Connect with us

LATEST NEWS

  ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಮಂಗಳೂರು ರಥೋತ್ಸವದ ದ್ವಿಶತಮಾನೋತ್ಸವ ಸಂಭ್ರಮ 

Published

on

ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಮಂಗಳೂರು ರಥೋತ್ಸವದ ದ್ವಿಶತಮಾನೋತ್ಸವ ಸಂಭ್ರಮ..

Sri Venkataramana Temple carstreet Bicentennial celebration

ಮಂಗಳೂರು: “ತೇರನ್ನೇರಿ ಬೀದಿ ಮೆರೆವ ವೀರ ವೇಂಕಟೇಶನ ನೋಡದಾ ಕಣ್ಗಳೀವ್ಯಾತಕೋ” ದಾಸರು ಸ್ತುತಿಸಿ ನಮಿಸಿದ ದೇವಾದಿ ದೇವ ಶ್ರೀ ವೆಂಕಟೇಶ  ಗೌಡ ಸಾರಸ್ವತ ಸಮಾಜದ  ದೇವರು,  ಭಾರ್ಗವ ಋಷಿಯ ಪಾದ ತಾಡನದ ನೆಪದಿಂದ ಭೂವೈಕುಂಠ ಉಂಟಾದದ್ದು.

ಗೋತ್ರದ ಮಹಾಋಷಿ ಪರಂಪರೆಯು,ಕಲಿಯುಗ ವರದ ವೆಂಕಟಾಚಲಾಧೀಶನ ಮೂಲ ಅವತಾರದ ಕಾರಣ, ಗೌಡ ಸಾರಸ್ವತ ಸಮಾಜಕ್ಕೆ ಅನುಗ್ರಹ ಮಾಡಲೆಂದು ನೆಪ ಮಾತ್ರದಿಂದ ಹಲವು ಊರಿನಲ್ಲಿ ಪ್ರಾಪ್ತವಾದ ಶ್ರೀ ವೆಂಕಟೇಶನಿಗೆ

ಭವ್ಯ ದೇವಾಲಯ-ಉತ್ಸವಗಳು,ವೆಂಕಟೇಶ ದೇವರಿಗೆ ಸಂಪ್ರದಾಯದಂತೆ ನಡೆದು ಬಂದು, ಸಮಾಜದ ಉದ್ಧಾರಕ್ಕೆ ಕಾರಣವಾಗಿವೆ. ಇದರಲ್ಲಿ ಶ್ರೀ ಕಾಶೀಮಠಾಧೀಶರಾಗಿ ಪೀಠ ವಿರಾಜಿತ ನಮ್ಮ ಧರ್ಮಾಚಾರ್ಯರ ಭವ್ಯ ತಪೋನಿಷ್ಠ ಗುರುಪರಂಪರೆ, ಪ್ರಸ್ತುತ ಪೀಠಾಧೀಶರಾದ ಶ್ರೀಮದ್ಸಂಯಮೀಂದ್ರ ತೀರ್ಥರು ಗುರುಸೇವಾ-ಗುರುಸ್ತೋತ್ರ, ಗುರು ಮಹಿಮಾ ಸಮಾಜಕ್ಕೆ ತಿಳಿಸಿ ನಡೆಸುತ್ತಿರುವ ಸಂಯಮದ ಸಾಕಾರ ಮೂರ್ತಿಗಳೆಂದರೆ ಅತಿಶಯೋಕ್ತಿ ಆಗದು.

ದ್ವಿಶತಮಾನೋತ್ಸವ ನವ ದೇವಾಯಲ ಪ್ರತಿಷ್ಠೆ ಸ್ವರ್ಣ ಗರುಡ ವಾಹನ , ರಜತ ರಥಾದಿ ಅರ್ಪಣೆ ಸಹಿತ ವಿಶೇಷ ಪ್ರಗತಿ ಸಾಧಿಸಿದ ಶ್ರೀ ವೆಂಕಟರಮಣ ದೇವಾಲಯ  ಮಂಗಳೂರಿನಲ್ಲಿ, ಇದೀಗ ರಥೋತ್ಸವದ ದ್ವಿಶತಮಾನೋತ್ಸವ ಸಂಭ್ರಮ.

ರಥೋತ್ಸವದ ದ್ವಿಶತಮಾನೋತ್ಸವದ ಪೂರ್ವ೦ಗ ಎಂಬಂತೆ ಶ್ರೀಗಳು ಮಾರ್ಗದರ್ಶನ ನೀಡಿದಂತೆ ಚಂಡಿಕಾ ಹವನ, ವಾಯುಸ್ತುತಿ ಹವನ, ನಮಸ್ಕಾರ, ಗಾಯತ್ರಿ ಹವನ- ಶ್ರೀ ಸಂಸ್ಥಾನದ ದೇವರಿಗೆ ನಿತ್ಯ ಲಘುವಿಷ್ಣುಅಭಿಷೇಕ

ದೇವಾಲಯದಲ್ಲಿ ವಿವಿಧ ಉತ್ಸವ- ಬಾಲವಟು- ಕುಮಾರಿ ಬಾಲ ಪೂಜಾದಿಗಳು, ಲಕ್ಷಪ್ರದಕ್ಷಿಣೆ, ಲಕ್ಷತುಳಸೀ ಅರ್ಚನೆ- ಲಕ್ಷ ಕುಂಕುಮಾರ್ಚನೆ- ನಿತ್ಯಭಜನಾ ಸ್ತೋತ್ರ ಸಂಗೀತಾದಿಗಳ ಘೋಷ ತುಂಬಿದ ಶ್ರೀ  ವೆಂಕಟರಮಣ ದೇವಾಲಯದಲ್ಲಿ ಶ್ರೀಗುರು ಸುಧೀಂದ್ರ ತೀರ್ಥ ಶ್ರೀ ಪಾದಂಗಳವರ ಪುಣ್ಯತಿಥಿಯ ಪಂಚಮ ವರ್ಷದ ಆರಾಧನೆ, ಸತತ ಮೂರು ದಿನಗಳ ಪರ್ಯಂತ ಪ್ರಪ್ರಥಮವಾಗಿ ದಕ್ಷಿಣ ಭಾರತದ ದಕ್ಷಿಣ ಕರ್ನಾಟಕದ ಮಂಗಳೂರಿನಲ್ಲಿ ಸಂಪನ್ನವಾಯಿತು.

ಶ್ರೀದೇವರ ಸಮ್ಮುಖ ನವ ಅಶ್ವತ್ಥ ವೃಕ್ಷಾ ರೂಪಣೆಯ ನಿರ್ಧಾರ, ಶ್ರೀದೇವರ 200 ರಥಾರೋಹಣೆ ಕಂಡ ಬ್ರಹ್ಮರಥದ ನವ ನಿರ್ಮಾಣ ನಿರ್ಧಾರ, ವ್ಯವಸ್ಥಿತ ರೀತಿಯಲ್ಲಿಎಲ್ಲಾ ಕಾರ್ಯಕ್ರಮಗಳ ಸಂಯೋಜನೆ, ಶ್ರೀಗುರು ಕೃಪಾ ಆಶೀರ್ವಾದ.

12.02.2021 ನಮ್ಮ ಸಮಾಜದ ಉನ್ನತಿ ಸಾಧಿಸಿದ ಶ್ರೀಮದ್ ಭುವನೇಂದ್ರ ತೀರ್ಥರ ಗುರುವರೇಣ್ಯರಾದ ಶ್ರೀಮದ್ ಸುಮತೀಂದ್ರ ಶ್ರೀಪಾದಂಗಳವರಪುಣ್ಯತಿಥಿಯ ಪರ್ವಕಾಲದಲ್ಲಿ ಸಂಜೆ ಶ್ರೀಗಳಿಂದ ಪ್ರವಚನಾಶೀರ್ವಾದ ಪೂರ್ವಾಕ ಶ್ರೀ ಕ್ಷೇತ್ರ ಹರಿದ್ವಾರದಲ್ಲಿ ನಡೆಯುವ ವಸಂತ ಮಾಸದ ಹಾಗೂ ಶ್ರೀವೀರವೇಂಕಟೇಶ ದೇವರ ನೂತನ ರಥ ನಿರ್ಮಾಣದ ಸೂಚನಾ ಪತ್ರಿಕೆಗಳ ಪ್ರಕಟಣೆ.

ಶ್ರೀ ಗುರುಕೃಪಾ  ಅನುಗೃಹ – ಸಮಗ್ರ ಸಮಾಜಕ್ಕೆ ಅನುಗ್ರಹಿಸುವ ಶಾರ್ವರಿ ಸಂವತ್ಸರದ ಶ್ರೀ ಸಂಸ್ಥಾನದ ದಿಗ್ವಿಜಯ 13.02.2021 ರಂದು ಸಸಂಭ್ರಮ ನಡೆಯಲಿದೆ.

“ಆಸುಫಲಮಂತ್ರಾಕ್ಷತೆಯ ಹರಸಿ” ಸುಫಲ-ಮಂತ್ರಾಕ್ಷತೆ ಯನ್ನು ಶಿಷ್ಯ ಸಮುದಾಯಕ್ಕೆ ದಂಡಧಾರಿಗಳಾಗಿ, ದಿಗ್ವಿಜಯ, ರಥಾರೂಡರಾಗಿ, ಸರ್ವರಿಗೂ ಅನುಗ್ರಹಿಸುವಶ್ರೀಗಳು ಶ್ರೀವೀರ ವೇಂಕಟೇಶ ರಥೋತ್ಸವ ಸಮಯದಲ್ಲೂ ರಥಾರೂಢರಾಗುವರು.

14.02.2021 ಶ್ರೀಗಳವರಿಂದ ಮಂಗಳಾಶೀರ್ವಾದದ ಕಾರ್ಯಕ್ರಮ , ಮಹಾಸಭಾ ಕಾರ್ಯಕ್ರಮ ಶ್ರೀ ಗುರುರಥ, ಶ್ರೀ ಹರಿಗುರು ರಥೋತ್ಸವಗಳು ನಮ್ಮ ಸಮಾಜಕ್ಕೆ ಒಂದೇ ಊರಿನಲ್ಲಿ ಒಂದೇ ದೇವಾಲಯದಲ್ಲದೊರೆತದ್ದು  ವಿಶೇಷ ಇತಿಹಾಸ.

ಶ್ರೀ ಗುರುಗಳ ಸುಧೀರ್ಘವಾಗಿ ನಡೆದ ಒಂದು ಮಾಸದ ಮೊಕ್ತಾಂ ಸಂದರ್ಭದಲ್ಲಿ, ನಮ್ಮ ಸಮಾಜ ಸದಾ ಗೃಹಸ್ಥರಿಂದ- ಕುಮಾರಿ ವಟು- ಸುಮಂಗಲೆಯರ ಪೂಜನಾದಿಗಳು

ನಮ್ಮ ಸಮಾಜವು ಸದಾ ಧರ್ಮವಂತರಾಗಿ ಸದಾ ರಾರಾಜಿಸುವಬಗ್ಗೆ ವಿಶೇಷ ಪ್ರಾರ್ಥನಾ ಪೂರ್ವಕ ನಡೆಯಿತು. ಪರಮಾತ್ಮನಲ್ಲಿ ಶ್ರೀ ಗುರು ಸೇವಾಚಿಂತನೆ- ಸ್ವಭಾವ- ಉತ್ಸಾಹ ನಮ್ಮದಾಗಬೇಕು, ವಿಶ್ವಕ್ಕೆ ಬಂದ ಮಹಾಮಾರಿ -ಬಾದ್ಯದಿ ಗಳು ದೂರವಾಗಬೇಕು . ಸರ್ವರಿಗೂ ವಿದ್ಯಾ – ಧನ -ಆಯುರಾರೋಗ್ಯ-ಭಾಗ್ಯಾದಿಗಳು ಲಭಿಸಿ, ವರ್ಧಿಸಿ, ಸುಖ ಲಭಿಸುವಂತೆ ನಿರಂತರ ಶ್ರೀವೀರ ವೇಂಕಟೇಶ ದೇವಾಲಯದ ಅರ್ಚಕ, ತಂತ್ರಿ, ಆಡಳಿತ, ಗ್ರಾಮ ಜನರ ಕಳಕಳಿಯ ಪ್ರಾರ್ಥನೆ.

1 Comment

1 Comment

  1. M D Hegde

    04/07/2022 at 1:56 PM

    Respected Sir,
    On 30th June, I had sent Rs.2400 by Neft to SB Account number of Sri Venlatramana Temple Carstreet 010332200008219. IFSC code SYNB000103..kindly look into the matter and recredit the amount to my SB 0103203000121 at Canara Bank Founder’s Brach IFSC CNRB0000611
    Thanking You

    Your’s Faithfully

    M.D.Hegde
    mob 9845081888

Leave a Reply

Your email address will not be published. Required fields are marked *

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

LATEST NEWS

ವಧು ಕೇಳಿದ ಆ ಒಂದು ಪ್ರಶ್ನೆ; ತಬ್ಬಿಬ್ಬಾದ ವರ..ಮದುವೆ ಕ್ಯಾನ್ಸಲ್!

Published

on

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದರ ಸಂಭ್ರಮ ಹೇಳತೀರದು. ಅದ್ದೂರಿತನವೇ ಮೇಲುಗೈ ಸಾಧಿಸುತ್ತೆ. ಈ ನಡುವೆ ಮದುವೆ ಮುರಿದು ಬೀಳುವ ಘಟನೆಯೂ ಹೆಚ್ಚುತ್ತಲಿದೆ. ಕ್ಷುಲ್ಲಕ ಕಾರಣ ಇರಬಹುದು ಅಥವಾ ಇನ್ಯಾವುದೇ ಕಾರಣ ಇರಬಹುದು ಮದುವೆ ಮುರಿದು ಬೀಳುತ್ತಿದೆ.


ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋ ಗಾದೆ ಮಾತಿದೆ. ಅಂತೆಯೇ ಇಲ್ಲಿ ವರ ಸುಳ್ಳು ಹೇಳಿದ್ದಾನೆ. ಹಾಗಂತ ಮದುವೆ ಆಗಿಲ್ಲ. ಬದಲಿಗೆ ಸಿಕ್ಕಿ ಬಿದ್ದಿದ್ದಾನೆ. ವಧು ಕೇಳಿದ ಆ ಒಂದು ಪ್ರಶ್ನೆಯಿಂದ ಮದುವೆ ಮುರಿದು ಬಿದ್ದಿದೆ.

ಸುಳ್ಳು ಹೇಳಿ ತಗ್ಲಾಕ್ಕೊಂಡ!

ಸುಳ್ಳು ಹೇಳಿ ಮದುವೆಯಾಗಲು ಹೊರಟಿದ್ದ ವರನ ಅಸಲಿ ವಿಚಾರ ಗೊತ್ತಾಗಿದೆ. ಹೀಗಾಗಿ ಯುವತಿ ಮದುವೆ ನಿರಾಕರಿಸಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಪನ್ವಾರಿನಲ್ಲಿ. ಓದು, ಬರಹ ಏನೊಂದು ಬರದ ಅನಕ್ಷರಸ್ಥನೊಬ್ಬ ತಾನು ದೊಡ್ಡ ಸರ್ಕಾರಿ ಅಧಿಕಾರಿ ಎಂದು ಮದುವೆಯಾಗಲು ಹೊರಟಿದ್ದ.

ಆದರೆ, ಈ ಸತ್ಯ ಮದುವೆ ಮನೆಯಲ್ಲೇ ಬಯಲಾಗಿದೆ. ಸಂಶಯಗೊಂಡ ವಧು ವರನ ಬಳಿ, ಎರಡರ ಮಗ್ಗಿ ಹೇಳಲು ತಿಳಿಸಿದ್ದಾಳೆ. ಆಗ ಆತ ತಡವರಿಸಿದ್ದಾರೆ. ಹಾಗಾಗಿ, ಯುವತಿಗೆ ಸತ್ಯಾಂಶ ಗೊತ್ತಾಗಿದೆ. ಎರಡರ ಮಗ್ಗಿ ಬೇಸಿಕ್ ಗಣಿತವೂ ಗೊತ್ತಿಲ್ಲ, ನೀನು ಅಧಿಕಾರಿಯಾಗಲು ಹೇಗೆ ಸಾಧ್ಯ? ಎಂದು ಮದುವೆ ಮುರಿದುಕೊಂಡಿದ್ದಾಳೆ.

ಇದನ್ನೂ ಓದಿ : ಮತ್ತೆ ಬಾಯ್‌ ಫ್ರೆಂಡ್ ಬದಲಾಯಿಸಿದ ಶೃತಿ ಹಾಸನ್..!

ಇಷ್ಟಾದರೂ ಬಿಡದ ಕುಟುಂಬದವರು ವಧುವಿನ ಮನವೊಲಿಸುವ ಯತ್ನ ಮಾಡಿದ್ದಾರೆ. ಆದರೆ, ವಧು ಮಾತ್ರ ಇದಕ್ಕೆ ಒಪ್ಪಿಲ್ಲ. ಹೀಗಾಗಿ ವರದಕ್ಷಿಣೆಯನ್ನು ಹಿಂದಿರುಗಿಸಿದ್ದಾರೆ. ಪರಸ್ಪರ ನೀಡಿದ ಉಡುಗೊರೆ, ಆಭರಣಗಳನ್ನು ಹಿಂದಿರುಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

Continue Reading

LATEST NEWS

ಮತಗಟ್ಟೆಯನ್ನೇ ಧ್ವಂಸ ಮಾಡಿದ ಗ್ರಾಮಸ್ಥರು!

Published

on

ಚಾಮರಾಜನಗರ : ಲೋಕಸಭಾ ಚುನಾವಣೆಗೆ ನಡೆಯುತ್ತಿರುವ ಮತದಾನ ರಾಜ್ಯದೆಲ್ಲಡೆ ಸುಸೂತ್ರವಾಗಿಯೇ ನಡೆದಿದೆ. ಆದರೆ ಚಾಮರಾಜನಗರದಲ್ಲಿ ಮಾತ್ರ ಜನರು ಮತಗಟ್ಟೆಯನ್ನೇ ಪುಡಿ ಮಾಡಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಚಾಮರಾಜನಗರದ ಲೋಕಸಭಾ ಕ್ಷೇತ್ರದ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಈ ವೇಳೆ ಇಂಡಿಗನತ್ತ ಎಂಬ ಗ್ರಾಮದಲ್ಲಿ ಮತಗಟ್ಟೆಯನ್ನು ಗ್ರಾಮಸ್ಥರು ಧ್ವಂಸ ಮಾಡಿದ್ದಾರೆ.


ಚುನಾವಣೆ ಬಹಿಷ್ಕಾರಿಸಿದ್ದ 5 ಗ್ರಾಮ :

ಮೂಲ ಸೌಕರ್ಯದಿಂದ ವಂಚಿತರಾಗಿದ್ದ ಈ ಗ್ರಾಮದ ಜನರು ತಮ್ಮ ಹಕ್ಕಿಗಾಗಿ ಹಲವು ಹೋರಾಟ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ ಆಶ್ವಾಸನೆ ನೀಡಿ ಹೋಗುವ ಜನ ಪ್ರತಿನಿಧಿಗಳು ಬಳಿಕ ಇತ್ತ ಸುಳಿಯುತ್ತಿರಲಿಲ್ಲ. ಹೀಗಾಗಿ ಐದು ಗ್ರಾಮಗಳ ಜನರು ಈ ಬಾರಿ ಮತ ಕೇಳಲು ಬರಬೇಡಿ, ನಾವು ಮತದಾನ ಮಾಡೋದಿಲ್ಲ ಎಂದಿದ್ದರು.

ಚುನಾವಣೆ ಬಹಿಷ್ಕಾರ ಮಾಡಿದ್ದರೂ ಕಾನೂನು ರೀತಿಯಲ್ಲಿ ಗ್ರಾಮದಲ್ಲಿ ಮತಗಟ್ಟೆಯನ್ನು ತೆರೆಯಲಾಗಿತ್ತು. ಇಂಡಿಗನತ್ತ, ತೇಕಣೆ, ಮೆಂದಾರೆ ಈ ಗ್ರಾಮದಲ್ಲಿ ಯಾವೊಬ್ಬ ಗ್ರಾಮಸ್ಥರೂ ಮತದಾನ ಮಾಡಿಲ್ಲ. ಇನ್ನು ಪಡಸಲನತ್ತ ಗ್ರಾಮದಲ್ಲಿ 85 ಮತದಾರು ಇದ್ದು ಇಬ್ಬರು ಮತದಾನ ಮಾಡಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ತೆರೆಯುವುದಕ್ಕೆ ಗ್ರಾಮಸ್ಥರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಚುನಾವಣಾ ಆಯೋಗ ಇಲ್ಲಿ ಮತಗಟ್ಟೆ ತೆರೆದು ‘ಮತದಾನ ಮಾಡಲು ಬನ್ನಿ’ ಎಂದು ಜನರನ್ನು ಕರೆದಿದ್ದರು. ಆದ್ರೆ ರೊಚ್ಚಿಗೆದ್ದ ಜನರು ಮತದಾನ ಕೇಂದ್ರದ ಒಳಗೆ ನುಗ್ಗಿ ಇವಿಎಂ ಮೆಷಿನ್ ಸಹಿತ ಮೇಜು ಕುರ್ಚಿ ಎಲ್ಲವನ್ನೂ ಧ್ವಂಸ ಮಾಡಿದ್ದಾರೆ.

ಕನಿಷ್ಠ ಮೂಲಭೂತ ಸೌಕರ್ಯವಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಯಾವುದೂ ಇಲ್ಲದ ನಮ್ಮ ಗ್ರಾಮದ ಮತ ಯಾಕೆ ಬೇಕು? ಎಂದು ಜನ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ

ಪೊಲೀಸ್ ಲಾಠಿ ಚಾರ್ಜ್…ಕೆರಳಿದ ಗ್ರಾಮಸ್ಥರು!

ಜನರು ಮತಗಟ್ಟೆ ಧ್ವಂಸಕ್ಕೆ ಮುಂದಾಗುತ್ತಿದ್ದಂತೆ ಭದ್ರತೆಯಲ್ಲಿದ್ದ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಹಲ್ಲೆ ಮಾಡಿದ ಜನರು ಬಳಿಕ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಗಾಯಗಳಾಗಿದೆ.

ಪೊಲೀಸರು ಮಹಿಳೆಯರು ಪುರುಷರು ಎಂದು ನೋಡದೆ ಎಲ್ಲರ ಮೇಲೂ ಲಾಠಿ ಚಾರ್ಚ್ ಮಾಡಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಸದ್ಯಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಮತದಾನ ಕೇಂದ್ರವನ್ನು ಬಂದ್ ಮಾಡಲಾಗಿದೆ.

Continue Reading

LATEST NEWS

Trending