Connect with us

    BIG BOSS

    BBK11: ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲು ಮನೆಯೊಳಕ್ಕೆ ನುಗ್ಗಿ ಬಂದ ಜನರು! ಯಾಕೆ ಗೊತ್ತಾ?

    Published

    on

    ಬಿಗ್​ ಬಾಸ್​​ ಕನ್ನಡ ಸೀಸನ್​ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ಸದ್ಯ ಮನೆಯಲ್ಲಿ ರಾಜಕೀಯ ಟಾಸ್ಕ್​ ನಡೆಯುತ್ತಿದೆ. ಈಗಾಗಲೇ ಮನೆಯಲ್ಲಿ ಎರಡು ಬಣಗಳಾಗಿದ್ದು, ಇತ್ತಂಡಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ನಡೆಸುತ್ತಿವೆ. ಹೀಗಿರುವಾಗ ಬಿಗ್​ ಬಾಸ್​​ ಟಾಸ್ಕ್​ನಲ್ಲಿ ಕೊಂಚ ಟ್ವಿಸ್ಟ್​ ಕೊಟ್ಟಿದ್ದಾರೆ. ಅದೇನೆಂದರೆ ಬಿಗ್​ ಬಾಸ್​ ಮನೆಗೆ ಜನಸಾಮಾನ್ಯರನ್ನು ಕರೆಸಲಾಗಿದೆ.

    ಹೌದು. ರಾಜಕೀಯ ಎಂದ ಮೇಲೆ ಜನರು ಇರಲೇಬೇಕು. ಜನರಿಂದಲೇ ಪ್ರತಿನಿಧಿಯೊಬ್ಬ ರಾಜಕಾರಣಿಯಾಗಿ ಆಯ್ಕೆಯಾಗುತ್ತಾನೆ. ಆದರೀಗ ಜನರನ್ನೇ ಮನೆಯೊಳಕ್ಕೆ ಕರೆಸಿಕೊಂಡಿರುವ ಬಿಗ್​ ಬಾಸ್​ ಸ್ಪರ್ಧಿಗಳಿಗೆ ದೊಡ್ಡ ಟಾಸ್ಕ್​ ನೀಡಿದ್ದಾರೆ. ಆ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

    ಬಿಗ್​​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಈಗಾಗಲೇ ಎರಡು ಪಕ್ಷವನ್ನು ರಚಿಸಿದ್ದಾರೆ. ತೋಳ ಮತ್ತು ಹದ್ದು ಎಂಬ ಎರಡು ಪಕ್ಷ ರಚಿಸಿ ಪ್ರಚಾರ ಮಾಡುತ್ತಿದ್ದಾರೆ. ಆದರೀಗ ಜನ ಸಾಮಾನ್ಯರ ಮುಂದೆ ತಮ್ಮ ಪಕ್ಷವನ್ನು ಗೆಲ್ಲಿಸುವುದೇ ಪ್ರಮುಖ ಗುರಿಯಾಗಿದೆ.

    ತೋಳ ಪಕ್ಷವು ಧರ್ಮ ಪರ ಸೇನಾ ಪಕ್ಷ ಎಂಬ ಧ್ಯೇಯದೊಂದಿಗೆ ಪ್ರಚಾರ ಮಾಡಿದರೆ, ಇತ್ತ ಹದ್ದು ಪಕ್ಷವು ಪ್ರಮಾಣಿಕ ಸಮರ್ಥ ನ್ಯಾಯವಾದಿ ಪಕ್ಷ ಹೆಸರಿನಲ್ಲಿ ಪ್ರಚಾರ ಮಾಡುತ್ತಿದೆ.

    ಒಟ್ಟಿನಲ್ಲಿ ಮನೆಯೊಳಕ್ಕೆ ಕಾಲಿಟ್ಟ ಜನರ ಮನಗೆಲ್ಲುವುದೇ ರಾಜಕಾರಣಿಗಳ ಪ್ರಮುಖ ಗುರಿಯಾಗಿದೆ. ಜೊತೆಗೆ ಸ್ಪರ್ಧಿಗಳಿಗೆ ಜನಸಾಮಾನ್ಯರು ನಾನಾ ರೀತಿಯ ಪ್ರಶ್ನೆಯನ್ನು ಕೇಳುವ ಅವಕಾಶವನ್ನು ಕೊಡಲಾಗಿದೆ. ಇಂದಿನ ಎಪಿಸೋಡ್​ ಭಾರೀ ಕುತೂಹಲತೆಯಿಂದ ಕೂಡಿದ್ದು, ಜನಸಾಮಾನ್ಯರು ಮತ್ತು ಪಕ್ಷದ ಪ್ರತಿನಿಧಿಗಳ ಜೊತೆಗಿನ ಮಾತುಕತೆಯನ್ನು ಕಾಣಲು ವೀಕ್ಷಕರು ಕಾದು ಕುಳಿತ್ತಿದ್ದಾರೆ.

    BIG BOSS

    BBK11: ಬಿಗ್​ಬಾಸ್‌ ಮನೆಯಲ್ಲಿ ಸಿಡಿದೆದ್ದ ಮಹಿಳಾ ಸ್ಪರ್ಧಿಗಳು.. ಗೋಲ್ಡ್​ ಸುರೇಶ್ ಗೆ ಈ ವಾರದ ಕಳಪೆ

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರ ಈ ವಾರದ ಕಳಪೆ ಪಟ್ಟವನ್ನು ಮನೆಮಂದಿ ಈ ಸ್ಪರ್ಧಿಗೆ ಕೊಟ್ಟಿದ್ದಾರೆ. ಮನೆಯ ಮಂದಿಯ ನಿರ್ಧಾರಕ್ಕೆ ಕೆಂಡ ಕಾರಿದ್ದಾರೆ ಈ ಸ್ಪರ್ಧಿ. ಹೌದು, ಈ ವಾರದ ಕಳಪೆ ಪಟ್ಟವನ್ನು ಸ್ಪರ್ಧಿಗಳು ಗೋಲ್ಡ್​ ಸುರೇಶ್​ಗೆ ಕೊಟ್ಟಿದ್ದಾರೆ. ಅಲ್ಲದೇ ಅವರ ಆಟ ಹೇಗಿತ್ತು? ಏನ್​ ಮಾಡಬಾರದಾಗಿತ್ತು ಅಂತ ಹೇಳಿದ್ದಾರೆ.

    ಕನ್ನಡದ ಬಿಗ್​ಬಾಸ್​ ಮನೆಯಲ್ಲಿ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 13ರಲ್ಲಿ ಓರ್ವ ಸ್ಪರ್ಧಿಗೆ ಬಿಗ್​ಬಾಸ್​ ಮನೆಯ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಗೋಲ್ಡ್​ ಸುರೇಶ್​ಗೆ ಈ ವಾರದ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳೇ ಗೋಲ್ಡ್​ ಸುರೇಶ್​ಗೆ ಏಕೆ ಕಳಪೆ ಪಟ್ಟ ಕೊಟ್ಟಿದ್ದೇವೆ ಅಂತ ವಿವರವಾಗಿ ಮಾಹಿತಿ ನೀಡಿದ್ದಾರೆ.

    ಇನ್ನೂ, ಮನೆಯ ಎಲ್ಲ ಸ್ಪರ್ಧಿಗಳು ಅವರ​ ಹೆಸರನ್ನು ಎತ್ತಿದ ಕೂಡಲೇ ಗೋಲ್ಡ್​ ಸುರೇಶ್ ಕೆಂಡಾಮಂಡಲ ಆಗಿದ್ದಾರೆ. ನನ್ನ ಕೈಗೆ ನೋವಾಗಿದ್ದರು, ನೀವು ಎಲ್ಲರೂ ನನ್ನನ್ನೂ ಎಳೆದಿದ್ದೀರಾ ಅಂತ ಸಿಟ್ಟಾಗಿದ್ದಾರೆ. ಆದರೂ ಕೂಡ ಈ ವಾರ ಬಿಗ್​ಬಾಸ್​ನ ಕಳಪೆ ಪಟ್ಟ ಗಿಟ್ಟಿಸಿಕೊಂಡು ಜೈಲಿಗೆ ಹೋಗಿದ್ದಾರೆ.

    Continue Reading

    BIG BOSS

    ಚೈತ್ರಾ ಕುಂದಾಪುರ ವಿಚಿತ್ರ ಪೂಜೆಗೆ ಬಿಗ್‌ಬಾಸ್ ಮನೆಯ ಎಲ್ರೂ ಶಾಕ್‌; ವಿಡಿಯೋ!

    Published

    on

    ಬಿಗ್ ಬಾಸ್ ಸೀಸನ್‌ 11ರ ಆಟದ ಶೈಲಿ ಬದಲಾಗಿದೆ. ವಾರಗಳು ಕಳೆದಂತೆ ಒಬ್ಬೊಬ್ಬರು ತಮ್ಮದೇ ಗೇಮ್ ಪ್ಲಾನ್ ಮಾಡುತ್ತಾ, ಮನೆಯ ಸದಸ್ಯರಿಗೆ ಟಫ್ ಫೈಟ್ ನೀಡುತ್ತಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಮತ್ತು ಪೈಪೋಟಿಯ ಮಧ್ಯೆ ಪ್ರತಿಯೊಬ್ಬ ಸ್ಪರ್ಧಿಗಳ ಅಸಲಿ ಮುಖವಾಡ ಬಯಲಾಗುತ್ತಿದೆ.

    5ನೇ ವಾರದಲ್ಲಿ ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳು ಜಿದ್ದಾಜಿದ್ದಿಗೆ ಇಳಿದಿದ್ದಾರೆ. ಕಳೆದ 4 ವಾರದಲ್ಲಿ ಆದ ತಪ್ಪುಗಳನ್ನು ಸರಿ ಪಡಿಸಿಕೊಂಡಿರುವ ಸ್ಪರ್ಧಿಗಳು ಆಟ ಆಡುವುದನ್ನ ಕಲಿತಿದ್ದಾರೆ. ಸೀಸನ್ 11ರ ಸ್ಪರ್ಧಿಗಳು ತಮ್ಮ ಎದುರಾಳಿಗಳಿಗೆ ಟಕ್ಕರ್ ಕೊಡೋಕೆ ಶುರು ಮಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿರುವ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಅವರು ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಪಟ, ಪಟ ಅಂತ ಮಾತನಾಡುತ್ತಿದ್ದ ಚೈತ್ರಾ ಅವರು ಆಟದಲ್ಲಿ ಈಗ ಚಿತ್ರ, ವಿಚಿತ್ರ ಪಟ್ಟು ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರ ಆಟದ ಶೈಲಿ ಬದಲಾಗಿರೋದಕ್ಕೆ ಈ ಪೂಜಾ ಶೈಲಿಯೇ ಸಾಕ್ಷಿಯಾಗಿದೆ.

    ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ವಿಶೇಷವಾಗಿದೆ. ದೇವರ ಪಕ್ಕದಲ್ಲಿ ನಿಂತು ಐ ಆ್ಯಮ್ ಗಾಡ್‌, ಗಾಡ್ ಈಸ್ ಗ್ರೇಟ್ ಅನ್ನೋ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಿ ಮುಂದೆ ತನಗೆ ತಾನೇ ಪೂಜೆ ಮಾಡಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರನ್ನು ಶಿಶಿರ್ ನೋಡಿ ಫುಲ್ ಶಾಕ್ ಆಗಿದ್ದಾರೆ. ಚೈತ್ರಾ ಅವರ ವಿಚಿತ್ರ ಪೂಜೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

    Continue Reading

    BIG BOSS

    ಬಿಗ್ ಬಾಸ್ ಸ್ಪರ್ಧಿ ‘ಗೋಲ್ಡ್ ಸುರೇಶ್’ ಕಾಲಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು.!

    Published

    on

    ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಆಟ ಆಡುವಾಗ ಸ್ಪರ್ಧಿ ‘ಗೋಲ್ಡ್ ಸುರೇಶ್’ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವ ಸಂದರ್ಭದಲ್ಲಿ ಗೋಲ್ಡ್ ಸುರೇಶ್ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.

    ಆಟದ ವೇಳೆ ಗೋಲ್ಡ್ ಸುರೇಶ್ ಮೇಲೆ ಆಕಸ್ಮಿಕವಾಗಿ ನೀರು ತುಂಬಿದ ಡ್ರಮ್ ಬಿದ್ದು ಅವಘಡ ನಡೆದಿದೆ. ನನ್ನ ಕಾಲು ಹೋಯಿತು ಎಂದು ಸುರೇಶ್ ಕೂಗಿಕೊಂಡಿದ್ದಾರೆ. ಸುರೇಶ್ ಗೆ ಏನೋ ಆಯಿತು ಎಂದು ಉಳಿದವರು ಕೂಗಿಕೊಂಡಿದ್ದಾರೆ. ಸದ್ಯ ಸುರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Continue Reading

    LATEST NEWS

    Trending