Monday, July 4, 2022

ಕಾಸರಗೋಡು: ಜುವೆಲ್ಲರಿಯಿಂದ ಕಳವು ಪ್ರಕರಣ- ಬಂಟ್ವಾಳದ ಓರ್ವ ಆರೋಪಿಯ ಬಂಧನ

ಬಂಟ್ವಾಳ: ಕಾಸರಗೋಡುವಿನ ಜುವೆಲ್ಲರಿಯಿಂದ ಸುಮಾರು 2.88 ಕೋಟಿ ರೂ. ಮೌಲ್ಯದ ವಜ್ರಾಭರಣ ದೋಚಿದ ಪ್ರಕರಣಕ್ಕ ಸಂಬಂಧಿಸಿ ಎರಡನೇ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.


ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಇಮ್ರಾನ್ ಶಾಫಿ (36) ಬಂಧಿತ ಆರೋಪಿ, ಈತ ಪ್ರಕರಣದ ಪ್ರಮುಖ ಆರೋಪಿ ಫಾರೂಕ್ ಎಂಬಾತನ ಸಹೋದರ ಎಂದು ಪೊಲೀಸರು ತಿಳಿಸಿದ್ದಾರೆ. ಫಾರೂರ್ ತಲೆಮರೆಸಿಕೊಂಡಿದ್ದಾನೆ.
ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣ ನ್ ನಾಯರ್ ನೇತೃತ್ವದ ತಂಡವು ಈತನನ್ನು ಬೆಂಗಳೂರಿನಿಂದ ಬಂಧಿಸಿದ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ಬಳಿಕ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಡಿಸಿಪಿ ಹರಿರಾಂ ಶಂಕರ್‌ಗೆ ಮಂಗಳೂರು ನಗರ ಪೊಲೀಸರ ಹೃದಯಸ್ಪರ್ಶಿ ಬೀಳ್ಕೊಡುಗೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಿಂದ ಹಾಸನ ಜಿಲ್ಲೆಗೆ ಎಸ್ಪಿಯಾಗಿ ವರ್ಗಾವಣೆಗೊಂಡ ಡಿಸಿಪಿ ಹರಿರಾಂ ಶಂಕರ್‌ ಅವರನ್ನು ಇಂದು ಮಂಗಳೂರು ನಗರ ಪೊಲೀಸರು ಬೀಳ್ಕೊಟ್ಟರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಿರಾಂ ಶಂಕರ್‌, ಮಂಗಳೂರಿನಲ್ಲಿ ವಿವಿಧ...

ಮಂಗಳೂರು: ಗೋಕರ್ಣನಾಥೇಶ್ವರ ಕಾಲೇಜಿನ NSS ಘಟಕದಿಂದ ರಕ್ತದಾನ

ಮಂಗಳೂರು: ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಇದರ ರಾಷ್ಟೀಯ ಸೇವಾ ಯೋಜನಾ ಘಟಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಜುಲೈ 2 ರಂದು ಆಯೋಜಿಸಲಾಗಿತ್ತು.ಈ...

ಮಂಗಳೂರಿನ ‘ಕದ್ರಿ‌ ರೋಲರ್ಸ್ ಸ್ಕೇಟಿಂಗ್ ಕ್ಲಬ್’ ಅಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆ

ಮಂಗಳೂರು: ಮಂಗಳೂರಿನಲ್ಲಿ‌ ನೂತನವಾಗಿ "ಕದ್ರಿ‌ ರೋಲರ್ಸ್ ಸ್ಕೇಟಿಂಗ್ ಕ್ಲಬ್(ರಿ)" ಆರಂಭಗೊಂಡಿದ್ದು, ಇದರ ಸ್ಥಾಪಕಾಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆಯಾಗಿದ್ದಾರೆ.ನಗರದ ಕೆಪಿಟಿ‌ ಸರ್ಕಲ್ ನ ಬಳಿಯ ಕದ್ರಿ ಪಾರ್ಕ್ ನಲ್ಲಿರುವ "ಅನಘಾಸ್ ಸ್ಕೇಟಿಂಗ್ ಅಕಾಡೆಮಿ"ಯಲ್ಲಿ ಇತ್ತೀಚೆಗೆ...