Wednesday, February 1, 2023

ದೆಹಲಿಯಿಂದ ಕತಾರ್‌ಗೆ ಹೊರಟಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ

ನವದೆಹಲಿ: ದೆಹಲಿಯಿಂದ ಕತಾರ್‌ನ ದೋಹಾಗೆ ಹೊರಟ್ಟಿದ್ದ ಪ್ರಯಾಣಿಕ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.


ವಿಮಾನವು ಕರಾಚಿಯಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಪ್ರಯಾಣಿಕರನ್ನು ಕ್ರಮವಾಗಿ ಮೆಟ್ಟಿಲುಗಳ ಮೂಲಕ ಹೊರಗೆ ಇಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಬೆಳಗಿನ ಜಾವ 3:50ಕ್ಕೆ ದೆಹಲಿಯಿಂದ ಪ್ರಯಾಣ ಆರಂಭಿಸಿದ್ದ ವಿಮಾನವು ಬೆಳಿಗ್ಗೆ 5:30ಕ್ಕೆ ಕರಾಚಿಯಲ್ಲಿ ಇಳಿಯಿತು.

ಘಟನೆಯ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಹಾಗೂ ಪ್ರಯಾಣಿಕರನ್ನು ದೋಹಾಗೆ ತಲುಪಿಸಲು ಪ್ರತ್ಯೇಕ ವಿಮಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಎದುರಾದ ಅನನುಕೂಲಕ್ಕೆ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ.

‘ದೆಹಲಿಯಿಂದ ದೋಹಾಗೆ ಪ್ರಯಾಣಿಸಬೇಕಿದ್ದ QR579 ವಿಮಾನವು ಮಾರ್ಚ್‌ 21ರಂದು ಕರಾಚಿಯ ಕಡೆಗೆ ತಿರುಗಿಸಲಾಯಿತು. ಸರಕು ಸಂಗ್ರಹ ವಿಭಾಗದಲ್ಲಿ ಹೊಗೆ ಕಾಣಿಸಿಕೊಂಡ ಸೂಚನೆ ಸಿಕ್ಕಿದ್ದರಿಂದ ತುರ್ತು ನಿರ್ಧಾರ ಕೈಗೊಳ್ಳಲಾಯಿತು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Hot Topics

ರಾಜ್ಯದಲ್ಲಿ ಚುನಾವಣಾ ಕಾವು :ಪಶ್ಚಿಮ ವಲಯ ವ್ಯಾಪ್ತಿಯ ಎಸ್ಸೈಗಳ ವರ್ಗಾವಣೆ..!

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ವಿವಿಧ ಪೊಲೀಸ್ ಠಾಣೆಗಳ ಎಸ್ಸೈಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ವಿವಿಧ ಪೊಲೀಸ್ ಠಾಣೆಗಳ...

ಶಿಷ್ಯೆಯ ಮೇಲೆ ಅತ್ಯಾಚಾರ ಪ್ರಕರಣ: ಆಸಾರಾಂ ಬಾಪುಗೆ 2ನೇ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ..

2013ರಲ್ಲಿ ತನ್ನ ಶಿಷ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು ಅವರಿಗೆ ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.ಅಹಮದಾಬಾದ್:‌ 2013ರಲ್ಲಿ ತನ್ನ...

ಮಂಗಳೂರು ನ್ಯಾಯಾಲಯದ ಆವರಣದಲ್ಲೇ ವಕೀಲೆಗೆ ಕೊಲೆ ಬೆದರಿಕೆ ಹಾಕಿದ ಆರೋಪಿ..!

ಮಂಗಳೂರು: ಯುವ ವಕೀಲೆಯೊಬ್ಬರಿಗೆ ಮಂಗಳವಾರ ಅಪರಾಹ್ನ ನ್ಯಾಯಾಲಯದ ಆವರಣದಲ್ಲೇ ಅವಾಚ್ಯ ಶಬ್ದದಿಂದ ‌ಬೈದು ಕೊಲೆ ಬೆದರಿಕೆಯೊಡ್ಡಿದ ಘಟನೆ ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆರೋಪಿ ವಿರುದ್ದ ಬಂದರು...