Friday, August 12, 2022

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 60ರ ವೃದ್ಧನಿಗೆ 20 ವರ್ಷ ಜೈಲು

ಕಾರವಾರ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಂಧನಕ್ಕೊಳಗಾಗಿದ್ದ 60 ವರ್ಷದ ಮುದುಕನಿಗೆ ಕಾರವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತ್ವರಿತ ವಿಚಾರಣೆಯ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಹಾಗೂ 1. 20 ಲಕ್ಷ ರೂ ದಂಡ ವಿಧಿಸಿದೆ.


ಮುಂಡಗೋಡದ ಓರಲಗಿಯ ಶಿವಾನಂದ ಗೌಳೇರ (60 ವರ್ಷ) ಶಿಕ್ಷೆಗೊಳಗಾದ ಅಪರಾಧಿ. ಈತ ಬಾಲಕಿಯನ್ನು ಮನೆ ಹಾಗೂ ಹೊಲಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ 2021ರ ಸೆ. 16 ರಂದು ಪೋಕ್ಸೊ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಸಿಪಿಐ ಸಿದ್ದಪ್ಪ ಸಿಮಾನಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಅದರಂತೆ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಧೀಶರಾದ ಶಿವಾಜಿ ನಲವಾಡೆ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸಂತ್ರಸ್ತೆ ಪರವಾಗಿ ಸರ್ಕಾರಿ ಅಭಿಯೋಜಕ ಶುಭಾ.ಆರ್ ಗಾಂವಕರ್ ವಾದಿಸಿದ್ದರು.

LEAVE A REPLY

Please enter your comment!
Please enter your name here

Hot Topics

ಆದಾಯಕ್ಕಿಂತ ಅಧಿಕ ಆಸ್ತಿ: ಮಂಗಳೂರು ಮೂಲದ ಸರ್ಕಾರಿ ಅಧಿಕಾರಿಗೆ 3 ವರ್ಷ ಜೈಲು, 50 ಲಕ್ಷ ದಂಡ

ಮಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಗಳಿಸಿದ್ದ ಚಿಕ್ಕಮಗಳೂರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರ ಮೇಲಿನ ಆರೋಪಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು3 ವರ್ಷ 6...

ಸಂಸದ ಡಾ. ಡಿ.ವಿ ಹೆಗ್ಗಡೆಯವರ ನೂತನ ಕಾರ್ಯಾಲಯ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಕ್ಷೇತ್ರದ ಧರ್ಮಾಧಿಕಾರಿಗಳು ಆಗಿರುವ ಹಾಗು ರಾಜ್ಯ ಸಭೆಯ ಸಂಸದರಾಗಿ ಆಯ್ಕೆಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೂತನ 'ಸಂಸದರ ಕಾರ್ಯಾಲಯ'ವು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದ ಬಳಿ ಉದ್ಘಾಟನೆಗೊಂಡಿತು.ಸ್ಥಳೀಯ...

‘ಕಾಡು ಕುದುರೆ ಓಡಿ ಬಂದಿತ್ತಾ’ ಖ್ಯಾತಿಯ ಸುಬ್ಬಣ್ಣ ಇನ್ನಿಲ್ಲ

ಬೆಂಗಳೂರು: ಖ್ಯಾತ ಹಾಡುಗಾರ, ವಕೀಲ ಶಿವಮೊಗ್ಗದ ಸುಬ್ಬಣ್ಣ ಅವರು ಅನಾರೋಗ್ಯದಿಂದ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಅವರಿಗೆ 83 ವರ್ಷ ವಯಸ್ಸಾಗಿತ್ತು. 'ಕಾಡುಕುದುರೆ' ಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು, ವಕೀಲೆ ವೃತ್ತಿಯನ್ನೂ ಮಾಡುತ್ತಿದ್ದರು....