Wednesday, February 8, 2023

ನಾಯಿಗಳ ದಾಳಿಯಿಂದ ಗಾಯಗೊಂಡ ಪುಟ್ಟ ಜಿಂಕೆಯನ್ನು ರಕ್ಷಿಸಿದ ಉಡುಪಿ ಪರ್ಕಳ ಹೆರ್ಗ ಗ್ರಾಮಸ್ಥರು..!

ಉಡುಪಿ : ಉಡುಪಿ ಜಿಲ್ಲೆಯ ಪರ್ಕಳ ಇಲ್ಲಿನ ಹೆರ್ಗದ ಗಣಪತಿ ಮಠದ ಬಳಿ ವಿಠಲಶೆಟ್ಟಿಯವರ ಗದ್ದೆಯಲ್ಲಿ ನಾಯಿಗಳು ಅಟ್ಟಾಡಿಸಿಕೊಂಡು ಬಂದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ದಾರಿ ತಪ್ಪಿ ಊರ ಕಡೆ ಬಂದ ಜಿಂಕೆಯನ್ನು ನಾಯಿಗಳು ಅಟ್ಟಾಡಿಸಿವಿಕೆಯಿಂದ ಬೆದರಿದ ಜಿಂಕೆ ವಿಠಲಶೆಟ್ಟಿಯವರ ದನದ ಕೊಟ್ಟಿಗೆಯ ಒಳಹೊಕ್ಕು ರಕ್ಷಣೆಗೆ ಮೊರೆಹೋಗಿದೆ.

ಇದರ ಏನು ಚುಚ್ಚಿಕೊಂಡು ಬಲಗಾಲು ಗಾಯವಾಗಿ ದಪ್ಪವಾಗಿ ಊದಿಕೊಂಡು ರಕ್ತದ ಮಡಿವಿನಲ್ಲಿತ್ತು.

ನೋವಿನಿಂದ ಈ ಜಿಂಕೆ ನಾಯಿಗಳ ಕಾಟದಿಂದ ರಕ್ಷಣೆಗೆ ಹರಿತಪ್ಪಿಸುವಂತಿತ್ತು.

ತಕ್ಷಣ ಸ್ಥಳೀಯರು ಜಿಂಕೆಯನ್ನು ಕಂಡು ಅದನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ. ದಿವಾಕರ್ ಶೆಟ್ಟಿ ಶುಭಕರ ಶೆಟ್ಟಿ. ವಿಘ್ನೇಶ್ ಕೆದ್ಲಾಯ. ವಿಕ್ರಂ ಕೆದ್ಲಾಯ. ಅಶೋಕ್ ಶೆಟ್ಟಿ ಗುಣಪಾಲ್ ಶೆಟ್ಟಿ ಮೊದಲಾದವರು ಸಹಕರಿಸಿದ್ದಾರೆ.

ಈ ಜಿಂಕೆಗೆ ಸುಮಾರು ಮೂರ್ನಾಲ್ಕು ವರ್ಷಗಳಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಡುಪಿಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಸುರೇಶ್ ಗಾಣಿಗ ದೇವರಾಜ್ ಪಾಣಾರ ಉಡುಪಿ. ಚಾಲಕ ಜಾಯ್ ಜಿಂಕೆ ಇರುವ ಸ್ಥಳಕ್ಕೆ ಭೇಟಿನೀಡಿ. ಅದನ್ನು ಯಶಸ್ವಿಯಾಗಿ ವಾಹನದ ಮೂಲಕ ಸಾಗಾಟಮಾಡಿ. ಪಶುವೈದ್ಯ ಡಾ|ಪ್ರಶಾಂತ್ ಶೆಟ್ಟಿ ಅವರ ಸಲಹೆ ಮೇರೆಗೆ. ಮಣಿಪಾಲ ಬಡಗುಗಟ್ಟಿನಲ್ಲಿರುವ ಟ್ರೀ ಪಾರ್ಕಿಗೆ ಹೆಚ್ಚಿನ ಚಿಕಿತ್ಸೆ ಒದಗಿಸಲು ಅಲ್ಲಿಗೆ ವರ್ಗಾಯಿಸಲಾಯಿತು.

ಸ್ಥಳೀಯ ಯುವಕರ ಮುತುವರ್ಜಿಯಿಂದ ನಾಯಿಗಳ ದಾಳಿಯಿಂದ ಈ ಜಿಂಕೆ ರಕ್ಷಣೆ ಮಾಡಿರುವುದು ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here

Hot Topics