DAKSHINA KANNADA
ಮುಂದಿನ ವರ್ಷದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ 3 ಬೋರ್ಡ್ ಎಕ್ಸಾಮ್- ಮಧು ಬಂಗಾರಪ್ಪ
ಮಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಮಂಡಳಿ ವತಿಯಿಂದ ಮೂರು ಫೈನಲ್ ಎಕ್ಸಾಮ್ ನಡೆಸಲಾಗುವುದು.
ವಿದ್ಯಾರ್ಥಿಗಳು ಅದೇ ವರ್ಷ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಪಡೆಯಲು ಈ ಕ್ರಮ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೊದಲ ಫೈನಲ್ ಎಕ್ಸಾಮ್ ನಲ್ಲಿ ಅನುತ್ತೀರ್ಣರಾದವರು ಮತ್ತು ಕಡಿಮೆ ಅಂಕ ಗಳಿಸಿದವರು ಅಧಿಕ ಅಂಕ ಪಡೆಯಲು ಬಯಸಿದರೆ 2 ನೇ ಪರೀಕ್ಷೆಗೆ ಹಾಜರಾಗ ಬಹುದು.
ಹಾಗೆಯೇ ಎರಡನೇ ಫೈನಲ್ ಎಕ್ಸಾಮ್ ನಲ್ಲಿ ಅನುತ್ತೀರ್ಣರಾದವರು ಮತ್ತು ಕಡಿಮೆ ಅಂಕ ಗಳಿಸಿದವರು ಅಧಿಕ ಅಂಕ ಪಡೆಯಲು ಬಯಸಿದರೆ 3 ನೇ ಫೈನಲ್ ಪರೀಕ್ಷೆಗೆ ಹಾಜರಾಗ ಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಅದೇ ವರ್ಷ ಉತ್ತೀರ್ಣರಾಗಿ ಕಾಲೇಜು ಶಿಕ್ಷಣ ಪಡೆಯಲು ಇದರಿಂದ ಅನುಕೂಲವಾಗುವುದು.
ಎರಡನೇ ಮತ್ತು ಮೂರನೇ ಪರೀಕ್ಷೆಗಳು ಸುಮಾರು 15 ದಿನಗಳ ಅಂತರದಲ್ಲಿ ನಡೆಯಲಿವೆ.
ಮೂರನೇ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಕಾಲೇಜು ಸೇರುವಾಗ 26 ದಿನಗಳ ವಿಳಂಬ ಆಗಬಹುದು.
ಈ ಅವಧಿಯ ಕಲಿಕೆಯನ್ನು ಸರಿದೂಗಿಸಲು ಅಂತಹ ವಿದ್ಯಾರ್ಥಿಗಳಿಗೆ ಬ್ರಿಜ್ ಕೋರ್ಸ್ ನಡೆಸಲಾಗುವುದು ಎಂದರು.
ಮಕ್ಕಳಿಗೆ ಪುಸ್ತಕದ ಹೊರೆ ಕಡಿಮೆ ಮಾಡುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ಮುಂದಿನ ವರ್ಷದಿಂದ ಇದು ಅನುಷ್ಠಾನಕ್ಕೆ ಬರಲಿದೆ.
ಶಿಕ್ಷಕರ ಕೊರತೆ ನಿವಾರಿಸಲು ಶಿಕ್ಷಕರ ನೇಮಕ ಮಾಡಲಾಗುವುದು ಎಂದು ವಿವರಿಸಿದರು.
ಬಡವರು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಕಾಂಗ್ರೆಸ್ ನೀಡಿದೆ.
ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ.
ನಮ್ಮ ಕಾರ್ಯಕ್ರಮಗಳೇ ಅವರಿಗೆ ಉತ್ತರ ನೀಡುತ್ತವೆ.
ಸರಕಾರ ಅಧಿಕಾರಕ್ಕೆ ಬಂದು 130 ದಿನ ಮಾತ್ರ ಆಗಿದ್ದು, ಐದು ಗ್ಯಾರೆಂಟಿಗಳ ಪೈಕಿ ನಾಲ್ಕು ಗ್ಯಾರೆಂಟಿ ಯೋಜನೆಗಳು ಈಗಾಗಲೇ ಅನುಷ್ಠಾನಕ್ಕೆ ಬಂದಿವೆ ಎಂದು ಮಧು ಬಂಗಾರಪ್ಪ ತಿಳಿಸಿದರು.
Ancient Mangaluru
ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ
ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ.
ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಲಂಚ ನೀಡಲು ನಿರಾಕರಿಸಿದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು. ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
DAKSHINA KANNADA
ಉಡುಪಿ : ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಜೀವಾಂತ್ಯ
ಉಡುಪಿ : ಉಡುಪಿಯ ಬ್ರಹ್ಮಾವರದ ಧರ್ಮಾವರಂ ಎಂಬಲ್ಲಿ ಬೈಕಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಉಪ್ಪಿನಕೋಟೆಯ 31 ವರ್ಷ ಪ್ರಾಯದ ಪ್ರೀತಮ್ ಡಿ’ ಸಿಲ್ವಾ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.
ಪ್ರೀತಮ್ ಅವರು ಬೈಕ್ ಚಲಾಯಿಸಿಕೊಂಡು ಬ್ರಹ್ಮಾವರ ಆಕಾಶವಾಣಿ ಪೆಟ್ರೋಲ್ ಪಂಪ್ ಕಡೆಯಿಂದ ಸರ್ವಿಸ್ ರೋಡ್‌ನಲ್ಲಿ ಆಗಮಿಸಿ ಉಪ್ಪಿನಕೋಟೆಗೆ ತೆರಳಲು ಡಿವೈಡರ್ ಬಳಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆಯಿತು. ಅವಿವಾಹಿತರಾಗಿದ್ದ ಪ್ರೀತಮ್ ಕೆಟರಿಂಗ್ ಉದ್ಯಮ ನಡೆಸುತ್ತಿದ್ದರು. ಪ್ರೀತಮ್ ಅವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
DAKSHINA KANNADA
ಮನೆ ಬಿಟ್ಟು ಓಡಿ ಹೋಗಿದ್ದ ಬಂಟ್ವಾಳದ ಪ್ರೇಮಿಗಳು ಕಾಸರಗೋಡಿನಲ್ಲಿ ಪತ್ತೆ
ಬಂಟ್ವಾಳ : 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿಗಳಾದ ಅಕ್ಕ ಪಕ್ಕದ ಮನೆಗಳ ಯುವಕ ಹಾಗೂ ಯುವತಿಯನ್ನು ಬಂಟ್ವಾಳ ಪೊಲೀಸರು ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಂಗಾಡಿನಲ್ಲಿ ಪತ್ತೆ ಹಚ್ಚಿ ಊರಿಗೆ ಕರೆ ತಂದಿದ್ದಾರೆ.
ಉದ್ದೊಟ್ಟು ನಿವಾಸಿ ಅಬ್ದುಲ್‌ಹಮೀದ್‌ಅವರ ಪುತ್ರಿ ಆಯಿಸತ್‌ರಸ್ಮಾ(18) ಮತ್ತು ಹೈದರ್‌ಅವರ ಪುತ್ರ ಮಹಮ್ಮದ್‌ಸಿನಾನ್ (23) ಅವರು ನ. 23 ರಂದು ತಂತಮ್ಮ ಮನೆಗಳಲ್ಲಿ ಮಲಗಿದ್ದವರು ನ. 24ರಂದು ಬೆಳಗಾಗುವಷ್ಟರಲ್ಲಿ ಕಾಣೆಯಾಗಿದ್ದರು. ಮನೆಯವರ ದೂರಿನಂತೆ ಹುಡುಕಾಟ ನಡೆಸಿದ ಬಂಟ್ವಾಳ ಪೊಲೀಸರು ಅವರಿಬ್ಬರನ್ನೂ ಕಾಂಞಂಗಾಡಿನಲ್ಲಿ ಪತ್ತೆ ಹಚ್ಚಿದ್ದು, ಠಾಣೆಗೆ ತಂದು ವಿಚಾರಿಸಿದಾಗ ತಾವಿಬ್ಬರೂ ಪರಸ್ಪರ ಪ್ರೀತಿಸಿದ್ದು, ಮದುವೆಯಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
- bengaluru6 days ago
ಸಿಂಪಲ್ ಆಗಿ ಮದುವೆಯಾದ ಒಳ್ಳೆ ಹುಡುಗ ಪ್ರಥಮ್
- bangalore6 days ago
ವಿನಯ್ ತರ ದುಷ್ಮಾನ್ ಆದ್ರೂ ಓಕೆ, ಆದ್ರೆ ಸಂಗೀತಾ ತರ ಪ್ರೆಂಡ್ಸ್ ಬೇಡ..!
- bangalore3 days ago
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿಯಾದ ಈ ಸ್ಪರ್ಧಿಗಳು ಯಾರು..?
- bangalore5 days ago
ಬೆಂಗಳೂರು ಕಂಬಳಕ್ಕೆ ಚಾಲನೆ ನೀಡಿದ ಅಶ್ವಿನಿ ಪುನಿತ್ ರಾಜ್ ಕುಮಾರ್
Anand
26/09/2023 at 2:16 PM
MADHU BANGRAPPA SIR WHERE IS QUALITY EDUCATION BETTER KEEP 6 TIMES FOR 6 SUBJECTS EVERYONE 100 OUTOFF 100 JUST U WANT SHOW PASSING PERCENTAGE BUT THIS VERY USELESS DECISION BETTER DON’T PLAY POLITICS WITH EDUCATION.