ಮಂಗಳೂರು: ಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ಕೇರಳ ಮಾದರಿ ಹತ್ಯೆಗಳು ನಡೆಯುತ್ತಿದೆ. ಈ ಕೊಲೆಗಳಿಗೆ ತರಬೇತಿಗಳು ಎಲ್ಲಿ ಸಿಗುತ್ತಿವೆ.
ಈ ಬಗ್ಗೆ ತನಿಖೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಎರಡನೇ ಬಾರಿ ಗೃಹಸಚಿವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಗೃಹಸಚಿವರನ್ನು ಭೇಟಿಯಾಗಿ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು,
ರಾಜ್ಯದಲ್ಲಿ ನಿರಂತರವಾಗಿ ಹಿಂದು ಯುವಕರನ್ನು ಮತಾಂಧರು ಕಗ್ಗೊಲೆಗಯ್ಯುತ್ತಿದ್ದಾರೆ. ಕತ್ತು ಕತ್ತರಿಸುವ ಮೂಲಕ ಒಂದೇ ಮಾದರಿಯಲ್ಲಿ ಎಲ್ಲರನ್ನೂ ಕೊಲೆ ಮಾಡಲಾಗಿದೆ. ಈ ಕೊಲೆಗಳಲ್ಲಿ ಸಾಮ್ಯತೆ ಇದೆ.
ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಎರಡನೇ ಬಾರಿ ಭೇಟಿ ಮಾಡಿದ್ದೇನೆ. ಅವುಗಳಿಗೆ ಹಣಕಾಸಿನ ನೆರವು ನೀಡುತ್ತಿರುವವರು ಯಾರು?, ಸ್ಥಳೀಯವಾಗಿ ಬೆಂಬಲಿಸುತ್ತಿರುವವರು ಯಾರು? ಈ ವಿಚಾರಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.
ರಾಜ್ಯದಲ್ಲಿ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಬೇಕು ಸೇರಿ ಹಲವು ಬೇಡಿಕೆಗಳನ್ನು ಗೃಹಸಚಿವರ ಮುಂದಿಟ್ಟಿದ್ದೇನೆ. ಇದಕ್ಕೆ ಅಮಿತ್ ಷಾ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.