FILM
‘ಸೆಕೆಂಡ್ ಹ್ಯಾಂಡ್, ಬಳಕೆಯಾದವಳು ಎಂದು ಕರೆದರು’; ಸಮಂತಾ ನೋವಿನ ಮಾತು
Published
1 week agoon
ಸಮಂತಾ ರುತ್ ಪ್ರಭು ವಿಚ್ಛೇದನದ ಬಳಿಕ ಸಾಕಷ್ಟು ನೋವು ಅನುಭವಿಸಿದ್ದರು. ನಾಲ್ಕು ವರ್ಷಗಳ ಕಾಲ ನಾಗ ಚೈತನ್ಯ ಜೊತೆ ಸಂಸಾರ ನಡೆಸಿದ ಸಂಸಾರ ಈಗ ಕೊನೆಯಾಗಿ ಕೆಲವು ವರ್ಷಗಳೇ ಕಳೆದು ಹೋಗಿವೆ. ನಾಗ ಚೈತನ್ಯ ಮತ್ತೊಂದು ಮದುವೆ ಆಗುತ್ತಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಸಾಕಷ್ಟು ನೋವು ಅನುಭವಿಸಿದ್ದರು. ಸಮಂತಾ ಎದುರಿಸಿದ ತೊಂದರೆಗಳ ಬಗ್ಗೆ, ಕೇಳಿದ ಪದಗಳ ಬಗ್ಗೆ ಬಹಳ ದುಖದಿಂದ ಹೇಳಿಕೊಂಡಿದ್ದಾರೆ.
‘ನಾನು ವಿಚ್ಛೇದನ ಪಡೆದಾಗ ಜನರು ಸೆಕೆಂಡ್ ಹ್ಯಾಂಡ್, ಬಳಕೆ ಆದವಳು ಎಂದು ಕರೆಯುತ್ತಿದ್ದರು. ಈ ರೀತಿಯ ಸಾಕಷ್ಟು ಕಮೆಂಟ್ಗಳು ಬರುತ್ತಿದ್ದವು. ವಿಚ್ಛೇದನ ಪಡೆದ ಬಳಿಕ ಮಹಿಳೆಯರು ಹಾಗೂ ಕುಟುಂಬದವರು ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ’ ಎಂದಿದ್ದಾರೆ ಸಮಂತಾ.
‘ಆರಂಭದಲ್ಲಿ ಇದು ಸಾಕಷ್ಟು ನೋವುಂಟು ಮಾಡಿತ್ತು. ನಾನು ವಿಚ್ಛೇದನ ಪಡೆದಿರುವುದು ಕಾಲ್ಪನಿಕ ಕಥೆಯಲ್ಲ. ಹಾಗೆಂದು ನಾನು ಮೂಲೆಯಲ್ಲಿ ಕುಳಿತು ಅಳುತ್ತಾ ಇರುತ್ತೇನೆ ಎಂದರ್ಥವಲ್ಲ. ಅದನ್ನು ಮರೆ ಮಾಚುವ ಅಗತ್ಯವಿಲ್ಲ. ನನ್ನ ಜೀವನ ಇಲ್ಲಿಗೆ ಕೊನೆಯಾಗಿದೆ ಎಂದರ್ಥವಲ್ಲ. ಎಲ್ಲಿ ಕೊನೆಯಿದೆಯೋ ಅಲ್ಲಿಂದಲೇ ಆರಂಭವಿರುತ್ತದೆ’ ಎಂದಿದ್ದಾರೆ ಸಮಂತಾ. ಈ ಮೂಲಕ ನಡೆದ ಘಟನೆಯನ್ನು ಒಪ್ಪಿ ಮುಂದೆ ಸಾಗಿರುವುದಾಗಿ ತಿಳಿಸಿದ್ದಾರೆ.
ಸಿನಿಮಾ ವಿಚಾರದಲ್ಲಿ ಸಮಂತಾ ಗುಡ್ನ್ಯೂಸ್ ನೀಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. 2017ರಲ್ಲಿ ನಾಗ ಚೈತನ್ಯ ಜೊತೆ ಸಮಂತಾ ಮದುವೆ ಗೋವಾದಲ್ಲಿ ಅದ್ದೂರಿಯಾಗಿ ನೆರವೇರಿತ್ತು. 2021ರಲ್ಲಿ ವಿಚ್ಚೇಧನವಾಗಿತ್ತು. ಸದ್ಯ ನಾಗ ಚೈತನ್ಯ ಅವರು ಶೋಭಿತಾ ದುಲಿಪಾಲ್ನ ವಿವಾಹ ಆಗುತ್ತಿದ್ದಾರೆ.
FILM
ಅಮ್ಮ ಲೀಲಾವತಿಗಾಗಿ ಸ್ಮಾರಕ ನಿರ್ಮಿಸಿದ ವಿನೋದ್ ರಾಜ್
Published
10 hours agoon
05/12/2024By
NEWS DESK2ಹಿರಿಯ ನಟಿ ಡಾ.ಲೀಲಾವತಿ ಸ್ಮಾರಕ ಉದ್ಘಾಟನೆ ಇಂದು (ಡಿ.5) ಸೋಲದೇವನಹಳ್ಳಿಯಲ್ಲಿ ಜರುಗಿದೆ. ಸಚಿವ ಕೆ.ಎಚ್ ಮುನಿಯಪ್ಪ ಅವರಿಂದ ಲೀಲಾವತಿ ಸ್ಮಾರಕ ಉದ್ಘಾಟಿಸಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಅಮ್ಮನ ಸ್ಮಾರಕವನ್ನು ವಿನೋದ್ ರಾಜ್ ನಿರ್ಮಿಸಿದ್ದಾರೆ. ಅದಕ್ಕೆ ‘ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ’ ಎಂದು ವಿನೋದ್ ರಾಜ್ ಹೆಸರಿಟ್ಟಿದ್ದಾರೆ. ಇಂದು (ಡಿ.5) ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಪೂಜೆ ನೆರವೇರಿದೆ.
ಬಹುಭಾಷಾ ನಟಿಯಾಗಿ ಮಿಂಚಿದ ಲೀಲಾವತಿ ಅವರು ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಲಾಗಿದೆ ಎಂಬುದು ವಿಶೇಷ.
ಮಂಗಳೂರು/ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ರೇಣುಕಾಸ್ವಾಮಿ ಕೊಲೆ ನಡೆದು ಆರು ತಿಂಗಳಾಗಿದೆ. ಈ ಪ್ರಕರಣದಲ್ಲಿ ಒಟ್ಟು 17 ಜನ ಆರೋಪಿಗಳ ಬಂಧನವಾಗಿತ್ತು. ಆದರೆ ಕೆಲವು ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಅದರಲ್ಲಿ ಎ2 ಆರೋಪಿ ದರ್ಶನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಶೂಟಿಂಗ್ ಸೆಟ್ ನಲ್ಲಿ ಭದ್ರತಾ ಲೋಪ !
ಸದ್ಯ ಫಿಸಿಯೋ ಥೆರೆಪಿ ಮಾಡಿಸಲಾಗುತ್ತಿದ್ದು, ಶೀಘ್ರವೇ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಮಧ್ಯೆ ದರ್ಶನ್ ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಒಂದು ಕಡೆ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಲೇ ಅವರ ಮಧ್ಯಂತರ ಜಾಮೀನು ರದ್ದತಿ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಶುಕ್ರವಾರ(ಡಿ.6) ಅಥವಾ(ಡಿ.9) ಸೋಮವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಇನ್ನೂ ದರ್ಶನ್ ಗೆ ತೀವ್ರ ರಕ್ತದೊತ್ತಡ ಇರುವ ಕಾರಣದಿಂದ ಅವರು ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿಪಿ ಬಳಿಕ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಮಂಗಳೂರು/ಮುಂಬೈ: ನಟ ಸಲ್ಮಾನ್ ಖಾನ್ ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಿಂದ ಜೀವ ಬೆದರಿಕೆ ಇರೋದು ಗೊತ್ತೆ ಇದೆ. ಇದರ ನಡುವೆ ಸಲ್ಮಾನ್ ಖಾನ್ ಚಿತ್ರವೊಂದರ ಚಿತ್ರೀಕರಣದ ವೇಳೆ ಭಾರಿ ಭದ್ರತಾ ಲೋಪವಾಗಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈನ ದಾದರ್ ವೆಸ್ಟ್ ನಲ್ಲಿ, ಸಿನಿಮಾ ಶೂಟಿಂಗ್ ಸಂದರ್ಭ ಅಭಿಮಾನಿಯೊಬ್ಬರು ಚಿತ್ರೀಕರಣ ವೀಕ್ಷಿಸಲು ಬಯಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಅವರನ್ನು ಪಕ್ಕಕ್ಕೆ ಸರಿಸಿದಾಗ ಅವರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎನ್.ಐ.ಎ ದಾಳಿ
ಆ ಬಳಿಕ ಕೋಪಗೊಂಡ ಆ ವ್ಯಕ್ತಿ ಲಾರೆನ್ಸ್ ಬಿಷ್ಣೋಯಿ ಹೆಸರು ಹೇಳಿದ್ದಾನೆ. ಇದರಿಂದ ಭದ್ರತಾ ಸಿಬ್ಬಂದಿ ತಕ್ಷಣವೇ ಪೊಲೀಸರನ್ನು ಕರೆಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆ ವ್ಯಕ್ತಿ ಮುಂಬೈ ನಿವಾಸಿ ಎಂಬುದು ತಿಳಿದುಬಂದಿದೆ.
ಇತ್ತೀಚೆಗೆ, ಅಕ್ಟೋಬರ್ 24ರಂದು ಮುಂಬೈ ಸಂಚಾರಿ ಪೊಲೀಸರಿಗೆ ಬಂದ ಸಂದೇಶದಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಅಕಿ 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.
ನಂತರ ಆ ವ್ಯಕ್ತಿಯನ್ನು ಹಾವೇರಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.