Wednesday, June 16, 2021

ಹಿಂದೂಗಳು ನಿರ್ಮಿಸಿದ ದರ್ಗಾದಲ್ಲಿ ಹಿಂದೂ- ಮುಸ್ಲಿಮರು ಒಟ್ಟಾಗಿ ಆಚರಿಸುವ ಉರೂಸ್ ನ ಸಂಭ್ರಮದ ಕಥೆಯ ಕೇಳಿ….

ಹಿಂದೂಗಳು ನಿರ್ಮಿಸಿದ ದರ್ಗಾದಲ್ಲಿ ಹಿಂದೂ- ಮುಸ್ಲಿಮರು ಒಟ್ಟಾಗಿ ಆಚರಿಸುವ ಉರೂಸ್ ನ ಸಂಭ್ರಮದ ಕಥೆಯ ಕೇಳಿ….

ವಿಶೇಷ ವರದಿ: ಪ್ರಮೋದ್ ಸುವರ್ಣಾ , ಕಟಪಾಡಿ..

ಉಡುಪಿ : ಕರಾವಳಿ ಅಂದ್ರೆ, ಹಿಂದೂ, ಮುಸ್ಲಿಂ , ಕ್ರೈಸ್ತ ಬಾಂಧವರ ಸಾಮರಸ್ಯೆ ನಾಡು..ಧರ್ಮದ ಬೀಡು. ಅಲ್ಲೊಂದು..ಇಲ್ಲೊಂದು ನಡೆ ನಡೆಯುವ ಕೋಮು ಹಿಂಸಾಚಾರವೇ ಮಾಧ್ಯಮಗಳಲ್ಲಿ ಕೆಲವೊಮ್ಮೆ ವೈಭವೀಕರಣಗೊಳ್ಳುವುದುಂಟು. ಆದರೆ ಇಂದಿಗೂ ಕರಾವಳಿಯಲ್ಲಿ ಸಾಮರಸ್ಯ ಹಾಲುಜೇನಿನಂತೆ ಸಮ್ಮಿಳಿತವಾಗಿದೆ.

ಹಿಂದೂಗಳೇ ನಿರ್ಮಿಸಿದ ದರ್ಗಾದಲ್ಲಿ ಹಿಂದೂ- ಮುಸ್ಲಿಮರು ಒಟ್ಟಾಗಿ ಆಚರಿಸುವ ಉರೂಸಿನ ಸಂಭ್ರಮದ ಕಥೆ ಇದು…… ವಿಶಾಲವಾದ ಅರಬ್ಬೀ ಸಮುದ್ರದ ತಟದಲ್ಲಿ ತೆಂಗಿನ ತೋಟದ ಮಧ್ಯೆ ಕಾಣ್ತಾ ಇರೋದು ಮುಸ್ಲಿಂ ಬಾಂದವರ ಪವಿತ್ರ ಸಯ್ಯದ್ ಅರಬೀ ವಲಿಯುಲ್ಲಾ ದರ್ಗಾ.. ಇದು.

ಉಡುಪಿಯ ಕಾಪು ಸಮೀಪದ ಕೈಪುಂಜಾಲ್‌ ನಲ್ಲಿ ಎಂಬಲ್ಲಿ ಈ ದರ್ಗಾವಿದೆ. ದರ್ಗಾ ಅಂದ ಮುಸ್ಲಿಮ್ ಸಮುದಾಯದವರು ಕಟ್ಟಿಸಿರಬಹುದು, ಅವರೇ ನೋಡಿಕೊಳ್ಳುವುದು ಅಂದ್ಕೋಬಹುದು ನೀವು ಹಾಗಂದುಕೊಂಡ್ರೆ ನಿಮ್ಮ ಊಹೆ ತಪ್ಪು..

ಯಾಕೆಂದರೆ ಇದನ್ನು ನಿರ್ಮಿಸಿದ್ದು ಹಿಂದೂ ಸಮುದಾಯದವರು..ಇವತ್ತಿಗೂ ಪ್ರತಿದಿ‌ನ ದರ್ಗಾವನ್ನು ಗುಡಿಸಿ, ಒರೆಸಿ ಸ್ವಚ್ಛತೆ ಕಾಪಾಡಿ ದೀಪ ಬೆಳಗುವುದು ಕೂಡ ಕೂಡ ಪಕ್ಕದ ಮನೆಯ ಹಿಂದೂ ಸಮುದಾಯಕ್ಕೆ ಸೇರಿದ ಜನ. ಈ ದರ್ಗಾ ನಿರ್ಮಿಸಿದ ಕುರಿತು ಒಂದು ಇತಿಹಾಸವೇ ಇದೆ.

ಸುಮಾರು 150 ವರ್ಷಕ್ಕೂ ಹಿಂದೆ, ಅಂದ್ರೆ ವಿಶ್ವ ಪ್ರಸಿದ್ಧ ಕಾಪು ಲೈಟ್ ಹೌಸ್ ನಿರ್ಮಾಣಕ್ಕೂ ಮೊದಲು, ಸಮುದ್ರದ ಪಕ್ಕ ಸ್ಥಳೀಯ ಮೀನುಗಾರರಿಗೆ ಮೃತದೇಹವೊಂದು ಸಿಕ್ಕಿರುತ್ತೆ, ಅದು ಮುಸ್ಲಿಮ್ ವ್ಯಕ್ತಿಯ ಮೃತದೇಹ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು..

ಹೀಗಾಗಿ ನಂತರ ಅದನ್ನು ಸಮುದ್ರ ದಡದಲ್ಲಿ ಸುಗಂಧ ದ್ರವ್ಯ ಹಾಕಿ ಹೂಳುತ್ತಾರೆ.. ಆದರೆ ಮರುದಿನ ಮತ್ತೆ ಅದೇ ಮೃತದೇಹ ಬಂದು ಸ್ಥಳೀಯ ಮೀನುಗಾರರ ತೆಂಗಿನ ತೋಟದಲ್ಲಿ ಸಿಕ್ಕಾಗ ಇದು ಪವಾಡ ಪುರುಷರ ಮೃತದೇಹ ಆಗಿರಬಹುದು ಅಂತ ನಂತರ ತಮ್ಮದೇ ತೆಂಗಿನ ತೋಟದ ಮಧ್ಯೆ ಸಮಾಧಿ ಮಾಡಿ ಒಂದು ದರ್ಗಾ ನಿರ್ಮಿಸುತ್ತಾರೆ.

ಈ ದರ್ಗಾ ನಿರ್ಮಿಸಿದ ಬಳಿಕ ಮೀನುಗಾರರಿಗೂ ತಮ್ಮ ವೃತ್ತಿಯ ಒಳ್ಳೆಯಾದಾಗುತ್ತೆ. ಹೀಗಾಗಿ ಹಿಂದೂಗಳೇ ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ.ಇವತ್ತಿಗೂ ಸ್ಥಳೀಯ ಮೀನುಗಾರರು ದರ್ಗಾಕ್ಕೆ ನಮಿಸಿ ಮೀನುಗಾರಿಕೆಗೆ ತೆರಳುತ್ತಾರೆ.

ವರ್ಷಕ್ಕೊಮ್ಮೆ ಈ ದರ್ಗಾದಲ್ಲಿ ಉರೂಸ್ ನಡೆಯುತ್ತದೆ, ಜಾತಿ- ಧರ್ಮದ ಎಲ್ಲೆ ಮೀರಿ ಸಾವಿರಾರು ಜನ ಭಯ-ಭಕ್ತಿಯಿಂದ ಸೇರುತ್ತಾರೆ. ಇಲ್ಲಿನ ಹಿಂದೂ ಮುಸ್ಲಿಮರ ಸಾಮರಸ್ಯ ಸ್ವಾತಂತ್ರ್ಯ ಪೂರ್ವದಿಂದ ಮುಂದುವರಿದಿದ್ದು, ಮುಂದೆಯೂ ಹೀಗೇ ಸಾಗಲಿ ಅನ್ನೋದು ಆಶಯವಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...