sports
“ಕುಡ್ಲದ ಜನಕ್ಲೆನ ಮೋಕೆ, ಅಭಿಮಾನ ಎನ್ನ ಈ ಸಾಧನೆಗ್ ಕಾರಣ” : ಕೆ.ಎಲ್.ರಾಹುಲ್
Published
5 hours agoon
ಮಂಗಳೂರು: “ಕುಡ್ಲದ ಜನಕ್ಲೆನ ಮೋಕೆ, ಅಭಿಮಾನ ಎನ್ನ ಈ ಸಾಧನೆಗ್ ಕಾರಣ” (ಮಂಗಳೂರಿನ ಜನರ ಪ್ರೀತಿ, ಅಭಿಮಾನ ನನ್ನ ಈ ಸಾಧನೆಗೆ ಕಾರಣ) ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ತುಳು ಪ್ರೇಮವನ್ನು ಮೆರೆದಿದ್ದಾರೆ. ತುಳು ಭಾಷೆಯಲ್ಲಿ ಮಾತನಾಡುವ ಮೂಲಕ ಮಂಗಳೂರಿನಲ್ಲಿ ತಾನು ಕಳೆದ ದಿನಗಳನ್ನು ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದಾರೆ.
“ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬ ಕನಸು ಮಂಗಳೂರಿನ ಎನ್‌ಐಟಿಕೆ ಮೈದಾನದಲ್ಲಿ ಕ್ರಿಕೆಟ್ ಆಡುವಾಗಲೇ ಇತ್ತು. ಇದು ಸಾಕಾರಗೊಳ್ಳಬಹುದು ಎಂಬ ಆತ್ಮವಿಶ್ವಾಸ ಇರಲಿಲ್ಲ. ಆದರೆ ಮಂಗಳೂರಿನ ಜನರ ಪ್ರೀತಿ, ವಿಶ್ವಾಸ ದಿಂದಲೇ ಇದು ಸಾಧ್ಯವಾಯಿತು. ನಾನು ಬಾಲ್ಯದಿಂದ ಈವರೆಗೆ ಇಷ್ಟೊಂದು ಸಾಧನೆಗೈದಿದ್ದೇನಾ ಎಂದು ನನಗೆ ಅನಿಸುವುದುಂಟು” ಎಂದು ಹೆಮ್ಮೆಯಿಂದ ತುಳು ಭಾಷೆಯಲ್ಲೇ ಹೇಳಿದ್ದಾರೆ.
ಕೆ.ಎಲ್. ರಾಹುಲ್ ಬಾಲ್ಯವನ್ನು ಮಂಗಳೂರಿನಲ್ಲಿ ಕಳೆದಿದ್ದು, ನಗರದ ನೆಹರೂ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ರಾಹುಲ್ ತಂದೆ ಲೋಕೇಶ್ ಎನ್‌ಐಟಿಕೆಯಲ್ಲಿ ಪ್ರೊಫೆಸರ್ ಮತ್ತು ತಾಯಿ ರಾಜೇಶ್ವರಿ ಮಂಗಳೂರು ವಿ.ವಿ. ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಇದೇ ಕಾರಣಕ್ಕೆ ರಾಹುಲ್‌ಗೆ ಮಂಗಳೂರಿನ ಬಗ್ಗೆ ವಿಶೇಷ ಗೌರವ. ಅನೇಕ ಸಂದರ್ಭಗಳಲ್ಲಿ ಮಂಗಳೂರಿನ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ.
ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಬಿದ್ದ ಬಳಿಕ ಈಗ 2025ರ ಐಪಿಎಲ್‌ನಲ್ಲಿ ಯಾವ ತಂಡದ ಪರ ಆಡಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡಕ್ಕೆ ರಾಹುಲ್ ಸೇರ್ಪಡೆ ಕುರಿತು ಚರ್ಚೆ ನಡೆಯುತ್ತಿವೆ. ನ.22ರಿಂದ ಆರಂಭವಾಗಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ರಾಹುಲ್ ಆಯ್ಕೆಯಾಗಿದ್ದಾರೆ.
LATEST NEWS
ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ; ಸೆಮಿಫೈನಲ್ ಗೆ ಲಗ್ಗೆ
Published
2 months agoon
14/09/2024By
NEWS DESK4ಮಂಗಳೂರು/ ಚೀನಾ: ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ – ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ಇಂದು(ಸೆ.14) ನಡೆಯಿತು. ಈ ಪಂದ್ಯದಲ್ಲಿ ಹರ್ಮನ್ಪ್ರೀತ್ ನಾಯಕತ್ವದ ಭಾರತ ಹಾಕಿ ತಂಡ, ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಮಣಿಸಿ ಸತತ ಐದನೇ ಜಯ ದಾಖಲಿಸಿತು. ಇದರೊಂದಿಗೆ ಭಾರತ ಹಾಕಿ ತಂಡ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
ಚೀನಾದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಸೋಲದೆ, ಸೋಲಿಲ್ಲದ ಸರದಾರನಾಗಿ ಮಿಂಚಿದೆ.
ಹಳದಿ ಕಾರ್ಡ್ ಪಡೆದ ಮೂವರು :
ಭಾರತ ಮತ್ತು ಪಾಕಿಸ್ತಾನ ನಡುವೆ ಸ್ಪರ್ಧೆ ಇದ್ದರೆ ಫೈಟ್ ನಡೆಯುವುದು ಮಾಮೂಲಿ. ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಈ ಪಂದ್ಯದಲ್ಲೂ ಹಾಗೆಯೇ ನಡೆದಿದೆ. ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರ ನಡುವೆ ತೀವ್ರ ವಾಗ್ವಾದ ನಡೆಯಿತು.
ಇದನ್ನೂ ಓದಿ : ಜ್ಯೂಸ್‌ನಲ್ಲಿ ಮೂತ್ರ ಮಿಕ್ಸ್..! ಅಂಗಡಿ ಮಾಲೀಕ ಪೊಲೀಸ್ ವಶಕ್ಕೆ..!
ಆಟಗಾರರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು. ಹೀಗಾಗಿ ಕಠಿಣ ಕ್ರಮ ಕೈಗೊಂಡ ಅಂಪೈರ್ ಮೂವರು ಆಟಗಾರರಿಗೆ ಹಳದಿ ಕಾರ್ಡ್ ನೀಡಿದರು. ಹೀಗಾಗಿ ಪಾಕಿಸ್ತಾನದ ಇಬ್ಬರು ಆಟಗಾರರು ಪಂದ್ಯದಿಂದ ಹೊರಬಿದ್ದರೆ, ಭಾರತದ ಒಬ್ಬ ಆಟಗಾರ ಅಮಾನತು ಶಿಕ್ಷೆ ಅನುಭವಿಸಬೇಕಾಯಿತು.
dehali
Paralympics 2024: 29 ಪದಕಗಳೊಂದಿಗೆ ದಾಖಲೆ ಬರೆದ ಭಾರತ
Published
2 months agoon
08/09/2024By
NEWS DESK4Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅದ್ಭುತ ಸಾಧನೆಯೊಂದಿಗೆ ಪಯಣ ಮುಗಿಸಿದೆ. ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ.
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.
LATEST NEWS
ಒಲಿಂಪಿಕ್ಸ್ 2024 : ಗ್ರೇಟ್ ಬ್ರಿಟನ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
Published
3 months agoon
04/08/2024By
NEWS DESK4ಪ್ಯಾರಿಸ್ ಒಲಿಂಪಿಕ್ಸ್ : ಭಾರತದ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಬೇಟೆಗೆ ಇಳಿದಿವೆ. ಹಾಕಿ ತಂಡ ಕೂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಇಂದು(ಆ.4) ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಮಣಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಶೂಟೌಟ್‌ನಲ್ಲಿ ಮಣಿಸಿದ ಭಾರತ ಸೆಮಿಫೈನಲ್ ತಲುಪಿದೆ. ಭಾರತ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಪಂದ್ಯವು ಪೂರ್ಣ ಸಮಯದವರೆಗೆ 1-1 ರಲ್ಲಿ ಸಮಬಲದಲ್ಲಿ ಉಳಿಯಿತು. ನಂತರ ಪೆನಾಲ್ಟಿ ಶೂಟೌಟ್ ನೀಡಲಾಯಿತು. ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಮತ್ತೊಮ್ಮೆ ಗೋಡೆಯಾಗಿ ನಿಂತರು. ಶೂಟೌಟ್‌ನಲ್ಲಿ ಭಾರತ 4-2 ಅಂತರದಲ್ಲಿ ಜಯ ಸಾಧಿಸಿದೆ.
ಇದನ್ನೂ ಓದಿ : ಆ ಕರಾಳ ಘಟನೆಗೆ 24 ವರ್ಷ; ರಾಜ್ ಕುಮಾರ್ ಅಪಹರಣ ಯಾಕಾಯ್ತು?
2021ರಲ್ಲಿ ಟೋಕಿಯೊದಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಬ್ರಿಟನ್ ತಂಡವನ್ನು ಸೋಲಿಸಿ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಆಗ ಭಾರತ ಬ್ರಿಟನ್‌ನನ್ನು 3-1 ಗೋಲುಗಳಿಂದ ಸೋಲಿಸಿತ್ತು. ಆದರೆ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಸೋಲು ಕಂಡಿತ್ತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ ಜರ್ಮನಿಯನ್ನು ಮಣಿಸಿ 41 ವರ್ಷಗಳ ಬಳಿಕ ಪದಕ ಪಡೆದಿತ್ತು.
LATEST NEWS
ರಾಜ್ಯದಲ್ಲಿ ಗಂಡಸರಿಗೂ ಫ್ರೀ ಬಸ್ ಪ್ರಯಾಣ ಭಾಗ್ಯ? – ಸುಳಿವು ಕೊಟ್ಟ ಡಿಕೆಶಿ
ತೆಂಗಿನಕಾಯಿ ತುರಿಯುವಾಗ ಮೈಮೇಲಿನ ಶಾಲು ಗ್ರೈಂಡರ್ಗೆ ಸಿಲುಕಿ ಮೈಮುನಾ ಮೃ*ತ್ಯು
ಕಾರ್ಕಳ : ಪತಿ ತೀ*ರಿದ ನೋ*ವಿನಿಂದ ಆತ್ಮಹ*ತ್ಯೆ ಮಾಡಿಕೊಂಡ ಪತ್ನಿ
ಮದುವೆಯಾಗಿ ಉಳಿದ ಹಣದಿಂದ ಶಾಲೆಗೆ ಶುದ್ಧ ನೀರಿನ ಯಂತ್ರ ವಿತರಣೆ !!
ನೋಟದಾಗೆ ನಗೆಯ ಮೀಟಿದ ‘ಪರಸಂಗದ ಗೆಂಡೆತಿಮ್ಮ’ನ ನಾಯಕಿ ಇನ್ನಿಲ್ಲ
Watch Video: ಜ್ಯೂಸ್ ಹೆಸರಿನಲ್ಲಿ ವಿಷ ಕುಡಿಸುತ್ತಿದ್ದಾರೆ ಇವರು:; ಎಚ್ಚರ ತಪ್ಪಿದರೆ ನಿಮ್ಮ ಜೀವಕ್ಕೇ ಗ್ಯಾರಂಟಿ ಇಲ್ಲ!
Trending
- LATEST NEWS2 days ago
ಬಾದಾಮಿ-ಹರ್ಬಲ್ ಟೀಯಂತಹ ಸಿಂಪಲ್ ಆಹಾರದಿಂದಲೇ 32 ಕೆಜಿ ಸ್ಲಿಮ್ ಆದ ವ್ಯಕ್ತಿ; 90 ದಿನಗಳಲ್ಲೇ ರಿಸಲ್ಟ್!
- FILM2 days ago
ಅಭಿಷೇಕ್-ಅವಿವಾ ಪುತ್ರನಿಗೆ ಅಂಬರೀಷ್ ಹೆಸರು
- DAKSHINA KANNADA2 days ago
ತೃತೀಯ ಲಿಂಗಿ ತಾಯಿಯ ಹೋರಾಟ ; ಅಪ್ಪನ ಹೆಸರಿಲ್ಲದೆ ಪಾಸ್ಪೋರ್ಟ್ ಪಡೆದ ಮಗ .. !
- DAKSHINA KANNADA2 days ago
ಅ*ಪ್ರಾಪ್ತ ವಯಸ್ಕನ ಮೇಲೆ ಅ*ಸ್ವಾಭವಿಕ ಲೈಂ*ಗಿಕ ಕ್ರಿಯೆ ಆರೋಪ; ಶಿಕ್ಷಕ ದೋಷಮುಕ್ತ