Thursday, April 22, 2021

ಯುಎಇ ಕನ್ನಡಿಗಾಸ್ ಫೆಡರೇಷನ್ ಸಹಕಾರ; ನಾಗರಾಜ್ ಸಾರಂಗ್ ಮೃತದೇಹ ತಾಯ್ನಾಡಿಗೆ..!

ದುಬೈ:ದುಬೈನ ರಸ್ತೆ ಅಪಘಾತವೊಂದರಲ್ಲಿ ಮರಣ ಹೊಂದಿದ ಕುಂದಾಪುರ ಮೂಲದ ನಾಗರಾಜ್ ಸಾರಂಗ ಅವರ ಮೃತ ದೇಹ “ಕನ್ನಡಿಗಾಸ್” ಫೆಡರೇಷನ್‍ನ ಸಹಕಾರ ರದಿಂದ ಇಂದು  ತಾಯ್ನಾಡಿಗೆ ಆಗಮಿಸಿದೆ.

ಗುರುವಾರ ಸಂಜೆ ದುಬೈ ವಿಮಾನ ನಿಲ್ದಾಣದಿಂದ ಹೊರಟು ಇಂದು ಮಂಗಳೂರಿಗೆ ತಲುಪಿದೆ. ಕನ್ನಡಿಗಾಸ್ ಫೆಡರೇಷನ್ ಸಂಯೋಜಕಿ , ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ನ ಡಿಸ್ಟ್ರೆಸ್ ರಿಲೀಫ್ ಕಾರ್ಡಿನೇಟರ್ ಆಗಿರುವ ಛಾಯಾ ಕೃಷ್ಣಮೂರ್ತಿ

ನಾಗರಾಜ ಸಾರಂಗ್ ಮೃತಪಟ್ಟ ನಂತರ ಬೇಕಾದ ಎಲ್ಲಾ ಕಾನೂನು ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡಿಕೊಟ್ಟಿರುವುದರಿಂದ ನಾಗರಾಜ್ ಮೃತ ದೇಹ ತಾಯ್ನಾಡಿಗೆ ತಲುಪಿದೆ.

ಯುಎಇಯಲ್ಲಿ ಯಾವುದೇ ಪ್ರಚಾರ ಬಯಸದೆ ನಿರಂತರವಾಗಿ ಅನಿವಾಸಿ ಭಾರತೀಯರ ಸೇವೆಯಲ್ಲಿ ನಿರತರಾಗಿರುವ, ಕನ್ನಡತಿ ಛಾಯಾ ಕೃಷ್ಣಮೂರ್ತಿ ಒಂದು ದಿನದಲ್ಲೇ 4 ಭಾರತೀಯರ ಮೃತದೇಹವನ್ನು ತಾಯ್ನಾಡಿಗೆ ಕಳುಹಿಸುವ ಕೆಲಸ ಮಾಡಿದ್ದಾರೆ.

ಇದಕ್ಕೆ ಕನ್ನಡಿಗಾಸ್ ಫೆಡರೇಷನ್ ಧನ್ಯವಾದ ತಿಳಿಸಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...