Connect with us

    DAKSHINA KANNADA

    ನಳೀನ್ ಗೆ ಸೋಲಿನ ರುಚಿ ತೋರಿಸ್ತಾರ ರೆಬೆಲ್ ಹರೀಶ್ ಕುಮಾರ್..?

    Published

    on

    ಮಂಗಳೂರು: ಇನ್ನೇನು ಕೆಲವೇ ತಿಂಗಳು ಬಾಕಿ. ದೇಶಾದ್ಯಂತ ಲೋಕಸಭೆ ಎಲೆಕ್ಷನ್ ಕಾವು ಜೋರಾಗಿದೆ. ದಿನದಿಂದ ದಿನಕ್ಕೆ ಅಭ್ಯರ್ಥಿಗಳು ಯಾರು ಸಮರ್ಥ ಎಂಬುದರ ಲೆಕ್ಕಾಚಾರದಲ್ಲಿ ಆಯಾ ಪಕ್ಷದವರು ಸನ್ನದ್ಧರಾಗಿದ್ದರೆ. ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಆಯಾ ಕ್ಷೇತ್ರಗಳಲ್ಲಿ ಕುತೂಹಲ ಕೌತುಕ. ಹೀಗಿರುವಾಗ ಲೋಕಸಭಾ ಚುನಾವಣೆಯ 2024 ದ.ಕ. ಜಿಲ್ಲೆಯ ಲೋಕಸಭಾ ಕ್ಷೇತ್ರ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳು ಯಾರಾಗಬಹುದೆಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಅಷ್ಟೇ ಅಲ್ಲ ದ.ಕ. ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಅಖಾಡ ಒಂದು ರೂಪ ಪಡೆದುಕೊಳ್ಳುತ್ತಿದೆ.


    ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಮ್ಮೆ ಆಯ್ಕೆಯಾಗುವುದು ಪಕ್ಕ… ಅದರಲ್ಲಿ ಎರಡು ಮಾತಿಲ್ಲ. ಸಂಘಟನಾತ್ಮಕವಾಗಿ ನಳಿನ್ ಪ್ರಬಲವಾಗಿರುವುದೇ ಹಾಗೂ ಹೈಕಮಾಂಡ್ ಕೃಪಾಕಟಾಕ್ಷ ಈ ಆಯ್ಕೆಗೆ ಕಾರಣ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಮಂಗಳೂರಿನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿ ಹಾಲಿ ಎಂಎಲ್ಸಿ ಹರೀಶ್ ಕುಮಾರ್ ಆಯ್ಕೆಯಾಗುವ ಸಾಧ್ಯತೆ ಬಹುತೇಕವಾಗಿ ಎದ್ದು ಕಾಣುತ್ತಿದೆ. ವಿಧಾನ ಪರಿಷತ್ತಿನಲ್ಲಿ ಜನಸಾಮಾನ್ಯರ ರೆವಿನ್ಯೂ ವಿಷಯಗಳಿಗೆ ಸಂಬಂಧಪಟ್ಟಂತೆ ಹಲವಾರು ಪ್ರಶ್ನೆಗಳನ್ನು ಎತ್ತಿರುವುದು ಹಾಗೂ ಪಕ್ಷದ ಒಳಗೆ ಎಲ್ಲರೊಂದಿಗೆ ಆತ್ಮೀಯತೆಯಿಂದ ಇರುವುದು. ಯಾರೊಂದಿಗೂ ವೈರತ್ವವಿಲ್ಲದ ಹರೀಶ್ ಕುಮಾರ್ ಅವರಿಗೆ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ.

    ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಅತ್ಯಂತ ಜನಪ್ರಿಯತೆಯನ್ನು ಕಂಡವರು. ಎಲ್ಲರೊಂದಿಗೆ ಅತ್ಯಂತ ಸರಳತೆಯಿಂದ ಕೂಡಿಕೊಂಡು ಪಕ್ಷವನ್ನ ಬೆಳೆಸಿದ ಹೆಮ್ಮೆ ಕರಾವಳಿಗರಲ್ಲಿ ಕೇಳಿ ಬರುವ ಮಾತು. ಇವರಿಗೆ ಮತ್ತೊಂದು ಪ್ಲಸ್ ಪಾಯಿಂಟ್ ಜಾತಿ ಲೆಕ್ಕಾಚಾರ. ಬಿಲ್ಲವ ಸಮುದಾಯಕ್ಕೆ ಸೇರಿದ ಇವರು ಪ್ರಬಲ ನಾಯಕನೂ ಹೌದು. ಜಾತಿ ಬೆಂಬಲವೂ ಹರೀಶ್ ಕುಮಾರ್ ಮೇಲಿದೆ. ಹೀಗಿರುವಾಗ ಕಾಂಗ್ರೆಸ್ ನಿಂದ ದ.ಕ. ಜಿಲ್ಲೆ ಲೋಕಸಭಾ ಕ್ಷೇತ್ರಕ್ಕೆ ಹರೀಶ್ ಕುಮಾರ್ ಪ್ರಬಲ ಪೈಪೋಟಿ ಕೊಡಬಲ್ಲ ಅಭ್ಯರ್ಥಿ ಎಂಬುದು ಪಕ್ಕ. ಜೊತೆಗೆ ಬಿಜೆಪಿಯ ನಳೀನ್ ಕುಮಾರ್ ಕಟೀಲ್ ವಿರುದ್ಧ ಅಚ್ಚರಿ ಎಂಬಂತೆ ಗೆಲುವನ್ನು ಕಾಣಲು ಹರೀಶ್ ಕುಮಾರ್ ಅವರಿಂದ ಸಾಧ್ಯ ಎಂಬುದು ಕರಾವಳಿಯಲ್ಲಿ ಗುಸು ಗುಸು ಮಾತು ಆರಂಭವಾಗಿಬಿಟ್ಟಿದೆ. ಹಾಗಾಗಿಯೇ ಈ ಬಾರಿ ಹರೀಶ್ ಕುಮಾರ್ ಅವ್ರನ್ನ ಕಾಂಗ್ರೆಸ್ ದ.ಕ‌. ಲೋಕ ಅಭ್ಯರ್ಥಿಯಾಗಿ ಬಹುತೇಕ ಫೈನಲ್ ಮಾಡುವುದು ಪಕ್ಕ ಆಗಿದೆ.

    ಉಳಿದಂತೆ ರಾಜಕೀಯ ಪಡಸಾಲೆಯ ಲೆಕ್ಕದಲ್ಲೂ ಬಿಜೆಪಿಯ ನಳೀನ್ ಗೆ ಈ ಬಾರಿ ಸೋಲಿನ ಆತಂಕವೂ ಇದೆ. ಹಾಗಾಗಿ ಕಾಂಗ್ರೆಸ್ ನಿಂದ ಸಮರ್ಥ ಅಭ್ಯರ್ಥಿಯಾಗಿ ಹರೀಶ್ ಕುಮಾರ್ ಅವರನ್ನು ಕಣಕ್ಕಿಳಿಸಿದರೆ ಗೆಲುವು ಪಕ್ಕ ಎಂಬುದು ಗೋಚರವಾಗಿದೆ. ಇತ್ತ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಆಯ್ಕೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ. ಆಡಳಿತದ ಬಗ್ಗೆ ಉತ್ತಮ ಜ್ಞಾನ ಹೊಂದಿರುವ ಜಯಪ್ರಕಾಶ್ ಹೆಗ್ಡೆ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ರಾಜಕೀಯ ನಾಯಕ. ಇರುವವರಿಗೆ ಪೂರಕವಾದ ಅಂಶ ಆಗಿದೆ ಎನ್ನಲಾಗುತ್ತಿದೆ.

    ಈ ಬಾರಿ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಆಯ್ಕೆ ಆಗುವ ಸಂಭವವಿದೆ ಎನ್ನಲಾಗುತ್ತಿದೆ. ಶಾಸಕರಾಗಿ, ಮಂತ್ರಿಯಾಗಿ ಉತ್ತಮ ಕೆಲಸವನ್ನು ಮಾಡಿರುವ ಪ್ರಮೋದ್ ಮಧ್ವರಾಜ್ ಬಗ್ಗೆ ಜನರಲ್ಲಿ ಉತ್ತಮ ಒಲವು ಇದೆ ಎನ್ನಲಾಗುತ್ತಿದೆ. ಉಡುಪಿ ಚಿಕ್ಕಮಗಳೂರು ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಎರಡು ಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು ರಣತಂತ್ರವನ್ನು ರೂಪಿಸುತ್ತಿವೆ. ಬಂದಿರುವ ಮಾಹಿತಿಗಳ ಪ್ರಕಾರ ಪರಸ್ಪರ ಸ್ಪರ್ಧೆಗೆ ಒಂದು ಹಂತದ ಅಖಾಡ ಸಿದ್ಧವಾಗಿದೆ ಎನ್ನಲಾಗಿದೆ.

     

    DAKSHINA KANNADA

    ಕಟೀಲು, ಕುದ್ರೋಳಿ ಕ್ಷೇತ್ರಕ್ಕೆ ನಟ ಸಂಜಯ್ ದತ್ ಭೇಟಿ

    Published

    on

    ಮಂಗಳೂರು : ಮಂಗಳೂರು ದಸರಾ ಬಲು ಸುಂದರ. ಪ್ರತೀ ವರ್ಷ ಅಬ್ಬರದಿಂದ ನಡೆವ ಮಂಗಳೂರು ದಸರಾಗೆ ಮನಸೋಲದವರಿಲ್ಲ. ವೈಭವದ ಸಂಭ್ರಮಕ್ಕೆ ಪ್ರತಿ ವರ್ಷ ಸಿನಿತಾರೆಯರು ಮೆರುಗು ನೀಡುತ್ತಾರೆ. ಈ ಬಾರಿ ಬಾಲಿವುಡ್ ನಟ ಸಂಜಯ್ ದತ್ ಬಂದಿದ್ದರು.  ಮೊದಲು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿಯ ದರ್ಶನ ಪಡೆದ ಅವರು, ಬಳಿಕ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದರ್ಬಾರ್ ಹಾಲ್ ಗೆ ತೆರಳಿ ದೇವಿಯರ ವಿಗ್ರಹ ಕಣ್ತುಂಬಿಕೊಂಡರು. ಶಾರದೆ ಮಾತೆಗೆ ನಮಿಸಿದರು.

    ಎರಡೂ ದೇವಸ್ಥಾನದಲ್ಲಿ ಸಂಜಯ್ ದತ್ ರಿಗೆ ದೇವರ ಶೇಷ ವಸ್ತ್ರ ಮತ್ತು ಪ್ರಸಾದ ನೀಡಿ ಗೌರವಿಸಲಾಯಿತು.

    ಬಳಿಕ ಅವರು ಹುಲಿ ಕುಣಿತದ ಊದು ಪೂಜೆಯಲ್ಲಿ ಭಾಗಿಯಾದರು.  ಪಿಲಿ ನಲಿಕೆ ನೋಡಿ ಆನಂದಿಸಿದರು. ಬಳ್ಳಾಲಭಾಗ್‌ ನಲ್ಲಿ ನಡೆದಿದ್ದ ಈ ಊದು ಪೂಜೆ ಕಾರ್ಯಕ್ರಮಕ್ಕೆ ನಟ ಸಂಜಯತ್ ದತ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡರು. ತಮ್ಮ ಮೊಬೈಲ್‌ ನಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದರು.

     

     

    Continue Reading

    DAKSHINA KANNADA

    ‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ….!!

    Published

    on

    ಮಂಗಳೂರು; ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಚರಿಸಲಾಗುತ್ತಿರುವ ‘ಮಂಗಳೂರು ದಸರಾ’ ಸಂಭ್ರಮದ ಬೃಹತ್ ಶೋಭಾಯಾತ್ರೆ ಇಂದು (ಅ.13) ಸಂಜೆ 4 ಗಂಟೆಗೆ ಆರಂಭವಾಗಿ ನಾಳೆ (ಅ.14) ಮುಂಜಾನೆ ಶಾರದೆಯ ಜಲಸ್ತಂಭನದ ಮೂಲಕ ಸಮಾಪನಗೊಳ್ಳಲಿದೆ.


    ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ಧನ ಪೂಜಾರಿ ನೇತೃತ್ವದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಶ್ರೀ ಮಹಾಗಣಪತಿ, ನವದುರ್ಗೆಯರ ಹಾಗೂ ಶಾರದಾ ಮಾತೆಯ ವರ್ಣರಂಜಿತ ಬೃಹತ್ ದಸರಾ ಶೋಭಾಯಾತ್ರೆ, ಅತ್ಯಾಕರ್ಷಕ ವಿದ್ಯುತ್ ದೀಪದ ಅಲಂಕೃತ ಮಂಟಪದೊಂದಿಗೆ ಹೊರಡಲಿದೆ.


    ಶೋಭಾಯಾತ್ರೆಗೆ ಹಲವು ಸ್ತಬ್ಧಚಿತ್ರಗಳು, ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಕಲಾತಂಡಗಳು ಹುಲಿ ವೇಷ ಸಹಿತ ಇತರ ವೇಷಗಳು, ಚೆಂಡೆ ತಂಡಗಳು ಮೆರುಗು ನೀಡಲಿದೆ.

    ಊದು ಪೂಜೆ ಸಹಿತ ಭಾರೀ ವೈಭವದಿಂದ ಜರುಗುವ ಶಾಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಉರು ಮಾತ್ರವಲ್ಲದೆ ಪರವೂರಿನಿಂದಲೂ ಲಕ್ಷಾಂತರ ಮಂದಿ ಆಗಮಿಸಲಿದ್ದಾರೆ. ಗಣ್ಯಾತಿಗಣ್ಯರು ಹಾಜರಾಗಲಿದ್ದು, ಸಂಭ್ರಮ ದುಪ್ಪಟ್ಟಾಗುವ ನಿರೀಕ್ಷೆಯಿದ್ದು, ಇನ್ನೇನು ಕೆಲವೇ ಕ್ಷಣಗಳಷ್ಟೇ ಉಳಿದಿದೆ.

    Continue Reading

    BELTHANGADY

    ಗುರುವಾಯನಕೆರೆ – ಹೊಂಡ ತಪ್ಪಿಸಲು ಹೋಗಿ ಕಾರುಗಳು ಜ*ಖಂ

    Published

    on

    ಗುರುವಾಯನಕೆರೆ: ಇಂದು (ಅ.12) ಮುಂಜಾನೆ ಎರಡು ಕಾರುಗಳ ನಡೆವೆ ಭೀಕರ ಅ*ಪಘಾತವು ಗುರುವಾಯನಕೆರೆ ಶಕ್ತಿನಗರದಲ್ಲಿ ಸಂಭವಿಸಿದೆ.


    ಗುರುವಾಯನಕೆರೆಯಿಂದ ಹೆಬ್ರಿ ಕಡೆಗೆ ಹೋಗುವ ಸ್ಕೋಡಾ ಕಾರು ಮತ್ತು ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಐ20 ಕಾರಿನ ನಡೆವೆ ಅ*ಪಘಾತ ಸಂಭವಿಸಿದೆ.


    ಐ 20 ಕಾರು ಚಾಲಕ ರಸ್ತೆಯ ಹೊಂಡ ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ ಎಂಬುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

     

     

    ಇದನ್ನೂ ಓದಿ:  ಉಪ್ಪಿನಂಗಡಿ| ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್:‌ ಚಾಲಕ ಮೃ*ತ್ಯು

     

    ಎರಡೂ ಕಾರು ಉಲ್ಟಾ ಬಿದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿಲ್ಲ ಎಂಬುವುದು ತಿಳಿದು ಬಂದಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Continue Reading

    LATEST NEWS

    Trending