Connect with us

    FILM

    ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ

    Published

    on

    ಬೆಂಗಳೂರು : ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.

    ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಅವರು ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ
    ಬೆಂಗಳೂರಿನ ಆರ್​ ಆರ್​ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಸಾವನ್ನಪಿದ್ದಾರೆ.

    ‘ಮನಸಾಲಜಿ’, ‘ಶುಗರ್​ ಫ್ಯಾಕ್ಟರಿ’ ಸಿನಿಮಾಗಳಿಗೆ ದೀಪಕ್ ನಿರ್ದೇಶನ ಮಾಡಿದ್ದರು. ದೀಪಕ್ ಅರಸ್ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ.

    FILM

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕ್ರಿಕೆಟಿಗ ಕೆ.ಎಲ್.ರಾಹುಲ್

    Published

    on

    ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.

    ದಂಪತಿ Instagram ನಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿದ್ದಾರೆ. ‘ದೇವರ ಸುಂದರ ಆಶೀರ್ವಾದ 2025ರಲ್ಲಿ ಬರಲಿದೆ’ ಎಂದು ಅಥಿಯಾ ದಂಪತಿ ಪೋಷಕರಾಗುತ್ತಿರುವ ಖುಷಿಯ ಸುದ್ದಿಯನ್ನು ತಿಳಿಸಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

    ಕಳೆದ ವರ್ಷ ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಅಥಿಯಾ ಹಲವು ವರ್ಷಗಳ ಪ್ರೀತಿಗೆ ವಿವಾಹದ ಬೆಸುಗೆ ಬೆಸೆದಿದ್ದರು.

    ಇದನ್ನು ಓದಿ:ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!

    Continue Reading

    FILM

    ಖ್ಯಾತ ಕಿರುತೆರೆ ನಟ ಹಠಾತ್ ಸಾ*ವು

    Published

    on

    ಮಂಗಳೂರು/ಮುಂಬೈ : ‘ದಾದಗಿರಿ 2’ ರಿಯಾಲಿಟಿ ಶೋ ವಿಜೇತ ಕಿರುತೆರೆ ಖ್ಯಾತಿಯ ನಟ ನಿತಿನ್ ಚೌಹಾಣ್ ( 35) ಗುರುವಾರ (ನ.7) ಮುಂಬೈನಲ್ಲಿ ನಿ*ಧನರಾದರು.

    ನಿತಿನ್ ಚೌಹಾಣ್ ಎಂಟಿವಿ ಶೋಗಳಾದ ‘ಸ್ಪ್ಲಿಟ್ಸ್ವಿಲ್ಲಾ 5’, ‘ಜಿಂದಗಿ ಡಾಟ್ ಕಾಮ್’, ‘ಕ್ರೈಮ್ ಪೆಟ್ರೋಲ್’ ಮತ್ತು ‘ಫ್ರೆಂಡ್ಸ್’ ನಲ್ಲಿ ಮಿಂಚಿದ್ದಾರೆ. ಕೊನೆಯ ಬಾರಿಗೆ 2022 ರಲ್ಲಿ SAB ಟಿವಿಯ ‘ತೇರಾ ಯಾರ್ ಹೂನ್ ಮೈನ್’ ನಲ್ಲಿ ಕಾಣಿಸಿಕೊಂಡಿದ್ದು ಹಠಾತ್ ಸಾ*ವನ್ನಪ್ಪಿರುವ ಸುದ್ಧಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

    ನಿತಿನ್ ಅವರ ಸಾವನ್ನು ಅವರ ಸಹ ನಟರಾದ ಸುದೀಪ್ ಸಾಹಿರ್ ಮತ್ತು ಸಯಂತನಿ ಘೋಷ್ ನಟನ ಸಾ*ವಿನ ಸುದ್ಧಿಯನ್ನು ಖಚಿತಪಡಿಸಿದ್ದಾರೆ. ಆದರೆ, ಇದನ್ನು ಬಿಟ್ಟು ಬೇರೆ ಯಾವುದೇ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ವಿಭೂತಿ ಠಾಕೂರ್ ನಿತಿನ್‌ರವರ ಮಾಜಿ ಸಹನಟನಾಗಿದ್ದು, ಅವರು ತಮ್ಮ ಪೋಸ್ಟ್ ನಲ್ಲಿ, ‘ನಿತಿನ್ ಚೌಹಾಣ್ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

    ವಿಭೂತಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಿತಿನ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದು ‘ದೇವರು ನಿಮ್ಮ ಆ*ತ್ಮಕ್ಕೆ ಚಿರಶಾಂತಿ ನೀಡಲಿ. ನಾನು ನಿಜವಾಗಿಯೂ ಆ*ಘಾತಕ್ಕೊಳಗಾಗಿದ್ದೇನೆ ಮತ್ತು ದುಃಖಿತನಾಗಿದ್ದೇನೆ. ನಿಮ್ಮ ಕುಟಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ದೇವರು ಅನುಗ್ರಹಿಸಲಿ’ ಎಂದು ಬರೆದಿದ್ದಾರೆ.

    ಮಗನ ಪಾರ್ಥಿವ ಶರೀರವನ್ನು ಸಂಗ್ರಹಿಸಲು ನಿತಿನ್ ತಂದೆ ಮುಂಬೈ ತಲುಪಿದ್ದು, ಸದ್ಯ ಮೃ*ತರ ತಂದೆ ಅಥವಾ ಕುಟುಂಬಸ್ಥರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಪೊಲೀದರು ಘಟನೆ ಕುರಿತು ಸೂಕ್ಷ್ಮ ತನಿಖೆ ನಡೆಸುತ್ತಿದ್ದಾರೆ.

    Continue Reading

    FILM

    ‘ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ, ಅಷ್ಟು ಆತುರ ಅವರಲ್ಲಿತ್ತು’ : ಅಮಲಾ ಪೌಲ್ ಯಾಕೆ ಹೀಗಂದ್ರು ಗೊತ್ತಾ ?

    Published

    on

    ‘ನನ್ನ ಗಂಡನನ್ನು ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ. ಅಷ್ಟು ಆತುರ ಅವರಲ್ಲಿತ್ತು’ ಎಂದಿದ್ದಾರೆ ಅಮಲಾ ಪೌಲ್. ಸಂದರ್ಶನವೊಂದರಲ್ಲಿ ಮಾತನಾಡುತ್ತ ತಮ್ಮ ಲವ್, ಮದುವೆ ಹಾಗೂ ಮಗುವಿನ ಮಾತನಾಡುತ್ತಾ ನಟಿ ಹೀಗೆ ಹೇಳಿದ್ದಾರೆ.

    ಕನ್ನಡದ ಹೆಬ್ಬುಲಿ ಚಿತ್ರದ ನಟಿ, ಮಲಯಾಳಂ ಬೆಡಗಿ ನಟಿ ಅಮಲಾ ಪೌಲ್  ಇದೀಗ ಸಖತ್ ಸುದ್ದಿಯಾಗುತ್ತಿದ್ದಾರೆ. ಅವರು ತಮ್ಮ ಗಂಡನ ಬಗ್ಗೆ ಹೇಳಿರುವ ಹೇಳಿಕೆ ವೈರಲ್ ಆಗುತ್ತಿದ್ದು, ಸಾಮಾನ್ಯವಾಗಿ ಯಾರೂ ತಮ್ಮ ಗಂಡನ ಬಗ್ಗೆ ಹಾಗೆ ಹೇಳಿಕೊಳ್ಳೋದಿಲ್ಲ! ಅದೇನು ಸಂಗತಿಯೆ ಅಲ್ಲ ಎನ್ನಬಹುದು.

    ಆದರೆ ಅಮಲಾ ಪೌಲ ಹೇಳಿಕೆಯನ್ನು ಕೇಳಿ ಕೆಲವರು ಮುಸಿಮುಸಿ ನಕ್ಕರೆ ಇನ್ನೂ ಕೆಲವರು ‘ಅವೆಲ್ಲವನ್ನೂ ಯಾರಾದ್ರೂ ಮೀಡಿಯಾ ಮುಂದೆ ಹೇಳ್ತಾರಾ?’ ಅಂತ ಅವರಿಗೆ ಬಾಯಿಗೆ ಬಂದಂತೆ ಬೈಯ್ತಿದಾರೆ.
    ಯಾರೋ ಒಬ್ಬರ ಅಮಲಾ ಪೌಲ್ ಮಾತಿಗೆ ‘ಕೆಲವು ಹೆಣ್ಮಕ್ಕಳಿಗೆ ಏನ್ ಹೇಳ್ಬೇಕು ಏನ್ ಹೇಳ್ಬಾರ್ದು ಅಂತಾನೇ ಗೊತ್ತಾಗಲ್ಲ ಗುರುವೇ. ಸ್ಟಾರ್ಸ್ ಅನ್ನೋ ಕಾರಣಕ್ಕೆ ಇವೆಲ್ಲಾ ಹೇಳ್ಕೋಬೇಕಾ? ಛೀ, ಥೂ ಅಸಹ್ಯ’ ಎಂದಿದ್ದಾರೆ. ಕೆಲವರು ಹಣೆ ಚಚ್ಚಿಕೊಳ್ಳುತ್ತಿರುವ ಇಮೋಜಿ ಹಾಕಿದ್ದಾರೆ. ಇನ್ನೂ ಕೆಲವರು ನಿಮ್ಮ ಮೊದಲ ಗಂಡನಾ ಅಥವಾ ಎರಡನೇ ಗಂಡನಾ ಅಷ್ಟು ಆತುರಗಾರ?’ ಎಂದು ಕೇಳಿದ್ದಾರೆ. ಆದರೆ, ಅದಕ್ಕಿನ್ನೂ ಅಮಲಾ ಉತ್ತರ ಕೊಟ್ಟಿರಲಿಕ್ಕಿಲ್ಲ!

    ಮಲಯಾಳಂ ಮೂಲದ ನಟಿ ಅಮಲಾ ಪೌಲ್ ಅವರು ಹೆಚ್ಚಾಗಿ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮಲಾ ನಟಿ ಮಾತ್ರವಲ್ಲದೇ ನಿರ್ಮಾಪಕಿಯೂ ಹೌದು. ಇದೀಗ 33 ವರ್ಷದ ಹೊಸ್ತಿಲಿಗೆ ಕಾಲಿಟ್ಟಿರುವ ಅಮಲಾ ಪೌಲ್ ಅವರು 2014ರಲ್ಲಿ ಎಎಲ್ ವಿಜಯ್ ಎಂಬವರೊಂದಿಗೆ ವಿವಾಹ ಮಾಡಿಕೊಂಡು 2017ರಲ್ಲಿ ಡಿವೋರ್ಸ್ ತೆಗೆದುಕೊಂಡಿದ್ದಾರೆ.

    ಬಳಿಕ, 2023ರಲ್ಲಿ ಜಗತ್ ದೇಸಾಯಿ ಅವರೊಂದಿಗೆ ಮತ್ತೆ ವಿವಾಹ ಮಾಡಿಕೊಂಡಿದ್ದಾರೆ. ಮದುವೆ ಅನ್ನುವುದು ಅವರವರ ವೈಯಕ್ತಿಕ. ಆದರೆ, ಹೀಗೆಲ್ಲಾ ಹೇಳವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

    Continue Reading

    LATEST NEWS

    Trending