Connect with us

  LATEST NEWS

  ನನ್ನದೂ ತಪ್ಪಿದೆ, ಯುವ ಹೇಳಿದ್ದಕ್ಕೆ ನಾನು ಮುಂದುವರೆದೆ…ಸಪ್ತಮಿ ಗೌಡ ಆಡಿಯೋ ವೈರಲ್!?

  Published

  on

  ಬೆಂಗಳೂರು/ ಮಂಗಳೂರು : ಸದ್ಯ ಚಂದನವನದಲ್ಲಿ ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ದಂಪತಿ ವಿಚ್ಛೇದನದ ಬಗ್ಗೆ ಚರ್ಚೆ ನಡೆಯುತ್ತಿದೆ. ಇವರಿಬ್ಬರ ನಡುವೆ ಕಾಂತಾರ ಬೆಡಗಿ ಸಪ್ತಮಿ ಗೌಡ ಅವರ ಹೆಸರೂ ತಳುಕು ಹಾಕಿಕೊಂಡಿರೋದು ಹಳೇ ವಿಚಾರ. ಆದರೆ, ಸಪ್ತಮಿ ಗೌಡ ಅವರದ್ದೂ ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದೆ.

  ಹೌದು, ನಟ ಯುವ ರಾಜ್​ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಬಯಸಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಮಾಧ್ಯಮಗಳ ಮುಂದೆ ಯುವ ಪರ ವಕೀಲರು, ಶ್ರೀದೇವಿ ವಿರುದ್ಧ ಹಲವು ಆರೋಪಗಳನ್ನು ಸಹ ಮಾಡಿದ್ದರು. ವಿಚ್ಛೇದನ ಅರ್ಜಿಯಲ್ಲಿ ಸಹ ಅನೈತಿಕ ಸಂಬಂಧದ ಆರೋಪ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಶ್ರೀದೇವಿ ಸಹ ಯುವ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದರು. ನಟಿ ಸಪ್ತಮಿ ಗೌಡ ಹೆಸರೂ ಈ ವೇಳೆ ಕೇಳಿ ಬಂದಿತ್ತು. ಇದೀಗ ಆಡಿಯೋ ವೈರಲ್ ಆಗಿದ್ದು ಸಂಚಲನ ಮೂಡಿಸಿದೆ.


  ಆಡಿಯೋದಲ್ಲಿ ಏನಿದೆ?

  ವೈರಲ್ ಆಗಿರೋ ಆಡಿಯೋ ಮಹಿಳೆಯೊಬ್ಬರು ಅಳುತ್ತಾ ರೆಕಾರ್ಡ್ ಮಾಡಿದ್ದಾಗಿದ್ದು, ಸಪ್ತಮಿ ಗೌಡ ಅವರ ಧ್ವನಿಯನ್ನು ಹೋಲುತ್ತಿದೆ.
  ‘ಹೌದು ನನ್ನಿಂದ ಹಲವರಿಗೆ ನೋವಾಗಿದೆ. ನನ್ನದು ತಪ್ಪಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ನಾನು ಗುರು (ಯುವ ಮೂಲ ಹೆಸರು) ನಂಬಿ ಮಾಡಿದೆ. ನಿಮ್ಮ ಸೆಟ್ ಅಲ್ಲಿ ಆಗಿದೆ, ಸಾರಿ ಸರ್’ ಎನ್ನಲಾಗಿದೆ. ಈ ಆಡಿಯೋವನ್ನು ಸಪ್ತಮಿ, ವಿಜಯ್ ಕಿರಗಂದೂರು ಅವರಿಗೆ ಕಳಿಸಿದ್ದಾರೆ ಎನ್ನಲಾಗುತ್ತಿದೆ.

  ‘ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರೆದೆ. ಅದು ನಿಮ್ಮ ಸೆಟ್​ನಲ್ಲಿ ಆಯ್ತು, ಆಗಬಾರದಿತ್ತು, ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ, ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ’

  ‘ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೆ, ಇದೆಲ್ಲ ವರ್ಕೌಟ್ ಆಗಲ್ಲ ಎಂದು. ಅಲ್ಲದೆ ನಾನು ಎಂದಿಗೂ ಸಹ ಫ್ಯಾಮಿಲಿ ಬಿಟ್ಟು ಬಾ, ಪತ್ನಿ ಜೊತೆ ಬ್ರೇಕ್ ಅಪ್ ಮಾಡಿಕೊ ಎಂದು ಹೇಳಿಲ್ಲ ಸರ್ ನನ್ನನ್ನು ನಂಬಿ. ಬೇಕಾದರೆ ನನ್ನನ್ನು ಬೈಯ್ಯಿರಿ, ಗುರು (ಯುವ)ಗೆ ಅದು ಮೊದಲ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ನನಗೆ ಗೊತ್ತಿದೆ. ಯಾರಿಗೂ ತೊಂದರೆ ಆಗಬಾರದು ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ’ ಎಂದು ಹೇಳಲಾಗಿದೆ.

  ಶ್ರೀದೇವಿ ಹಾಗೂ ಯುವ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಸಪ್ತಮಿ ಗೌಡ ಯುವ ಜೊತೆ ‘ಯುವ’ ಚಿತ್ರದ ನಾಯಕಿಯಾಗಿ ನಟಿಸಲು ಆಯ್ಕೆ ಆಗಿದ್ದರು. ಈ ವೇಳೆ ಇವರಿಬ್ಬರ ನಡುವೆ ಸಲುಗೆ ಏರ್ಪಟ್ಟಿತ್ತು ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ ‘ಯುವ’ ಸಿನಿಮಾದ ಸೆಟ್​ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತುಗಳು ಸಹ ಈ ಹಿಂದೆ ಕೇಳಿ ಬಂದಿದ್ದವು.

  ಇದನ್ನೂ ಓದಿ : ಒಂಟಿಯಾಗಿ ಸಿಗುವಂತೆ ಹೇಳಿದ್ದ ಖ್ಯಾತ ನಟ : ಸೂರ್ಯವಂಶ ಬೆಡಗಿಯಿಂದ ಆರೋಪ

  ಇದೇ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಪ್ತಮಿ ಹಾಗೂ ಯುವ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿತ್ತು. ಆ ಸಂದರ್ಭದಲ್ಲೇ ಸಪ್ತಮಿ ಗೌಡ, ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಈ ಆಡಿಯೋ ಕಳಿಸಿದ್ದರು ಎನ್ನಲಾಗಿದೆ.

  LATEST NEWS

  ಮುಲ್ಕಿ ಸೀಮೆಯ ಪುಣ್ಯ ಕ್ಷೇತ್ರಕ್ಕೆ ಕೆ.ಎಲ್‌.ರಾಹುಲ್ ಭೇಟಿ..!

  Published

  on

  ಮಂಗಳೂರು : ಕೆಲ ದಿನಗಳ ಹಿಂದೆ ಟಿ20 ವಿಶ್ವಕಪ್‌ ವಿಜೇತ ತಂಡ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಕಾಪು ಮಾರಿಯಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದೀಗ ಭಾರತೀಯ ಕ್ರಿಕೇಟ್ ತಂಡದ ಮತ್ತೊರ್ವ ಸ್ಟಾರ್ ಆಟಗಾರ ಕೆ.ಎಲ್‌.ರಾಹುಲ್ ಮುಲ್ಕಿಯ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

  ಮೂಲತಃ ಮಂಗಳೂರಿನವರೇ ಆಗಿರುವ ಕೆ.ಎಲ್‌.ರಾಹುಲ್ ಭಾರತ ಕ್ರಿಕೇಟ್ ತಂಡದ ಹೆಮ್ಮೆಯ ಆಟಗಾರ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅತಿಯಾ ಶೆಟ್ಟಿಯನ್ನು ವಿವಾಹವಾದ ಬಳಿಕದ ಮುಲ್ಕಿಗೆ ರಾಹುಲ್‌ ಅವರ ಮೊದಲ ಭೇಟಿಯಾಗಿದೆ. ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ರಾಹುಲ್ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಅವರು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ರಾಹುಲ್‌ಗೆ ಪ್ರಸಾದ ನೀಡಿದ್ದಾರೆ.


  ಬಪ್ಪನಾಡು ಕ್ಷೇತ್ರದ ಬಳಿಕ ಮುಲ್ಕಿ ಸೀಮೆಯಲ್ಲೇ ಇರುವ ಮತ್ತೊಂದು ಪುಣ್ಯ ಕ್ಷೇತ್ರ ಶಿಮಂತೂರು ಶ್ರೀ ಆದಿ ಜನಾರ್ಧನ ಕ್ಷೇತ್ರ ಹಾಘೂ ಕಕ್ವಗುತ್ತು ಮೂಲ ನಾಗನ ಕ್ಷೇತ್ರಕ್ಕೆ ಕೆ.ಎಲ್‌ . ರಾಹುಲ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
  ಕೆ.ಎಲ್.ರಾಹುಲ್‌ ಆಗಮಿಸಿರುವ ವಿಚಾರ ತಿಳಿದು ನೂರಾರು ಜನ ಅಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಕ್ಷೇತ್ರದಲ್ಲಿ ಅವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದು, ಅಟೋಗ್ರಾಫ್‌ ಪಡೆದುಕೊಂಡಿದ್ದಾರೆ. ಅಭಿಮಾನಿಗಳ ಜೊತೆ ತುಳುಭಾಷೆಯಲ್ಲೇ ಮಾತನಾಡಿದ ಕೆ.ಎಲ್‌. ರಾಹುಲ್‌ ಅಭಿಮಾನಿಗಳ ಮನಗೆದ್ದಿದ್ದಾರೆ.

  Continue Reading

  DAKSHINA KANNADA

  ಗಾಳಿಗೆ ಹಾರಿದ ಶಾಲೆಯ ಹೆಂಚು..! ರಜಾ ದಿನವಾದ ಕಾರಣ ತಪ್ಪಿದ ಅನಾಹುತ..!

  Published

  on

  ಮಂಗಳೂರು ( ಕಡಬ ) : ಕಡಬ ತಾಲೂಕಿನಲ್ಲಿ ಭಾನುವಾರ ಮದ್ಯಾಹ್ನ ಜೋರಾಗಿ ಬೀಸಿದ ಗಾಳಿಗೆ ಶಾಲೆಯೊಂದರ ಹೆಂಚುಗಳು ಹಾರಿ ಹೋದ ಘಟನೆ ನಡೆದಿದೆ. ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಜಾ ದಿನವಾದ ಕಾರಣ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.


  ಭಾನುವಾರ ಜೋರಾದ ಗಾಳಿಯ ಜೊತೆ ಮಳೆ ಬರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಮದ್ಯಾಹ್ನದ ವೇಳೆಗೆ ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಜೋರಾದ ಗಾಳಿ ಬೀಸಿದೆ. ಇದರ ಪರಿಣಾಮವಾಗಿ ಬಲ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚುಗಳು ಹಾರಿ ಹೋಗಿದೆ. ಒಂದಷ್ಟು ಹೆಂಚುಗಳು ಶಾಲೆಯ ಹೊರಾಂಗಣದಲ್ಲಿ ಬಿದ್ದಿದ್ದರೆ, ಇನ್ನೂ ಕೆಲವು ಹೆಂಚುಗಳು ಶಾಲೆಯ ಕೊಠಡಿಯ ಒಳಗೆ ಬಿದ್ದಿದೆ. ಶಾಲೆಗೆ ಬಹುತೇಕ ಎಲ್ಲಾ ಕೊಠಡಿಯ ಹೆಂಚುಗಳು ಗಾಳಿಗೆ ಹಾರಿ ಹೋಗಿದೆ. ಅದೃಷ್ಟವಶಾತ್ ಭಾನುವಾರವಾದ ಕಾರಣ ಶಾಲೆಯಲ್ಲಿ ಮಕ್ಕಳು ಇರದ ಕಾರಣ ಯಾವುದೇ ಅನಾಹುತ ನಡೆದಿಲ್ಲ.


  ಬೀಸಿದ ಗಾಳಿಗೆ ಶಾಲೆಯ ಹೆಂಚಿನ ಜೊತೆಗೆ ಗ್ರಾಮದ ಕೃಷಿಕರ ಅಡಿಕೆ ತೋಟಕ್ಕೂ ಹಾನಿಯಾಗಿದೆ. ಹಲವು ಅಡಿಕೆ ಮರಗಳು ತುಂಡಾಗಿ ಬಿದ್ದಿದ್ದು, ಕೆಲವೆಡೆ ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಕ್ಕೂ ಕೂಡಾ ಹಾನಿ ಸಂಭವಿಸಿದೆ.
  ಜುಲೈ 15 ಮತ್ತು 16 ರಂದು ಕೂಡಾ ಜೋರಾದ ಗಾಳಿಯ ಜೊತೆ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

  Continue Reading

  DAKSHINA KANNADA

  ನಾಳೆ, ನಾಡಿದ್ದು ದ.ಕ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

  Published

  on

  ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಇಂದು, ನಾಳೆ ಮತ್ತು ನಾಡಿದ್ದು(ಜು.15,16,17) ಈ ಮೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಿಸಿದೆ.

  ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ‌ ಮಟ್ಟ ಹೆಚ್ಚಳ

  ಜುಲೈ 17 ರಿಂದ 19 ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ದಿನವಿಡೀ ಉತ್ತಮ ಮಳೆ ಬಂದಿದೆ. ಮಳೆಯ ಜತೆಗೆ ಬಲವಾದ ಗಾಳಿಯೂ ಬೀಸುತ್ತಿದೆ. ಸಮುದ್ರದಲ್ಲಿ ಅಬ್ಬರದ ಅಲೆಗಳು ಕಂಡು ಬರುತ್ತಿವೆ. ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಬೆಳಗ್ಗೆ ಬೀಸಿದ ಬಲವಾದ ಗಾಳಿಗೆ ಉಳ್ಳಾಲ ತಾಲೂಕಿನ ಕೋಟೆಕಾರು ಬಳಿ ಬೀರಿ- ಪ್ರವಾಸಿ ಬಂಗ್ಲೆ ಕ್ರಾಸ್‌ ಸರ್ವೀಸ್‌ ರಸ್ತೆಯಲ್ಲಿ ಭಾರೀ ಗಾತ್ರದ ಮೇ ಫ್ಲವರ್‌ ಮರವೊಂದು ಉರುಳಿ ಬಿದ್ದ ಘಟನೆ ಸಂಭವಿಸಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆ ಬದಿ ನಿಲ್ಲಿಸಿದ್ದ ಎರಡು ಲಾರಿಗಳ ಮಧ್ಯೆಮರ ಬಿದ್ದ ಕಾರಣ ಅಪಾಯ ತಪ್ಪಿದೆ. ಅಲ್ಲದೆ ಇಂದು ಭಾನುವಾರ ಆಗಿದ್ದ ಕಾರಣ ಈ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರ ಕಡಿಮೆ ಇತ್ತು.

  Continue Reading

  LATEST NEWS

  Trending