LATEST NEWS
ಆ ಕರಾಳ ಘಟನೆಗೆ 24 ವರ್ಷ; ರಾಜ್ ಕುಮಾರ್ ಅಪಹರಣ ಯಾಕಾಯ್ತು?
ಬೆಂಗಳೂರು : ಆ ಒಂದು ಘಟನೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಚಿತ್ರರಂಗವೇ ಕಂಗಾಲಾಗಿತ್ತು. ಅದುವೇ ವರನಟ ಡಾ. ರಾಜ್ ಕುಮಾರ್ ಅಪಹ*ರಣ. ಕಾಡುಗಳ್ಳ ವೀರಪ್ಪನ್ ಅಣ್ಣಾವ್ರನ್ನ ಅಪ*ಹರಿಸಿದ್ದ. ಆ ಒಂದು 108 ದಿನಗಳ ಡಾ.ರಾಜ್ ವನವಾಸದ ದಿನಕ್ಕೆ 24 ವರ್ಷಗಳಾಗಿವೆ. ಅಂದಿನಂತೆ ಇಂದೂ ಭೀಮನ ಅಮಾವಾಸ್ಯೆ.
ಕಾಡುಗಳ್ಳ ವೀರಪ್ಪನ್ 1980 ರಲ್ಲಿ ಕಾಡಿನಲ್ಲಿ ದುಷ್ಕೃತ್ಯ* ಆರಂಭಿಸಿದ್ದ. ಗಂಧದ ಕಳ್ಳ ಸಾಗಣೆ, ಆನೆದಂತ ಕಳವು ಹೀಗೆ ಅವನು ನಡೆಸುತ್ತಿದ್ದ ಕುಕೃ*ತ್ಯಗಳಿಗೆ ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳು ಮಟ್ಟ ಹಾಕಲಾರಂಭಿಸಿದ್ದರು. ಇದರಿಂದ 1990ರ ದಶಕದ ಅಂತ್ಯದಲ್ಲಿ ಆರ್ಥಿಕ ಸಮಸ್ಯೆ ಕಾಡಲಾರಂಭಿಸಿತ್ತು. ಈ ವೇಳೆಯೇ ಆತ ಗಣ್ಯರ ಅಪಹ*ರಣಕ್ಕೆ ಕೈ ಹಾಕಿದ್ದ.
ಡಾ. ರಾಜ್ ಅಪಹರಣಗೈದ ವೀರಪ್ಪನ್ :
ದಪ್ಪ ಮೀಸೆಯ, ತೆಳ್ಳಗೆ ಮೈ, ಉದ್ದ ಶರೀರ ಹೊಂದಿದ್ದ ವೀರಪ್ಪನ್ ಹೆಸರೇ ಆಗೆಲ್ಲ ನಡುಕ ಹುಟ್ಟಿಸುತ್ತಿತ್ತು. ಯಾರಾದರೂ ದಪ್ಪ ಮೀಸೆಯವರನ್ನು ಕಂಡರೆ ಈಗಾಗಲೂ ವೀರಪ್ಪನ್ ಎನ್ನುವುದು ಚಾಲ್ತಿಯಲ್ಲಿದೆ. ಅಂದಹಾಗೆ, ಈ ದಂತಗಳ್ಳ ಹಣಕ್ಕಾಗಿ ಕನ್ನಡದ ದಿಗ್ಗಜ ನಟನತ್ತ ಕಣ್ಣು ಹಾಕಿದ್ದ.
ಜುಲೈ 30, 2000 ರಂದು ತಿರುಪತಿಗೆ ಹೋಗಿದ್ದ ರಾಜ್ಕುಮಾರ್ ಹುಟ್ಟೂರು ಗಾಜನೂರಿಗೆ ಬಂದಿದ್ದರು. ಕಟ್ಟಿಸಿದ್ದ ಹೊಸ ಮನೆಯ ಗೃಹಪ್ರವೇಶ ಮಾಡುವ ಯೋಜನೆಯಲ್ಲಿದ್ದರು. ಜುಲೈ 30 ರಂದು ರಾತ್ರಿ ಬಂದೂಕು ಹಿಡಿದು ಒಳನುಗ್ಗಿದ ಸುಮಾರು 15 ಮಂದಿ ರಾಜ್ಕುಮಾರ್, ನಾಗಪ್ಪ, ಎಸ್ಎ ಗೋವಿಂದರಾಜು, ನಾಗೇಶ್ ರನ್ನು ಅಪಹರಿಸಿದ್ದರು. ರಾಜ್ ಕುಮಾರ್ ಗೂ ಮೊದಲು ಆತ ವನ್ಯಜೀವಿ ಫೋಟೋಗ್ರಾಫರ್ ಗಳಾದ ಕೃಪಾಕರ್ ಮತ್ತು ಸೇನಾನಿಯನ್ನು ಅ*ಪಹರಿಸಿದ್ದ. ಪ್ರಾಧ್ಯಾಪಕರೊಬ್ಬರನ್ನು ಅಪ*ಹರಿಸಿದ್ದ ಆತನಿಗೆ ಲಾಭ ಏನೂ ಆಗಲಿಲ್ಲ. ಹಾಗಾಗಿಯೇ ಆತ ಗಣ್ಯರತ್ತ ಕಣ್ಣು ನೆಟ್ಟ.
ರಾಜ್ ಕುಮಾರ್ ಅಪಹರಣ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು. ಪ್ರತಿಭಟನೆಗಳು ನಡೆದವು. 108 ದಿನಗಳ ಬಳಿಕ ರಾಜ್ ಕುಮಾರ್ ಅವರನ್ನು ಬಿಡುಗಡೆ ಮಾಡಿದ್ದ. ಸನ್ಮಾನ ಮಾಡಿಯೇ ಕಳುಹಿಸಿಕೊಟ್ಟಿದ್ದ.
ಇದನ್ನೂ ಓದಿ : ದುರಂ*ತಕ್ಕೆ ಸಾಕ್ಷಿಯಾಯಿತೇ ‘ಚಾಲಿಯಾರ್’!: ನದಿಯಲ್ಲಿ ತೇಲಿ ಬರುತ್ತಿವೆ ಶ*ವಗಳು
2004ರ ಅಕ್ಟೋಬರ್ ನಲ್ಲಿ ತಮಿಳುನಾಡಿನ ವಿಶೇಷ ಪೊಲೀಸ್ ಕಾರ್ಯಪಡೆ ವೀರಪ್ಪನ್ ಹ*ತ್ಯೆ ಮಾಡಿತ್ತು. ಇದಾಗಿ ಎರಡು ವರ್ಷದಲ್ಲಿ ಅಂದರೆ 2006 ರಲ್ಲಿ ಡಾ. ರಾಜ್ ಇಹಲೋಕ ತ್ಯಜಿಸಿದರು.
DAKSHINA KANNADA
ಛೀ! ಎಂಥ ಹೇಯ ಕೃ*ತ್ಯ; ಜೀವಂತ ಸಾಕು ನಾಯಿಯನ್ನು ಕಸ ವಿಲೇವಾರಿ ವಾಹನಕ್ಕೆ ತುಂಬಿಸಿದ ಮಾಲಕ
ಮಂಗಳೂರು : ಮನೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ಸಾಕುವುದನ್ನು ಹಲವರು ಇಷ್ಟ ಪಡುತ್ತಾರೆ. ಹೆಚ್ಚಿನವರ ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕುವುದನ್ನು ಕಾಣುತ್ತೇವೆ. ತಮ್ಮ ಮಕ್ಕಳಂತೆ ಅವುಗಳನ್ನು ಮುದ್ದು ಮಾಡುತ್ತಾರೆ. ಆದ್ರೆ, ಇಲ್ಲಿ ಮಾತ್ರ ಆಗಿರೋದು ಬೇರೆ.
ಹೌದು, ಜೀವಂತ ಸಾಕು ನಾಯಿಯನ್ನು ಮನೆ ಮಾಲಕರು ಪಾಲಿಕೆಯ ಕಸ ವಿಲೇವಾರಿ ಮಾಡುವ ವಾಹನಕ್ಕೆ ಕೊಟ್ಟ ಹೇಯ ಕೃ*ತ್ಯ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆದಿದೆ. ಕೆಲ ವರ್ಷಗಳಿಂದ ಮನೆಯಲ್ಲಿ ಸಾಕಿದ್ದ ಹೆಣ್ಣು ಶ್ವಾನವನ್ನು ನಗರದ ಕಸ ವಿಲೇವಾರಿ ಮಾಡುವ ಪಾಲಿಕೆಯ ಲಾರಿಗೆ ಹಾಕಿ ನಗರದ ಹೊರವಲಯದ ವಾಮಾಂಜೂರು ಡಂಪಿಂಗ್ ಯಾರ್ಡ್ ಬಳಿ ಬಿಡಲಾಗಿದೆ.
ಇದನ್ನೂ ಓದಿ : ಮಕ್ಕಳಿಗೆ ಹಣ್ಣು ಕೊಡುವಾಗ ಎಚ್ಚರ! ರಂಬುಟಾನ್ ಹಣ್ಣು ಗಂಟಲಲ್ಲಿ ಸಿಲುಕಿ ಬಾಲಕಿ ಸಾ*ವು
ಘಟನೆಯ ವಿಡೀಯೋ ಸಿಟಿ ಟಿವಿಯಲ್ಲಿ ದಾಖಲಾಗಿದೆ. ಜೊತೆಗೆ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಅಮಾನವೀಯ ಘಟನೆಗೆ ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
FILM
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್‌ಫರ್ಮ್!
ಬಿಗ್ ಬಾಸ್ ವೀಕ್ಷಕರಿಗೆ ಅಂತೂ ಸಿಹಿ ಸುದ್ದಿ ಬಂದಿದೆ. ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ನಿರೂಪಣೆ ಮಾಡೋರು ಯಾರು? ಯಾವಾಗಿನಿಂದ ಶುರು ? ಎಂದು ತಿಳಿಯಲು ಮುಂದೆ ಓದಿ.
ಬಿಗ್ ಬಾಸ್ ಸೀಸನ್ 11ಕ್ಕೆ ಅಂತೂ ಮುಹೂರ್ತ ಫಿಕ್ಸ್ ಆಗಿದೆ. ಬಹು ದಿನಗಳಿಂದ ಕಾದಿದ್ದ ವೀಕ್ಷಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಇದೇ ತಿಂಗಳ 28 ರಿಂದ 11 ನೇ ಬಿಗ್ ಬಾಸ್ ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲೇ 11 ನೇ ಬಿಗ್ ಬಾಸ್ ಆಗುತ್ತಿದೆ ಎಂಬುದೇ ವಿಶೇಷ. ಈಗಾಗಲೇ ಬಿಗ್ ಬಾಸ್ ಪ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ. ಸದ್ದಿಲ್ಲದೆ ಹೈದರಾಬಾದ್ ನಲ್ಲಿ ಫ್ರೋಮೊ ಶೂಟ್ ಆಗಿದೆ ಎನ್ನಲಾಗಿದೆ.
ಸೀಸನ್ 11 ಕ್ಕೆ ಕಿಚ್ಚ ಇರಲ್ಲ ಅನ್ನೋ ಗಾಳಿ ಸುದ್ದಿಗೆ ಬ್ರೇಕ್ ಕನ್ಪರ್ಮ್
ಈ ಮುಂಚೆ ಸೀಸನ್ 11ರಲ್ಲಿ ರಿಷಬ್ ಶೆಟ್ಟಿ ಅಥವಾ ಗೋಲ್ಡನ್ ಸ್ಟಾರ್ ಗಣೇಶ್ ಬಿಗ್ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ ಎಂದು ಗಾಸಿಪ್‌ಗಳು ಹರಿದಾಡುತ್ತಿದ್ದವು. ಇದೀಗ ಈ ಎಲ್ಲ ವದಂತಿಗಳಿಗೆ ಫುಲ್‌ಸ್ಟಾಪ್ ಇಡಲಾಗಿದೆ. ಇದೇ ತಿಂಗಳ 23 ಕ್ಕೆ ಬಿಗ್ ಬಾಸ್ ತಂಡ ಪ್ರೆಸ್ ಮೀಟ್ ಹಮ್ಮಿಕೊಂಡಿದೆ. ಸುದೀಪ್ ನೇತೃತ್ವದಲ್ಲೇ ಬಿಗ್ ಬಾಸ್ ಪ್ರೆಸ್ ಮೀಟ್ ನಡೆಯುತ್ತಿದೆ.
ಈ ಮುಂಚೆ ವಾಹಿನಿ ಹಂಚಿಕೊಂಡ ಪ್ರೊಮೋದಲ್ಲಿ ಹ್ಯಾಶ್ ಟ್ಯಾಗ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಇಲ್ಲವಾಗಿತ್ತು ಹಾಗಾಗಿಯೇ ಕಿಚ್ಚ ಇರಲ್ಲ ಎನ್ನುವ ಗಾಸಿಪ್ ಶುರುವಾಗಿತ್ತು,
ಸ್ಪರ್ಧಿಗಳು ಯಾರೆಲ್ಲ?
ಬಿಗ್ ಬಾಸ್ ಸ್ಪರ್ಧಿಗಳಾಗಿ ಸೋಷಿಯಲ್ ಮೀಡಿಯಾ influencer ಗಳು ಇರಲಿದ್ದಾರೆ ಎನ್ನಲಾಗುತ್ತಿದೆ. ಕಿರುತೆರೆ ಸ್ಟಾರ್ ಗಳ ಜೊತೆ ಬಿಗ್ ಬಾಸ್ ನಲ್ಲಿ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಕಿರುತೆರೆ ನಟ ತ್ರಿವಿಕ್ರಮ್ 11ನೇ ಬಿಗ್ ಸೀಸನ್‌ಗೆ ಹೋಗೋದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ.
LATEST NEWS
ತಂಗಿಯ ಅದ್ಧೂರಿ ಮದುವೆಗಾಗಿ ಗಾಂಜಾ ಮಾರಲು ಹೋದ ಅಣ್ಣ ಜೈಲು ಪಾಲು..!!
ಬೆಂಗಳೂರು/ಮಂಗಳೂರು: ತನ್ನ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಹೋಗಿ ಅಣ್ಣ ಪೊಲೀಸರಲ್ಲಿ ಲಾಕ್ ಆದ ಘಟನೆ ಬೆಂಗಳೂರಿನ ಬಾಸಣವಾಡಿಯಲ್ಲಿ ನಡೆದಿದೆ. ಅದ್ಧೂರಿ ಮದುವೆಗೆ ಗಾಂಜಾ ಮಾರಾಟ ಮಾಡಲು ಹೊರಟಿದ್ದ ಅಣ್ಣ ಇದೀಗ ಪೊಲೀಸರಲ್ಲಿ ಬಂಧಿಯಾಗಿದ್ದಾನೆ. ಬದ್ರುದ್ದಿನ್ (25) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಈತನಿಗೆ ತನ್ನ ತಂಗಿಯ ಮದುವೆ ಮಾಡೋದು ದೊಡ್ಡ ಸವಾಲಾಗಿ ಹೋಗಿತ್ತು. ಬರುವ ಸಂಬಳದಲ್ಲಿ ಮನೆ ನಿರ್ವಹಣೆ ಮಾಡುವುದು ಕಷ್ಟಕರವಾಗಿತ್ತು. ಈ ಮಧ್ಯೆ ಯಾರೋ ಸ್ನೇಹಿತರಿಂದ ಗಾಂಜಾ ಮಾರಿ ಹಣ ಮಾಡಬಹುದು ಎಂಬುದನ್ನು ತಿಳುದುಕೊಳ್ಳುತ್ತಾನೆ. ಬಳಿಕ ಪೆಡ್ಲರ್ ಒಬ್ಬರ ಸಂಪರ್ಕವನ್ನು ಮಾಡಿ ಒರಿಸ್ಸಾಗೆ ಹೋಗಿದ್ದಾನೆ. ಅಲ್ಲಿ ಲಾರಿ ಚಾಲಕನ ಪರಿಚಯವಾಗಿ ಆತನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರುತ್ತಿದ್ದ. ಅಲ್ಲಿಂದ ದುರಂತ್ ಎಕ್ಸ್‌ಪ್ರೆಸ್ ಟ್ರೈನ್ ಮೂಲಕ ಬರುವಾಗ ಎಸ್.ಎಂ.ಟಿ ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ.
ವರ್ಕ್ ಫ್ರಮ್ ಹೋಮ್ ಲಿಂಕ್ ಒತ್ತಿ 67ಸಾವಿರ ರೂ ಕಳೆದುಕೊಂಡ ಮಹಿಳೆ..! ದೂರು ದಾಖಲು
ಹೆಣ್ಣೂರು ಪೊಲೀಸರು ಒರಿಸ್ಸಾದ ದಿಲೀಪ್, ಶಿವರಾಜ್, ರಾಮ್ ಹಂತಲ್ ಎಂಬುವವರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಲಾಕ್ ಮಾಡಿದ ಪೊಲೀಸರು, 21 ಲಕ್ಷ ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
- LATEST NEWS6 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- LATEST NEWS1 day ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- DAKSHINA KANNADA5 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- FILM5 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ
Pingback: ಒಲಿಂಪಿಕ್ಸ್ 2024 : ಗ್ರೇಟ್ ಬ್ರಿಟನ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ - NAMMAKUDLA NEWS - ನಮ್ಮಕುಡ್ಲ ನ್ಯೂಸ