Connect with us

    LATEST NEWS

    ರ‌್ಯಾಗಿಂಗ್ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆ ಎಸ್ ಎಫ್ ಐ ಪೊಲೀಸ್ ಆಯುಕ್ತರಿಗೆ ಮನವಿ..!

    Published

    on

    ರ‌್ಯಾಗಿಂಗ್ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆ ಎಸ್ ಎಫ್ ಐ ಪೊಲೀಸ್ ಆಯುಕ್ತರಿಗೆ ಮನವಿ.!

    SFI requests police commissioners to create awareness among students on ragging!

    ಮಂಗಳೂರು: ಇತ್ತೀಚೆಗೆ ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ರ‌್ಯಾಗಿಂಗ್ ಪ್ರಕರಣ ದಾಖಲಾಗಿದ್ದು, ರ‌್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳ ಬಂಧನವಾಗಿದೆ.ಈ ರ‌್ಯಾಗಿಂಗ್ ಪ್ರಕರಣವು ಜಿಲ್ಲಾಡಳಿತ ಹಾಗೂ ರ‌್ಯಾಗಿಂಗ್ ನಡೆಸುವ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಕರೆಗಂಟೆ ನೀಡಿದೆಯಾದರೂ, ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

    ಹೊರ ರಾಜ್ಯ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ನಗರದ ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಾರೆ.

    ಈ ವಿದ್ಯಾರ್ಥಿಗಳು ತಮ್ಮ ಹೆತ್ತವರಿಂದ ದೂರವಿದ್ದು ನಗರದಲ್ಲೇ ಹಾಸ್ಟೆಲ್ಗಳಲ್ಲಿ ನೆಲೆಸಿ ವಿದ್ಯಾರ್ಜನೆ ಮಾಡುತ್ತಾರೆ. ರ‌್ಯಾಗಿಂಗ್ ಪ್ರಕರಣವು ಇಂತಹ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಭಯದ ವಾತಾವರಣ ನಿರ್ಮಿಸಿದೆ.

    ಜಿ‌ಲ್ಲೆಯ ಹಲವು ಶಾಲಾ-ಕಾಲೇಜುಗಳಲ್ಲಿ ರ‌್ಯಾಗಿಂಗ್ ಮುಕ್ತ ಸಮಿತಿಯಿದೆಯಾದರೂ ಕೇವಲ ಹೆಸರಿಗೆ ಮಾತ್ರ ಇರುವಂತಾಗಿದೆ. ಇನ್ನೂ ಕೆಲವು ಶಾಲಾ-ಕಾಲೇಜುಗಳಲ್ಲಿ ರ‌್ಯಾಗಿಂಗ್ ಮುಕ್ತ ಸಮಿತಿಯೇ ರಚನೆಯಾಗಿಲ್ಲ.

    ವಿದ್ಯಾಸಂಸ್ಥೆಗಳಲ್ಲಿ ರ‌್ಯಾಗಿಂಗ್ ಮೊದಲಾದ ವಿದ್ಯಾರ್ಥಿ ವಿರೋಧಿ ಚಟುವಟಿಕೆಗಳು ನಡೆಯದಂತೆ ಸಮಿತಿಯನ್ನು ರಚಿಸಿ ಕಾರ್ಯನಿರ್ವಹಿಸಬೇಕಾಗಿದೆ.

    ಯಾವುದೇ ವಿದ್ಯಾರ್ಥಿಗಳು ಕಿರುಕುಳವನ್ನು ಎದುರಿಸುತ್ತಿದ್ದರೆ ಆತಂಕಕ್ಕೆ ಒಳಪಡದೆ, ತಮ್ಮ ವಿದ್ಯಾಸಂಸ್ಥೆಯ ಸಂಬಂಧ ಪಟ್ಟ ಸಮಿತಿಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ದೈರ್ಯ ತುಂಬುವಂಥಹ ಕಾರ್ಯವನ್ನು ಸಮಿತಿಯು ನಿರ್ವಹಿಸಬೇಕು. ವಿದ್ಯಾರ್ಥಿಗಳ ನಡುವೆ ಭಯಮುಕ್ತ ವಾತಾವರಣ ಸೃಷ್ಟಿಸುವಲ್ಲಿ ವಿದ್ಯಾಸಂಸ್ಥೆಯು ಬದ್ಧರಾಗಿರಬೇಕು.

    ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಹಾಗೂ ಹಾಸ್ಟೇಲುಗಳಲ್ಲಿ ರ‌್ಯಾಗಿಂಗ್ ತಡೆ ಸಮಿತಿಯನ್ನು ರಚಿಸಿ ರ‌್ಯಾಗಿಂಗ್ ಹಾಗೂ ವಿದ್ಯಾರ್ಥಿ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಕಾರ್ಯ ಪ್ರವೃತ್ತರಾಗಬೇಕು.

    ಶಾಲಾ-ಕಾಲೇಜುಗಳಲ್ಲಿ ಈ ಸಮಿತಿ ರಚಿಸಲಾಗಿದೆಯೇ ಹಾಗೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಬೇಕು.

    ಹಾಗೆಯೇ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಪೊಲೀಸ್‌ ಇಲಾಖೆಯು ರ‌್ಯಾಗಿಂಗ್ ಮುಕ್ತ ಅಭಿಯಾನವನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿ, ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ, ರೂಪಾ ಜೆ. ಎಂ. ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್, ಜಿಲ್ಲಾ ಪದಾಧಿಕಾರಿಗಳಾದ ಸಿನಾನ್ ಬೆಂಗ್ರೆ, ಶಮಾಝ್ ಕೆ. ಸಿ. ರೋಡ್, ಜಿಲ್ಲಾ ನಾಯಕರಾದ ತಿಲಕ್ ಕುತ್ತಾರ್, ವಿನೀತ್ ದೇವಾಡಿಗ, ಸಲೋನಿ ಬೋಳಾರ್, ಸಫ್ವಾನ್ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    Baindooru

    ಬಿಗ್ ಬಾಸ್ ಗೆ ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹಿಂದೂ ಫೈರ್ ಬ್ರಾಂಡ್ ಚೈತ್ರಾ

    Published

    on

    ಮಂಗಳೂರು : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರೋ ಈ ಶೋಗೆ ಸ್ಪರ್ಧಿಗಳು ಯಾರಾಗ್ತಾರೆ ಅನ್ನೋದು ಕುತೂಹಲವೇ ಹೆಚ್ಚು. ಈ ಬಾರಿ ಅಂದ್ರೆ ಸೀಸನ್ 11 ರ ಸ್ಪರ್ಧಿಗಳು ಯಾರು ಅನ್ನೋ ‘ರಾಜ ರಾಣಿ’ ರಿಯಾಲಿಟಿ ಶೋ ನ ಗ್ರ್ಯಾಂಡ್ ಫಿನಾಲೇಲಿ ರಿವೀಲ್ ಆಗುತ್ತಿದೆ.

    ಎಂಟ್ರಿ ಕೊಟ್ಟ ಚೈತ್ರಾ!

    ಮೊದಲ ಸ್ಪರ್ಧಿಯಾಗಿ ‘ಸತ್ಯ’ ಧಾರಾವಾಹಿ ನಟಿ ಗೌತಮಿ ಜಾಧವ್, 2ನೇ ಸ್ಪರ್ಧಿಯಾಗಿ ಲಾಯರ್ ಜಗದೀಶ್‌ ಬಿಗ್ ಬಾಸ್ ಮನೆ ಸೇರುತ್ತಿದ್ದು, ಇನ್ನೂ 3ನೇ ಸ್ಪರ್ಧಿಯಾಗಿ ‘ಬಿಗ್ ಬಾಸ್‌’ ಮನೆಯೊಳಗೆ ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಚೈತ್ರಾ ಎಂಟ್ರಿ ಕೊಟ್ಟಿದ್ದಾರೆ.
    ಖಡಕ್‌ ಮಾತುಗಳಿಂದಲೇ, ಹಿಂದುತ್ವದ ಹೆಸರಿನಲ್ಲಿ ಭಾಷಣ ಮಾಡಿ, ತಮ್ಮದೇ ಆದ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಚೈತ್ರಾ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
    ಅಲ್ಲದೇ, ಖಾಸಗಿ ವಾಹಿನಿ, ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವೂ ಇದೆ.

    ಇದನ್ನು ಓದಿ: ನಟಿ ಸುಕೃತಾ ನಾಗ್ ಸಿಲ್ಕ್ ಸೀರೆಯಲ್ಲಿ ಮಿಂಚಿಂಗ್… ಬಿಗ್ ಬಾಸ್ ಗೆ ಸ್ವಾಗತ ಅಂತಿದ್ದಾರೆ ಜನ!

    ವಂಚನೆ ಪ್ರಕರಣ:
    ಪ್ರಖರ ಭಾಷಣಗಳ ಮೂಲಕ ಗಮನ ಸೆಳೆದಿದ್ದ ಚೈತ್ರಾ ಕಾಂಟ್ರವರ್ಸಿಗಳ ಮೂಲಕವೂ ಸದ್ದು ಮಾಡಿದ್ದಾರೆ. ಅಲ್ಲದೇ, ಬಿಜೆಪಿ ಟಿಕೆಟ್ ಕೊಡುವ ವಿಚಾರದಲ್ಲಿ ಬೈಂದೂರಿನ ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪದಡಿ ಜೈಲು ಪಾಲಾಗಿದ್ದರು.
    ಸದ್ಯ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿರುವ ಚೈತ್ರಾ ಅಲ್ಲಿ ಹೇಗಿರ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.

    Continue Reading

    DAKSHINA KANNADA

    ಮೈಸೂರು ದಸರಾದಲ್ಲಿ ತುತ್ತೂರಿ ಬ್ಯಾನ್

    Published

    on

    ಮಂಗಳೂರು/ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದೆ. ಜಂಬೂ ಸವಾರಿ ನೋಡಲು ಜನರು ಕಾಯುತ್ತಿದ್ದಾರೆ. ಈ ಹಿಂದೆ ದಸರಾ ಆನೆಗಳೊಂದಿಗೆ ಫೋಟೋ, ರೀಲ್ಸ್ ಗೆ ಸರ್ಕಾರ ಬ್ರೇಕ್ ಹಾಕಿತ್ತು. ಈಗ ತತ್ತೂರಿ ಬ್ಯಾನ್ ಮಾಡಲಾಗಿದೆ.

    ತುತ್ತೂರಿ ಬ್ಯಾನ್ ಮಾಡುವಂತೆ ಸೂಚಿಸಿ ಮೈಸೂರು ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ತುತ್ತೂರಿ ಕಿರಿಕಿರಿ ಉಂಟುಮಾಡುವ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ.

    ಕರ್ನಾಟಕ ಪೊಲೀಸ್ ಕಾಯ್ದೆ 1963, ಕಲಂ 35, 36 ಮತ್ತು 92 (Q) ಅಡಿ ವುವುಜೆಲಾ (ತುತ್ತೂರಿ) ಮಾರಾಟ ಮಾಡುವುದು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963 ಸೆಕ್ಷನ್ 92 (Q) ಪ್ರಕಾರ ಹಾಗೂ ಭಾರತೀಯ ನ್ಯಾಯ ಸಂಹಿತೆ-2023 ಸೆಕ್ಷನ್ 270ರಲ್ಲಿ ಸಾರ್ವಜನಿಕ ಉಪದ್ರವವನ್ನು ಅಪರಾಧವೆಂದು ಪರಿಗಣಿಸಿದ್ದು, ಸಾರ್ವಜನಿಕ ಆರೋಗ್ಯ, ಸುರಕ್ಷತೆ, ನೈತಿಕತೆಗೆ ಕಿರಿಕಿರಿ ಉಂಟುಮಾಡುತ್ತದೆ ಎಂದು ಪರಿಗಣಿಸಲಾಗಿದೆ.

    ಇದನ್ನೂ ಓದಿ : ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗೆ ಬಾಂ*ಬ್ ಬೆದರಿಕೆ ಇ-ಮೇಲ್

    ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈ ಘಟಕದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    Continue Reading

    LATEST NEWS

    ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 3 ಮೃ*ತ್ಯು, 7 ಗಾ*ಯ

    Published

    on

    ಮಂಗಳೂರು/ಹರಿಯಾಣ: ಹರಿಯಾಣದ ಸೋನಿಪತ್‌ನಲ್ಲಿ ಇಂದು (ಸೆ.28) ಬೆಳಿಗ್ಗೆ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋ*ಟವು ಸಂಭವಿಸಿದ್ದು, 3 ಜನರ ಮೃ*ತ್ಯು ಹಾಗೂ 7 ಮಂದಿಗೆ ಗಂ*ಭೀರ ಗಾಯವಾಗಿದೆ.


    ವೇದ್ ಎಂಬುವವರ ಮನೆಯಲ್ಲಿ ಪಟಾಕಿಗಳನ್ನು ತಯಾರಿಸುತ್ತಿದ್ದು, ಮನೆಯಲ್ಲಿ ಸಂಗ್ರಹಿಸಿದ ರಾಸಾಯನಿಕಗಳಿಂದ ಬೆಂ*ಕಿ ಅವ*ಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
    ಮೂವರ ದೇಹವು ಛಿಧ್ರ*ವಾಗಿದ್ದು, ಗಾ*ಯಾಳುಗಳನ್ನು ಆಸ್ಪತ್ರೆಗೆ ಚಿಕಿ*ತ್ಸೆಗಾಗಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಪಟಾಕಿ ಕಾರ್ಖಾನೆ ನಡೆಸುತ್ತಿದ್ದ ವೇದ್ ಪರಾರಿಯಾಗಿದ್ದಾನೆ. ಈ ಕುರಿತು ಸೋನಿಪತ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending