Monday, July 4, 2022

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಬಿಜೆಪಿ ರಾಜ್ಯಾಧ್ಯಕ್ಷರು..!

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಬಿಜೆಪಿ ರಾಜ್ಯಾಧ್ಯಕ್ಷರು..! 

ಮಂಗಳೂರು: ರಾಜ್ಯ ಸಹಕಾರ ಮಹಾಮಂಡಲ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪಕ್ಷ ಸೇರುವಂತೆ ಪರೋಕ್ಷವಾಗಿ  ಆಹ್ವಾನ ನೀಡಿದ್ದಾರೆ.

ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆದ ರವಿವಾರ ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ನಳಿನ್ ಈ ಆಹ್ವಾನ ನೀಡಿದರು.

‘ರಾಜೇಂದ್ರ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಜನೌಷಧಿ ಮಳಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ.

ಅವರು ರಾಷ್ಟ್ರ ಮಟ್ಟದ ನಾಯಕ ಆಗಬೇಕು ಎಂಬುದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ನಮ್ಮೆಲ್ಲರ ಆಸೆ.

ಆದರೆ, ಅದಕ್ಕಾಗಿ ಅವರು ನಮ್ಮ ಬಳಿ ಕುಳಿತು ಕೊಳ್ಳಬೇಕು. ಇದು ಬಹಿರಂಗವಾಗಿ ಚರ್ಚಿಸುವ ವಿಚಾರ ಅಲ್ಲ.

ನಾನು ಅವರ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ” ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

LEAVE A REPLY

Please enter your comment!
Please enter your name here

Hot Topics

‘ಕುಡ್ಲ ನಾದುಂಡುಯೇ’: ಮಂಗಳೂರಿನಲ್ಲಿ ಮುಗಿಯುತ್ತಿಲ್ಲ ಪೌರಕಾರ್ಮಿಕರ ಧರಣಿ

ಮಂಗಳೂರು: ರಾಜ್ಯದಾದ್ಯಂತ ಪೌರ ಕಾರ್ಮಿಕರ ಮುಷ್ಕರ ನಾಲ್ಕನೇ ದಿನದತ್ತ ಸಾಗಿದ ಹಿನ್ನೆಲೆ  ಮಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡದೆ ಗಬ್ಬುನಾತ ಹೊಡೆಯುತ್ತಿದೆ.ಧಾರಾಕಾರವಾಗಿ ಮಳೆಯೂ ಸುರಿಯುತ್ತಿರುವುದರಿಂದ ತ್ಯಾಜ್ಯಗಳು ಚರಂಡಿಯಲ್ಲಿ, ನೀರಿನಲ್ಲಿ ತೇಲುತ್ತಿದೆ. ದ್ರವ ತ್ಯಾಜ್ಯಗಳು ಜನರ...

ಮಂಗಳೂರು: ‘ಬ್ಲಡ್ ಡೋನರ್ಸ್’ ಇದರ 350ನೇ ರಕ್ತದಾನ ಶಿಬಿರಕ್ಕೆ ಚಾಲನೆ

ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ವತಿಯಿಂದ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಮಂಗಳೂರು, ಫಾದರ್ ಮುಲ್ಲರ್ ರಕ್ತನಿಧಿ ಕೇಂದ್ರ ಮಂಗಳೂರು, ಯೆನೆಪೋಯಾ ಮೆಡಿಕಲ್ ಕಾಲೇಜು ರಕ್ತನಿಧಿ ಕೇಂದ್ರ ದೇರಳಕಟ್ಟೆ ಇದರ...

ಮಂಗಳೂರು: ಮಿಲಾಗ್ರಿಸ್‌ ಚರ್ಚ್‌ನ ಒಳಭಾಗದಲ್ಲಿ ಸಮಾಧಿ ಕುಸಿತ-ಶತಮಾನದ ಕಟ್ಟಡಕ್ಕೆ ಹಾನಿ ಭೀತಿ

ಮಂಗಳೂರು: ಶತಮಾನದ ಇತಿಹಾಸವಿರುವ ನಗರದ ಹೃದಯಭಾಗದಲ್ಲಿರುವ ಮಿಲಾಗ್ರಿಸ್‌ ಚರ್ಚ್‌ನ ಒಳಭಾಗದಲ್ಲಿ ಎರಡು ಹೊಂಡ ನಿರ್ಮಾಣವಾಗಿದೆ.ಮಿಲಾಗ್ರಿಸ್ ಚರ್ಚ್‌ನ ಕಟ್ಟಡಕ್ಕೆ 125 ವರ್ಷಗಳ ಇತಿಹಾಸವಿದ್ದು, ಚರ್ಚ್‌ನ ಒಳಗೆ 108 ಜನರ ಮೃತ ದೇಹಗಳನ್ನು ಸಮಾಧಿ ಮಾಡಲಾಗಿದೆ.ಕಳೆದ...