Connect with us

    STATE

    ವಾರದ ರಜೆಯಲ್ಲಿ “ಪ್ರಕೃತಿಯೊಂದಿಗೆ ಓದು” ವಿನೂತನ ಕಾರ್ಯಕ್ರಮ; ಎಲ್ಲಿ ಗೊತ್ತಾ ??

    Published

    on

    ಮಂಗಳೂರು/ಕಾರವಾರ: ವಾರದ ರಜೆ ಬಂದರೆ ಸಾಕು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಬೇಕೆಂದು ಬಹುತೇಕ ಅಧಿಕಾರಿಗಳು ಬಯಸುತ್ತಾರೆ. ಆದರೆ, ಉತ್ತರ ಕನ್ನಡ ಜಿಲ್ಲಾಧಿಕಾರಿ ತಮ್ಮ ರಜೆ ದಿನಗಳಲ್ಲಿ “ಪ್ರಕೃತಿಯೊಂದಿಗೆ ಓದು” ಎಂಬ ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದಾರೆ. ಯುವ ಪಿಳಿಗೆಗೆ ಪುಸ್ತಕ ಮತ್ತು ಪ್ರಕೃತಿಯ ಮಹತ್ವ ತಿಳಿಸಲು ಎರಡು ಗಂಟೆ ಮೀಸಲಿಡುತ್ತಿದ್ದಾರೆ. ಅದು ಯಾವ ರಿತಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿವೆ.

    ಇವತ್ತಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಬಹುತೇಕ ಅಧಿಕಾರಿಗಳು ಹಾಗೂ ಸಾಹಿತಿಗಳು ಹೇಳುವುದನ್ನು ಕೇಳಿದ್ದೆವೆ. ಆದರೆ, ಕೇವಲ ಮಾತಿನಲ್ಲಿ ಪ್ರೇರೇಪಣೆ ನೀಡುವುದರ ಬದಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಹಾಗೂ ಅವರ ಪತಿ, ಸಾರ್ವಜನಿಕ ಪಾರ್ಕ್​ಗಳಲ್ಲಿ ಜನರ ಜೊತೆ ಸೇರಿ ಪುಸ್ತಕ ಓದುವ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದಾರೆ.

    ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಉತ್ತರ ಕನ್ನಡ ಜಿಲ್ಲಾಡಳಿತ “ಪ್ರಕೃತಿಯೊಂದಿಗೆ ಓದು” ಎಂಬ ವಿನೂತನ ಕಾರ್ಯಕ್ರಮ ನಡೆಸುತ್ತಿದೆ. ಜ್ಞಾನ ಹೆಚ್ಚಿಸಿಕೊಳ್ಳುವ ಜೊತೆಗೆ ಓದುವ ಹವ್ಯಾಸ ಹೆಚ್ಚಿಸಲು ಈ ಪ್ರಯೋಗ ಜಿಲ್ಲಾಡಳಿತ ಮಾಡುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಪ್ರತಿ ಭಾನುವಾರ ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಗಾಂಧಿ ಪಾರ್ಕ್​ನಲ್ಲಿ ವ್ಯವಸ್ಥೆ ಮಾಡಿದೆ.

    ಪ್ರತಿ ಭಾನುವಾರ ಗಾಂಧಿ ಪಾರ್ಕ್​​ ಎರಡು ಗಂಟೆಗಳ ಕಾಲ ಗ್ರಂಥಾಲಯವಾಗಿ ಪರಿವರ್ತನೆಯಾಗುತ್ತದೆ. ಪಾರ್ಕ್​​ನಲ್ಲಿ ದಿನಪತ್ರಿಕೆಗಳು, ಕಥೆ, ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಇಡಲಾಗಿದೆ. ವಿದ್ಯಾರ್ಥಿಗಳು ಇಲ್ಲಿ ಬಂದು ಇಲ್ಲಿನ ಪುಸ್ತಕಗಳನ್ನು ಪಡೆದು ಓದಬಹುದು. ಜೊತೆಗೆ ತಾವು ಕೂಡ ಪುಸ್ತಕ ತಂದು ಇಲ್ಲಿ ಓದಬಹುದು. ಪುಸ್ತಕ ಓದುವುದರ ಜೊತೆಗೆ ತಾವು ಓದಿದ್ದ ಪುಸ್ತಕ ಹಾಗೂ ಓದಬೇಕಾದ ಪುಸ್ತಕದ ಬಗ್ಗೆ ಜಿಲ್ಲಾಧಿಕಾರಿಯವರ ಜೊತೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಓರ್ವ ಐಎಎಸ್ ಅಧಿಕಾರಿಯ ಜೊತೆ ಓದುವುದು ಮತ್ತು ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತೆ ಅಂತ ಬಹಳಷ್ಟು ಯುವಕ-ಯುವತಿಯರು ಪಾರ್ಕ್​ಗೆ ಓದಲು ಬರುತ್ತಾರೆ.

    ಸಾಮಾನ್ಯವಾಗಿ ರವಿವಾರ ಮೊಬೈಲ್ ಹಿಡಿದು ಸಮಯ ವ್ಯರ್ಥ ಮಾಡುತ್ತೇವೆ. ಆದರೆ ಇಂತಹ ಯೋಜನೆಗಳಿಂದ ಓದುವ ಆಸಕ್ತಿ ಹೆಚ್ಚುತ್ತದೆ. ವಿದ್ಯಭ್ಯಾಸಕ್ಕೂ ಅನುಕೂಲ ಆಗಿದೆ ಎಂದು ಪಾರ್ಕ್​​ಗೆ ಓದಲು ಬಂದ ವಿದ್ಯಾರ್ಥಿಗಳು ಅಭಿಪ್ರಾಯ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೂರು ಹೊತ್ತು ಮೊಬೈಲ್ ಎಂದು ಗೀಳು ಅಂಟಿಸಿಕೊಂಡು ಸಮಯ ವ್ಯರ್ಥ ಮಾಡುವ ಇಂದಿನ ಯುವಜನತೆಗೆ “ಪ್ರಕೃತಿಯೊಂದಿಗೆ ಓದು” ಕಾರ್ಯಕ್ರಮ ಓದುವ ಹವ್ಯಾಸ ಹೆಚ್ಚಿಸಲು ಸಹಾಯವಾಗಿದೆ.

    bangalore

    ಎರಡನೇ ಪತ್ನಿಯನ್ನು ಕೊಂ*ದು ಮೂರನೇ ಮದುವೆಗೆ ಸಿದ್ದತೆ ಮಾಡುತ್ತಿದ್ದವನಿಗೆ ಪೊಲೀಸರ ಶಾಕ್ !

    Published

    on

    ಮಂಗಳೂರು/ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ಮಾಡುತ್ತಿದ್ದ ಆರೋಪಿಯು ಪತ್ನಿಯನ್ನು ಕೊ*ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಅನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.


    ಈ ಘಟನೆ ಕಳೆದ ತಿಂಗಳು ನಡೆದಿದ್ದು, ಸರ್ಜಾಪುರ ಪೊಲೀಸರ ಕಾರ್ಯಾಚರಣೆಯಿಂದ ಪತ್ನಿಯನ್ನು ಕೊಂ*ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಿಹಾರ ಮೂಲದ ಮಹಮ್ಮದ್ ನಸೀಮ್ (39) ಬಂಧಿತ ಆರೋಪಿಯಾಗಿದ್ದು, ಬಿಹಾರ ಮೂಲದ ರುಮೇಶ್ ಖಾತುನ್ (22) ಕೊ*ಲೆಯಾದ ಮಹಿಳೆಯಾಗಿದ್ದಾಳೆ.

    ಇದನ್ನೂ ಓದಿ: ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !

    ಕೊಲೆ ಮಾಡಿದ ಬಳಿಕ ಆರೋಪಿ, ಪತ್ನಿಯ ಶ*ವವನ್ನು ವಿವಸ್ತ್ರಗೊಳಿಸಿ ಹಗ್ಗದಿಂದ ಕೈ ಕಾಲು ಕಟ್ಟಿ ಯಾರಿಗೂ ಅನುಮಾನ ಬಾರದಂತೆ ಚರಂಡಿಗೆ ಎಸೆದು ಬಿಹಾರಕ್ಕೆ ಎಸ್ಕೇಪ್ ಆಗಿದ್ದನು. ಶವ ಕೊಳೆತು ದುರ್ವಾಸನೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ಕೊಲೆ ಪ್ರಕರಣ ದಾಖಲಿಸಿಕೊಂಡ ಸರ್ಜಾಪುರ ಪೊಲೀಸರು ತನಿಖೆ ಮುಂದುವರಿಸಿದರು. ಆರೋಪಿಯ ಜಾಡು ಹಿಡಿದು ಬಿಹಾರಕ್ಕೆ ತೆರಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಆರೋಪಿ ಮಹಮ್ಮದ್ ನಸೀಮ್ ಮೂರನೇ ಮದುವೆ ಸಂಭ್ರಮದಲ್ಲಿದ್ದ. ಪೊಲೀಸರು ಮದುವೆ ಮನೆಯಲ್ಲಿಯೇ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

    Continue Reading

    LATEST NEWS

    ಶಬರಿಮಲೆ ಯಾತ್ರಾರ್ಥಿಗಳಿಗೆ ಶುಭ ಸುದ್ದಿ: ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಸೌಲಭ್ಯ.!

    Published

    on

    ಬೆಂಗಳೂರು: ಶಬರಿಮಲೆ ಯಾತ್ರಾರ್ಥಿಗಳಿಗೆ ಕೆಎಸ್ ಆರ್ ಟಿಸಿ ಸಿಹಿಸುದ್ದಿ ನೀಡಿದ್ದು, ಕೆಎಸ್ಆರ್ಟಿಸಿಯು ಬೆಂಗಳೂರು ಮತ್ತು ಕೇರಳದ ಪಂಪಾ ನಡುವೆ ಐರಾವತ ವೋಲ್ವೊ ಬಸ್ ಸೇವೆ ಆರಂಭಿಸಿದೆ.

    ಶಾಂತಿ ನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ವೋಲ್ವೊ ಬಸ್ ಹೊರಡಲಿದೆ. ಮೈಸೂರು ರಸ್ತೆ ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದ 2.20ಕ್ಕೆ ಹೊರಟು ಸಂಜೆ 5.10ಕ್ಕೆ ಮೈಸೂರು ತಲುಪಲಿದೆ. ಮರುದಿನ ಬೆಳಗ್ಗೆ 6.45ಕ್ಕೆ ನಿಲಕ್ಕಲ್ ಬಸ್ ನಿಲ್ದಾಣವನ್ನು ತಲುಪಲಿದೆ.

    ಹೋಗುವಾಗ ಪಂಪಾದಲ್ಲಿ ಇಳಿಯುವ ಅವಕಾಶ ನೀಡಲಾಗಿದ್ದು, ಬರುವಾಗ ನಿಲಕ್ಕಲ್ ಬಸ್ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಪ್ರತಿದಿನ ಸಂಜೆ 6ಕ್ಕೆ ನಿಲಕ್ಕಲ್ನಿಂದ ವೋಲ್ವೊ ಬಸ್ ಹೊರಡಲಿದ್ದು, ಮರುದಿನ ಬೆಳಗ್ಗೆ 10ಕ್ಕೆ ಮೆಜೆಸ್ಟಿಕ್ ತಲುಪಲಿದೆ. ನಿಮ್ಮ ಹತ್ತಿರದ ಖಾಸಗಿ ಟಿಕೆಟ್ ಕೌಂಟರ್ಗಳಲ್ಲದೆ, ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಬುಕ್ಕಿಂಗ್ ಕೌಂಟರ್ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ವೆಬ್ಸೈಟ್ https://www.ksrtc.in/ ಟಿಕೆಟ್ ಬುಕ್ಕಿಂಗ್ ಮಾಡಬಹುದು.

    ವೋಲ್ವೋ ಪ್ರಯಾಣ ವಿವರ:

    ಮಧ್ಯಾಹ್ನ 1:50ಕ್ಕೆ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಸಂಜೆ 5:10ಕ್ಕೆ ಮೈಸೂರು ತಲುಪಿ ಮರುದಿನ ಬೆಳಿಗ್ಗೆ 6:45ಕ್ಕೆ ನಿಲಕ್ಕಲ್ ತಲುಪಲಿದೆ. ಅದೇ ದಿನ ಸಂಜೆ 6:00 ಗಂಟೆಗೆ ಬಸ್ ನಿಲಕ್ಕಲ್ ನಿಂದ ಹೊರಟು ಮರುದಿನ ಬೆಳಿಗ್ಗೆ 10:00 ಗಂಟೆಗೆ ಮೆಜೆಸ್ಟಿಕ್ ತಲುಪಲಿದೆ. ಹೋಗುವಾಗ ಪಂಪಾದಲ್ಲಿ ಇಳಿಯುವ ಅವಕಾಶವನ್ನು ಸಹ ನೀಡಲಾಗಿದೆ. ಭಕ್ತಾದಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

    Continue Reading

    LATEST NEWS

    ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತ; ಓರ್ವ ಮಹಿಳೆ ಸಾವು

    Published

    on

    ಹೈದರಾಬಾದ್:‌ ಸ್ಟಾರ್ ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

    ಹೈದರಾಬಾದ್‌ನ RTC ಕ್ರಾಸ್‌ರೋಡ್ಸ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಈ ದುರಂತ ಸಂಭವಿಸಿತು. ದಿಲ್‌ಸುಖ್‌ನಗರದ ರೇವತಿ ಮೃತ ಮಹಿಳೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು.

    ರಾತ್ರಿ 10:30 ರ ಸುಮಾರಿಗೆ ಥಿಯೇಟರ್‌ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಸಿನಿಮಾ ಸ್ಕ್ರೀನಿಂಗ್‌ನಲ್ಲಿ ಅಲ್ಲು ಅರ್ಜುನ್ ಹಾಜರಿದ್ದರು. ಈ ವೇಳೆ ನೂಕುನುಗ್ಗಲು ಜಾಸ್ತಿಯಾಗಿ ಕಾಲ್ತುಳಿತ ಸಂಭವಿಸಿತು. ಪರಿಣಾಮವಾಗಿ 39 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಚಿಕ್ಕ ಮಗನ ಸ್ಥಿತಿ ಗಂಭೀರವಾಗಿದೆ.

    ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ.

    Continue Reading

    LATEST NEWS

    Trending