂದಲು ಬೆಳೆಯಲು, ಸ್ನಾನ ಮಾಡುವಾಗ ಕೆಲವು ಅಂಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳುತ್ತಾರೆ. ಪ್ರತಿದಿನ ಸ್ನಾನ ಮಾಡುವುದರಿಂದ ಕೂದಲು ಒಣಗಬಹುದು. ಇದರಿಂದ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆ ನಾಶವಾಗಿ ಕೂದಲು ಹೆಚ್ಚು ಉದುರುತ್ತದೆ. ಇದನ್ನು ತಡೆಯಲು ವಾರಕ್ಕೆ 2-3 ಬಾರಿ ತಲೆ ಸ್ನಾನ ಮಾಡಿದರೆ ಸಾಕು.
ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೀವು ಸ್ನಾನ ಮಾಡುವಾಗ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯದಿದ್ದರೆ, ಶಾಂಪೂದಲ್ಲಿನ ರಾಸಾಯನಿಕಗಳು ಉಳಿದು ನಿಮ್ಮ ಕೂದಲಿಗೆ ಹಾನಿಯನ್ನುಂಟು ಮಾಡುತ್ತವೆ. ಕೂದಲು ಉದುರುವಿಕೆಗೆ ಇದು ಪ್ರಮುಖ ಕಾರಣವೂ ಆಗಿರಬಹುದು.
ಎಣ್ಣೆ ಹಚ್ಚದೆ ಕೂದಲು ತೊಳೆಯುವುದು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಇದನ್ನು ತಡೆಗಟ್ಟಲು, ಸ್ನಾನ ಮಾಡುವ ಮೊದಲು ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚುವುದು ಉತ್ತಮ.
ವಾರಕ್ಕೊಮ್ಮೆಯಾದರೂ ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ. ಲಘುವಾಗಿ ಮಸಾಜ್ ಮಾಡಿ ಸ್ನಾನ ಮಾಡಬೇಕು. ಇದು ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ. ಸ್ನಾನ ಮಾಡುವ ಮೊದಲು ತಾಜಾ ಅಲೋವೆರಾ ಜೆಲ್ ಅನ್ನು ಕೂದಲಿನ ತುದಿಗೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ಕೂದಲನ್ನು ತೊಳೆಯಿರಿ. ಇದು ಕೂದಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ.
LIFE STYLE AND FASHION
ಚಳಿಗಾಲದಲ್ಲಿ ಬೆಳಗಿನ ಜಾವ ಎದ್ದೇಳುವುದಕ್ಕೆ ಕಷ್ಟ ಆಗುವವರಿಗೆ ಇಲ್ಲಿದೆ ಸುಲಭ ಉಪಾಯ !
Published
3 days agoon
02/12/2024By
NEWS DESK3ಮಂಗಳೂರು: ಚಳಿಗಾಲದಲ್ಲಿ ಕಂಬಳಿ ಹೊದ್ದು ಮಲಗುವುದು ಎಂದರೇ ಭಾರೀ ಖುಷಿ. ಅದರಲ್ಲೂ ಹೆಚ್ಚಿನವರು ಬೆಳಗ್ಗೆ ಬೇಗ ಯಾರು ಎದ್ದೇಳ್ತಾರೆ ಎನ್ನುತ್ತಲೇ ತಮ್ಮ ದಿನವನ್ನು ಗಾಢ ನಿದ್ದೆಯಿಂದಲೇ ಆರಂಭಿಸುತ್ತಾರೆ. ಆದರೂ ನಾನು ಬೇಗ ಎದ್ದೇಳಬೇಕು ಎನ್ನುವವರಿಗೆ ಇಲ್ಲಿದೆ ಕೆಲವೊಂದು ಸಲಹೆಗಳು.
ಈಗ ಚುಮುಚುಮು ಚಳಿಯೂ ಆವರಿಸಿದ್ದು, ಶೀತ ವಾತವರಣ ಇರುವುದರಿಂದ ಬೆಳಗ್ಗೆ ಎದ್ದೇಳಲು ಮನಸೇ ಬರುವುದಿಲ್ಲ. ಕೆಲವರು ಹೇಳೋದು ಇದೆ, ನಾಳೆ ಬೇಗ ಎಳ್ತೀನಿ, ಓದೋಕೆ ಇದೆ ಅಂತ. ಆದರೆ ಎಲ್ಲರಿಗಿಂತ ಲೇಟಾಗಿ ಎದ್ದೆಳೋದು ಅವರೇ.
ಆದರೆ, ಬೆಳಗ್ಗೆ ಲೇಟಾಗಿ ಎದ್ದೇಳುವುದರಿಂದ ನಮ್ಮ ಶರೀರ ದಿನ ಪೂರ್ತಿ ಆಲಸ್ಯದಿಂದ ಕೂಡಿರುತ್ತದೆ. ಇದನ್ನು ದೂರ ಮಾಡಲು ಕೆಲವೊಂದು ವಿಧಾನಗಳನ್ನು ಅನುಸರಿಸಿ.
ಈಗಿನ ವಾತವರಣ ಚಳಿಯಿಂದ ಕೂಡಿರುವುದರಿಂದ ಮುಂಜಾನೆ ಎದ್ದೇಳುವುದಕ್ಕೆ ತುಂಬಾನೇ ಕಷ್ಟ ಆಗುತ್ತೇ. ಮುಂಜಾನೆ ಎಚ್ಚರವಾದ ತಕ್ಷಣವೇ ಎದ್ದು ಬಿಡಬೇಕು. ಐದು ನಿಮಿಷ ಬಿಟ್ಟು ಎದ್ದೇಳ್ತಿನಿ ಅಂದುಕೊಂಡು ಮಲಗಿದರೆ, ಮತ್ತೆ ಹೆಚ್ಚು ಸಮಯ ಮಲಗಿ ಬಿಡುತ್ತೇವೆ. ಹೀಗಾಗಿ ಎಚ್ಚರವಾದ ತಕ್ಷಣವೇ ಎದ್ದು ಯೋಗ, ವಾಕಿಂಗ್, ರನ್ನಿಂಗ್, ವ್ಯಾಯಾಮದಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಆಲಸ್ಯವು ದೂರವಾಗಿ ದಿನ ಪೂರ್ತಿ ಉಲ್ಲಾಸದಿಂದ ಕೂಡಿರುತ್ತದೆ.
ಚಳಿಗಾಲ ಆರಂಭವಾಗುತ್ತಿದ್ದಂತೆ ಕಂಬಳಿ, ಸ್ವೆಟರ್ ಗಳು ಕಪಾಟಿನಿಂದ ಹೊರಗೆ ಬರುತ್ತವೆ. ಕೆಲವರು ಚಳಿಗಾಲದಲ್ಲಿ ಸ್ವೆಟರ್ ಧರಿಸಿ ಮಲಗುತ್ತಾರೆ. ಅದರಿಂದಲೂ ಚಳಿಯಾಗುತ್ತೇ ಅಂತ ಅದರ ಮೇಲೆ ಕಂಬಳಿ ಹೊದ್ದು ಮಲಗುತ್ತಾರೆ. ಇದರಿಂದ ಬೆಳಗ್ಗಿನ ಹೊತ್ತು ಇನ್ನೂ ಸ್ವಲ್ಪ ಮಲಗುವ ಎಂದೆನಿಸುತ್ತದೆ. ಆಲಸ್ಯವನ್ನು ಜಾಸ್ತಿ ಮಾಡುವ ಕಾರಣ ಆದಷ್ಟು ಕಂಬಳಿ ಹಾಗೂ ಸ್ವೆಟರ್ ನಿಂದ ದೂರ ಇದ್ದು, ಆದಷ್ಟು ತೆಲುವಾದ ಕಂಬಳಿ ಹೊದ್ದು ಮಲಗಬೇಕು.
ಚಳಿಗಾಲದಲ್ಲಿ ಬೆಳಗ್ಗೆ ಬೇಗನೇ ಎದ್ದೇಳುವುದಕ್ಕಿಂತ ಕಷ್ಟದ ಕೆಲಸ ಮತ್ತೊಂದಿಲ್ಲ. ಬೆಳಗ್ಗೆ ಬೇಗ ಎಳಲು ಅಲಾರಂ ಸೇಟ್ ಮಾಡಿಕೊಳ್ಳಬೇಕು. ಕೆಲವರು ಅಲಾರಂ ಆದ ತಕ್ಷಣ ಆಫ್ ಮಾಡಿ ಮತ್ತೆ ಮಲಗುತ್ತಾರೆ. ಆದರೆ ಅಲಾರಂ ಆಫ್ ಮಾಡಿ ಮಲಗಿದರೆ ಮತ್ತೆ ಎಚ್ಚರ ಆಗುವುದಿಲ್ಲ. ಈಗಾಗೀ ಅಲಾರಂ ಆದ ತಕ್ಷಣವೇ ಎದ್ದೇಳುವ ಅಭ್ಯಾಸ ಮಾಡಬೇಕು.
ಸಮಯದ ಹಿಂದೆ ನಾವು ಓಡಬೇಕೆ ಹೊರತು, ನಮ್ಮ ಹಿಂದೆ ಸಮಯ ಬರುವುದಿಲ್ಲ. ಹೀಗಾಗಿ ನಿಮ್ಮ ದಿನಚರಿಯನ್ನು ಬೆಳಗ್ಗೆ ಬೇಗ ಎದ್ದೇಳುವುದರ ಮೂಲಕ ಪ್ರಾರಂಭಿಸಿ.