Saturday, September 18, 2021

ಮಾಲ್‌ ಒಳಗೆ ನುಗ್ಗಿ ಕಾಣೆಯಾದ ಹೆಬ್ಬಾವು: ಮಾಲ್‌ಗೆ ಜನರ ನಿಷೇಧ

ಅಮೆರಿಕ: ಮಾಲ್‌ಗೆ ನುಗ್ಗಿದ ಹೆಬ್ಬಾವೊಂದು ತಪ್ಪಿಸಿಕೊಂಡಿದ್ದು, ಇದೀಗ ಎಲ್ಲೆಡೆ ಆತಂಕಕ್ಕೀಡು ಮಾಡಿದೆ.
ಅಮೆರಿಕದ ಲೂಸಿಯಾನಾದ ಬ್ಲೂ ಅಕ್ವೇರಿಯಂನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಹಳದಿ ಬಣ್ಣದ ಹಾವು  ಕಾಣೆಯಾಗಿದೆ. ಸದ್ಯ ಇದು ಎಲ್ಲಿಗೆ ಹೋಗಿದೆ ಎನ್ನುವುದು ತಿಳಿಯುತ್ತಿಲ್ಲ. ಇದರಿಂದ ಮಾಲ್‌ಗೆ ಜನರನ್ನು ನಿಷೇಧಿಸಲಾಗಿದೆ. ಉರಗ ತಜ್ಞರು ಇದರ ಹುಡುಕಾಟ ಮುಂದುವರೆಸಿದ್ದಾರೆ.

ಈ ಮಾಲ್‌ನಲ್ಲಿ ಕೆಲವೊಂದು ಗೋಡೆಗಳಲ್ಲಿ ಅಲಂಕಾರಕ್ಕಾಗಿ ರಂಧ್ರಗಳನ್ನು ಮಾಡಲಾಗಿದೆ. ಈ ರಂಧ್ರದೊಳಗೆ ಹೆಬ್ಬಾವು ಸೇರಿಕೊಂಡಿರುವ ಸಾಧ್ಯತೆ ಇರುವ ಕಾರಣ ಕೆಲವು ಕಡೆಗಳ ಗೋಡೆಗಳನ್ನು ಒಡೆದಿದ್ದರೂ ಹಾವು ಮಾತ್ರ ಕಾಣಿಸಿಕೊಂಡಿಲ್ಲ ನೋಡಲು ಭಯಾನಕವಾಗಿರುವ ಹೆಬ್ಬಾವು ಇದಾಗಿದೆ.

ಈ ಮಾಲ್‌ನಲ್ಲಿ 140 ಮಳಿಗೆಗಳು ಇವೆ. ಇದಾಗಲೇ ಎಲ್ಲಾ ಕಡೆಗಳಲ್ಲಿಯೂ ತಜ್ಞರು ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೂ ಈ ಹಾವು ಪತ್ತೆಯಾಗಿಲ್ಲ.
ಇದು ಬರ್ಮೀಸ್ ಹೆಬ್ಬಾವಾಗಿದ್ದು, ಮನುಷ್ಯರ ಮೇಲೆ ಆಕ್ರಮಣ ಮಾಡುವುದು ಕಡಿಮೆ. ಸಿಸಿಟಿವಿಗಳ ಪರಿಶೀಲನೆ ನಡೆಯುತ್ತಿದೆ, ಜತೆಗೆ ಮಾಲ್‌ಗೆ ಸಂಪರ್ಕ ಇರುವ ಕೊಳವೆಗಳನ್ನು ಅಕ್ಕ-ಪಕ್ಕದಲ್ಲಿ ಇರುವ ಬೃಹತ್‌ ರಂಧ್ರಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...