Connect with us

DAKSHINA KANNADA

ವಾಹನ ಸವಾರರೇ ಗಮನಿಸಿ: ಮಂಗಳೂರು ನಗರದ ಹಲವೆಡೆ ರಸ್ತೆ ಸಂಚಾರ ಬಂದ್

Published

on

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ದ್ವಾರದ ಮುಂದೆ ಕಲ್ವರ್ಟ್ ಒಳಚರಂಡಿ ಜಾಲದ ವ್ಯವಸ್ಥೆಯನ್ನು ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಮಾಡುವ ಕಾಮಗಾರಿ ಕೈಗೊಳ್ಳುವ ವೇಳೆ ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ಮೇ.7 ರಿಂದ ಜೂ.5ರ ವರೆಗೆ 30 ದಿನಗಳ ಕಾಲ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕದ್ರಿ ದೇವಸ್ಥಾನ:

ಕಾಮಗಾರಿ ನಡೆಯುವ ವೇಳೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬಟ್ಟಗುಡ್ಡ ಜಂಕ್ಷನ್ ನಿಂದ ಕದ್ರಿ ದೇವಸ್ಥಾನ ರಸ್ತೆಯ ಮೂಲಕ ಮಲ್ಲಿಕಟ್ಟೆ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಬಟ್ಟಗುಡ್ಡ ಜಂಕ್ಷನ್ ನಿಂದ ಕದ್ರಿ ಕಂಬ್ಳ ರಸ್ತೆಯಲ್ಲಿ ನೇರವಾಗಿ ಸಂಚರಿಸಿ ಭಾರತ್ ಬೀಡಿ ಜಂಕ್ಷನ್‍ನಲ್ಲಿ ಎಡಕ್ಕೆ ತಿರುಗಿ ಮಲ್ಲಿಕಟ್ಟೆ ಜಂಕ್ಷನ್ ಕಡೆಗೆ ಸಂಚರಿಸುತ್ತದೆ.

ಮಲ್ಲಿಕಟ್ಟೆ ಜಂಕ್ಷನ್ ನಿಂದ ಕದ್ರಿ ದೇವಸ್ಥಾನದ ರಸ್ತೆಯ ಮೂಲಕ ಬಟ್ಟಗುಡ್ಡ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಮಲ್ಲಿಕಟ್ಟೆ ಜಂಕ್ಷನ್‍ನಿಂದ ಭಾರತ್ ಬೀಡಿ ಜಂಕ್ಷನ್ ಕಡೆಗೆ ಸಂಚರಿಸಿ ಬಲಕ್ಕೆ ತಿರುಗಿ ಕದ್ರಿ ಕಂಬ್ಳ ರಸ್ತೆಯ ಮೂಲಕ ಬಟ್ಟಗುಡ್ಡ ಜಂಕ್ಷನ್ ಕಡೆಗೆ ಸಂಚರಿಸುತ್ತದೆ.

ಮಲ್ಲಿಕಟ್ಟೆ ವೃತ್ತದ ಬಳಿ ಇರುವ ಕದ್ರಿ ದೇವಸ್ಥಾನದ ದ್ವಾರದ ಮೂಲಕ ಕದ್ರಿ ದೇವಸ್ಥಾನಕ್ಕೆ ಹೋಗುವ ಎಲ್ಲಾ ವಾಹನಗಳು ಮಲ್ಲಿಕಟ್ಟೆ ಜಂಕ್ಷನ್‍ನಲ್ಲಿ ನೇರವಾಗಿ ಭಾರತ್ ಬೀಡಿ ಜಂಕ್ಷನ್ ಕಡೆಗೆ ಸಂಚರಿಸಿ ಬಲಕ್ಕೆ ತಿರುಗಿ ಕದ್ರಿ ಕಂಬ್ಳ ರಸ್ತೆಯಲ್ಲಿ ಮುಂದಕ್ಕೆ ಸಂಚರಿಸಿ ಕದ್ರಿ ದೇವಸ್ಥಾನದ ರಸ್ತೆ ಮೂಲಕ ಕದ್ರಿ ದೇವಸ್ಥಾನ ತಲುಪುವುದು.

ಹೊಸಬೆಟ್ಟು ಫಿಶರೀಸ್ ರಸ್ತೆ:

ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ವಿಭಾಗ ನಂಬರ್-07ರ ಹೊಸಬೆಟ್ಟು ಫಿಶರೀಸ್ ರಸ್ತೆಯಲ್ಲಿ ಕಿರುಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ವೇಳೆ ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ಜೂ.19ರ ವರೆಗೆ 45 ದಿನಗಳ ಕಾಲ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಮಗಾರಿ ನಡೆಯುವ ವೇಳೆ ರಾಷ್ಟ್ರೀಯ ಹೆದ್ದಾರಿ-66ರ ಹೊಸಬೆಟ್ಟು ಜಂಕ್ಷನ್ ಕಡೆಯಿಂದ ಹೊಸಬೆಟ್ಟು ಬೀಚ್ ಕಡೆ ಅಂದರೆ ಫಿಶರೀಸ್ ರಸ್ತೆ ಕಡೆಗೆ ಹೋಗುವಂತಹ ಹಾಗೂ ಬರುವಂತಹ ಲಘುವಾಹನಗಳು (ಕಾರು ಆಟೋರಿಕಾ, ದ್ವಿಚಕ್ರ) ರಾಷ್ಟ್ರೀಯ ಹೆದ್ದಾರಿ-66ರ ರಸ್ತೆಯಲ್ಲಿ ಹೊಸಬೆಟ್ಟು ಜಂಕ್ಷನ್‍ನಲ್ಲಿ ಇರುವ ಬಸ್ಸು ನಿಲ್ದಾಣದ ಶ್ರೀ ಪವನ್ ಮಾರ್ಬಲ್ಸ್ & ಗ್ರಾನೈಟ್ಸ್‌ನ ಕಾಂಕ್ರೀಟ್ ರಸ್ತೆಯಲ್ಲಿ ಸಾಗಿ ಶ್ರೀ ಧನ್ವಂತರಿ ಆಯುರ್ವೇದಿಕ್ ಕ್ಲಿನಿಕ್ ರಸ್ತೆಯ ಮೂಲಕ ಸಾಗಿ ಫಿಶರೀಸ್ ಶಾಲೆಯ ಮುಖ್ಯ ರಸ್ತೆಯಲ್ಲಿ ಸಾಗಿ ಫಿಶರೀಸ್ ಹಾಗೂ ಬೀಚ್ ಕಡೆಗೆ ಸಂಚರಿಸಿ ವಾಪಾಸು ಬರಲು ಅದೇ ಮಾರ್ಗದ ರಸ್ತೆಯನ್ನು ಉಪಯೋಗಿಸುವುದು.

ಸುರತ್ಕಲ್ ಕಡೆಗೆ ಸಂಚರಿಸುವ ರೂಟ್ ನಂ.59 ಬಸ್ಸುಗಳು ರಾಷ್ಟ್ರೀಯ ಹೆದ್ದಾರಿ 66ರ ಚಿತ್ರಾಪುರ ದ್ವಾರ ರಸ್ತೆಯ ಮೂಲಕ ಶೆಟ್ಟಿ ಜನರಲ್ ಸ್ಟೋರ್‌ನ ಮುಂದೆ ಸಾಗಿ ಫಿಶರೀಸ್ ಶಾಲೆಯಾಗಿ ಮುಂದೆ ಸಾಗಿ ಈಶ್ವರ ನಗರ ಬಲ ರಸ್ತೆಯ ಮೂಲಕ ನವನಗರ ನಂದಾದೀಪ ಅಪಾರ್ಟ್ ಮೆಂಟ್ ಕಡೆ ಸಾಗಿ ಲಿಂಗಪ್ಪ ಸಾಲಿಯಾನ್ ಕಂಪೌಂಡ್ ಬಳಿ ಬಲ ರಸ್ತೆ ಕಡೆ ಸಾಗಿ ಕಾಳಪ್ಪಯ್ಯ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ-66ರ ರಸ್ತೆಯ ಮೂಲಕ ಸುರತ್ಕಲ್ ಕಡೆ ಸಂಚರಿಸಿ ವಾಪಾಸು ಬರಲು ಅದೇ ಮಾರ್ಗದ ರಸ್ತೆಯನ್ನು ಉಪಯೋಗಿಸಬೇಕಾಗುತ್ತದೆ.

ಕೋಡಿಕಲ್ ಮುಖ್ಯ ರಸ್ತೆ:

ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಕೋಡಿಕಲ್ ಮುಖ್ಯರಸ್ತೆಯಲ್ಲಿ 5ನೇ ಬಿ ಅಡ್ಡ ರಸ್ತೆ ಬಳಿಯಿಂದ 10ನೇ ಬಿ ಅಡ್ಡ ರಸ್ತೆಯವರೆಗೆ ಕಾಂಕ್ರೀಟಿಕರಣ ಕಾಮಗಾರಿ ಕೈಗೊಳ್ಳುವ ವೇಳೆ ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ಜೂ.19ರ ವರೆಗೆ 45 ದಿನಗಳ ಕಾಲ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಮಗಾರಿ ನಡೆಯುವ ವೇಳೆ ಕೋಡಿಕಲ್ ಮುಖ್ಯ ರಸ್ತೆಯಲ್ಲಿನ 5ನೇ ಬಿ ಅಡ್ಡ ರಸ್ತೆಯಿಂದ 10ನೇ ಬಿ ಅಡ್ಡ ರಸ್ತೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಅಲ್ಲದೇ ಪರ್ಯಾಯವಾಗಿ 5ನೇ ಬಿ ಅಡ್ಡ ರಸ್ತೆ, 4ನೇ ಬಿ ಅಡ್ಡ ರಸ್ತೆ, 1ನೇ ಬಿ ಅಡ್ಡ ರಸ್ತೆ, 8ನೇ ಬಿ ಅಡ್ಡ ರಸ್ತೆ, 9ನೇ ಬಿ ಅಡ್ಡ ರಸ್ತೆ ಮತ್ತು 10ನೇ ಬಿ ಅಡ್ಡ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದು.

ರೂಟ್ ಬಸ್ಸುಗಳು ಉರ್ವ ಸ್ಕೂಲ್ ಜಂಕ್ಷನ್ ನಿಂದ ಮುಂದುವರೆದು ಕೋಡಿಕಲ್ ಕ್ರಾಸ್ ಮೂಲಕ ಬಾಪೂಜಿ ನಗರ ರಸ್ತೆಯಿಂದಾಗಿ ಕೋಡಿಕಲ್ ಕಟ್ಟೆ ಕಡೆಗೆ ಸಂಚರಿಸುವುದು ಹಾಗೂ ಕೋಡಿಕಲ್ ಕಟ್ಟೆಯಿಂದ ಸ್ಟೇಟ್ ಬ್ಯಾಂಕ್‍ಗೆ ಸಂಚರಿಸುವ ಬಸ್ಸುಗಳು ಇದೇ ರಸ್ತೆಯ ಮುಖಾಂತರ ಸಂಚರಿಸಲು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

DAKSHINA KANNADA

ಮಂಗಳೂರು: 30.98% ಮತದಾರರಿಂದ ಮತ ಚಲಾವಣೆ

Published

on

ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 30.98 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.

ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.

Continue Reading

LATEST NEWS

Trending