Connect with us

    BANTWAL

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿ ಶಿವಕುಮಾರ್ ನೇಮಕ

    Published

    on

    ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಆಗಿ ಶಿವಕುಮಾರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.

    ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಆಗಿ ಶಿವಕುಮಾರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.

    ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಇವರನ್ನು ಹಲವು ತಿಂಗಳಿನಿಂದ ಖಾಲಿಯಾಗಿದ್ದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಪೋಲಿಸ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದೆ.

    ರಫ್ ಎಂಡ್ ಟಫ್ ಅಧಿಕಾರಿಯಾಗಿದ್ದ ಟಿ.ಡಿ.ನಾಗರಾಜ್ ಅವರ ಅವರನ್ನು ಕಾರ್ಕಳಕ್ಕೆ ವರ್ಗಾವಣೆಗೊಂಡ ಬಳಿಕ ಗ್ರಾಮಾಂತರ ಪೋಲೀಸ್ ಠಾಣೆಗೆ ಇನ್ಸ್ ಪೆಕ್ಟರ್ ಇಲ್ಲದೆ ಖಾಲಿಯಾಗಿತ್ತು.

    ಇವರ ಜೊತೆಗೆ ಬಂಟ್ವಾಳ ನಗರ ಪೋಲೀಸ್ ಠಾಣೆ ಯ ಪೋಲಿಸ್ ಇನ್ಸ್ ಪೆಕ್ಟರ್ ಆಗಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಆಗಿದ್ದ ಆನಂತಪದ್ಮನಾಭ ಅವರಿಗೆ ಅದೇಶ ನೀಡಿದೆ.

    ಇವರು ಈ ಹಿಂದೆ ಕದ್ರಿ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿಯೂ ಕರ್ತವ್ಯ ನಿರ್ವಹಿಸಿದ ಅನುಭವಿಯಾಗಿದ್ದಾರೆ.

    ಇದೀಗ ವಿವೇಕಾನಂದ ಅವರು ವರ್ಗಾವಣೆ ಆದ ಬಳಿಕ ಖಾಲಿಯಾಗಿದ್ದ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.

    ರಾಜಕೀಯವಾಗಿ ಅತ್ಯಂತ ಪ್ರಬಲ ಕ್ಷೇತ್ರ ಮತ್ತು ಅತ್ಯಂತ ಸೂಕ್ಷ್ಮ ಪ್ರದೇಶ ವಾದ ಬಂಟ್ವಾಳದ ಎರಡು ಪೋಲೀಸ್ ಠಾಣೆಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.

    BANTWAL

    ಬಂಟ್ವಾಳ : ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯದಂತೆ ವಧುವನ್ನು ವರಿಸಿದ ಪಂಜಾಬಿ ವರ

    Published

    on

    ಬಂಟ್ವಾಳ: ತುಳುನಾಡಿನ ವಧುವನ್ನು ಪಂಜಾಬಿಯ ವರನಿಗೆ ಕನ್ಯಾದಾನ ಮಾಡಿದ ಅಪರೂಪದ ಪ್ರಸಂಗವೊಂದು ಇತ್ತೀಚೆಗೆ ನಡೆಯಿತು. ತುಳುನಾಡಿನಲ್ಲಿ ನಡೆಯುವ ಅಳಿಯ ಕಟ್ಟಿನ ಮದುವೆಯನ್ನು ಪಂಜಾಬ್ ರಾಜ್ಯದ ಕುಟುಂಬವೊಂದು ಅಪ್ಪಿಕೊಂಡು ಒಪ್ಪಿಕೊಂಡಿರುವುದು ನಿಜಕ್ಕೂ ತುಳುನಾಡಿಗೆ ಹೆಮ್ಮೆ. ಬಡಗಬೆಳ್ಳೂರು ಗ್ರಾಮದ ಪರಿಮೊಗರು ನಿವಾಸಿ ಪ್ರಕಾಶ್ ಶೆಟ್ಟಿ ಅವರ ಪ್ರಥಮ ಪುತ್ರಿ ಪುಣ್ಯ ಅವರ ವಿವಾಹವು ಪಂಜಾಬ್ ರಾಜ್ಯದ ಸಂಜೀವ ಶರ್ಮ ಎಂಬವರ ಮಗ ಉತ್ಕರ್ಷ ಅವರ ಜೊತೆ ನ.27 ರಂದು ಪಂಜಾಬ್ ಲುದಿನಾದ ಅಂಬ್ರೋಸಿಯಾ ಗ್ರ್ಯಾಂಡ್ ರೆಸಾರ್ಟ್ ನಲ್ಲಿ ಸಂಭ್ರಮದಿಂದ ನಡೆಯಿತು.

    ಉನ್ನತ ವಿದ್ಯಾಭ್ಯಾಸ ಉದ್ದೇಶದಿಂದ ಅಮೇರಿಕಾದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಪರಿಚಯವಾದ ಇವರಿಬ್ಬರ ಸ್ನೇಹ ಮುಂದೆ ಸಾಗಿ ಮದುವೆ ಎಂಬ ಮೂರಕ್ಷರದ ಗಂಟು ಕಟ್ಟುವರೆಗೂ ತಲುಪಿತು. ಅಮೇರಿಕಾದ ವರನಿಗೆ ಅಥವಾ ವಧುವಿಗೆ ತುಳುನಾಡಿನ ವರ ಅಥವಾ ವಧು ಎಂಬ ಸಂಬಂಧಗಳು ಅನೇಕ ನಡೆದಿವೆ. ಅದು ದೊಡ್ಡ ಸಂಗತಿಯಾಗದೆ ಇರಬಹುದು. ಆದರೆ ಹೊರರಾಜ್ಯವಾದ ಪಂಜಾಬ್ ನ ವರ ಬಂಟ್ವಾಳದ ಬಂಟ ಸಮುದಾಯದ ವಧುವನ್ನು ತುಳುನಾಡಿನ ಅಳಿಯ ಕಟ್ಟು ಪ್ರಕಾರದ ಮದುವೆ ಮೂಲಕ ವರಿಸಿದ್ದಾನೆ ಎಂಬುದು ಉಲ್ಲೇಖನೀಯ ಅಂಶವಾಗಿದೆ.

    ಅತ್ಯಂತ ಪುರಾತನವಾದ ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯ ಬದ್ದವಾದ ಮದುವೆಗೆ ಸಾಕ್ಷಿಯಾಗಿ, ಭೂಮಿ ಸಾಕ್ಷಿಯಾದ ಮದುವೆಯನ್ನು ಪಿ.ಕಿಶೋರ್ ಭಂಡಾರಿ ಬಡಗಬೆಳ್ಳೂರು ಇವರ ಮಾರ್ಗದರ್ಶನದಲ್ಲಿ ಮಂಗಳೂರಿನ ರಾಕೇಶ್ ಸಾಲಿಯಾನ್ ಪಚ್ಚನಾಡಿ ಅವರು ನೆರವೇರಸಿಕೊಟ್ಟರು.

    Continue Reading

    BANTWAL

    ನಾಲ್ಕು ಪತ್ನಿಯರಿಗೆ ಕೈಕೊಟ್ಟು ಐದನೇ ಮದುವೆಗೆ ಸಜ್ಜಾಗುತ್ತಿದ್ದ ರಸಿಕ ಅರೆಸ್ಟ್ !!

    Published

    on

    ಬಂಟ್ವಾಳ: ನಾಲ್ಕು ಮದುವೆಯಾಗಿ, ಐದನೇ ಮದುವೆಗೆ ತಯಾರಾಗುತ್ತಿದ್ದ ಭೂಪನೊಬ್ಬನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ನಾಲ್ಕನೇ ಮದುವೆಯಾದ ಪತ್ನಿಗೆ ತ್ರಿವಳಿ ತಲಾಖ್ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹ*ಲ್ಲೆ ನಡೆಸಿ ಮನೆಯಿಂದ ಹೊರದಹಾಕಿದ್ದ ರಾ*ಕ್ಷಸೀಯ ಕೃ*ತ್ಯವೊಂದು ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ ಬುಧವಾರ (ನ.27) ರಾತ್ರಿ ನಡೆದಿದೆ.

    ಈ ಬಗ್ಗೆ ಸಂತ್ರಸ್ತ ಪತ್ನಿ ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗುವುದನ್ನೇ ಕಸುಬಾಗಿಸಿಕೊಂಡ ನಟೋರಿಯಸ್ ಬಹುಪತ್ನಿ ವಲ್ಲಭನನ್ನು ಮಾಣಿ ರಫೀಕ್ ಯಾನೆ ಮಹಮ್ಮದ್ ರಫೀಕ್(42)ನನ್ನು ಬಂಟ್ವಾಳ ಪೊಲೀಸರು ಬಲೆಗೆ ಕೆಡವಿದ್ದಾರೆ. ಆರೋಪಿ ಮಾಣಿ ರಫೀಕ್ ಈಗಾಗಲೇ ನಾಲ್ಕು ಮದುವೆಯಾಗಿದ್ದು, ಒಂದೆರಡು ವರ್ಷ ಜೊತೆಯಾಗಿ ಜೀವನ ಮಾಡಿ ಮಕ್ಕಳನ್ನು ಕರುಣಿಸಿದ ಬಳಿಕ ವಿಚ್ಚೇದನ ನೀಡಿ ಪರಾರಿಯಾಗುತ್ತಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.

    ನಾಲ್ಕನೇ ಪತ್ನಿಯಿಂದ ದೂರು ದಾಖಲು :

    ‘ನಿನ್ನೆ ( ನ.26) ಸಂಜೆ ಐದು ಗಂಟೆ ಸುಮಾರಿಗೆ ರಫೀಕ್ ನ ಮನೆಗೆ ನಾನು ಹೋಗಿದ್ದೇನೆ. ಹೋದಂತ ಸಂದರ್ಭದಲ್ಲಿ ಆರೋಪಿಯಾದ ರಫೀಕ್ ಅ*ವಾಚ್ಯ ಶಬ್ದಗಳಿಂದ ಬೈದು, ಹ*ಲ್ಲೆ ನಡೆಸಿದ್ದಲ್ಲದೇ ಮಗುವನ್ನು ಕೊಂ*ದು ಹಾಕುತ್ತೇನೆಂದು ಬೆದರಿಕೆ ಹಾಕಿದ್ದಲ್ಲದೇ, ತಾಯಿಯ ಮಡಿಲಲ್ಲಿದ್ದ ಮಗುವನ್ನು ಎಳೆದು ಎಸೆಯಲು ಮುಂದಿಗಿದ್ದಾನೆ’ ಎಂದು ಸಂತ್ರಸ್ತ ಪತ್ನಿ ಆರೋಪಿಸಿದ್ದಾಳೆ. ಅಲ್ಲದೇ ತ್ರಿವಳಿ ತಲಾಖ್ ಎಂದು ಹೇಳಿ ಕುತ್ತಿಗೆಗೆ ಕೈಹಾಕಿ ಮನೆಯಿಂದ ಹೊರಗೆ ದಬ್ಬಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾಳೆ. ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನೂ ಕಿತ್ತುಕೊಂಡಿರುವ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ.

    ಮಾಣಿ ರಫೀಕ್ ಯಾರು ? ಹಿನ್ನಲೆ ಏನು ?

    ಮಾಣಿ ರಫೀಕ್ ಯಾನೆ ನಟೋರಿಯಸ್ ಕಿರಾತಕ. ಮಾಣಿಯಿಂದ ವಲಸೆ ಬಂದ ರಫೀಕ್ ವಿಟ್ಲ ಸಮೀಪದ ಮಂಗಲಪದವು ಎಂಬಲ್ಲಿ ಮನೆ ಕಟ್ಟಿಕೊಂಡಿದ್ದ. ಅಲ್ಲಿಯೂ ನೆರೆಹೊರೆಯವರ ಜೊತೆ ಗಲಾಟೆ, ಗದ್ದಲ ಎಬ್ಬಿಸಿ ಕೊನೆಗೆ ಮನೆ ಮಾರಾಟ ಮಾಡಿ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಲ್ಲೂ ಕೂಡಾ ಪರಿಸರದ ಶಾಂತಿಪ್ರಿಯ ನಿವಾಸಿಗಳ ಜೊತೆ ತಕರಾರು ಎಬ್ಬಿಸಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಎರಡು ವರ್ಷಗಳ ಹಿಂದೆ ಜನ್ಮ ನೀಡಿದ ತಾಯಿಯ ಮೇಲೆಯೇ ಮನಬಂದಂತೆ ಹ*ಲ್ಲೆ ನಡೆಸಿ ಆಕೆಯ ಚಿನ್ನಾಭರಣ ಕಿತ್ತು ಕಾಲಿನಿಂದ ತುಳಿದು ಮನೆಯಿಂದ ಹೊರದಬ್ಬಿ ರಾ*ಕ್ಷಸೀಯ ಕೃ*ತ್ಯ ನಡೆಸಿದ್ದ. ಈತನ ಹ*ಲ್ಲೆ, ಕಿರುಕುಳದಿಂದ ಮನನೊಂದ ತಾಯಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಲ್ಲದೇ ಠಾಣೆಯಲ್ಲೂ ಹೆತ್ತ ತಾಯಿಯ ಮೇಲೆ ಮನಬಂದಂತೆ ಅ*ವಾಚ್ಯ ಶಬ್ದಗಳಿಂದ ನಿಂದಿಸಿ ರಾ*ಕ್ಷಸೀ ಕೃ*ತ್ಯ ನಡೆಸಿರುವುದು ಪ್ರತಿಯೊಬ್ಬನಿಗೂ ತಿಳಿದ ವಿಚಾರವಾಗಿದೆ. ಅದಾದ ಬಳಿಕ ಅನಾರೋಗ್ಯದಿಂದ ಮೃ*ತಪಟ್ಟ ಮೊದಲ ಪತ್ನಿಯ ಹಿರಿಮಗಳ ಮೇಲೆ ಹ*ಲ್ಲೆ ನಡೆಸಿ ಮನೆಯಿಂದ ಹೊರದಬ್ಬಿದ್ದಾನೆ. ಇದೀಗ ಆಕೆಯೂ ತನ್ನ ಅಜ್ಜಿ ಜೊತೆ ಮಂಗಲಪದವು ಬಳಿ ಬಾಡಿಗೆ ಮನೆಯಲ್ಲಿದ್ದಾರೆ।

    ಇದೀಗ ನಾಲ್ಕನೇ ಪತ್ನಿಯ ಚಿನ್ನಾಭರಣವನ್ನೆಲ್ಲಾ ಕಿತ್ತುಕೊಂಡು ಬಳಿಕ ಆಕೆಯ ಮಗುವಿನ ಮೇಲೆ ಹ*ಲ್ಲೆ ನಡೆಸಿ ಹೊರದಬ್ಬಿದ್ದ ಕಿರಾತಕನ ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಸೆಕ್ಷನ್ BNS/-85,86,352,351(1),115(2) ರಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    BANTWAL

    ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

    Published

    on

    ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೋರ್ವಳು ಮೃ*ತಪಟ್ಟ ಘಟನೆ ನ.28ರ ಗುರುವಾರ ನಡೆದಿದೆ.

    ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ.ನಾರಾಯಣ ಮೂಲ್ಯ ಅವರ ಪುತ್ರಿ ರಕ್ಷಿತಾ (20) ಮೃ*ತಪಟ್ಟ ಯುವತಿ ಎನ್ನಲಾಗಿದೆ.

    ಮೃ*ತರು ತಾಯಿ, ಅಕ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

    Continue Reading

    LATEST NEWS

    Trending