ಮಂಗಳೂರು: ಜೂ.6ರಂದು ನಡೆದ ರೌಡಿಶೀಟರ್ ರಾಘವೇಂದ್ರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳು ಹಾಗೂ ಸಹಕಾರ ನೀಡಿದವರು ಸೇರಿದಂತೆ ಓರ್ವ ಮಹಿಳೆ ಸಹಿತ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಇಡ್ಯಾ ನಿವಾಸಿ ಸಂದೀಪ್ ಯಾನೆ ಚೊಟ್ಟೆ ಸಂದೀಪ್ (45), ಕೃಷ್ಣಾಪುರದ ಸಂದೀಪ್ ದೇವಾಡಿಗ ಯಾನ ಸ್ಯಾಂಡಿ (32), ಸುರತ್ಕಲ್ ತಡಂಬೈಲ್ ನಿವಾಸಿ ಲಿಖಿತ್ (31), ತೋಟಬೆಂಗ್ರೆಯ ದೀಕ್ಷಿತ್ ಯಾನೆ ಕಕ್ಕೆ ದೀಕ್ಷಿತ್ (23 ) ಮೀನಕಳಿಯ ನಿವಾಸಿ ತುಷರ್ ಅಮೀನ್ ( 30), ಪಂಜಿಮೊಗರಿನ ವಿನೋದ್ ಕುಮಾರ್ (32) ಬೈಕಂಪಾಡಿಯ ಲತೇಶ್ ಜೋಗಿ (27), ಬೈಕಂಪಾಡಿಯ ಸಂದೀಪ್ ಪುತ್ರನ್ (36), ಮೂಡುಶೆಡ್ಡೆ ನಿವಾಸಿ ಅಕ್ಷಿತಾ (28) ಬಂಧಿತ ಆರೋಪಿಗಳು.
ಜೂ. 6ರಂದು ಬೈಕಂಪಾಡಿ ಮೀನಕಳಿಯಕ್ಕೆ ಹೋಗುವ ರಸ್ತೆ ಬದಿಯಲ್ಲಿ ರಾಜ ಯಾನೆ ರಾಘವೇಂದ್ರನನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಈ ಪ್ರಕರಣದಲ್ಲಿ ನೇರ ಭಾಗಿಯಾಗಿರುವ, ಕೃತ್ಯಕ್ಕೆ ಸಹಕರಿಸಿರುವ ಸಂಚು ರೂಪಿಸಿರುವ, ಹಣಕಾಸಿನ ನೆರವು ನೀಡಿರುವ, ಕೊಲೆ ಕೃತ್ಯ ನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಆಶ್ರಯ ನೀಡಿದ ಆರೋಪದ ಮೇಲೆ ಒಟ್ಟು 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.