Wednesday, February 1, 2023

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ-ಆರೋಪಿ ಶಫೀಕ್‌ಗೆ ನ್ಯಾಯಾಂಗ ಬಂಧನ

ಪುತ್ತೂರು: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದ ಆರೋಪಿ ಶಫೀಕ್ ಬೆಳ್ಳಾರೆಯನ್ನು ನಿನ್ನೆ ಸಂಜೆ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಈ ವೇಳೆ ನ್ಯಾಯಧೀಶರು ಆರೋಪಿಗೆ 15 ದಿನಗಳ ವಿಚಾರಣಾ ಹಂತದ ನ್ಯಾಯಾಂಗ ವಿಧಿಸಿದ್ದಾರೆ.
ಈ ಹಿಂದೆ ನ್ಯಾಯಾಂಗ ಬಂಧನದಲ್ಲಿದ್ದ ಶಫೀಕ್ ಬೆಳ್ಳಾರೆ ಮತ್ತು ಜಾಕೀರ್ ಸವಣೂರು ಅವರಿಬ್ಬರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು.

ನಂತರ ಅವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭ ಜಾಕೀರ್‌‌ಗೆ ನ್ಯಾಯಾಂಗ ಬಂಧನ ವಿಧಿಸಿ ಶಫೀಕ್ ನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಇದೀಗ ಶಫೀಕ್‌ಗೆ ಕೂಡಾ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ಉಡುಪಿ: ನಾಗಬನದಲ್ಲಿನ ಶ್ರೀಗಂಧ ಮರ ಕಳವು- ಆರೋಪಿ ಬಂಧನ

ಅಂಬಲಪಾಡಿ ಶ್ಯಾಮಲಿ ಸಭಾಭವನದ ಹಿಂಬದಿ ಸಿಪಿಸಿ ಲೇಔಟ್ ಎಂಬಲ್ಲಿನ ನಾಗಬನದಲ್ಲಿದ್ದ ಶ್ರೀಗಂಧ ಮರ ಕಡಿಯುತ್ತಿದ್ದ ವ್ಯಕ್ತಿ ಯೊಬ್ಬನನ್ನು ಉಡುಪಿ ಅರಣ್ಯ ಇಲಾಖೆಯವರು  ವಶಕ್ಕೆ ಪಡೆದುಕೊಂಡಿದ್ದಾರೆ.ಉಡುಪಿ: ಅಂಬಲಪಾಡಿ ಶ್ಯಾಮಲಿ ಸಭಾಭವನದ ಹಿಂಬದಿ ಸಿಪಿಸಿ ಲೇಔಟ್...

ಉಳ್ಳಾಲ ಕೊಲ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ : ಕೊಲೆ ಶಂಕೆ..!

ಉಳ್ಳಾಲ: ಯುವತಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿ ಬಾಡಿಗೆ ಮನೆಯಲ್ಲಿ ನಡೆದಿದ್ದು, ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದರೂ ಬಾಯಿಗೆ ಬಟ್ಟೆಯನ್ನು...

ಶಿಷ್ಯೆಯ ಮೇಲೆ ಅತ್ಯಾಚಾರ ಪ್ರಕರಣ: ಆಸಾರಾಂ ಬಾಪುಗೆ 2ನೇ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ..

2013ರಲ್ಲಿ ತನ್ನ ಶಿಷ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು ಅವರಿಗೆ ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.ಅಹಮದಾಬಾದ್:‌ 2013ರಲ್ಲಿ ತನ್ನ...