Saturday, October 1, 2022

ಕೋಟ್ಯಧಿಪತಿ ಉದ್ಯಮಿ ರಾಕೇಶ್ ಝುಂಝುನ್‌ವಾಲಾ ನಿಧನ

ಹೊಸದಿಲ್ಲಿ: ದೇಶದ ಖ್ಯಾತ ಹೂಡಿಕೆದಾರ, ಕೋಟ್ಯಧಿಪತಿ ಉದ್ಯಮಿ ರಾಕೇಶ್ ಝುಂಝುನ್‌ವಾಲಾ ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮುಂಬಯಿಯ ಆಸ್ಪತ್ರೆಯೊಂದರಲ್ಲಿ ಅವರು ನಿಧನರಾಗಿದ್ದಾರೆ. ಅವರು ಈ ಹಿಂದೆ ತಮ್ಮ ಸಿಂಪಲ್‌ ಮ್ಯಾನರಿಸಂನಿಂದ ಸುದ್ದಿಯಾಗಿದ್ದರು.


ಭಾನುವಾರ ಬೆಳಿಗ್ಗೆ ಅನಾರೋಗ್ಯಕ್ಕೆ ಒಳಗಾದ ರಾಕೇಶ್ ಝುಂಝುನ್‌ವಾಲಾ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ 6.45ರ ಸುಮಾರಿಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ರಾಕೇಶ್ ಝುಂಝುನ್‌ವಾಲಾ ಮಾಲೀಕತ್ವದ ಹೊಸ ವಿಮಾನಯಾನ ಸಂಸ್ಥೆ ‘ಆಕಾಶ್ ಏರ್’ ಕೆಲವು ದಿನಗಳ ಹಿಂದಷ್ಟೇ ತನ್ನ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತ್ತು. ಹೊಸ ವಿಮಾನಯಾನ ಸಂಸ್ಥೆ ಹುಟ್ಟುಹಾಕುವಲ್ಲಿ ಕೆಲವು ವರ್ಷಗಳಿಂದ ಅವರು ಸಾಕಷ್ಟು ಶ್ರಮಿಸಿದ್ದರು. ಅದು ಈಡೇರಿದ ಒಂದು ವಾರದೊಳಗೇ ಅವರು ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪ್ರವೀಣ್ ನೆಟ್ಟಾರು ಪತ್ನಿಗೆ ಒಲಿದು ಬಂತು ಸರ್ಕಾರಿ ಕೆಲಸ: ಅಧಿಕೃತ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರಿಗೆ ಸಿಎಂ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ನೆಲೆಯಲ್ಲಿ ನೇಮಕಾತಿ ಮಾಡಿ ರಾಜ್ಯ ಸರ್ಕಾರ ಆದೇಶ...

ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಮಂಗಳೂರು ತಹಶೀಲ್ದಾರ್ ಸಹಾಯಕ ಶಿವಾನಂದ..!

ಮಂಗಳೂರು: ತಹಶೀಲ್ದಾರ್‌ ಅವರ ಸಹಾಯಕ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಮಂಗಳೂರಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.ಮಂಗಳೂರು ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ...

‘ಶೋಭಕ್ಕ ಒಂಜಿ ಸೆಲ್ಫಿ’: ಕಾಂಗ್ರೆಸ್ ಮುಖಂಡ ಮಿಥುನ್ ರೈ ‘ಸೆಲ್ಫಿ’ ಸ್ಪರ್ಧೆಗೆ BJP ಕಾರ್ಯಕರ್ತರ ಖಡಕ್ ರೆಸ್ಪಾನ್ಸ್

ಉಡುಪಿ: ರಸ್ತೆ ಅವ್ಯವಸ್ಥೆ, ಕಳಪೆ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸೆಲ್ಫಿ ವಿಥ್ ಶೋಭಾ ಕರಂದ್ಲಾಜೆ ಎಂಬ ವೈವಿಧ್ಯಮಯ ಪ್ರತಿಭಟನೆಯ ಬಗ್ಗೆ ಘೋಷಣೆ ಮಾಡಿದ್ದರು.ಸಂಸದೆ ಶೋಭಾ...