Connect with us

    LATEST NEWS

    ಶಿವಮೊಗ್ಗ: ಹರ್ಷ ಹತ್ಯೆ ಪ್ರಕರಣದ 10ನೇ ಆರೋಪಿಗೆ ಷರತ್ತುಬದ್ಧ ಜಾಮೀನು

    Published

    on

    ಶಿವಮೊಗ್ಗ: ರಾಜ್ಯದಲ್ಲಿ ಕೋಲಾಹಲವೆಬ್ಬಿಸಿದ ಶಿವಮೊಗ್ಗ ನಗರದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿ ಜಾಫರ್ ಸಾಧಿಕ್ (52) ಎಂಬಾತನಿಗೆ ಎನ್‍ಐಎ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.

    ಆರೋಪಿ ಸಾದಿಕ್

    ಫೆ.20 ರಂದು ನಡೆದಿದ್ದ ಹತ್ಯೆಯ ಹಿನ್ನೆಲೆ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಿರುವ ಸಾಧಿಕ್‍ನನ್ನು ಫೆ. 24 ರಂದು ಪೊಲೀಸರು ಬಂಧಿಸಿದ್ದರು. ಹರ್ಷ ಕೊಲೆ ಪ್ರಕರಣದಲ್ಲಿ 10ನೇ ಆರೋಪಿಯಾಗಿರುವ ಈತ, ಪ್ರಕರಣದ 6ನೇ ಆರೋಪಿ ಜಿಲಾನ್‍ನ ತಂದೆ. ಸಾಧಿಕ್, ಜಾಮೀನು ಕೋರಿ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ಸಾಧಿಕ್ ಪರ ವಕೀಲರು, ಕಕ್ಷಿದಾರರು ಹರ್ಷ ಕೊಲೆ ಪ್ರಕರಣದ ಆರೋಪಿಯಾದ ತಮ್ಮ ಮಗ ಜಿಲಾನ್‍ಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದರು. ಅದನ್ನು ಹೊರತುಪಡಿಸಿದರೆ ಕಕ್ಷಿದಾರರ ವಿರುದ್ಧ ಬೇರೆ ಯಾವುದೇ ಆರೋಪವಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದರು.

    ಎನ್‍ಐಎ ಪರ ವಾದ ಮಂಡಿಸಿದ ವಕೀಲರು, ಸಾದಿಕ್ ಖರೀದಿಸಿದ್ದ ಕಾರುಗಳನ್ನು ಇತರೆ ಆರೋಪಿಗಳು ಅಪರಾಧ ಕೃತ್ಯ ಎಸಗಲು ಮತ್ತು ಕೃತ್ಯದ ಬಳಿಕ ಸ್ಥಳದಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಿದ್ದಾರೆ. ಜೊತೆಗೆ ಸಾಧಿಕ್, ತಮ್ಮ ಮಗನಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಮತ್ತು ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದಾನೆ. ಹೀಗಾಗಿ, ಇತರೆ ಆರೋಪಿಗಳ ಅಪರಾಧ ಕೃತ್ಯವು ಸಾಧಿಕ್‍ಗೆ ಚೆನ್ನಾಗಿ ತಿಳಿದಿತ್ತು.


    ಈ ಕಾರಣಕ್ಕೆ ಸಾಧಿಕ್‍ಗೆ ಜಾಮೀನು ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಎನ್‍ಐಎ ವಿಶೇಷ ನ್ಯಾಯಾಲಯ ಆರೋಪಿಯು 50 ಸಾವಿರ ರೂ. ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ನೀಡಬೇಕು.

    ನ್ಯಾಯಾಲಯ ವಿನಾಯಿತಿ ನೀಡದ ಹೊರತು ಪ್ರತಿಬಾರಿ ಪ್ರಕರಣದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು.

    ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯ ನಾಶ ಮಾಡಬಾರದು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.

     

    LATEST NEWS

    ಮೊದಲ ಸಭೆಯಲ್ಲೇ ಮಿಂಚಿದ ಚೌಟ..! ಬೆನ್ನು ತಟ್ಟಿದ ಕೇಂದ್ರ ಸಚಿವ..!!

    Published

    on

    ಮಂಗಳೂರು: ಮಂಗಳೂರು ಜಿಲ್ಲಾ ಪಂಚಾಯತ್‌ನಲ್ಲಿ ಇಂದು(ಜು.17) ನಡೆದಿದ್ದ ರೈಲ್ವೇ ಸಚಿವರ ಸಭೆಯಲ್ಲಿ ಸಂಸದ ಬ್ರಿಜೇಶ್‌ ಚೌಟ ಎಲ್ಲರ ಗಮನ ಸೆಳೆದಿದ್ದಾರೆ. ದಕ್ಷಿಣ, ನೈರುತ್ಯ ಹಾಗೂ ಕೊಂಕಣ ರೈಲ್ವೇ ವಿಭಾಗವನ್ನು ಒಳಗೊಂಡಿರುವ ಮಂಗಳೂರಿನಲ್ಲಿ ಸ್ಥಳೀಯ ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿದ್ದಾರೆ.

    ನೂತನ ಸಂಸದರಾಗಿ ಆಯ್ಕೆಯಾದ ಬ್ರಿಜೇಶ್ ಚೌಟ ರೈಲ್ವೇ ಇಲಾಖೆಯ ರಾಜ್ಯ ಸಚಿವ ಸೋಮಣ್ಣ ಅವರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ರೈಲ್ವೇ ಇಲಾಖೆಯ ಹತ್ತು ಹಲವು ಸಮಸ್ಯೆಗಳ ಬಗ್ಗೆ ಹಾಗೂ ಜಿಲ್ಲೆಯಿಂದ ರೈಲ್ವೇ ಇಲಾಖೆಗಳಿಗೆ ಇರುವ ಆದಾಯದ ಬಗ್ಗೆ ಸಂಸದರು ವಿವರಿಸಿರುವುದೇ ಈ ಮೆಚ್ಚುಗೆ ಸಿಗಲು ಕಾರಣವಾಗಿದೆ. ಚತುರ್ವಿಧ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ಮಂಗಳೂರಿನಂತ ನಗರದಲ್ಲಿ ರೈಲ್ವೇ ಪ್ರತ್ಯೇಕ ವಿಭಾಗ ಇಲ್ಲದ ಕಾರಣ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ ರೈಲ್ವೇ ಇಲಾಖೆಯಲ್ಲಿ ಸ್ಥಳೀಯ ಜನರಿಗೆ ಯಾವುದೇ ನೌಕರಿ ಸಿಗದೇ ಇರುವುದು, ಕನಿಷ್ಟ ರೈಲ್ವೇ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸ್ಟಾಲ್‌ಗೆ ಅವಕಾಶ ಸಿಗದೆ ಇರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

     

    ಇನ್ನು ಈ ಮೂರು ರೈಲ್ವೇ ವಿಭಾಗದಲ್ಲಿರುವ ಸಿಬ್ಬಂದಿಗಳು ಸ್ಥಳೀಯ ಸಂಸ್ಕೃತಿ ಹಾಗೂ ಭಾಷೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಭೆಯಲ್ಲಿ ಅಧಿಕಾರಿಗಳಿಗೆ ಸ್ಥಳೀಯರಿಗೆ ನೌಕರಿಯ ಜೊತೆಗೆ ಇರುವ ಸಿಬ್ಬಂದಿಗೆ ಕನ್ನಡ ಭಾಷೆಯನ್ನು ಕಲಿಸುವಂತೆ ಸೂಚನೆ ನೀಡಿದ್ದಾರೆ. ಇದು ಭಾಷಾ ತಾರತಮ್ಯದ ವಿಚಾರವಾಗಿ ಅಲ್ಲದೇ ಇದ್ದು, ಸ್ಥಳೀಯ ಜನರಿಗೆ ಇದರಿಂದ ಸಮಸ್ಯೆ ಆಗುತ್ತಿರುವ ಕಾರಣ ಇದು ಅಗತ್ಯ ಎಂದು ಅವರು ಹೇಳಿದ್ದಾರೆ. ಸಂಸದ ಬ್ರಿಜೇಶ್ ಚೌಟರ ಮಾತಿಗೆ ಸಚಿವ ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚೌಟರನ್ನು ಪ್ರಶಂಸಿದ್ದಾರೆ. ಸಭೆಯಲ್ಲಿದ್ದ ಮೂರು ರೈಲ್ವೇ ವಿಭಾಗದ ಮುಖ್ಯಾಧಿಕಾರಿಗಳಿಗೆ ಸಮಸ್ಯೆಯ ಗಂಭೀರತೆಯನ್ನು ಅರಿತು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲು ಸಚಿವ ಸೋಮಣ್ಣ ಸೂಚಿಸಿದ್ದಾರೆ. ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೇ ಬಳಕೆದಾರರ ಸಮಸ್ಯೆಯನ್ನು ಬಗೆ ಹರಿಸುವುದು ಹಾಗೂ ರೈಲು ನಿಲ್ದಾಣವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    Continue Reading

    DAKSHINA KANNADA

    ಕಂಬಳ ಕ್ಷೇತ್ರದಲ್ಲಿ ಹಲವು ಮೆಡಲ್‌ಗಳನ್ನು ಗಳಿಸಿದ “ಲಕ್ಕಿ” ಇನ್ನಿಲ್ಲ..

    Published

    on

    ಕಿನ್ನಿಗೋಳಿ: ಕಂಬಳ ಕ್ಷೇತ್ರದ ಸಾಧಕ, ಹಲವಾರು ಮೆಡಲ್ ಗಳನ್ನು ತನ್ನದಾಗಿಸಿದ ಕೋಣ  ಲಕ್ಕಿ ಸಾವನ್ನಪ್ಪಿದೆ. ಐಕಳ ದಿವಾಕರ ಚೌಟ ಮಾಲಕತ್ವದ ಕೋಣ ಲಕ್ಕಿ ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ(ಜು.16) ಕಾರ್ಕಳದಲ್ಲಿ ಲಕ್ಕಿಗೆ ಅಪರೇಷನ್ ಕೂಡ ನಡೆದಿತ್ತು.

    ಮಳೆ ಸೃಷ್ಟಿಸಿದ ಅವಾಂತರ.. ಲಾರಿ ಏರಿ ಜಿಲ್ಲಾಧಿಕಾರಿ ಪ್ರಯಾಣ..!!

    ಖ್ಯಾತ ವೈದ್ಯ ವಾಸುದೇವ ಪೈ ಅಪರೇಷನ್ ನಡೆಸಿದ್ದು, ಮತ್ತೆ ಇಂದು ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ವೈದ್ಯರನ್ನು ನೋಡಿದ ಲಕ್ಕಿ ಹೆದರಿ ಅತ್ತಿಂದಿತ್ತ ಓಡತೊಡಗಿತ್ತು. ಲಕ್ಕಿಯ ಮಾಲಕರು ಮತ್ತು ಒಡನಾಡಿಗಳಿಗೂ ನಿಯಂತ್ರಣಕ್ಕೆ ಸಿಗದಾಯಿತು. ಕೊನೆಗೆ ಮರಕ್ಕೆ ಕಟ್ಟಿ ಹಾಕಿದ್ದು ಸ್ವಲ್ಪ ಹೊತ್ತಿನಲ್ಲೇ ಅಸು ನೀಗಿದೆ. ಲಕ್ಕಿ ಒಬ್ಬಂಟಿ ಕೋಣವಾಗಿದ್ದು ಕಂಬಳ ಸಂದರ್ಭ ಅದಕ್ಕೆ ಸರಿಯಾದ ಜೊತೆ ಹುಡುಕಿ ಕಂಬಳದಲ್ಲಿ ಓಡಿಸಲಾಗುತ್ತಿತ್ತು. ಈ ಬಾರಿ 5 ಮತ್ತು ಕಳೆದ ವರ್ಷ 5 ಮೆಡಲ್ ಗಳನ್ನು ತನ್ನದಾಗಿಸಿದ್ದ ಲಕ್ಕಿ ಹಲವಾರು ಮೆಡಲ್ ಗಳನ್ನು ಪಡೆದುಕೊಂಡಿತ್ತು.

    Continue Reading

    LATEST NEWS

    ಮಳೆ ಸೃಷ್ಟಿಸಿದ ಅವಾಂತರ.. ಲಾರಿ ಏರಿ ಜಿಲ್ಲಾಧಿಕಾರಿ ಪ್ರಯಾಣ..!!

    Published

    on

    ಉತ್ತರ ಕನ್ನಡ/ಮಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಅಂಕೋಲ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ಆರು ಜನರನ್ನು ಬಲಿ ತೆಗೆದುಕೊಂಡಿದ್ದ ಗುಡ್ಡ ಕುಸಿತದ ಜಾಗಕ್ಕೆ ರಕ್ಷಣಾ ತಂಡ ತಲುಪಲು ಕೂಡಾ ಸಾಧ್ಯವಾಗದ ರೀತಿಯಲ್ಲಿ ಮಳೆ ಸುರಿದಿತ್ತು. ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಸಣ್ಣ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿ ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ದೇವಸ್ಥಾನದಲ್ಲಿ ಜಾರಿ ಬಿದ್ದ ಹೆಚ್.ಡಿ ರೇವಣ್ಣ..!

    ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ , ಜಿಲ್ಲಾ ಪಂಚಾಯತ್ ಸಿಸಿಒ ಈಶ್ವರ್‌ ಕಾಂದೂ ಹಾಗೂ ಎಸ್‌ಪಿ ಎಂ ನಾರಾಯಣ್ ಅವರು ಲಾರಿಯಲ್ಲಿ ಪ್ರಯಾಣಿಸಿ ಘಟನಾ ಸ್ಥಳವನ್ನು ತಲುಪಿದ್ದಾರೆ. ಶಿರೂರು ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐದು ಜನ ಮಣ್ಣಿನ ಅಡಿಯಲ್ಲಿ ಸಿಲುಕಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಗ್ಯಾಸ್‌ ಟ್ಯಾಂಕರ್‌ಗಳು, ಮೂರು ಮನೆ ಮತ್ತು ಒಂದು ಕಾರು ಮಣ್ಣಿನೊಂದಿಗೆ ಕೊಚ್ಚಿ ಹೋಗಿ ನದಿ ಪಾಲಾಗಿತ್ತು. ಘೋರ ದುರಂತ ನಡೆದ ಸ್ಥಳಕ್ಕೆ ತೆರಳುತ್ತಿದ್ದ ಅಧಿಕಾರಿಗಳ ವಾಹನಗಳೂ ಕೂಡಾ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಸಂಚರಿಸಲು ಆಗದೆ ನಿಂತಿತ್ತು. ಈ ವೇಳೆ ದುರ್ಘಟನೆ ನಡೆದ ಸ್ಥಳಕ್ಕೆ ತೆರಳಲು ಅಧಿಕಾರಿಗಳು ಲಾರಿಯೊಂದರ ಸಹಾಯ ಪಡೆದುಕೊಂಡಿದ್ದಾರೆ.

    Continue Reading

    LATEST NEWS

    Trending