DAKSHINA KANNADA
ನೆಹರು ಮೈದಾನಕ್ಕೆ ಕೇಂದ್ರ ಮೈದಾನ ಎನ್ನುವುದು ಸಂಘಪರಿವಾರದ ಇತಿಹಾಸ ತಿರುಚಿದ ಮುಂದುವರಿದ ಭಾಗ : SDPI
Published
2 years agoon
By
Adminಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಸಂಘಪರಿವಾರದ ವಿವಿಧ ಸಂಘಟನೆಗಳು ಮಂಗಳೂರಿನ ಐತಿಹಾಸಿಕ ನೆಹರು ಮೈದಾನದ ಹೆಸರನ್ನು ಕೇಂದ್ರ ಮೈದಾನ ಎಂದು ಉಲ್ಲೇಖಿಸುತ್ತಿದ್ದರು.
ಇದೀಗ ಕರ್ನಾಟಕ ಸಾಹಿತ್ಯ ಅಕಾಡಮಿ ಇತ್ತೀಚೆಗೆ ಹೊರ ತಂದಿರುವ ಸ್ವಾತಂತ್ರ್ಯ ಹೋರಾಟದ ಕರ್ನಾಟಕ ಕೇಂದ್ರ ಮೈದಾನ ಎಂಬ ಪುಸ್ತಕದಲ್ಲಿ ಮಂಗಳೂರಿನ ನೆಹರೂ ಮೈದಾನವನ್ನು ಕೇಂದ್ರ ಮೈದಾನ ಎಂದು ಉಲ್ಲೇಖಿಸಿರುವುದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರಿಗೆ ಮಾಡಿದ ಅವಮಾನವಾಗಿದೆ. ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಹಲವಾರು ದಶಕಗಳಿಂದ ಸಂಘಪರಿವಾರ ಪಠ್ಯ ಪುಸ್ತಕದ ಮೂಲಕ, ಮಾಧ್ಯಮದ ಮೂಲಕ ನಿರಂತರವಾಗಿ ಇತಿಹಾಸವನ್ನು ತಿರುಚಿ ನೈಜ ಹೋರಾಟಗಾರರಿಗೆ ಅವಮಾನ ಮಾಡಿ ಬ್ರಿಟೀಷರಿಗೆ ಕ್ಷಮಾಪನೆ ಪತ್ರ ಬರೆದ ಹೇಡಿಗಳನ್ನು ದೇಶ ಪ್ರೇಮಿಗಳೆಂದು ಚಿತ್ರೀಕರಿಸುತ್ತಿದ್ದಾರೆ.
ಇದರ ಮುಂದುವರಿದ ಭಾಗವಾಗಿ ಇದೀಗ ಮಂಗಳೂರಿನ ನೆಹರೂ ಮೈದಾನವನ್ನು ಕೇಂದ್ರ ಮೈದಾನ ಎಂದು ಸರಕಾರದ ಕರ್ನಾಟಕ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಉಲ್ಲೇಖಿಸಿರುವುದು ಅಕ್ಷಮ್ಯ ಅಪರಾಧವಾಗಿದೆ.
ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲಿ ಹಲವಾರು ಸಭೆ ಸಮಾರಂಭಗಳಿಗೆ ಸಾಕ್ಷಿಯಾದ ಮಂಗಳೂರಿನ ಹೃದಯ ಭಾಗದಲ್ಲಿರುವ ಈ ಮೈಧಾನಕ್ಕೆ 1960 ರಲ್ಲಿ ನೆಹರು ಮೈದಾನ ಎಂದು ನಾಮಕರಣ ಮಾಡಲಾಗಿತ್ತು. 2016 ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಈ ಮೈದಾನದಲ್ಲಿ ನೆಹರೂರವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಸರಕಾರಿ ಕಾರ‍್ಯಕ್ರಮ ಸೇರಿದಂತೆ ಹಲವಾರು ಸಾಮಾಜಿಕ ಸಮಾರಂಭಗಳು ನಡೆಯುತ್ತಿದ್ದ ಮೈದಾನಕ್ಕೆ ಇದೀಗ ಸರಕಾರದ ಅದಿಕೃತ ಇಲಾಖೆಯ ಹೊರ ತಂದಿರುವ ಪುಸ್ತಕದಲ್ಲಿ ಕೇಂದ್ರ ಮೈದಾನ ಎಂದು ಉಲ್ಲೇಖಿಸಿರುವ ಉದ್ದೇಶ ಏನು ಎಂಬುದನ್ನು ಕನ್ನಡ, ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ರವರು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು.
ಇತಿಹಾಸ ಅರಿಯದವರು ಇತಿಹಾಸ ನಿರ್ಮಿಸಲಾರರು ಎಂಬ ಅಂಬೇಡ್ಕರ್‌ರವರ ಮಾತಿನಂತೆ ಯಾವುದೇ ಇತಿಹಾಸ ಅರಿಯದ ಇತಿಹಾಸದ ಯಾವುದೇ ಚಳುವಳಿಗಲ್ಲಿ ಬಾಗಿಯಾಗದ ಬಿಜೆಪಿಗರು ಇಂದು ಇತಿಹಾಸವನ್ನು ತಿರುಚುವ ಮೂಲಕ ನಾಡಿನ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೂಡಲೇ ಕೇಂದ್ರ ಮೈದಾನದ ಬದಲು ನೆಹರು ಮೈದಾನ ಎಂದು ಹೆಸರು ಬದಲಾಯಿಸಿ ಪುಸ್ತಕದ ಹೊಸ ಮುದ್ರಣವನ್ನು ಪ್ರಕಟಿಸಬೇಕು ಇಲ್ಲದಿದ್ದರೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಎಸ್‌ಡಿಪಿಐ ಹೋರಾಟ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
DAKSHINA KANNADA
‘ಕಾಂತಾರ ಚಾಪ್ಟರ್ – 1’ ಗೆ ವಿ*ಘ್ನ; ಬಸ್ ಪ*ಲ್ಟಿಯಾಗಿ 6 ಮಂದಿ ಗಂ*ಭೀರ !
Published
3 hours agoon
25/11/2024ಉಡುಪಿ : ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಕಲಾವಿದರಿದ್ದ ಬಸ್ ಪ*ಲ್ಟಿಯಾಗಿದ್ದು, ಆರು ಮಂದಿ ಗಂ*ಭೀರ ಗಾ*ಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಮುದೂರಿನಲ್ಲಿ ನಡೆದಿದೆ.
ಕರಾವಳಿ ಭಾಗದ ಬೇರೆ ಬೇರೆ ಕಡೆಗಳಲ್ಲಿ ‘ಕಾಂತಾರ ಚಾಪ್ಟರ್ 1’ ಸಿನಿಮಾಗೆ ಶೂಟಿಂಗ್ ಮಾಡಲಾಗುತ್ತಿದೆ. ವಿವಿಧ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕಲಾವಿದರು ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಅ*ಪಘಾತ ಸಂಭವಿಸಿದೆ. ‘ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ. ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿಬರುತ್ತಿದೆ. ಬಸ್ ಪ*ಲ್ಟಿ ಆಗಿದ್ದರಿಂದ ಚಿತ್ರತಂಡದಲ್ಲಿ ಬೇಸರ ಆವರಿಸಿದೆ.
ಪಲ್ಟಿಯಾದ ಹಿನ್ನಲೆ ಚಾಲಕನ ಮೇಲೆ ಹಲ್ಲೆಗೆ ವಾಹನದಲ್ಲಿದ್ದ ಹುಡುಗರು ಮುಂದಾಗಿದ್ದಾರೆ . ಬಸ್ ನಲ್ಲಿ ಹುಡುಗರು ವಾಹನ ಚಾಲಕ ನಿರ್ಲಕ್ಷದಿಂದ ವಾಹನ ಚಲಾಯಿಸಿದ್ದಾನೆ ಎಂದು ಆರೋಪಿಸಿ ಹ*ಲ್ಲೆ ನಡೆಸಿದ್ದಾರೆ. ಲೋಕಲ್ ಚಾಲಕನ ಮೇಲೆ ಹ*ಲ್ಲೆಯಾದ ಹಿನ್ನೆಲೆ ಸ್ಥಳೀಯರ ಅಕ್ರೋಶ, ರಿಷಬ್ ಶೆಟ್ಟಿ ಮಧ್ಯವರ್ತಿಯಲ್ಲಿ ಸಂಧಾನ ನಡೆದಿದ್ದು, ಎಲ್ಲರಿಗೂ ಕರೆದು ಮಾತನಾಡುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕಾಂತಾರ ಚಿತ್ರವು ದೈವ ಹಾಗೂ ದೈವಾರಾಧನೆಗೆ ಸಂಬಂಧಿಸಿದ ಕಥಾ ಹಂದರವನ್ನುಹೊಂದಿದ್ದು, ಈ ಚಿತ್ರ ಬಿಡುಗಡೆಗೊಂಡು ಬಹಳಷ್ಟು ಮೆಚ್ಚುಗೆಯನ್ನು ಗಳಿಸಿತ್ತು. ಚಿತ್ರ ಬಿಡುಗಡೆಗೊಂಡ ಬಳಿಕ ಹಲವುಕಡೆ ದೈವದ ವೇಷವನ್ನುಅಸಭ್ಯವಾಗಿ ತೊಟ್ಟು ಅಭಿಮಾನಿಗಳು ನರ್ತಿಸಿ ದೈವಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ದೈವಾರಾಧಕರು ಚಿತ್ರದ ವಿರುದ್ಧ ಅಸಮಧಾನ ಹೊಂದಿದ್ದಾರೆ.
ಕಾಂತಾರ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ – 1’ ಮಾಡುವುದಾಗಿ ಘೋಷಿಸಿದ ಬಳಿಕ ತುಳುನಾಡಿನ್ಲಿ ತೀವ್ರ ಆಕ್ರೋಷ ಕೇಳಿ ಬಂದಿತ್ತು. ಚಿತ್ರತಂಡವು ಚಿತ್ರೀಕರಣ ನಡೆಸುವ ಈ ಸಂದರ್ಭ ಹಲವು ವಿಘ್ನಗಳು ಎದುರಾಗುತ್ತಿದ್ದು, ಇದು ದೈವದ ಕೋಪವೋ, ಇಲ್ಲ ದೈವನರ್ತಕರ ಶಾಪವಿರಬೇಕು ಎಂಬ ಗುಮನಿಗಳು ಶುರುವಾಗಿದೆ.
ಚಿತ್ರೀಕರಣ ಮುಗಿಸಿ ತೆರಳುವಾಗ ಕೊಲ್ಲೂರು ಮಾರ್ಗದಲ್ಲಿ ಈ ದು*ರ್ಘಟನೆ ಸಂಭವಿಸಿದ್ದು, ಬಸ್‌ನಲ್ಲಿ 25 ಕಲಾವಿದರಿದ್ದರು. ಹಲವರು ಸಣ್ನ ಪುಟ್ಟ ಗಾ*ಯಗಳಿಂದ ಪಾರಾಗಿದ್ದರೆ, ಆರು ಜನರಿಗೆ ಗಂಭೀರ ಗಾ*ಯವಾಗಿದೆ. ಗಾಯಾಳುಗಳನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
DAKSHINA KANNADA
ಉಳ್ಳಾಲ: ಚಲಿಸುತ್ತಿದ್ದ ರಿಕ್ಷಾ ಮರಕ್ಕೆ ಡಿ*ಕ್ಕಿ: ಓರ್ವ ಮೃ*ತ್ಯು, ಮೂವರಿಗೆ ಗಾ*ಯ
Published
4 hours agoon
25/11/2024ಉಳ್ಳಾಲ: ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃ*ತಪಟ್ಟು ಮೂವರು ಗಾ*ಯಗೊಂಡಿರುವ ಘಟನೆ ಉಳ್ಳಾಲ ತಾಲೂಕಿನ ಕೊಣಾಜೆ ಸಮೀಪದ ಪುಳಿಂಚಾಡಿ ಎಂಬಲ್ಲಿ ಭಾನುವಾರ (ನ.24) ಸಂಜೆ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆ ಮಂಜತ್ತಡ್ಕ ನಿವಾಸಿ ನಾರಾಯಣ ಗಟ್ಟಿ (50) ಮೃ*ತರು ಎಂದು ಗುರುತಿಸಲಾಗಿದೆ.
ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲೆಂದು ಕೊಣಾಜೆ ಪುಳಿಂಚಾಡಿಯ ಕಲ್ಕಾರ್ ಎಂಬಲ್ಲಿಗೆ ನಾರಾಯಣ ಗಟ್ಟಿ ಅವರು ರಿಕ್ಷಾದಲ್ಲಿ ತೆರಳಿದ್ದರು. ಅಲ್ಲಿ ಇಳಿಜಾರು ಪ್ರದೇಶದಲ್ಲಿ ರಿಕ್ಷಾ ಇಳಿಯುತ್ತಿದ್ದಂತೆ ಬ್ರೇಕ್ ವೈಫಲ್ಯಕ್ಕೀಡಾಗಿ ಮರವೊಂದಕ್ಕೆ ಡಿ*ಕ್ಕಿ ಹೊಡೆದಿದೆ.
ಈ ಸಂದರ್ಭ ಗಂಭೀರ ಗಾಯಗೊಂಡ ನಾರಾಯಣ ಗಟ್ಟಿ ಅವರು ಮೃ*ತಪಟ್ಟಿದ್ದು, ಘಟನೆಯಲ್ಲಿ ರಿಕ್ಷಾದೊಳಗಿದ್ದ ಸಂಬಂಧಿ ಮಹಿಳೆ, ಅವರ ಪುತ್ರ ಹಾಗೂ ಇನ್ನೋರ್ವರಿಗೆ ಗಾ*ಯಗಳಾಗಿವೆ. ನಾರಾಯಣ ಗಟ್ಟಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
ಅತ್ಯಂತ ಉದ್ದದ ಮಾನವ ಸರಪಳಿ: ದ.ಕ.ಜಿಲ್ಲೆಗೆ ದ್ವಿತೀಯ ಸ್ಥಾನ
Published
1 day agoon
24/11/2024By
NEWS DESK2ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಬೀದರ್‌ನಿಂದ ಚಾಮರಾಜ ನಗರದವರೆಗೆ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜಿಲ್ಲೆಗಳಿಗೆ ಒಟ್ಟು ಐದು ವಿಭಾಗಗಳಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿತ್ತು. ಈ ವಿಭಾಗಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಉದ್ದದ ಮಾನವ ಸರಪಳಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ನ.26ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರಿಂದ ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
LATEST NEWS
ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!
ಸಾಯಿ ಪಲ್ಲವಿಯವರ ಕೈಯಲ್ಲಿದೆ ಹಲವಾರು ಸಿನಿಮಾಗಳು !
80ರ ಪ್ರಾಯದಲ್ಲೂ ಅಜ್ಜಿಯ ಟ್ರೆಂಡಿಂಗ್ ಡ್ರೆಸ್ ಗೆ ಎಲ್ಲರೂ ಬೋಲ್ಡ್ !
ಪತ್ನಿಗೆ ಬೆಂ*ಕಿ ಹಚ್ಚಿ ತಲೆಮರೆಸಿಕೊಂಡಿದ್ದ ವ್ಯಕ್ತಿ 12 ವರ್ಷಗಳ ಬಳಿಕ ಅರೆಸ್ಟ್
ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ
ಬಿಗ್ಬಾಸ್ ಮನೆಯಲ್ಲಿನ ಸ್ಪರ್ಧಿಗಳ ವಯಸ್ಸೆಷ್ಟು ಗೊತ್ತಾ..?
Trending
- LATEST NEWS5 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru3 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION4 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS7 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!