DAKSHINA KANNADA
ಸುರತ್ಕಲ್ ಜಲೀಲ್ ಹತ್ಯೆ ಪ್ರಕರಣದ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು..!
Published
2 years agoon
By
Adminಸುರತ್ಕಲ್ ಸಮೀಪದ ಕಾಟಿಪಳ್ಳ 4ನೇ ಬ್ಲಾಕ್‌ನಲ್ಲಿ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಪವನ್ ಎಂಬಾತನಿಗೆ ಮಂಗಳೂರು ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮಂಗಳೂರು : ಸುರತ್ಕಲ್ ಸಮೀಪದ ಕಾಟಿಪಳ್ಳ 4ನೇ ಬ್ಲಾಕ್‌ನಲ್ಲಿ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಪವನ್ ಎಂಬಾತನಿಗೆ ಮಂಗಳೂರು ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಮೂರನೇ ಆರೋಪಿಯಾಗಿರುವ ಪವನ್ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೊರಿ ಅರ್ಜಿ ಸಲ್ಲಿಸಿದ್ದ.
ದೀರ್ಘ ವಾದ ಪ್ರತಿವಾದದ ಬಳಿಕ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಜೋಷಿ ಶರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪಿಯ ಪರವಾಗಿ ಮಂಗಳೂರಿನ ವಕೀಲರಾದ ಶ್ರೇಯಸ್ ಎಸ್ ಕೆ ಮತ್ತು ಹರ್ಷಿತ್ ವಾದಿಸಿದ್ದರು.
ಮಂಗಳೂರು ಹೊರವಲಯದ ಸುರತ್ಕಲ್ನ ಕಾಟಿಪಳ್ಳ ನಾಲ್ಕನೇ ಬ್ಲಾಕ್‌ನಲ್ಲಿ ಜಲೀಲ್(45) ಎಂಬವರನ್ನು ದುಷ್ಕರ್ಮಿಗಳು ಡಿಸೆಂಬರ್ 24ರಂದು ಮಾರಕಾಸ್ತ್ರಗಳಿಂದ ಇರಿದು ಹತ್ಯೆ ಮಾಡಿದ್ದರು.
ಜಲೀಲ್ ಕಾಟಿಪಳ್ಳದ ನೈತಂಗಡಿ ರಸ್ತೆಯಲ್ಲಿರುವ ಲತೀಫಾ ಸ್ಟೋರ್ ಮಾಲಿಕರಾಗಿದ್ದರು.
ಸ್ಟೋರ್ನಲ್ಲಿದ್ದ ಜಲೀಲ್ಗೆ ದುಷ್ಕರ್ಮಿಗಳ ಗುಂಪು ಇರಿದು ಪರಾರಿಯಾಗಿತ್ತು. ಗಾಯಾಳು ಜಲೀಲ್ರನ್ನು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಲೀಲ್ ಸಾವನ್ನಪ್ಪಿದ್ದರು.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಧರ್ಮಸ್ಥಳ : 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ.3 ರ ಶನಿವಾರ ಸಂಜೆ 6.48ರ ಗೋಧೂಳಿ ಲಗ್ನದಲ್ಲಿ ನಡೆಯಲಿದೆ.
‘ಮದುವೆ’ ಎನ್ನುವುದು ಅದೆಷ್ಟೋ ಜನರ ಸುಂದರ ಕನಸು. ಆದರೆ ಆರ್ಥಿಕ ಪರಿಸ್ಥಿತಿಯು ಆ ಖುಷಿಗೆ ಸಾಥ್ ನೀಡದೆ ಇರಬಹುದು. ಕೆಲವೊಮ್ಮೆ ಜೋಡಿಯ ಪವಿತ್ರ ಪ್ರೇಮಕ್ಕೆ ಕುಟುಂಬವೂ ಅಡ್ಡಿಯಾಗಬಹುದು. ಅಂತಹ ಯುವ ಜೋಡಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಶ್ರೀ ಕ್ಷೇತ್ರ ದರ್ಮಸ್ಥಳದಲ್ಲುಇ ನಡೆಯುವ ಸಾಮೂಹಿಕ ವಿವಾಹದ ಸದುಪಯೊಗವನ್ನು ಪಡೆದುಕೊಳ್ಳಬಹುದು.
ಎರಡನೇ ವಿವಾಹಕ್ಕೆ ನಿರ್ಬಂಧ ಹೇರಿದ್ದು, ಮೊದಲ ಮದುವೆಗೆ ಮಾತ್ರ ಆದ್ಯತೆ ನೀಡಲಾಗುವುದು. ಮಧುಮಗನಿಗೆ ಧೋತಿ, ಶಾಲು ನೀಡಲಾಗುವುದು. ಮಧುಮಗಳಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ ಹೂವಿನ ಹಾರ ಕೊಡಲಾಗುವುದು.
ಇದನ್ನೂ ಓದಿ : ಕಣ್ಣೀರು ಹಾಕುತ್ತಾ ಮಹಾಕುಂಭಮೇಳದಿಂದ ಹೊರ ನಡೆದ ಸುಂದರಿ ಸಾಧ್ವಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯ ಮೂಲಕವೇ ಮದುವೆಯ ಎಲ್ಲಾ ವೆಚ್ಚವನ್ನು ಮಾಡಲಾಗುವುದು. ಆಸಕ್ತರು 2025 ಫೆ.25 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08256-266644 ಸಂಖ್ಯೆಯನ್ನು ಸಂಪರ್ಕಿಸಬಹುದು.
DAKSHINA KANNADA
ಚಿನ್ನ ಕಡಿಮೆ ಬೆಲೆಗೆ ನೀಡುವವರ ಬಗ್ಗೆ ಎಚ್ಚರ; ಮಂಗಳೂರಿನಲ್ಲಿ ಅಂಗಡಿಯವರೊಬ್ಬರನ್ನು ವಂಚಿಸಲು ಯತ್ನ
Published
16 hours agoon
18/01/2025By
NEWS DESK3ಮಂಗಳೂರು : ಕೃಷಿ ಮಾಡುವಾಗ ಭೂಮಿಯಲ್ಲಿ ನಿಧಿ ಸಿಕ್ಕಿದೆ. ನಮಗೆ ತುರ್ತಾಗಿ ಹಣ ಬೇಕಾದ ಕಾರಣ ಕಡಿಮೆಯಲ್ಲಿ ಚಿನ್ನ ಕೊಡ್ತೇವೆ … ಹೀಗಂತ ಯಾರಾದರೂ ನಿಮ್ಮ ಬಳಿ ಬಂದು ಹೇಳಿದ್ರೆ ಎಚ್ಚರವಾಗಿರಿ.
ಯಾಕಂದ್ರೆ ಇಂತಹ ಕಥೆ ಹೇಳಿ ನಕಲಿ ಚಿನ್ನ ನೀಡಿ ವಂಚಿಸುವ ತಂಡವೊಂದು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ನಗರದ ನಾಗುರಿ ಬಳಿ ಇದೇ ಕಥೆ ಹೇಳಿಕೊಂಡು ಅಂಗಡಿಯವರೊಬ್ಬರನ್ನು ವಂಚಿಸಲು ಪ್ರಯತ್ನಿಸಿದ್ದಾರೆ.
ಮಹಿಳೆ ಹಾಗೂ ನಾಲ್ವರು ಯುವಕರ ತಂಡ ಈ ಪ್ರಯತ್ನ ಮಾಡಿ ತಗಲಾಕೊಂಡಿದ್ದಾರೆ. ಮೊದಲಿಗೆ ಅಸಲಿ ಚಿನ್ನ ನೀಡಿ ಪರೀಕ್ಷಿಸಲು ಹೇಳಿದ್ದು ಪರೀಕ್ಷೆ ವೇಳೆ ಅದು ಅಸಲಿಯೇ ಆಗಿತ್ತು. 2 ಲಕ್ಷಕ್ಕೆ ಮತ್ತೊಂದು ಚಿನ್ನ ನೀಡಿದ್ದು ಅದು ನಕಲಿಯಾಗಿತ್ತು.
ಇದನ್ನೂ ಓದಿ: 23 ವರ್ಷದ ಹಿಂದಿ ಕಿರುತೆರೆ ನಟ ಸಾವು
ಆದರೆ ಇಂತಹ ವಂಚನೆ ಬಗ್ಗೆ ಮೊದಲೇ ಅನುಮಾನ ಇದ್ದ ಅಂಗಡಿಯವರು ಈ ಚಿನ್ನ ಕೂಡಾ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಈ ವೇಳೆ ಬಂಡವಾಳ ಬಯಲಾಗುತ್ತದೆ ಎಂದು ನಾಲ್ವರು ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಜೊತೆಯಲ್ಲಿದ್ದ ಮಹಿಳೆಯನ್ನು ಅಂಗಡಿಯವರು ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಡಿಮೆ ಬೆಲೆಗೆ ಇಂತಹ ಮೋಸದ ಕಥೆ ಹೆಣೆದು ಚಿನ್ನದ ಆಸೆ ತೋರಿಸಿ ವಂಚಿಸೋ ದೊಡ್ಡ ತಂಡವೇ ಇಲ್ಲಿ ಕಾರ್ಯಾಚರಿಸ್ತಾ ಇದೆ. ಹೀಗಾಗಿ ಸಾರ್ವಜನಿಕರು ಇಂತವರ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು.
ಮಂಗಳೂರು : ಇಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾಲಿ ಚಾಯ್ ವಾಲ ಅವರನ್ನು ಅದ್ದೂರಿಯಾಗಿ ಸ್ವಾಗತ ಕೊರಲಾಯಿತು.
ಮಂಗಳೂರಿನಲ್ಲಿ ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟದಲ್ಲಿ ಈ ಬಾರಿ ಮಹಾರಾಷ್ಟ್ರದ ನಾಗ್ಪುರದ ಖ್ಯಾತ ಡಾಲಿ ಚಾಯ್‌ವಾಲ ಅವರು ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಕಾರ್ಯಕ್ರಮದ ಮೊದಲ ದಿನ ಅವರು ಭಾಗವಹಿಸಲಿದ್ದಾರೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಜಿಲ್ಲಾಡಳಿತದ ಸಹಕಾರದಲ್ಲಿ ಈ ಐದು ದಿನಗಳ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಸಂಕ್ರಾಂತಿ ರಜೆ : ಮನೆ ಮಾಲಿಕ ಕಳ್ಳನಿಗೆ ಬರೆದಿಟ್ಟ ಲೆಟರ್ ವೈರಲ್
ತನ್ನ ಮಂಗಳೂರು ಭೇಟಿಯ ಕುರಿತು ಡಾಲಿ ಚಾಯ್‌ವಾಲ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ್ದು, ‘ಜ. 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. ಮಜಾ ಕರೇಂಗೆ .. ಚಾಯ್ ಪಿಯೇಂಗೆ’ ಎಂದು ಪೋಸ್ಟ್ ಹಾಕಿದ್ದರು.
ಮೈಕ್ರೋಸಾಪ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಡಾಲಿ ಅವರ ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿದು ಪೋಸ್ಟ್ ಹಂಚಿ ಕೊಂಡ ಬಳಿಕ ಡಾಲಿ ಚಾಯ್‌ವಾಲ ಅವರು ದೇಶಾದ್ಯಂತ ಪರಿಚಿತರಾಗಿದ್ದಾರೆ. ಅವರ ಮೂಲ ಹೆಸರು ಸುನಿಲ್ ಪಾಟೀಲ್. ಆದರೆ ಅವರು ಡಾಲಿ ಚಾಯ್‌ವಾಲ ಎಂದೇ ಪ್ರಸಿದ್ಧರಾಗಿದ್ದಾರೆ.
LATEST NEWS
ತುಳುಚಲನಚಿತ್ರ ನಿರ್ಮಾಪಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ
ಭಾರತೀಯರಿಗೆ ಬಿಗ್ ಶಾ*ಕ್; ಸೌದಿ ಅರೇಬಿಯಾದಲ್ಲಿ ಹೊಸ ವೀಸಾ ನಿಯಮಗಳು ಜಾರಿ
ಅಮೆರಿಕ ಗಡಗಡ… ಒಳಾಂಗಣದಲ್ಲಿ ಟ್ರಂಪ್ ಪ್ರಮಾಣವಚನ
ಸುಖ ದಾಂಪತ್ಯ ಜೀವನಕ್ಕೆ ಸರಳ ಸೂತ್ರಗಳು ಇಲ್ಲಿದೆ
WATCH : ಆ ಒಂದು ರೀಲ್ಸ್ನಿಂದ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ
ಈ ವಾರ ಮನೆಯಿಂದ ಹೊರ ಬರುವ ಕಂಟೆಸ್ಟೆಂಟ್ಸ್ಗಳು ಇವರೇ ?
Trending
- BIG BOSS6 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS4 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
- BIG BOSS4 days ago
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
- BIG BOSS5 days ago
ಬಿಗ್ ಬಾಸ್ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?