Connect with us

LATEST NEWS

‘ಎಪ್ರಿಲ್‌ನಲ್ಲಿ ಕೊನೆಯಾಗುವ ಟೋಲ್ ಸಂಗ್ರಹ ಗುತ್ತಿಗೆ ಯಾವ ಕಾರಣಕ್ಕೂ ನವೀಕರಣಗೊಳಿಸಲು ಅವಕಾಶ ನೀಡಬಾರದು’

Published

on

ಮಂಗಳೂರು: ಅಕ್ರಮವಾಗಿ ಮುಂದುವರಿಯುತ್ತಿರುವ ಸುರತ್ಕಲ್ ಟೋಲ್ ಕೇಂದ್ರವನ್ನು ತೆರವುಗೊಳಿಸುವ ಹೆದ್ದಾರಿ ಪ್ರಾಧಿಕಾರದ 2018ರ ತೀರ್ಮಾನವನ್ನು ತಕ್ಷಣ ಜಾರಿಗೊಳಿಸಲು ಮುಂದಾಗುವಂತೆ ಸಂಸದರು,

ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.


ಏಪ್ರಿಲ್ ಆರಂಭಕ್ಕೆ ಕೊನೆಗೊಳ್ಳುವ ಮೂರು ತಿಂಗಳ ಅವಧಿಯ ಟೋಲ್ ಸಂಗ್ರಹ ಗುತ್ತಿಗೆಯನ್ನು ಯಾವುದೇ ಕಾರಣಕ್ಕೂ ನವೀಕರಿಸಲು ಅವಕಾಶ ನೀಡಬಾರದು.

ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಪತ್ರ ಬರೆಯುವುದು, ಸಾರ್ವಜನಿಕ ಸಾರಿಗೆ ಒಕ್ಕೂಟಗಳು ಸೇರಿದಂತೆ ಸಂಘ– ಸಂಸ್ಥೆಗಳ ಪ್ರತಿನಿಧಿಗಳ ಸಮಾವೇಶ,

ಟೋಲ್ ಗೇಟ್ ಚಲೋ ಪಾದಯಾತ್ರೆಗಳನ್ನು ಹಂತ ಹಂತವಾಗಿ ನಡೆಸಿ ಹೋರಾಟ ತೀವ್ರಗೊಳಿಸುವುದಾಗಿ ಸಮಿತಿ ಎಚ್ಚರಿಸಿದೆ.
ಏಳು ವರ್ಷಗಳ ಹಿಂದೆ ಆರು ತಿಂಗಳ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡ ಸುರತ್ಕಲ್ ಟೋಲ್ ಕೇಂದ್ರವು,

9 ಕಿ.ಮೀ. ಅಂತರದ ಹೆಜಮಾಡಿ ಟೋಲ್ ಕೇಂದ್ರ ಆರಂಭಗೊಂಡ ನಂತರವೂ ಮುಂದುವರಿದಿದ್ದು, ವಾಹನ ಸವಾರರ ಸುಲಿಗೆ ನಡೆಸುತ್ತಿರುವುದು ಖೇದಕರ. ಈ ಹಗಲು ದರೋಡೆಗೆ ಸಂಸದ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಅವಳಿ ಜಿಲ್ಲೆಗಳ ಸಂಸದರು,

ಶಾಸಕರೇ ನೇರಹೊಣೆ. ನಳಿನ್ ಕುಮಾರ್ ಕಟೀಲ್ ತಮ್ಮ ಕರ್ತವ್ಯ ನಿರ್ವಹಣೆ ಮಾಡಿದರೆ ಸುರತ್ಕಲ್ ಟೋಲ್ ಕೇಂದ್ರದ ತೆರವು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಮಿತಿ ತಿಳಿಸಿದೆ.


ಈ ಕುರಿತು ಬುಧವಾರ ಸಭೆ ನಡೆಸಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ವಿಸ್ತಾರವಾದ ಚರ್ಚೆ ನಡೆಸಿದರು.

ಸಮಿತಿಯ ಸಹ ಸಂಚಾಲಕ ವೈ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ರಘು ಎಕ್ಕಾರು,

ಉದ್ಯಮಿ ದಿಲ್‌ರಾಜ್ ಆಳ್ವ, ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್, ಹೆಜಮಾಡಿ ಟೋಲ್ ಗೇಟ್ ವಿರೋಧಿ ಸಮಿತಿಯ ಶೇಖರ ಹೆಜಮಾಡಿ, ಕುಳಾಯಿ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಗಂಗಾಧರ ಭಂಜನ್,

ಟಿ.ಎನ್. ರಮೇಶ್, ಹರೀಶ್ ಪೇಜಾವರ, ರಾಜೇಶ್ ಶೆಟ್ಟಿ ಪಡ್ರೆ, ರಾಜೇಶ್ ಕುಳಾಯಿ, ರಶೀದ್ ಮುಕ್ಕ, ವಕೀಲ ಜೀಷನ್ ಆಲಿ ಸುರತ್ಕಲ್, ಶ್ರೀನಾಥ್ ಕುಲಾಲ್, ಅಜ್ಮಲ್ ಅಹ್ಮದ್, ಸುರೇಶ್ ಬೆಳ್ಳಾಯಾರು ಭಾಗವಹಿಸಿದ್ದರು.

DAKSHINA KANNADA

ಆಂಬುಲೆನ್ಸ್ – ಕಾರು ನಡುವೆ ಭೀಕರ ಅಪಘಾತ..! ಮೂವರ ದುರ್ಮರಣ.!

Published

on

ಕಾಸರಗೋಡು: ಆ್ಯಂಬುಲೆನ್ಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಇಂದು ನಡೆದಿದೆ.

accident

ಕಾರಿನಲ್ಲಿದ್ದ ತ್ರಿಶೂರು ಗುರುವಾಯೂರು ನಿವಾಸಿಗಳಾದ ಶ್ರೀನಾಥ್, ಶರತ್ ಮೆನೋನ್ ಎಂಬವರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ನಲ್ಲಿದ್ದ ರೋಗಿಯೂ ಗಾಯಗೊಂಡಿದ್ದಾರೆ. ಕಾಸರಗೋಡಿನಿಂದ ಮಂಗಳೂರು ಕಡೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಮತ್ತು ಮಂಗಳೂರು ಕಡೆಯಿಂದ ಮಂಜೇಶ್ವರದತ್ತ ಬರುತ್ತಿದ್ದ ಕಾರು ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆ್ಯಂಬುಲೆನ್ಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ.

 ಮುಂದೆ ಓದಿ..; ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

accident

 

Continue Reading

FILM

ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!

Published

on

ಮಂಗಳೂರು/ ಮುಂಬೈ : ಸದ್ಯ ಡೀಪ್ ಫೇಕ್ ಹಾವಳಿ ಮುಗಿಯುವಂತೆ ಕಾಣುತ್ತಿಲ್ಲ. ಅನೇಕ ನಟ – ನಟಿಯರು ಡೀಪ್ ಫೇಕ್ ನಿಂದ ತೊಂದರೆ ಅನುಭವಿಸಿದ್ದಾರೆ. ಕತ್ರೀನಾ ಕೈಫ್, ರಶ್ಮಿಕಾ ಮಂದಣ್ಣ, ಕಾಜಲ್, ಅಲಿಯಾ ಭಟ್ ರ ಡೀಪ್ ಫೆಕ್ ವೀಡಿಯೋ ವೈರಲ್ ಆಗಿತ್ತು. ಕೇವಲ ನಟಿಯರದ್ದು ಮಾತ್ರವಲ್ಲ, ನಟರಾದ ಅಮೀರ್ ಖಾನ್, ಅಲ್ಲು ಅರ್ಜುನ್ ಚುನಾವಣಾ ಪ್ರಚಾರದ ಫೇಕ್ ವೀಡಿಯೋಗಳು ಸೃಷ್ಟಿಯಾಗಿದ್ದವು. ಈ ಬಗ್ಗೆ ಚಿತ್ರರಂಗದ ಅನೇಕರು ಧ್ವನಿ ಎತ್ತಿದ್ದರೂ ಕೂಡ. ಆದ್ರೆ, ಇಲ್ಲಿಗೆ ಮುಕ್ತಾಯವಾಗಿಲ್ಲ. ಇದೀಗ ಮತ್ತೆ ಡೀಪ್ ಫೇಕ್ ಹಾವಳಿ ಮುಂದುವರೆದಿದೆ.

 

ಮತ್ತೆ ಅಲಿಯಾ ಭಟ್ ಡೀಪ್ ಫೇಕ್ :

ಡೀಪ್ ಫೆಕ್ ಗೆ ಮತ್ತೆ ಅಲಿಯಾ ಭಟ್ ಬಲಿಯಾಗಿದ್ದಾರೆ. ಅಲಿಯಾ ಭಟ್ ಹೊಸ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಇದುವರೆಗೆ ಬೇರೆ ಯಾರು ಯಾರದೋ ವೀಡಿಯೋ ಗಳಿಗೆ ನಟಿಯರ ಮುಖವನ್ನು ಕೂರಿಸಿ ವೀಡಿಯೋ ಮಾಡಲಾಗುತ್ತಿತ್ತು. ಇದೀಗ ನಟಿಯೊಬ್ಬಳ ವೀಡಿಯೋಗೆ ನಟಿ ಮುಖವನ್ನು ಬಳಸಲಾಗಿದೆ. ಹೌದು, ನಟಿಯೊಬ್ಬಳ ಮುಖ ಎಡಿಟ್ ಮಾಡಿ ಅಲ್ಲಿ ಅಲಿಯಾ ಭಟ್ ಮುಖವನ್ನು ಬಳಸಲಾಗಿದೆ.

ಆ ನಟಿಯರು ಯಾರು?


ಇಷ್ಟರ ವರೆಗೆ ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಬೇರೆಯವರ ದೇಹಕ್ಕೆ ಸೆಲೆಬ್ರಿಟಿಗಳ ಮುಖ ಜೋಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಈಗ ಬೇರೊಬ್ಬ ನಟಿಯ ವೀಡಿಯೋ ಬಳಸಿಕೊಂಡಿದ್ದಾರೆ. ಈ ಡೀಪ್ ಫೇಕ್ ವೀಡಿಯೋದ ಅಸಲಿ ವೀಡಿಯೋ ನಟಿ ವಾಮಿಕಾ ಅವರದ್ದು. ವಾಮಿಕ ಬಾಲಿವುಡ್ ನಟಿ. 2007 ರಿಂದ ಅವರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ಯಾವುದೂ ಆಕೆಗೆ ಹೆಸರು ಕೊಟ್ಟಿಲ್ಲ. ಈಗ ಡೀಪ್ ಫೇಕ್ ಪ್ರಕರಣದಿಂದ ಅವರು ಮುನ್ನೆಲೆಗೆ ಬಂದಿದ್ದಾರೆ.

ಇದನ್ನೂ ಓದಿ : ಮಲಯಾಳಂ ನಟಿ ‘ಕನಕಲತಾ’ ಇನ್ನಿಲ್ಲ

ನಟಿ ವಾಮಿಕಾ ವೀಡಿಯೋಗೆ ಅಲಿಯಾ ಭಟ್ ಫೇಸ್ :

ನಟಿ ವಾಮಿಕ ಕೆಲವು ದಿನಗಳ ಹಿಂದೆಯಷ್ಟೇ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ಅವರು, ಕೆಂಪು ಸೀರೆಯುಟ್ಟು ಮಿಂಚಿದ್ದರು. ನೆಟ್ ಫ್ಲಿಕ್ಸ್ ಸರಣಿ ‘ಹೀರಾಮಂಡಿ’ ಸ್ಕ್ರೀನಿಂಗ್ ಗಾಗಿ ವಾಮಿಕಾ ಕೆಂಪು ಸೀರೆಯುಟ್ಟಿದ್ದರು.
ಇದೀಗ ಈ ವೀಡಿಯೋಗೆ ಅಲಿಯಾ ಭಟ್ ಮುಖ ಬಳಸಿ ವೈರಲ್ ಮಾಡಲಾಗಿದೆ.

ಆಲಿಯಾ ಅಭಿಮಾನಿಗಳು ಕಿಡಿ ಕಾರಿದ್ದಾರೆ. ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹೇಗೆ ಸಾಧ್ಯ? ಆಲಿಯಾ ಮುಖ ನೀವು ಬಳಸಿರುವುದು ಕಾನೂನುಬದ್ಧವೇ? ಎಂದು ಪ್ರಶ್ನಿಸಿದ್ದಾರೆ. ಕೆಲವರು ಕಮೆಂಟ್ಸ್ ಬಾಕ್ಸ್ ನಲ್ಲಿ ಆಲಿಯಾ ಭಟ್ ಅವರನ್ನು ಟ್ಯಾಗ್ ಮಾಡಿದ್ದಾರೆ.

 

Continue Reading

DAKSHINA KANNADA

ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..! ರಕ್ತಸಿಕ್ತ ಸ್ಥಿತಿಯಲ್ಲಿದ್ದ ಶವ.!!

Published

on

ಮಂಗಳೂರು: ಹೆಸರಾಂತ ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ತಲಪಾಡಿಯಲ್ಲಿರುವ ಬಂಟವಾಳದ ಭಂಟರ ಭವನದ ಆವರಣದ ಕಂಪೌಂಡ್‌ ಒಳಗಡೆ ವ್ಯಕ್ತಿಯೋರ್ವನ ಮೃತದೇಹ ರಕ್ತಸಿಕ್ತವಾಗಿ ಇದ್ದ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ನಿವಾಸಿ ಸಂತೋಷ್ ಅವರ ಮೃತದೇಹ ಎಂದು ಗುರುತಿಸಲಾಗಿದೆ.

bantwala death

ಬಂಟರ ಭವನದ ಹೊರಗಡೆ ಸಂತೋಷ್ ಗೆ ಸೇರಿದ್ದ ಬೈಕ್‌ ಪತ್ತೆಯಾಗಿದೆ. ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತು ಕೊಂಡಿದ್ದು ಈ ವೇಳೆ ಕುಸಿದು ಕೆಳಗೆ ಬಿದ್ದು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ.. ಧರ್ಮಸ್ಥಳ: ಸರಣಿ ಅಪ*ಘಾತ, 5 ವಾಹನಗಳಿಗೆ ಹಾನಿ

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Continue Reading

LATEST NEWS

Trending