DAKSHINA KANNADA
ಕಟೀಲು – ಸಂಶಯಾಸ್ಪದ ಸಾ*ವು ; ವ್ಯಕ್ತಿಯ ಮೃ*ತದೇಹ ಪತ್ತೆ
ಕಟೀಲು: ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ರೀತಿಯಲ್ಲಿ ಸಾ*ವಿಗೀಡಾದ ಘಟನೆ ಕಟೀಲು ಸಮೀಪದ ಗಿಡಿಗೆರಯಲ್ಲಿ ಭಾನುವಾರ (ಅ.27) ನಡೆದಿದೆ.
ಸಾ*ವಿಗೀಡಾದ ವ್ಯಕ್ತಿಯನ್ನು ಕಟೀಲು ಕೊಂಡೆಮೂಲ ನಿವಾಸಿ ತಾರನಾಥ (40) ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ವೇಳೆಗೆ ಕುಡಿತದ ವಿಷಯವಾಗಿ ಮನೆಯಲ್ಲಿ ಮಾತಿನ ಚಕಮಕಿ ನಡೆದಿದ್ದು. ಬಳಿಕ ತಾರನಾಥ ಮನೆಯಿಂದ ತೆರಳಿದ್ದು ಭಾನುವಾರ ಬೆಳಗ್ಗಿನವರೆಗೂ ಮನೆಗೆ ವಾಪಾಸು ಬಂದಿರಲಿಲ್ಲ.
ತಾರನಾಥ್ ಗಾಗಿ ಹುಡುಕಾಡಿದಾಗ ಬೆಳಗ್ಗೆ ಸುಮಾರು 7:30ರ ವೇಳೆಗೆ ಮನೆಯಿಂದ ಸುಮಾರು 100ಮೀ. ದೂರದಲ್ಲಿ ನೀರಿನ ಟ್ಯಾಂಕ್ ಪಕ್ಕದಲ್ಲಿ ಕೇಬಲ್ ನಿಂದ ಕುತ್ತಿಗೆಗೆ ಬಿಗಿದುಕೊಂಡ ರೀತಿಯಲ್ಲಿ ತಾರನಾಥನ ಮೃ*ತದೇಹ ಪತ್ತೆಯಾಗಿದೆ.
ವಿವಾಹಿತನಾಗಿದ್ದ ತಾರನಾಥನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈ ಹಿಂದೆ ಮೇಸ್ತ್ರಿ ಕೆಲಸಕ್ಕೆ ಮಾಡುತ್ತಿದ್ದು ಇತ್ತೀಚೆಗೆ ಹೆಚ್ಚಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಬಜಪೆ ಪೊಲೀಸರು ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್. ಅವರ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಘಟನೆಯ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಶ್ರೀಕಾಂತ್, ಬಜಪೆ ಇನ್ಸ್ ಪೆಕ್ಟರ್ ಸಂದೀಪ್ ಅವರನ್ನೊಳಗೊಂಡ ಪೊಲೀಸರ ತಂಡ, ಫೋರೆನ್ಸಿಕ್, ಬೆರಳಚ್ಚು, ಶ್ವಾನ ದಳ ತನಿಖಾ ತಂಡಗಳು ಘಟನಾ ಸ್ಥಳದಲ್ಲಿ ಪರೀಲನೆ ನಡೆಸಿವೆ. ಮೃತದೇಹದ ಮರಣೋತ್ತರ ಶವಪರೀಕ್ಷೆ ಹಾಗೂ ತನಿಖಾ ತಂಡಗಳ ವರದಿಯ ಬಳಿಕವಷ್ಟೇ ಘಟನೆಯ ಖಚಿತತೆ ಸಿಗಬಹುದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
DAKSHINA KANNADA
ಸುಳ್ಯ: ರೋಗಿಯನ್ನು ಕರೆದೊಯ್ಯಲು 108 ಆ್ಯಂಬುಲೆನ್ಸ್ ನಿರಾಕರಣೆ
ಸುಳ್ಯ: ಸಾರ್ವಜನಿಕ ಆಸ್ಪತ್ರೆಯಲ್ಲಿ 108 ತುರ್ತು ಆ್ಯಂಬುಲೆನ್ಸ್ ವಾಹನವನ್ನು ಆಸ್ಪತ್ರೆಯ ಶೆಡ್‌ನಲ್ಲಿ ನಿಲುಗಡೆ ಮಾಡದಂತೆ ಸೂಚಿಸಿದ ಬಳಿಕ ಆರಂಭಗೊಂಡ ಗೊಂದಲ ಈಗ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ಇದೇ ಕಾರಣ ಮುಂದಿಟ್ಟು 108 ಆ್ಯಂಬುಲೆನ್ಸ್, ಸೋಮವಾರ ರೋಗಿಯೋರ್ವರನ್ನು ಮಂಗಳೂರಿಗೆ ರವಾನಿಸಲು ನಿರಾಕರಿಸಲಾದ ಆರೋಪ ಕೇಳಿ ಬಂದಿದೆ.
ಸುಳ್ಯ ಆಸ್ಪತ್ರೆಗೆ ಹೆಚ್ಚುವರಿ ಹೊಸ ಆ್ಯಂಬುಲೆನ್ಸ್ ಬಂದ ಕಾರಣ ಅದರ ನಿಲುಗಡೆಗೆ ಆಸ್ಪತ್ರೆಯ ಶೆಡ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ 108 ಆ್ಯಂಬುಲೆನ್ಸ್ ವಾಹನಕ್ಕೆ ನಿಲುಗಡೆಗೆ ಜಾಗದ ಕೊರತೆ ಉಂಟಾಗಿ ರಸ್ತೆ ಬದಿಯಲ್ಲೂ ನಿಲ್ಲಿಸಲಾಗಿತ್ತು. ಬಳಿಕ ಆಸ್ಪತ್ರೆಯ ಕ್ಯಾಂಟೀನ್ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. 108 ಆ್ಯಂಬುಲೆನ್ಸ್‌ಗೆ ನಿಲುಗಡೆಗೆ ಸೂಕ್ತ ವ್ಯವಸ್ಥೆ, ತಮಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸಿಬಂದಿ ವರ್ಗವು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿತ್ತು.
ಈ ನಡುವೆ ಸೋಮವಾರ ಬೆಳಗ್ಗೆ ಸುಳ್ಯ ಆಸ್ಪತ್ರೆಯಿಂದ ಮಂಗಳೂರಿಗೆ ರೋಗಿಯೋರ್ವರನ್ನು ಕರೆದೊಯ್ಯಲು 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದಾಗ, ಅದರ ಪ್ರಧಾನ ಕಚೇರಿಯಿಂದಲೇ ಸುಳ್ಯದ 108 ಆ್ಯಂಬುಲೆನ್ಸ್ ಒದಗಿಸಲು ನಿರಾಕರಿಸಲಾಗಿದೆ. ಇದರಿಂದ ಆಸ್ಪತ್ರೆಯ ಇನ್ನೊಂದು ಆ್ಯಂಬುಲೆನ್ಸ್‌ನಲ್ಲಿ ರೋಗಿಯನ್ನು ಮಂಗಳೂರಿಗೆ ಕೊಂಡೊಯ್ಯಲಾಯಿತು. ಪ್ರಕರಣ ತೀವ್ರತೆಯನ್ನು ಪಡೆಯುತ್ತಿದ್ದಂತೆ ಸಮಸ್ಯೆಯನ್ನು ಪರಿಹರಿಸುವಂತೆ ಪ್ರಮುಖರು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ಹಂತದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಮೇಲಿನಿಂದ ಆಸ್ಪತ್ರೆಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
BELTHANGADY
ಬೆಳ್ತಂಗಡಿ: ಮನೆಗೆ ನುಗ್ಗಿ ಕಳ್ಳತನ; ಪ್ರಕರಣ ದಾಖಲು
ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಪಾಂಡೀಲು ಹೊಸಮನೆ ಎಂಬಲ್ಲಿ ಅ.27 ರಂದು ಸಂಜೆ 5 ಗಂಟೆಯಿಂದ ಅ.28 ರ ಮಧ್ಯಾಹ್ನ 12:15 ಗಂಟೆ ಮಧ್ಯ ಅವಧಿಯಲ್ಲಿ ಮನೆಯಿಂದ ಚಿನ್ನಭಾರಣ ಹಾಗೂ ನಗದು ಕಳವಾದ ಘಟನೆ ನಡೆದಿದೆ.
ಪಾಂಡೀಲು ಹೊಸ ಮನೆ ನಿವಾಸಿ ಸುಜಾತಾ (51)ಅವರು ಮನೆಗೆ ಬೀಗ ಹಾಕಿ ತನ್ನ ತವರು ಮನೆಯಾದ ಅಳಿಯೂರು ಎಂಬಲ್ಲಿಗೆ ಹೋದ ಸಮಯ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಕಳವು ಗೈದಿದ್ದಾರೆ.
ಮನೆಯ ಗೋದ್ರೇಜ್ ಕಪಾಟಿನಲ್ಲಿದ್ದ ನಗದು 25,000 ರೂ. ಹಾಗೂ 5 ಗ್ರಾಂ. ತೂಕದ ಬೆಂಡೋಲೆ ಒಂದು ಜತೆ ಹಾಗೂ 4 ಗ್ರಾಂ. ತೂಕದ ಚಿನ್ನದ ಉಂಗುರ ಒಂದನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತುಗಳ ನಗದು ಸೇರಿ ಒಟ್ಟು 80,000 ರೂ. ಅಂದಾಜು ಮೌಲ್ಯ ಎಂದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
DAKSHINA KANNADA
ಪಡುಬಿದ್ರಿ – ಪಾದಯಾತ್ರಿಗಳಿಗೆ ಮೋಟಾರು ಬೈಕ್ ಡಿ*ಕ್ಕಿ; ಗಾ*ಯಾಳುಗಳು ಆಸ್ಪತ್ರೆಗೆ ದಾಖಲು
ಪಡುಬಿದ್ರಿ: ಕಂಚಿನಡ್ಕದಿಂದ ಕಟೀಲಿಗೆ ಮುಂಜಾವದ ವೇಳೆ ಪಾದಯಾತ್ರೆಯಲ್ಲಿ ಹೊರಟಿದ್ದ ರಮೇಶ್(48) ಹಿಗೂ ವಾಣಿ(46) ಎಂಬವರಿಗೆ ಮೋಟಾರು ಬೈಕು ಡಿಕ್ಕಿಯಾಗಿ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.
ಹೆಜಮಾಡಿ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿಯ ಪೂರ್ವಬದಿಯಲ್ಲಿ ರಸ್ತೆಯಂಚಿನಲ್ಲಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ವಾಹನ ಧಾವಿಸಿದ ಹಿನ್ನಲೆ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಗಾಯಾಳುಗಳು ತಮ್ಮ ಮಗ ಅನೀಷ್‌ನೊಂದಿಗೆ ಹೋಗುತ್ತಿದ್ದಾಗ ಈ ಘಟನೆಯು ಸಂಭವಿಸಿದೆ.
ಮೋಟಾರು ಬೈಕ್ ಸವಾರ ಆರೋಪಿ ವಿಕ್ರಮ್ ಎಂಬವರಿಗೂ ಗಾಯಗಳಾಗಿದ್ದು ಮೂವರು ಗಾಯಾಳುಗಳೂ ಸುರತ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- BIG BOSS2 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- BIG BOSS5 days ago
ಕಲರ್ಸ್ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್ಗೆ ಗುಡ್ ನ್ಯೂಸ್
- FILM5 days ago
ತುಳು ಚಿತ್ರರಂಗಕ್ಕೆ ಕಾಲಿಟ್ಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್
- BIG BOSS4 days ago
BBK11: ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು ಮನೆಯೊಳಕ್ಕೆ ನುಗ್ಗಿ ಬಂದ ಜನರು! ಯಾಕೆ ಗೊತ್ತಾ?