Home ಸ್ಥಳೀಯ ಸುದ್ದಿ ನಿಧಾನವಾಗಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ: ನಿರಾಳರಾದ ಕಾಸರಗೋಡು ಜನತೆ

ನಿಧಾನವಾಗಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ: ನಿರಾಳರಾದ ಕಾಸರಗೋಡು ಜನತೆ

ನಿಧಾನವಾಗಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ: ನಿರಾಳರಾದ ಕಾಸರಗೋಡು ಜನತೆ

ಕಾಸರಗೋಡು: ಕೊರೊನಾದಿಂದ ತತ್ತರಿಸಿ ಹೋಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಇದೀಗ ಪರಿಸ್ಥಿತಿ ಬಹುತೇಕ ಹತೋಟಿಗೆ ಬಂದಿದೆ.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ಒಟ್ಟು 44 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.

ನಿನ್ನೆ (ಎಪ್ರಿಲ್ 14) ಒಂದು ಪ್ರಕರಣ  ಮಾತ್ರ ಪಾಸಿಟಿವ್ ಬಂದಿದೆ. ಹೊಸ ಪ್ರಕರಣಗಳು ಕಡಿಮೆಯಾಗಿ, ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲೆಯ ಜನ ನಿರಾಳವಾಗಿದ್ದಾರೆ.

ನಿನ್ನೆ ಒಟ್ಟಾರೆಯಾಗಿ ಕೇರಳದಲ್ಲಿ ಎಂಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಕಾಸರಗೋಡು ಜಿಲ್ಲೆಯ ಚೆಂಗಳ ನಿವಾಸಿಯಲ್ಲಿ ಸೋಂಕು ದೃಢಪಟ್ಟಿದೆ.

ದುಬೈಯಿಂದ ಬಂದಿದ್ದ ಈ ವ್ಯಕ್ತಿ ಐಸೋಲೇಷನ್ ವಾರ್ಡ್ ನಲ್ಲಿದ್ದರು. ಇದುವರೆಗೆ ಜಿಲ್ಲೆಯಲ್ಲಿ 167 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 88 ಮಂದಿ ಮಾತ್ರ ಈಗ ಚಿಕಿತ್ಸೆಯಲ್ಲಿದ್ದಾರೆ, 79 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ 9,457 ಮಂದಿ ನಿಗಾದಲ್ಲಿದ್ದು, 136 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

- Advertisment -

RECENT NEWS

ದೇವರಗುಡ್ಡದಲ್ಲಿ ಯುವಕನ ಹತ್ಯೆ ಪ್ರಕರಣ ಹದಿಹರೆಯದ ಐವರು ಆರೋಪಿಗಳ ಬಂಧನ

ದೇವರಗುಡ್ಡದಲ್ಲಿ ಯುವಕನ ಹತ್ಯೆ ಪ್ರಕರಣ ಹದಿಹರೆಯದ ಐವರು ಆರೋಪಿಗಳ ಬಂಧನ ಮಂಗಳೂರು :  ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರು ದೇವರ ಗುಡ್ಡೆ ಬಳಿ ನಡೆದ ಎಕ್ಕಾರು ನಿವಾಸಿ ಕೀರ್ತನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 25ರಿಂದ ಎಸ್‌ ಎಸ್ ಎಲ್‌ ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಜೂನ್ 25ರಿಂದ ಎಸ್‌ ಎಸ್ ಎಲ್‌ ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ :ಜೂನ್ 25ರಂದು ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಿದ್ಧತಾ ಪೂರ್ವಬಾವಿ ಸಭೆಯು ಈ ದಿನ...

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು 

ಕುಂದಾಪುರದಲ್ಲೇ ಅತಿ ಹೆಚ್ಚು ಕೊರೊನಾ ಸೊಂಕು  ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಂದಾಪುರದ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಹಾಗೂ ಕೋಟ ಸಮುದಾಯ ಆಸ್ಪತ್ರೆಯನ್ನು ತಾಲೂಕು...

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ

ಮೊದಲ ಮಳೆಗೆ ಪ್ರಾರಂಭವಾದ ಕಡಲಕೊರೆತ ಉಳ್ಳಾಲ: ಕಳೆದೆರಡು ದಿನಗಳಿಂದ ಮುಂಗಾರು ಮಳೆ ತೀವ್ರವಾಗಿ ಕರಾವಳಿ ತೀರದಲ್ಲಿ ಸುರಿಯತೊಡಗಿದ್ದು, ಕಡಲ ತೀರದಲ್ಲೂ ಕಡಲ ಅಬ್ಬರ ಜೋರಾಗಿದೆ. ಪ್ರತೀ ವರ್ಷ ಕಡಲಕೊರೆತ ತೀವ್ರವಾಗಿರುವ ಮಂಗಳೂರು ಕ್ಷೇತ್ರದ ಉಳ್ಳಾಲ...