BIG BOSS
BBK11: ಗೌತಮಿ, ಮಂಜು, ಮೋಕ್ಷಿತಾ ಸ್ನೇಹದ ನಡುವೆ ಬಿರುಕು ಮೂಡಿದ್ದು ಹೇಗೆ; ಅಸಲಿ ಸತ್ಯ ಬಿಟ್ಟಿಟ್ಟ ಅನುಷಾ ರೈ
Published
2 weeks agoon
By
NEWS DESK2ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 51ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಕಳೆದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಿಂದ ಸ್ಯಾಂಡಲ್ವುಡ್ ನಟಿ ಅನುಷಾ ರೈ ಅವರು ಆಚೆ ಬಂದಿದ್ದರು.
ಬಿಗ್ಬಾಸ್ ಮನೆಯಿಂದ ಆಚೆ ಬಂದ ಕೂಡಲೇ ಬೇಸರಗೊಂಡು ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು. ಇದೀಗ ಬಿಗ್ಬಾಸ್ನಿಂದ ಆಚೆ ಬಂದ ಕೂಡಲೇ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.
ಸಂದರ್ಶನದಲ್ಲಿ ಭಾಗಿಯಾಗಿದ್ದ ಅನುಷಾ ರೈ ಬಿಗ್ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದ ಮೋಕ್ಷಿತಾ, ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಬಗ್ಗೆ ಕೆಲವೊಂದು ವಿಚಾರದ ಬಗ್ಗೆ ಮಾತಾಡಿದ್ದಾರೆ.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದ ಮೋಕ್ಷಿತಾ, ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಆ ಸ್ನೇಹ ಹೆಚ್ಚು ದಿನ ಉಳಿಯಲ್ಲ. ಟಾಸ್ಕ್ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು.
ಹೀಗಾಗಿ ಈ ಗುಂಪಿನಿಂದ ಮೋಕ್ಷಿತಾ ಆಚೆ ಬಂದರು. ಮೊನ್ನೆಯ ಸಂಚಿಕೆಯಲ್ಲೂ ಮೋಕ್ಷಿತಾ, ಐಶ್ವರ್ಯಾ, ಶಿಶಿರ್ ಹಾಗೂ ಅನುಷಾ ರೈ ಜೊತೆ ಈ ವಿಚಾರದ ಬಗ್ಗೆ ಮಾತಾಡಿದ್ದರು. ಈ ಬಗ್ಗೆ ಮಾತಾಡಿದ ಅನುಷಾ ರೈ, ಬಿಗ್ಬಾಸ್ ನಮಗೆ ಟಾಸ್ಕ್ವೊಂದನ್ನು ಕೊಟ್ಟಿರುತ್ತಾರೆ. ಆಗ ಎಲ್ಲ ತಂಡದಲ್ಲೂ 3 ಜನ ಇರುತ್ತಾರೆ. ಆಗ ಮೋಕ್ಷಿತಾ, ಧರ್ಮ ಹಾಗೂ ಚೈತ್ರಾ ಒಂದು ಟೀಮ್ನಲ್ಲಿ ಇರ್ತಾರೆ. ಆಗ ಟಾಸ್ಕ್ ವಿಚಾರಕ್ಕೆ ವಾಶ್ ರೂಮ್ನಲ್ಲಿ ಚರ್ಚೆ ಮಾಡಲು ಹೋಗಿರುತ್ತಾರೆ. ಆಗ ಒಂದು ವಿಚಾರಕ್ಕೆ ಮಂಜಣ್ಣ ಹಾಗೂ ಮೋಕ್ಷಿತಾ ಮಧ್ಯೆ ಬೇಸರ ಆಗುತ್ತೆ ಅಂತ ಹೇಳಿದ್ದಾರೆ.
bangalore
ಎರಡನೇ ಪತ್ನಿಯನ್ನು ಕೊಂ*ದು ಮೂರನೇ ಮದುವೆಗೆ ಸಿದ್ದತೆ ಮಾಡುತ್ತಿದ್ದವನಿಗೆ ಪೊಲೀಸರ ಶಾಕ್ !
Published
11 hours agoon
05/12/2024By
NEWS DESK3ಮಂಗಳೂರು/ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ಮಾಡುತ್ತಿದ್ದ ಆರೋಪಿಯು ಪತ್ನಿಯನ್ನು ಕೊ*ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಅನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.
ಈ ಘಟನೆ ಕಳೆದ ತಿಂಗಳು ನಡೆದಿದ್ದು, ಸರ್ಜಾಪುರ ಪೊಲೀಸರ ಕಾರ್ಯಾಚರಣೆಯಿಂದ ಪತ್ನಿಯನ್ನು ಕೊಂ*ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಿಹಾರ ಮೂಲದ ಮಹಮ್ಮದ್ ನಸೀಮ್ (39) ಬಂಧಿತ ಆರೋಪಿಯಾಗಿದ್ದು, ಬಿಹಾರ ಮೂಲದ ರುಮೇಶ್ ಖಾತುನ್ (22) ಕೊ*ಲೆಯಾದ ಮಹಿಳೆಯಾಗಿದ್ದಾಳೆ.
ಇದನ್ನೂ ಓದಿ: ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !
ಕೊಲೆ ಮಾಡಿದ ಬಳಿಕ ಆರೋಪಿ, ಪತ್ನಿಯ ಶ*ವವನ್ನು ವಿವಸ್ತ್ರಗೊಳಿಸಿ ಹಗ್ಗದಿಂದ ಕೈ ಕಾಲು ಕಟ್ಟಿ ಯಾರಿಗೂ ಅನುಮಾನ ಬಾರದಂತೆ ಚರಂಡಿಗೆ ಎಸೆದು ಬಿಹಾರಕ್ಕೆ ಎಸ್ಕೇಪ್ ಆಗಿದ್ದನು. ಶವ ಕೊಳೆತು ದುರ್ವಾಸನೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಕೊಲೆ ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ತನಿಖೆ ಮುಂದುವರಿಸಿದರು. ಆರೋಪಿಯ ಜಾಡು ಹಿಡಿದು ಬಿಹಾರಕ್ಕೆ ತೆರಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಆರೋಪಿ ಮಹಮ್ಮದ್ ನಸೀಮ್ ಮೂರನೇ ಮದುವೆ ಸಂಭ್ರಮದಲ್ಲಿದ್ದ. ಪೊಲೀಸರು ಮದುವೆ ಮನೆಯಲ್ಲಿಯೇ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
BIG BOSS
BBK11: ಮೋಕ್ಷಿತಾಗೆ ಬಿಗ್ಬಾಸ್ ನೇರ ಎಚ್ಚರಿಕೆ; ಇವತ್ತು ಮನೆಯಿಂದ ಆಚೆ ಕಳಿಸಿಬಿಡ್ತಾರಾ?
Published
16 hours agoon
05/12/2024By
NEWS DESK2ಬಿಗ್ಬಾಸ್ ಸಾಮ್ರಾಜ್ಯದ ಮಹಾರಾಜ-ಯುವರಾಣಿ ನಡುವಿನ ಕಿತ್ತಾಟದ ಮುನಿಸು ಈ ವಾರವೂ ಕಂಟಿನ್ಯೂ ಆಗಿದೆ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಮೋಕ್ಷಿತಾ, ಗೌತಮಿ ಮೇಲೆ ಜಿದ್ದಿಗೆ ಬಿದ್ದಿದ್ದಾರೆ. ಇದನ್ನು ಮನಗಂಡಿರುವ ಬಿಗ್ಬಾಸ್, ಮೋಕ್ಷಿತಾಗೆ ಕಡೆಯ ಎಚ್ಚರಿಕೆ ನೀಡಿದ್ದಾರೆ.
ಏನಿದು ಕತೆ..?
ಅಂದ್ಹಾಗೆ ಬಿಗ್ಬಾಸ್ ಮನೆಯಲ್ಲಿ ಇದೀಗ ಮುಂದಿನ ವಾರಕ್ಕೆ ನಾಯಕನ ಆಯ್ಕೆಯ ಟಾಸ್ಕ್ಗಳು ಶುರುವಾಗಿದೆ. ಬಿಗ್ಬಾಸ್ ನೀಡಿರುವ ಟಾಸ್ಕ್ಗಳಲ್ಲಿ ಯಶಸ್ವಿ ಆಗಿರುವ ಕೆಲವು ಸದಸ್ಯರು ಕ್ಯಾಪ್ಟನ್ ಆಗಲು ಅರ್ಹತೆ ಪಡೆದುಕೊಂಡಿದ್ದಾರೆ. ಅವರಲ್ಲಿ ಮೋಕ್ಷಿತಾ ಕೂಡ ಒಬ್ಬರು.
ಅಂತೆಯೇ ಈ ವಾರ ನಾಯಕನ ಆಯ್ಕೆ ಸಂಬಂಧ ಬಿಗ್ಬಾಸ್ ಟಾಸ್ಕ್ ನೀಡಿದ್ದಾರೆ. ನಿಯಮದಂತೆ, ಕ್ಯಾಪ್ಟನ್ಸಿ ಓಟದಲ್ಲಿರುವ ಅಭ್ಯರ್ಥಿಗಳು ತಮ್ಮ ಸಹಾಯಕ್ಕಾಗಿ ಉಳಿದ ಸದಸ್ಯರು ಆಡುವಂತೆ ಮನವೊಲಿಸಬೇಕು ಎಂದಾಗಿರುತ್ತದೆ. ಅದರಂತೆ ಕ್ಯಾಪ್ಟನ್ಸಿ ಅಭ್ಯರ್ಥಿ ಹನುಮಂತ ಕೆಲವು ಸ್ಪರ್ಧಿಗಳ ಜೊತೆ ಮನವಿ ಮಾಡಿಕೊಂಡಿದ್ದಾರೆ.
ಆದರೆ, ಮೋಕ್ಷಿತಾ ಅವರು ಗೌತಮಿಯನ್ನು ಮನವೊಲಿಸಲು ಒಪ್ಪಿಕೊಳ್ಳುವುದಿಲ್ಲ. ಬಿಗ್ಬಾಸ್ ಟಾಸ್ಕ್ನ ನಿಯಮ ಘೋಷಣೆ ಮಾಡ್ತಿದ್ದಂತೆಯೇ, ನಾನು ಗೌತಮಿ ಹತ್ತಿರ ಕೇಳಲ್ಲ. ಅವರಿಂದ ನಾನು ಕ್ಯಾಪ್ಟನ್ ಆಗಬೇಕು ಅಂತಿದ್ದರೆ ನಾನು ಆಡೋದೇ ಇಲ್ಲ. ನನಗೆ ಆತ್ಮ ಗೌರವದ ಮುಂದೆ ಯಾವುದೂ ದೊಡ್ಡದಲ್ಲ. ನನ್ನ ಕಳಿಸಿದ್ರೆ ನಾಳೆಯೇ ಹೋಗ್ತೇನೆ ಎಂದಿದ್ದಾರೆ.
ಅದಕ್ಕೆ ಬಿಗ್ಬಾಸ್ ಮೋಕ್ಷಿತಾಗೆ ಎಚ್ಚರಿಕೆ ನೀಡಿದ್ದು, ದೊಡ್ಡ ದೊಡ್ಡ ನಿರ್ಧಾರದ ಜೊತೆಗೆ ಅದಕ್ಕೆ ತಕ್ಕಂತೆ ಬೆಲೆನೂ ಕಟ್ಟಬೇಕಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಬೆನ್ನಲ್ಲೇ ಮೋಕ್ಷಿತಾ ವಿರುದ್ಧ ಬಿಗ್ಬಾಸ್ ಯಾವ ರೀತಿಯ ಕ್ರಮ ತೆಗೆದುಕೊಳ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಅವರನ್ನ ಇವತ್ತೇ ಮನೆಯಿಂದ ಆಚೆ ಕಳುಹಿಸುತ್ತಾರಾ ಎಂಬ ಅನುಮಾನ ಕೂಡ ಶುರುವಾಗಿದೆ. ಇನ್ನು ಬಿಗ್ಬಾಸ್ ಘೋಷಣೆ ಬೆನ್ನಲ್ಲೇ, ಗೌತಮಿ ಜಾಧವ್ ಹಾಗೂ ತ್ರಿವಿಕ್ರಮ್ ನಕ್ಕಿದ್ದಾರೆ. ಮಂಜು ಅವರು ಚಪ್ಪಾಳೆ ತಟ್ಟಿದ್ದಾರೆ.
ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ ರೋಚಕ ಘಟ್ಟ ತಲುಪುತ್ತಿದೆ.
ಈಗಾಗೀ ಸ್ಪರ್ಧಿಗಳ ನಡುವೆ ಸದ್ಯ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಗಳಾಗಿ ಪರಿವರ್ತನೆ ಆಗಿದೆ. ಎರಡು ವಾಹಿನಿಗಳ ಉದ್ಯೋಗಿಗಳು ಎದುರಾಳಿಗಳಿಗೆ ಟಕ್ಕರ್ ನೀಡುವ, ಕಾಲೆಳೆಯುವ ಟಾಸ್ಕ್ ಜೋರಾಗಿ ನಡೆಯುತ್ತಿದೆ.
ಇದರ ನಡುವೆ ದೊಡ್ಮನೆಯಲ್ಲಿ ನಾಮಿನೇಷನ್ ಕಾವು ಜೋರಾಗಿದೆ. ಬಿಗ್ ಬಾಸ್ ಇಂದು ನಾಮಿನೇಷನ್ ಗೆ ಸಂಬಂಧಿಸಿದ ಟಾಸ್ಕ್ ನೀಡಿದ್ದಾರೆ. ಈ ಸಲದ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿದ್ದು, ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ, ಬೆನ್ನಿಗೆ ಚೂರಿಯನ್ನು ಚುಚ್ಚಬೇಕು ಎಂಬ ಟಾಸ್ಕ್ ನೀಡಲಾಗಿದೆ.
ಇದನ್ನೂ ಓದಿ: ಮುಖ್ಯಶಿಕ್ಷಕನಿಂದಲೇ ಬ*ಲತ್ಕಾರಕ್ಕೊಳಗಾದ 5ನೇ ತರಗತಿ ವಿದ್ಯಾರ್ಥಿನಿ !
ಈ ಟಾಸ್ಕ್ ನಲ್ಲಿ ಎಲ್ಲಾ ಸ್ಪರ್ಧಿಗಳು ಮಂಜು ಬೆನ್ನಿಗೆ ಚುರಿ ಚುಚ್ಚಿದ್ದಾರೆ. ಎಂಟು ಮಂದಿ ಸ್ಪರ್ಧಿಗಳ ಚೂರಿಗಳು ಮಂಜು ಬೆನ್ನಿಗೆ ಬಿದ್ದಿದೆ. ಮಂಜು ಅವರಿಗೆ ಐಶ್ವರ್ಯ ಚೂರಿ ಚುಚ್ಚುವ ವೇಳೆ ನೀಡಿರುವ ಕಾರಣ, ಮಂಜು ಅವರನ್ನು ಕೆರಳಿಸುವಂತೆ ಮಾಡಿದೆ.
ಇಬ್ಬರು ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ನೀವು ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ನೋಡಿದ್ರೆ, ನಾನು ಕುಗ್ಗುವಂತಹ ಮಗಳೇ ಅಲ್ಲ. ಅದು ಏನೇನು ಚುಚ್ಚಿ ಮಾತನಾಡ್ತಿರೋ ಆಡಿ ಎಂದು ಐಶ್ವರ್ಯ ಸವಾಲ್ ಹಾಕಿದ್ದಾರೆ.
ಅದಕ್ಕೆ ಮಂಜು ಅವರು ಯಾವ ರೀತಿ ಕೌಂಟರ್ ನೀಡುತ್ತಾರೆ ? ಅದು ಅಲ್ಲದೆ ಇವರಿಬ್ಬರ ನಡುವೆ ಬೆಂಕಿ ಹೊತ್ತಿಕೊಳ್ಳಲು ನಿಜವಾದ ಕಾರಣ ಏನು ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.