FILM
ಕೊಟ್ಲಲ್ಲಪ್ಪೋ ಕೈ, ಸಂಪಿಗೆ ನಟ ಹಳ್ಳಿ ಧನುಷ್ ಇನ್ನಿಲ್ಲ..!
ಬೆಂಗಳೂರು : ಸಂಪಿಗೆ ಹಳ್ಳಿ, ಕೊಟ್ಲಲ್ಲಪ್ಪೋ ಕೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಧನುಷ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದ ಅವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೇ, ಅನಾರೋಗ್ಯಕ್ಕೆ ತುತ್ತಾಗಿದ್ದರು.
ಅವರನ್ನು ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದವರಾಗಿದ್ದ ಶ್ರೀಮುತ್ತುರಾಜ್, ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು.
ಪ್ಯಾರ್ ಕಾ ಗೋಲ್ಗುಂಬಜ, ಸ್ನೇಹಿತ, ಶಿವರಾಜ್ ಕುಮಾರ್ ನಟನೆಯ ಲೀಡರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ಪ್ರಮುಖ ಪಾತ್ರಗಳಲ್ಲಷ್ಟೇ ಅಲ್ಲ, ಇತರ ಸ್ಟಾರ್ ನಟರ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.
ಅಗಲಿದ ಧನುಷ್ ಅವರ ಮೃತದೇಹವನ್ನು ಅವರ ಊರಿಗೆ ಕೊಂಡೊಯ್ಯಲಾಗಿದ್ದು, ಇಂದು ಹುಟ್ಟೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಗಲಿದ ನಟನಿಗೆ ಸಿನಿಮಾ ತಂಡಗಳು ಹಾಗೂ ಅವರ ಸ್ನೇಹಿತರು ಸಂತಾಪ ವ್ಯಕ್ತ ಪಡಿಸಿದ್ದಾರೆ.
bangalore
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ರಿಲೀಸ್ ಡೇಟ್ ಚೇಂಜ್…!
ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನೆಮಾದ ಸೈಡ್ ಬಿ ಅಕ್ಟೋಬರ್ 20ರ ಬದಲಿಗೆ ಅಕ್ಟೋಬರ್ 27ರಂದು ರಿಲೀಸ್ ಆಗಲಿದೆ.
ರಕ್ಷಿತ್ ಶೆಟ್ಟಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿನಲ್ಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರತಂಡ ಮೊದಲೇ ಘೋಷಿಸಿದಂತೆ ಅಕ್ಟೋಬರ್ 20ಕ್ಕೆ ಬಿಡುಗಡೆ ಆಗಬೇಕಿತ್ತು.
ಆದ್ರೆ ಅಕ್ಟೋಬರ್ 20ಕ್ಕೆ ಸಪ್ತ ಸಾಗರದಾಚೆ ಸಿನೆಮಾ ರಿಲೀಸ್ ಆಗುತ್ತಿಲ್ಲ.
ಸೈಡ್ ಬಿ ಪಾರ್ಟ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಭಾರೀ ಬಜೆಟ್ ಚಿತ್ರಗಳು, ಸ್ಟಾರ್ ನಟರ ಚಿತ್ರಗಳು, ಪರಭಾಷೆಯ ಚಿತ್ರಗಳ ಹಾವಳಿಯಿಂದಾಗಿ ಚಿತ್ರ ಬಿಡುಗಡೆಯ ದಿನಾಂಕ ಬದಲಾಗಿದೆ.
ಹೀಗಾಗಿ ಚಿತ್ರತಂಡ ಅಕ್ಟೋಬರ್ 27ಕ್ಕೆ ಪಾರ್ಟ್ ಬಿ ರಿಲೀಸ್ ಮಾಡುವ ಘೋಷಣೆಯನ್ನು ಮಾಡಿದೆ.
ಹೌದು ..ಅಕ್ಟೋಬರ್ 20ರ ಬದಲಿಗೆ ಅಕ್ಟೋಬರ್ 27ರಂದು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ರಿಲೀಸ್ ಆಗಲಿದೆ.
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ನೆಲದಲ್ಲೂ ಸದ್ದು ಮಾಡಿದೆ. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ ಈ ಸಿನಿಮಾ, ಈಗ ತೆಲುಗಿನಲ್ಲೂ ಅತ್ಯುತ್ತಮ ಪ್ರತಿಕ್ರಿಯೆನ್ನು ಕಂಡಿದೆ.
ಹೇಮಂತ್ ನಿರ್ದೇಶಿಸಿದ ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.
ಫೈನಲಿ ಜನ ಕಾತುರದಿಂದ ಕಾಯುತ್ತಿರುವ ಸಪ್ತ ಸಾಗರದಾಚೆ ಸಿನೆಮಾದ ಪಾರ್ಟ್ ಬಿ ಅಕ್ಟೋಬರ್ 27ರಂದು ಅದ್ದೂರಿಯಾಗಿ ಬಿಡುಗಡೆಗೆ ಸಿದ್ದವಾಗಿದೆ.
bengaluru
ಕಾಂತಾರ ಚಿತ್ರಕ್ಕೆ 1 ವರ್ಷ-ನಾಳೆ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್
ಜಗತ್ತೆ ನಿಬ್ಬೆರಗಾಗಿ ನೋಡಿದ ಕಾಂತಾರ ಸಿನೆಮಾ ರಿಲೀಸ್ ಆಗಿ ನಾಳೆಗೆ ಭರ್ತಿ 1 ವರ್ಷ. ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆಯಾಗಿದ್ದು ಸೆ.30ರಂದು ಕಾಂತಾರ ಚಿತ್ರದ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.
ಜಗತ್ತೆ ನಿಬ್ಬೆರಗಾಗಿ ನೋಡಿದ ಕಾಂತಾರ ಸಿನೆಮಾ ರಿಲೀಸ್ ಆಗಿ ನಾಳೆಗೆ ಭರ್ತಿ 1 ವರ್ಷ.
ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆಯಾಗಿದ್ದು ಸೆ.30ರಂದು ಕಾಂತಾರ ಚಿತ್ರದ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.
ಸಣ್ಣ ಬಜೆಟ್ ನಲ್ಲಿ ಕಾಂತಾರ ಸಿನೆಮಾ ನಿರ್ಮಾಣವಾಗಿದ್ದು ಚಿತ್ರ ಗಳಿಸಿದ್ದು ಮಾತ್ರ ಬರೋಬ್ಬರಿ 400 ಕೋಟಿಗಿಂತಲೂ ಅಧಿಕ ಮೊತ್ತ.
ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿ ಅನೇಕ ಕಲಾವಿದರು ಕಾಂತಾರ ಚಿತ್ರದಲ್ಲಿ ನಟಿಸಿ ಪ್ರತಿಯೊಬ್ಬ ಸಿನಿ ರಸಿಕರ ಮನದಲ್ಲಿ ಹಚ್ಚೊತ್ತಿದ್ರು.
ನಿರೀಕ್ಷೆಗೂ ಮೀರಿ ನೇಮು-ಫೇಮು ಎಲ್ಲವೂ ಸಿಕ್ಕಿತು.
ಇದೀಗ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಆಗಿದೆ. ಈ ಹಿನ್ನಲೆ ನಾಳೆ ಸೆ. 30 ರಂದು ಬೆಳಿಗ್ಗೆ ಕಾಂತಾರ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡ ‘ವರಾಹ ರೂಪಂ’ ಹಾಡಿನ ವಿಡಿಯೋ ವರ್ಷನ್ ರಿಲೀಸ್ ಆಗಲಿದೆ.
ಈ ಕುರಿತು ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.
FILM
ವಯಸ್ಸಲ್ಲಿ ರಾಘವ್ ಚಡ್ಡಾ ಅವರಿಗಿಂತ ಸೀನಿಯರ್ ಪರಿಣಿತಿ ಚೋಪ್ರಾ…!
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಪ್ ಸಂಸದ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರ ಈಗ ರಿವೀಲ್ ಆಗಿದೆ.
ಮುಂಬೈ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಪ್ ಸಂಸದ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರ ಈಗ ರಿವೀಲ್ ಆಗಿದ್ದು, ರಾಘವ್ ಚಡ್ಡಾ ಅವರಿಗಿಂತ ಪರಿಣಿತಿ ಚೋಪ್ರಾ ಸೀನಿಯರ್.
ಸೆಪ್ಟೆಂಬರ್ 24ರಂದು ಈ ಜೋಡಿ ಗ್ರ್ಯಾಂಡ್ ಆಗಿ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಸಪ್ತಪದಿ ತುಳಿದಿದ್ರು.
ರಾಘವ್ ಚಡ್ಡಾ ಅವರು 2022ರಲ್ಲಿ ಪಂಜಾಬ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.
33ನೇ ವಯಸ್ಸಿಗೆ ರಾಜ್ಯಸಭೆ ಪ್ರವೇಶಿಸಿದ ಅವರು, ಅತ್ಯಂತ ಕಿರಿಯ ರಾಜ್ಯಸಭಾ ಸದಸ್ಯ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.
ಇನ್ನು ನಟಿ ಪರಿಣಿತಿ ಚೋಪ್ರಾ ಅವರು 2011ರಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ.
‘ಶುದ್ಧ್ ದೇಸಿ ರೊಮ್ಯಾನ್ಸ್’, ‘ಹಸೀ ತೊ ಫಸೀ’, ‘ದಾವತ್ ಎ ಇಶ್ಕ್’, ‘ನಮಸ್ತೆ ಇಂಗ್ಲೆಂಡ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ಅಕ್ಷಯ್ ಕುಮಾರ್ ಜತೆ ಪರಿಣಿತಿ ನಟಿಸಿರುವ ‘ಮಿಷನ್ ರಾಣಿಗಂಜ್’ ಸಿನಿಮಾ ತೆರೆ ಕಾಣಬೇಕಿದೆ.
ಸದ್ಯಕ್ಕೆ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರ ವಯಸ್ಸಿನ ಅಂತರದ ಸಾಕಷ್ಟು ಬಗ್ಗೆ ಚರ್ಚೆಯಾಗುತ್ತಿದೆ.
ಇಬ್ಬರಿಗೂ ಈಗ 35 ವರ್ಷ ವಯಸ್ಸಾಗಿದ್ದು, ನಟಿ ಪರಿಣಿತಿ ಚೋಪ್ರಾ ಅವರು 22 ಅಕ್ಟೋಬರ್ 1988ರಲ್ಲಿ ಜನಿಸಿದ್ದಾರೆ. ರಾಘವ್ ಚಡ್ಡಾ ಅವರು 11 ನವೆಂಬರ್ 1988ರಲ್ಲಿ ಜನಿಸಿದ್ದಾರೆ.
ವಿಶೇಷ ಎಂದರೆ ನಟಿ ಪರಿಣಿತಿ ಚೋಪ್ರಾ ಅವರು ರಾಘವ್ ಚಡ್ಡಾ ಅವರಿಗಿಂತ 20 ದಿನ ದೊಡ್ಡವರಾಗಿದ್ದಾರೆ.
ವಯಸ್ಸಿನ ಮಿತಿಯನ್ನು ಲೆಕ್ಕಿಸದೇ ಸ್ಟಾರ್ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಮಾಮೂಲು ಆಗಿದೆ.
- bangalore7 days ago
ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?
- bengaluru5 days ago
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!
- DAKSHINA KANNADA4 days ago
2ನೇ ಮದುವೆಯಾದ ಕಿರುತೆರೆ ನಟಿ ಜ್ಯೋತಿ ರೈ …!
- DAKSHINA KANNADA6 days ago
ಮುಂದಿನ ವರ್ಷದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ 3 ಬೋರ್ಡ್ ಎಕ್ಸಾಮ್- ಮಧು ಬಂಗಾರಪ್ಪ