Connect with us

    FILM

    ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್ ಅದ್ಧೂರಿ ಗೃಹ ಪ್ರವೇಶ

    Published

    on

    ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ಸ್ಟಾರ್ ನಟ ಶಿವರಾಜ್ ಕುಮಾರ್. ಇದೀಗ ‘ಭೈರತಿ ರಣಗಲ್’ ಸಿನಿಮಾದ ಬಿಡುಗಡೆ ಹೊಸ್ತಿಲಲ್ಲಿದ್ದಾರೆ. ಇದರ ನಡುವೆಯೇ ಶಿವರಾಜ್ ಕುಮಾರ್ ಮನೆಯಲ್ಲಿ ಶುಭಕಾರ್ಯವೊಂದು ನಡೆದಿದೆ. ಶಿವರಾಜ್ ಕುಮಾರ್ ಅವರು ನೂತನ ಫಾರ್ಮ್ ಹೌಸ್ ನಿರ್ಮಿಸಿದ್ದು ಅದರ ಗೃಹ ಪ್ರವೇಶ ಇತ್ತೀಚೆಗಷ್ಟೆ ನಡೆದಿದೆ. ಕುಟುಂಬಸ್ಥರು ಕೆಲವೇ ಆತ್ಮೀಯರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಗೃಹ ಪ್ರವೇಶ ನಡೆದಿದೆ.

    ಕೆಲ ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರುಗಳು ನೆಲಮಂಗಲದ ಬಳಿ ಜಮೀನು ಖರೀದಿ ಮಾಡಿದ್ದರು. ಅಲ್ಲಿ ಈಗ ಬೃಹತ್ ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದಾರೆ. ಈ ಫಾರ್ಮ್ ಹೌಸ್​ ಗೃಹಪ್ರವೇಶವನ್ನು ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಮಾಡಿದ್ದಾರೆ. ಪೂಜೆ ಮಾಡಿ, ತಮ್ಮ ಮನೆ ದೇವರ ಫೋಟೊ ಹಿಡಿದುಕೊಂಡು ಶಿವರಾಜ್ ಕುಮಾರ್ ಫಾರ್ಮ್ ಹೌಸ್ ಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗೋ ಪೂಜೆಯನ್ನು ಸಹ ಶಿವರಾಜ್ ಕುಮಾರ್ ದಂಪತಿ ಮಾಡಿದ್ದಾರೆ. ಆತ್ಮೀಯರು ಮತ್ತು ಕುಟುಂಬದ ಸದಸ್ಯರುಗಳು ಈ ಪೂಜೆಯಲ್ಲಿ ಭಾಗಿಯಾಗಿದ್ದರು.

    ಶಿವರಾಜ್ ಕುಮಾರ್ ಫಾರ್ಮ್ ಹೌಸ್ ವಿಶಾಲವಾಗಿದ್ದು, ಭಿನ್ನವಾದ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಮನೆಯ ಮುಂದೆ ವಿಶಾಲ ಜಾಗವಿದ್ದು, ಅಲ್ಲಿ ಉದ್ಯಾನ, ತೋಟಗಳನ್ನು ಬೆಳೆಸುವ ಯೋಜನೆ ಶಿವಣ್ಣ ದಂಪತಿಗೆ ಇದ್ದಂತಿದೆ. ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿಗೆ ಭೇಟಿ ನೀಡಿದ್ದರು. ತಮ್ಮ ನೂತನ ಫಾರ್ಮ್​ ಹೌಸ್ ಗೃಹ ಪ್ರವೇಶಕ್ಕೆ ಮುಂಚೆ ತಮ್ಮ ಗ್ರಾಮ ದೇವರಿಗೆ ನಮಿಸಿ ಬಂದಿದ್ದರು. ಅಲ್ಲಿನ ಕುಟುಂಬ ಸದಸ್ಯರಿಗೆ ಆಹ್ವಾನವನ್ನೂ ಸಹ ನೀಡಿದ್ದರು.

    ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರಿಗೆ ಸಾಕಷ್ಟು ಕಡೆ ಜಮೀನು ಇದೆ. ಈ ಹಿಂದೆ ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಸಲ್ಲಿಸಿದ್ದ ನಾಮಪತ್ರದಲ್ಲಿ ಈ ವಿಷಯಗಳು ಬಹಿರಂಗಗೊಂಡಿದ್ದವು. ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಶಿವರಾಜ್ ಕುಮಾರ್ ಅದನ್ನು ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ, ಆಭರಣ ಇನ್ನಿತರೆಗಳಲ್ಲಿ ಹೂಡಿಕೆ ಮಾಡುತ್ತಾರೆ.

    BIG BOSS

    ಬಿಗ್​ಬಾಸ್​ಗೆ ವೈಲ್ಡ್ ​ಕಾರ್ಡ್ ಎಂಟ್ರಿ ಕೊಡ್ತಾರಂತೆ ಪುಟ್ಟಕ್ಕನ ಮಗಳು ಸ್ನೇಹಾ

    Published

    on

    ಪುಟ್ಟಕ್ಕ ನೋವಿನಲ್ಲಿದ್ದಾಳೆ. ಮೊದಲ ಮಗಳನ್ನ ಕಳೆದುಕೊಂಡ ದುಃಖ ಇರುವಾಗಲೇ ಎರಡನೇ ಮಗಳು ಸ್ನೇಹಾಳನ್ನ ಆಕ್ಸಿಡೆಂಟ್​ನಲ್ಲಿ ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾಳೆ. ಇದೇ ದೃಶ್ಯಗಳನ್ನು ನೋಡಿದ ವೀಕ್ಷಕರ ಕರುಳು ಚುರುಕ್​ ಅನ್ನುವಂತಿದೆ.​

    ಸ್ನೇಹಾ ಇನ್ನಿಲ್ಲ ಎಂಬ ಸುದ್ದಿ ಕಾಳಿಗೆ ಗೊತ್ತಾಗಿದ್ದು, ಸಹನಾಳನ್ನ ಕರೆದುಕೊಂಡು ಊರಿಗೆ ಬಂದಿದ್ದಾನೆ. ಸ್ನೇಹಾ ಸಾವಿನ ವಿಚಾರ ಗೊತ್ತಿಲ್ಲದೇ ತಂಗಿ, ಅಮ್ಮನ ಮಡಿಲು ಸೇರಲು ಸಹನಾ ಸಂಭ್ರಮಿಸುತ್ತಿದ್ದಾಳೆ. ಒಬ್ಬಳು ಮಗಳನ್ನ ಕಳೆದುಕೊಂಡ ಪುಟ್ಟಕ್ಕನಿಗೆ ಇನ್ನೊಬ್ಬ ಮಗಳು ಬದುಕಿರೋ ವಿಚಾರ ಗೊತ್ತಾಗಿದೆ. ನೊಂದ ಜೀವಕ್ಕೆ ಆಸರೆ ಸಿಕ್ಕಂತಾಗಿದೆ.

    ಒಂದೊಂದು ದೃಶ್ಯ ಕಲ್ಲು ಹೃದಯಬನ್ನೂ ಕರಗಿಸುವಂತಿವೆ. ಪ್ರತಿಯೊಬ್ಬರ ಅಭಿನಯ ಮನ ಮುಟ್ಟುವಂತಿದೆ. ಅಂದ ಹಾಗೆ, ಸ್ನೇಹಾಳಿಗೆ ಸಕಲ ಸರ್ಕಾರಿ ಗೌರವಗಳನ್ನ ನೀಡಲಾಯ್ತು. ಈ ದೃಶ್ಯದ ಸಿದ್ಧತೆಗೆ ರಿಯಲ್​ ಪೊಲೀಸ್​ ಬಂದು ಎಲ್ಲಾ ಕಲಾವಿದರಿಗೆ ಟ್ರೈನಿಂಗ್​ ಮಾಡಿದ್ದರಂತೆ. ಇನ್ನೂ ಸ್ನೇಹಾ ಪಾತ್ರ ಮುಕ್ತಾಯವಾಗಿದೆ. ಆದರೆ ವೀಕ್ಷಕರ ಮನಸ್ಸಲ್ಲಿ ಸ್ನೇಹಾ ಸದಾ ಹಸಿರಾಗಿರೋದಂತೂ ಸತ್ಯ.

    ಸೀರಿಯಲ್​ನಿಂದ ಆಚೆ ಬಂದಿದ್ದ ಸ್ನೇಹ ಅಂದ್ರೆ ಸಂಜನಾ ಬುರ್ಲಿ ಅವರಿಗೆ ಬಿಗ್​ಬಾಸ್​ನಿಂದ ಆಫರ್​ ಬಂದಿದೆ. ಹೀಗಾಗಿ ಅವರನ್ನು ಸೀರಿಯಲ್​ನಲ್ಲಿ ಅಪಘಾತ ಮಾಡಿಸಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಾಮೆಂಟ್ಸ್​ಗಳನ್ನು ಹಾಕುತ್ತಿದ್ದಾರೆ.

    ಈ ಬಗ್ಗೆ ಮಾತಾಡಿದ ಸಂಜನಾ ಬುರ್ಲಿ, ನಾನು ಸೀರಿಯಲ್​ಗೆ 3 ತಿಂಗಳು ನೋಟೀಸ್​ ಪಿರಿಯಡ್ ಕೊಟ್ಟಿದೆ. ಆಗ ನಮ್ಮ ಡೈರೆಕ್ಟರ್ ಆರೂರ್ ಜಗದೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಪ್ರಮುಖ ಪಾತ್ರಕ್ಕೆ ನಟಿ ಬೇಕಾಗಿದ್ದಾರೆ ಅಂತ. ಸ್ನೇಹಾಳ ಕ್ಯಾರೆಕ್ಟರ್​ಗೆ ರಿಪ್ಲೇಸ್ ಮಾಡೋದಕ್ಕೆ ಅಲ್ಲ. ಆಗ ಸಾಕಷ್ಟು ಮಂದಿ ಇದನ್ನು ಗೇಸ್​ ಮಾಡಿದ್ದರು. ಸಂಜನಾ ಅವರು ಬಿಗ್​ಬಾಸ್​ಗೆ ಹೋಗುತ್ತಾರೆ ಅಂತ ಮುಂಚೆಯೇ ಗೇಸ್​ ಮಾಡಿದ್ದರು. ಆದರೆ ಈಗ ಸ್ನೇಹಾ ಕ್ಯಾರೆಕ್ಟರ್​ ಎಂಡ್ ಆದ ಮೇಲೆ ಬಿಗ್​ಬಾಸ್​ಗೆ ವೈಲ್ಡ್​ಕಾರ್ಡ್ ಎಂಟ್ರಿ ಕೊಡುತ್ತಾರೆ ಅಂತ ಜನ ಅಂದುಕೊಳ್ಳುತ್ತಿದ್ದಾರೆ. ನಾನು ಯಾವ ರಿಯಾಲಿಟಿ ಶೋಗೂ ಹೋಗುತ್ತಿಲ್ಲ ಅಂತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    Continue Reading

    FILM

    ಆತ್ಮಹ*ತ್ಯೆಗೂ ಮುನ್ನ ಹಗ್ಗ, ಕರ್ಟನ್ ಖರೀದಿಸಿದ್ದ ಗುರುಪ್ರಸಾದ್

    Published

    on

    ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಆತ್ಮಹ*ತ್ಯೆಗೆ ಮೊದಲೇ ಹಗ್ಗ, ಕರ್ಟನ್ ಖರೀದಿಸಿದ್ದರು ಎಂಬ ಮಾಹಿತಿಯು ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಹಲವು ಅನುಮಾನಗಳಿಗೆ ಕಾರಣವಾಗಿರುವ ನಡುವೆ ಕೆಲವೊಂದು ಕುತೂಹಲಕರವಾದ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಾದನಾಯಕನಹಳ್ಳಿ ಪೊಲೀಸರಿಗೆ ಗುರುಪ್ರಸಾದ್ ಆತ್ಮಹ*ತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ಗೊತ್ತಾಗಿದೆ.

    ಆತ್ಮಹ*ತ್ಯೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದ ಗುರುಪ್ರಸಾದ್, ಹೊಸದಾಗಿ ಹಗ್ಗ ಖರೀದಿ ಮಾಡಿದ್ದರಂತೆ. ಹಾಗೇ ಹಗ್ಗ ಖರೀದಿ ಮಾಡಿಕೊಂಡು ಮನೆಗೆ ಬಂದು ಕಿಟಕಿಯಿಂದ ಹೊರಗೆ ಯಾರಿಗೂ ಕಾಣಬಾರದು ಎಂದು ಹೊಸದಾಗಿ ಕರ್ಟನ್‌ಗಳು ಹಾಕಿ ಕವರ್ ಮಾಡಿದ್ದಾರೆ. ನಂತರ ಮನೆಯ ಬಾಗಿಲಿನ ಒಳಗಿನಿಂದಲೇ ಚಿಲಕ ಹಾಕಿ ಅಲ್ಲೇ ಇದ್ದ ದಿವಾನ್ ಮೇಲಿಂದ ಕೆಳಗೆ ಜಿಗಿದು ಆತ್ಮಹ*ತ್ಯೆಗೆ ಶರಣಾಗಿದ್ದಾರೆ ಅನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ.

    ಗುರುಪ್ರಸಾದ್ ಆತ್ಮಹ*ತ್ಯೆಗೆ ಆರ್ಥಿಕ ಕಾರಣಗಳೇನಾದರು ಇದೆಯಾ ಅಥವಾ ವೈಯಕ್ತಿಕ ಕಾರಣಗಳಾ ಅನ್ನುವ ವಿಚಾರಕ್ಕೂ ತನಿಖೆ ನಡೆಯುತ್ತಿದೆ. ಅದರ ಜೊತೆಗೆ ಆತ್ಮಹ*ತ್ಯೆ ನಡೆದಿದ್ದು ಯಾವಾಗ ಅನ್ನುವುದಕ್ಕೂ ಉತ್ತರ ಸಿಕ್ಕಿದೆ. ಗುರುಪ್ರಸಾದ್, ಕಳೆದ ಅ.29ರಂದು ಕೊನೆಯ ಬಾರಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಆ ನಂತರ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಫ್ಲಾಟ್‌ಗೆ ಅ.29ರಂದು ಸಂಜೆ ಹೋಗಿರುವುದನ್ನು ಅಲ್ಲಿನ ಕೆಲವರು ನೋಡಿದ್ದಾರೆ. ಪೊಲೀಸರ ತನಿಖೆ ವೇಳೆಯೂ, ಗುರುಪ್ರಸಾದ್ ಅ.29ರ ರಾತ್ರಿ 7-8 ಗಂಟೆ ಹೊತ್ತಿನಲ್ಲಿ ಆತ್ಮಹ*ತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

    ಈ ನಡುವೆ, ಗುರುಪ್ರಸಾದ್ ನಾಲ್ಕು ಮೊಬೈಲ್‌ಗಳನ್ನು ಬಳಸುತ್ತಿದ್ದರು ಎನ್ನಲಾಗಿದ್ದು, ಆ ನಾಲ್ಕು ಮೊಬೈಲ್‌ಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಕೆಲ ಡಿಲಿಟೇಡ್ ಮಸೇಜ್‌ಗಳು ಕೂಡ ಪತ್ತೆಯಾಗಿವೆ. ಕೊನೆಯ ಬಾರಿಗೆ ಯಾರು ಸಂಪರ್ಕ ಮಾಡಿದ್ದರು? ಹಣಕಾಸಿನ ವಿಚಾರವಾ? ಬೇರೆ ಏನಾದರೂ ಕಾರಣ ಇದೆಯಾ ಅನ್ನುವುದು ತನಿಖೆಯ ನಂತರವೇ ತಿಳಿಯಬೇಕಿದೆ.

    Continue Reading

    BIG BOSS

    ಗುಟ್ಟಾಗಿ ನಡೆದ ಮಾತುಕತೆ ರಟ್ಟು ಮಾಡಿ ಜಗಳ ತಂದಿಟ್ಟ ಬಿಗ್ ಬಾಸ್

    Published

    on

    ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಾ ಇರುತ್ತವೆ. ಒಬ್ಬರು ಆಡಿದ ಮಾತನ್ನು ಮತ್ತೊಬ್ಬರಿಗೆ ತೋರಿಸೋದಿಲ್ಲ. ಹೀಗೆ ತೋರಿಸಿದರೆ ಇಡೀ ಮನೆ ರಣರಂಗ ಆಗುತ್ತದೆ. ಈ ಕಾರಣಕ್ಕೆ ಒಬ್ಬರ ಬಗ್ಗೆ ಮತ್ತೊಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಎಂಬ ವಿಡಿಯೋನ ತೋರಿಸಲ್ಲ. ಆದರೆ, ಈ ಬಾರಿ ಮನೆಯವರ ಮಧ್ಯೆ ಪಿಟ್ಟಿಂಗ್ ಇಡುವ ಕೆಲಸ ಆಗಿದೆ. ಇದರಿಂದ ಇಡೀ ಮನೆ ಹೊತ್ತು ಉರಿದಿದೆ.

    ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಆದರೆ, ಎದುರಿನಿಂದ ಎಲ್ಲರೂ ಒಳ್ಳೆಯವರ ರೀತಿ ತೋರಿಸಿಕೊಳ್ಳುತ್ತಾರೆ. ಹಿಂದಿನಿಂದ ಆಡಿದ ಮಾತುಗಳು ಯಾರಿಗೂ ತಿಳಿಯಲ್ಲ ಎನ್ನುವ ಧೈರ್ಯದ ಮೇಲೆ ಒಬ್ಬರಿಗೊಬ್ಬರು ಚೆನ್ನಾಗಿ ಇರುತ್ತಾರೆ. ಈಗ ಹಿಂದಿನಿಂದ ಆಡಿದ ಮಾತುಗಳೇ ಅವರಿಗೆ ಮುಳುವಾಗಿದೆ.

    ಬಿಗ್ ಬಾಸ್ ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಈ ಚಟುವಟಿಕೆಯ ಪ್ರಕಾರ ಪ್ರತಿ ಸ್ಪರ್ಧಿಯ ಫೋಟೋ ಬರುತ್ತದೆ ಮತ್ತು ಅವರು ಆಡಿದ ಮಾತನ್ನು ಪ್ರಸಾರ ಮಾಡಲಾಗುತ್ತದೆ. ಅದನ್ನು ಯಾವ ಜಾಗದಲ್ಲಿ ಹೇಳಲಾಗಿದೆ ಎಂಬುದನ್ನು ಊಹಿಸಬೇಕು. ಸರಿಯಾಗಿ ಊಹಿಸಿದರೆ ಮನೆಗೆ ದಿನಸಿ ಸಿಗುತ್ತದೆ. ಆ ಬಳಿಕ ವಿಡಿಯೋ ಕೂಡ ಪ್ರಸಾರ ಮಾಡಲಾಗುತ್ತದೆ.

    ಸದ್ಯ ಪ್ರಸಾರ ಮಾಡಿರುವ ವಿಡಿಯೋಗಳು ಇಡೀ ಮನೆಯನ್ನು ಹೊತ್ತು ಉರಿಯುವಂತೆ ಮಾಡಿದೆ. ಗುಟ್ಟಾಗಿ ನಡೆದ ಮಾತುಗಳು ರಿವೀಲ್ ಆಗಿವೆ. ಇದು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

    ಗುಟ್ಟಾಗಿ ನಡೆದ ಮಾತುಕತೆಗಳು ರಿವೀಲ್ ಆಗುವುದು ತುಂಬಾನೇಕಡಿಮೆ. ಈ ರೀತಿ ಮಾತುಕತೆ ರಿವೀಲ್ ಆಗುತ್ತಾ ಹೋದರೆ ಪ್ರತಿ ಸ್ಪರ್ಧಿ ಬಗ್ಗೆ ಸಹ ಸ್ಪರ್ಧಿಗೆ ಇರುವ ಅಭಿಪ್ರಾಯ ಬದಲಾಗುತ್ತಾ ಹೋಗುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಇದೇ ಆಗಿದೆ.. ಐಶ್ವರ್ಯಾ ಅವರು ಅಸಮರ್ಥರು ಎಂದು ಸುರೇಶ್ ಮಾತನಾಡಿದ್ದರು. ಅದೇ ರೀತಿ ಭವ್ಯಾ ಬಗ್ಗೆ ಮೋಕ್ಷಿತಾ ಹಾಗೂ ಕೆಲವರು ಕಮೆಂಟ್ ಪಾಸ್ ಮಾಡಿದ್ದರು. ಇದು ಕೂಡ ಸಖತ್ ಚರ್ಚೆ ಆಗುತ್ತಿದೆ. ತ್ರಿವಿಕ್ರಂ ಹೇಳಿದ ಮಾತಿನಿಂದ ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ.

    Continue Reading

    LATEST NEWS

    Trending