Connect with us

DAKSHINA KANNADA

ಕೋಟೆಗಳ ನಾಡು ಚಿತ್ರದುರ್ಗದಲ್ಲಿ ಇಂಡಿಯಾನಾ ಹಾರ್ಟ್ ಕ್ಲಿನಿಕ್ ಶುಭಾರಂಭ..!

Published

on

ಕರ್ನಾಟಕ ಹೆಸರಾಂತ ಆಸ್ಪತ್ರೆ ಇಂಡಿಯಾನಾದ ಹಾರ್ಟ್ ಕ್ಲಿನಿಕ್ ಕೋಟೆಗಳ ನಾಡು ಚಿತ್ರದುರ್ಗ(Chitradurga) ದಲ್ಲಿ ಶುಭಾರಂಭಗೊಂಡಿದೆ.

ಚಿತ್ರದುರ್ಗ : ಕರ್ನಾಟಕ ಹೆಸರಾಂತ ಆಸ್ಪತ್ರೆ ಇಂಡಿಯಾನಾದ ಹಾರ್ಟ್ ಕ್ಲಿನಿಕ್ ಕೋಟೆಗಳ ನಾಡು ಚಿತ್ರದುರ್ಗ(Chitradurga) ದಲ್ಲಿ ಶುಭಾರಂಭಗೊಂಡಿದೆ.

ಇಲ್ಲಿನ ಕೆಎಸ್‌ಆರ್‌ಟಿಸಿ ಓಲ್ಡ್ ಡಿಪೋ ರಸ್ತೆಯಲ್ಲಿ ಎಸ್‌ ಜೆ ಎಂ ಹಾರ್ಟ್ ಸೆಂಟರ್ ಇಂಡಿಯಾನಾ ಹಾರ್ಟ್ ಕ್ಲಿನಿಕ್ ಅನ್ನು ಸ್ಥಾಪಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಚಿತ್ರದುರ್ಗ(Chitradurga) ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಮಧ್ಯ ಕರ್ನಾಟಕದ ಈ ಜಿಲ್ಲೆಯಲ್ಲಿ ಹೃದಯ ಚಿಕಿತ್ಸೆಗೆ ಸೂಕ್ತ ಸೌಲಭ್ಯಗಳಿರಲಿಲ್ಲ.

ಇದೀಗ ಇಲ್ಲಿ ಹೃದ್ರೋಗ ಚಿಕಿತ್ಸಾ ಕೇಂದ್ರ ತೆರೆದಿರುವುದು ಸಂತಸದ ವಿಷಯ’ ಎಂದರು.

ಹಿಂದುಳಿದ ಜಿಲ್ಲೆಯ ಜನರು ಚಿಕಿತ್ಸೆಗಾಗಿ ಮಣಿಪಾಲ ಅಥವಾ ಬೆಂಗಳೂರಿಗೆ ಹೋಗಬೇಕಾಗಿತ್ತು.

ಮೂರು ವರ್ಷಗಳ ಹಿಂದೆ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಹೃದಯ ಕೇಂದ್ರವನ್ನು ಸ್ಥಾಪಿಸಿತು.

ಈ ಕೇಂದ್ರ ತೆರೆದರಿಂದ ಚಿತ್ರದುರ್ಗ(Chitradurga) ದ ಜನತೆ ಪರಿಣಿತ ಹೃದಯ ಆರೈಕೆಯನ್ನು ಪಡೆಯಲು ಸಹಾಯವಾಗುತ್ತದೆ ಅವರು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಏಕೈಕ ಹೃದಯ ಚಿಕಿತ್ಸಾ ಕೇಂದ್ರ ಇದಾಗಿದ್ದು, ಮೂವರು ತಜ್ಞ ವೈದ್ಯರಿದ್ದಾರೆ.

ಹೃದ್ರೋಗಿಗಳು ಅದರಲ್ಲೂ ಯುವಕರಲ್ಲಿ ಹೃದಯಘಾತಗಳು ಹೆಚ್ಚಾಗುತ್ತಿರುವ ಬಗ್ಗೆ ಶಾಸಕರು ಕಳವಳ ವ್ಯಕ್ತಪಡಿಸಿದರು.

ಚಿಕಿತ್ಸೆಯನ್ನು ಅವಲಂಬಿಸುವುದಕ್ಕಿಂತ ರೋಗವನ್ನು ತಡೆಗಟ್ಟಲು ತಜ್ಞರ ಸಲಹೆ ಪಡೆಯುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಂಡಿಯಾನಾ ಆಸ್ಪತ್ರೆ ಮತ್ತು ಹೃದ್ರೋಗ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆ ಹಚ್ಚಲು ಈ ಕ್ಲಿನಿಕ್ ಸಹಕಾರಿಯಾಗಲಿದೆ.

ರೋಗವು ಪ್ರಾರಂಭವಾದ ನಂತರ ಚಿಕಿತ್ಸೆಯು ಅನಿವಾರ್ಯವಾಗಿದ್ದರೂ,ಆರಂಭದಲ್ಲೇ ಆರೋಗ್ಯ ತಪಾಸಣೆಗೆ ಒಳಗಾಗುವುದು ಉತ್ತಮ ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್.ರಂಗನಾಥ್, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಜಿಲ್ಲಾ ಸಂಯೋಜಕ ಡಾ. ಚಂದ್ರಶೇಖರ ರಾಜು, ಹೃದ್ರೋಗ ತಜ್ಞರಾದ ಡಾ.ಕಾರ್ತಿಕ್, ಡಾ.ಸುಜಯ್, ಡಾ.ಮಂಜುನಾಥ್, ಹಾರ್ಟ್ ಸೆಂಟರ್ ಸಿಇಒ ರೂಪೇಶ್ ಕುಮಾರ್ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

DAKSHINA KANNADA

Kadaba: ಹಠಾತ್ ಕಾಡಾನೆ ದಾಳಿ- ವ್ಯಕ್ತಿ ಗಂಭೀರ..!

Published

on

ಕಡಬ: ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಸ್ಥಿತಿಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮದ ಮರ್ಧಾಳ-ಕೊಣಾಜೆಯಲ್ಲಿ ನಡೆದಿದೆ.

ಐತ್ತೂರು ಗ್ರಾಮದ ಗರ್ತಿಲ ನಿವಾಸಿ ಓಡಿ ಎಂಬವರ ಪುತ್ರ ಕೂಲಿ ಕಾರ್ಮಿಕ ಚೋಮ (56) ಗಾಯಗೊಂಡವರು.

ಚೋಮ ಅವರು ಸಂಜೆ ವೇಳೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭ ನೆಲ್ಯಡ್ಕ ಶಾಲೆಯ ಸಮೀಪ ಇರುವ ಕಾರ್ತಿಕೇಯ ಭಜನಾ ಮಂದಿರ ಬಳಿ ಆನೆಯೊಂದು ಹಠತ್ ದಾಳಿ ನಡೆಸಿದೆ.

ಪರಿಣಾಮ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ.

ಸದ್ಯ ಚೋಮ ಅವರ ಸ್ಥಿತಿಯು ಚಿಂತಾಜನಕವಾಗಿದ್ದು, ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಈ ಹಿಂದೆ ಆನೆ ದಾಳಿಯ ಘಟನೆಗಳು ನಡೆದಿದ್ದು, ಕೃಷಿ ನಾಶದಂತಹ ಘಟನೆಗಳು ದಿನಂಪ್ರತಿ ನಡೆಯುತ್ತಿದೆ ಎನ್ನಲಾಗಿದೆ.

 

 

Continue Reading

DAKSHINA KANNADA

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಪದ್ಮಪ್ರಸಾದ್ ಜೈನ್ ಆಯ್ಕೆ

Published

on

ಮಂಗಳೂರು: ಮಂಗಳೂರು ಸೊಬೆಸ್ಟಿಯನ್ ಹಾಲ್ ನಲ್ಲಿ ನಡೆದ  ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯಲ್ಲಿ  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನೊಳಗೊಂಡ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ  ಪದ್ಮಪ್ರಸಾದ್ ಜೈನ್ ಆಯ್ಕೆಯಾಗಿದ್ದಾರೆ.

ಸಂಚಾಲಕರಾಗಿ ಕರುಣಾಕರ್ ಕಾನಂಗಿ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಬಂಟ್ವಾಳ, ಕೋಶಾಧಿಕಾರಿಯಾಗಿ ನವೀನ್ ರೈ ಪಂಜಳ, ಉಪಾಧ್ಯಕ್ಷರಾಗಿ ರಮೇಶ್ ಕಲಾ ಶ್ರೀ ಮಂಗಳೂರು, ಜಯಕರ್ ಸುವರ್ಣ ಉಡುಪಿ, ಜೊತೆ ಕಾರ್ಯದರ್ಶಿ ಹರೀಶ್ ಪಿ ಕೋಟ್ಯಾನ್ ಮುಲ್ಕಿ, ಹೆರಿಕ್ ಡಿಸೋಜ ಬ್ರಹ್ಮಾವರ, ಸಂಘಟನಾ ಕಾರ್ಯದರ್ಶಿ ಕೃಷ್ಣರಾವ್ ಕಾಪು, ರಮೇಶ್ ಹೊಸಬೆಟ್ಟು ಸುರತ್ಕಲ್, ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್ ಮೂಡಬಿದ್ರಿ, ಕ್ರೀಡಾ ಕಾರ್ಯದರ್ಶಿ ರಂಜಿತ್ ಕುಂದಾಪುರ, ಭಾರದ್ವಾಜ್ ಬೆಳ್ತಂಗಡಿ, ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ್ ಉಳ್ಳಾಲ ಮಾಧ್ಯಮ ಕಾರ್ಯದರ್ಶಿ ಹರೀಶ್ ರಾವ್ ಆಯ್ಕೆಯಾಗಿದ್ದಾರೆ.

ಈ ಚುನಾವಣಾ ಪ್ರಕ್ರಿಯೆಯನ್ನು ಎಸ್ ಕೆಪಿಎ ಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಆನಂದ್ ಬಂಟ್ವಾಳ್ ಅವರು ನಡೆಸಿಕೊಟ್ಟರು.

 

Continue Reading

DAKSHINA KANNADA

ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನ-ಇಬ್ಬರು ಅರೆಸ್ಟ್..!

Published

on

ಉಳ್ಳಾಲ: ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಯನ್ನು ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಸಿಗ್ರೌಂಡ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಸ್ತಿಕಟ್ಟೆ ಆಝಾದನಗರದ ಫಝಲ್ ಮತ್ತು ಮುಕ್ಕಚ್ಚೇರಿ ಕಡಪ್ಪುರ ದ ಸಮೀರ್ ಎಂಬವರನ್ನು ಬಂಧಿಸಲಾಗಿದೆ.

ಈ ಇಬ್ಬರು ಉಳ್ಳಾಲ ಸೀಗ್ರೌಂಡ್ ಸಮುದ್ರ ತೀರದಲ್ಲಿ ನಿಷೇಧಿತ 14ಗ್ರಾಂ ಎಂಡಿಎಂಎ ಮಾರಾಟ ಮಾಡಲು ಯತ್ನಿಸುವ ಸಂದರ್ಭ ಮಾಹಿತಿ ಪಡೆದ ಉಳ್ಳಾಲ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಬಂಧಿಸಿ, 14 ಗ್ರಾಂ ಎಂಡಿಎಂಎ ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿಯಿಂದ ಓರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ, ಪಿಎಸ್ಐ ಶೀತಲ್ ಹಾಗೂ ಸಿಬ್ಬಂದಿಗಳಾದ ರಂಜಿತ್, ಅಕ್ಬರ್, ಅಶೋಕ್, ಮಂಜು, ವೆಂಕಟೇಶ್ ಭಾಗವಹಿಸಿದ್ದರು.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.

Continue Reading

LATEST NEWS

Trending