Connect with us

bangalore

ರಾಜ್ಯದ ಗ್ರಾ.ಪಂ ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ ನೀಡುವಂತೆ ಹೋರಾಟ

Published

on

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ ನೀಡಬೇಕು ಮತ್ತು ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ರಾಜ್ಯ ಮಟ್ಟದ ಬೃಹತ್‌ ಹೋರಾಟ ನಡೆಸುವುದರ ಕುರಿತು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ಆರ್ ಡಿ ಪಿ ಆರ್) ರಾಜ್ಯ ಸಮಿತಿ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ ಧರ್ಮಸ್ಥಳ ಅವರು ಬೆಂಗಳೂರು ದೃಶ್ಯ ಹಾಗೂ ಪತ್ರಿಕಾ ಮಾಧ್ಯಮ ಸಂಪಾದಕರು ಮತ್ತು ಮುಖ್ಯ ವರದಿಗಾರಿಗೆ ಮನವಿ ಸಲ್ಲಿಸಿದ್ದಾರೆ.


ಮನವಿ ಪತ್ರದಲ್ಲಿ ಉಲ್ಲೇಖಿಸಿರುವಂತೆ ‘ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ನಾವುಗಳು ಕಳೆದ ಎಂಟು ವರ್ಷಗಳಿಂದ ಪಂಚಾಯತ್ ನೌಕರರುಗಳೇ ಸೇರಿ ಸಂಘಟಿತರಾಗಿ ಮಾತೃ ಇಲಾಖೆಯ ಗೌರವಕ್ಕೆ ದಕ್ಕೆ ಭಾರದ ರೀತಿಯಲ್ಲಿ ಯಾವುದೇ ಹೋರಾಟ ಮುಷ್ಕರಗಳಲ್ಲಿ ಸೇರದೆ ನೇರವಾಗಿ ಸರಕಾರ, ಇಲಾಖಾ ಸಚಿವರು ಹಾಗೂ ಇಲಾಖಾ ಅಧಿಕಾರಿಗಳನ್ನು ಬೇಟಿ ಮಾಡಿ ಮನವಿ ಮೂಲಕ ನಮ್ಮಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೇಡಿಕೆಗಳನ್ನು ಸಲ್ಲಿಸುತ್ತಾ ಬಂದಿರುತ್ತೇವೆ.

ಅದರಂತೆ ಹಲವಾರು ಬಾರಿ ಸಂಘಟನೆಯ ಮೂಲಕ ಮನವಿಗಳನ್ನು ಸಲ್ಲಿಸಲಾಗಿಯೂ, ಅದಲ್ಲದೆ ಈ ಬಗ್ಗೆ ನೂರಾರು ಬಾರಿ ಸರಕಾರಕ್ಕೆ, ಇಲಾಖೆಗೆ ಮತ್ತು ಇಲಾಖಾ ಸಚಿವರಿಗೆ ಮನವಿಗಳನ್ನು ಸಲ್ಲಿಸಿದರೂ ಸಹ ಬಡ ನೌಕರರ ಸಮಸ್ಯೆಗಳಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಸ್ಪಂದನೆ ಸರಕಾರದಿಂದ ಮತ್ತು ಇಲಾಖೆಯಿಂದ ಸಿಗದೇ ಇರುವುದು ತುಂಬಾ ಬೇಜಾರಿನ ವಿಷಯವಾಗಿದ್ದು, ಗ್ರಾಮ ಪಂಚಾಯತ್ ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತಾರೆ ಎಂದು ಘನ ಸರಕಾರದ ಮೇಲೆ ಅಪರವಾದ ವಿಶ್ವಾಸ ಇದ್ದ ಕಾರಣ ಯಾವುದೇ ಹೋರಾಟಕ್ಕೆ ಇಲ್ಲಿಯವರೆಗೂ ಸಂಘಟನೆಯ ಮೂಲಕ ಕರೆ ನೀಡಿರುವುದಿಲ್ಲ.

ಪ್ರಸ್ತುತ ಕಾಲಘಟ್ಟದಲ್ಲಿ ಗ್ರಾಮ ಪಂಚಾಯತ್ ನೌಕರರು ತಮ್ಮ ಮೂಲಭೂತ ಬೇಡಿಕೆಗಳಿಗಾಗಿ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟವನ್ನು ಮಾಡಬೇಕಾಗಿ ಒತ್ತಾಯ ಮಾಡುತ್ತಿರುವುದರಿಂದ ಜೊತೆಗೆ ಸಂಘಟನೆ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಮಟ್ಟದ ಹೋರಾಟ ಮಾಡುವುದೆಂದು ದಿನಾಂಕ: 24-09-2022 ರಂದು ನಡೆದ ಪಂಚಾಯತ್‌ ನೌಕರರ ಸಮಾಲೋಚನೆ ಸಭೆಯಲ್ಲಿ ತಿರ್ಮಾನಿಸಿದ್ದು,

ಗೌರವಾನ್ವಿತರಾದ ಮಾನ್ಯ ಮುಖ್ಯ ಮಂತ್ರಿಗಳು ಪ್ರಸ್ತುತ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜವಾಬ್ದಾರಿಯನ್ನು ಹೊಂದಿದ್ದು, ಇಲಾಖೆಯ ಅಭಿವೃಧ್ಧಿಗೆ ಕಳೆದ ಮೂರು ದಶಕಗಳಿಂದ ಹಗಲಿರುಳು ದುಡಿಯುತ್ತಿರುವ ಬಡ ಗ್ರಾಮ ಪಂಚಾಯತ್ ನೌಕರರಾದ ಬಿಲ್ಲ್‌ ಕಲೆಕ್ಟರ್‌, ಕ್ಲರ್ಕ್‌ ಕಮ್‌ ಡಿಇಓ, ಡಾಟ ಎಂಟ್ರೀ ಅಪರೇಟರ್‌, ವಾಟರ್‌ ಮ್ಯಾನ್‌, ಪಂಪುಚಾಲಕ, ಶುಚಿತ್ವ ನೌಕರರು ಹಾಗೂ ಅಟೆಂಡರ್‌ ಗಳು ಭವಿಷ್ಯ ನಿಧಿ ಇಲ್ಲದೇ, ಆರೋಗ್ಯ ಭದ್ರತೆ ಇಲ್ಲದೇ, ಸರಿಯಾದ ವೇತನ ಶ್ರೇಣಿ ಇಲ್ಲದೇ, ಉದ್ಯೋಗ ಭದ್ರತೆ ಇಲ್ಲದೇ, ನಿವೃತ್ತಿ ಜೀವನಕ್ಕೆ ಭದ್ರತೆ ಇಲ್ಲದೇ ಕಳೆದ ಮೂರು ದಶಕಗಳಿಂದ ಕೇವಲ ಕನಿಷ್ಠ ಕೂಲಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಈ ಕೆಳ ಕಾಣಿಸಿದ ನಮ್ಮ ಬೇಡಿಕೆಗಳನ್ನು ಘನ ಸರಕಾರ ಈಡೇರಿಸುವಂತೆ ಕೋರಿಕೊಳ್ಳುತ್ತೇವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತ್ ನೌಕರರಿಗೆ ಸೂಕ್ತ ಸ್ಥಾನಮಾನ ಮತ್ತು ಸವಲತ್ತುಗಳನ್ನು ನೀಡದೇ ಕೇವಲ ಕನಿಷ್ಠ ವೇತನ ನೀಡಿ ಜೀತದಾಳುಗಳಂತೆ ಹಗಲಿರುಳು ದುಡಿಸಿಕೊಳ್ಳುತ್ತಿದ್ದು,

ಗ್ರಾಮೀಣ ಭಾಗದಲ್ಲಿನ ರಾಜಕೀಯ ಒತ್ತಡ, ಮೇಲಾಧಿಕಾರಿಗಳ ಒತ್ತಡದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರರಾದ ನಮ್ಮ ಬಹು ಮುಖ್ಯ ಬೇಡಿಕೆಗಳು ಕಳೆದ ಮೂರು ದಶಕಗಳಿಂದ ಇಡೇರದೇ ಇರುವ ಕಾರಣ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪಂಚಾಯತ್‌ ನೌಕರರೇ ಸೇರಿ ದಿನಾಂಕ : 19-12-2022 ರಿಂದ ಬೆಳಗಾವಿ ಸುವರ್ಣ ಸೌಧದ ಎದುರು ಗ್ರಾಮೀಣ ಭಾಗದಲ್ಲಿನ ಎಲ್ಲಾ ಕಾರ್ಯಗಳನ್ನು ನಿಲ್ಲಿಸಿ, ಅನಿರ್ದಿಷ್ಟ ಕಾಲ ತಮ್ಮ ಮೂಲಭೂತ ಬೇಡಿಕೆಗಳಿಗಾಗಿ ರಾಜ್ಯ ಮಟ್ಟದ ಬೃಹತ್ ಹೋರಾಟಕ್ಕೆ ಇಳಿಯುತ್ತೇವೆ ಎಂದು ಪತ್ರಿಕಾ ಹಾಗೂ ದೃಶ್ಯ ಮಾದ್ಯಮದಲ್ಲಿ ಪ್ರಕಟಣೆಗಾಗಿ ಸಲ್ಲಿಸಲಾಗಿದೆ.

ಗ್ರಾಮ ಪಂಚಾಯತ್‌ ನೌಕರರ ಎಲ್ಲಾ ನೋವುಗಳಿಗೆ ಮಾದ್ಯಮ ಮಿತ್ರರರು ಸಹಕಾರ ನೀಡುತ್ತಾ ಬಂದಿರುತ್ತಿರಿ, ಇದಕ್ಕೆ ನೌಕರರು ಮತ್ತು ಅವರ ಸಮಸ್ತ ಕುಟುಂಬದ ಪರವಾಗಿ ತಮಗೆಲ್ಲರಿಗೂ ಆಭಾರಿಯಾಗಿರುತ್ತೆವೆ, ಮುಂದೆಯೂ ಕೂಡ ತಾವು ಎಲ್ಲಾರು ಈ ಬಡ ನೌಕರರ ಪರವಾಗಿ ಇರುತ್ತಿರಿ ಮತ್ತು ಈ ಬಗ್ಗೆ ನಮ್ಮ ನೋವುಗಳು ಮತ್ತು ಸಮಸ್ಯೆಗಳನ್ನು ಸರಕಾರದ ಮುಂದೆ ತರುತ್ತಿರಿ ಎಂಬ ದೃಡ ನಂಬಿಕೆಯನ್ನು ಹೊಂದಿರುತ್ತೇವೆ.

ನಮ್ಮ ಮುಖ್ಯ ಬೇಡಿಕೆಗಳು: ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲರ್ಕ್/ಕ್ಲಕ್ ಕಮ್ ಡಿಇಓ, ಬಿಲ್ಲ್ ಕಲೇಕ್ಟರ್ ಹಾಗೂ ಡಾಟ ಎಂಟ್ರೀ ಅಪರೇಟರ್ ಗಳಿಗೆ ಸಿ ದರ್ಜೆ ಸ್ಥಾನಮಾನ ಮತ್ತು ಅಟೆಂಡರ್, ಕ್ಲೀನರ್ಸ್‌, ವಾಟರ್ ಮ್ಯಾನ್/ಪಂಪು ಚಾಲಕ ಇತ್ಯಾದಿ ವೃಂದದವರಿಗೆ ಡಿ ದರ್ಜೆ ನೀಡಿ, ನಗರ ಮತ್ತು ಪಟ್ಟಣ ಪಂಚಾಯತ್ ನಂತೆ ವೇತನ ಶ್ರೇಣಿ ನಿಗಧಿಪಡಿಸಬೇಕು, ಜೊತೆಗೆ ನೌಕರರು ಮತ್ತು ನೌಕರರ ಅವಲಂಬಿತರಿಗೆ ಆರೋಗ್ಯ ಭದ್ರತೆಯೊಂದಿಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸಬೇಕು.

ಇನ್ನು ಪಂಚಾಯತ್‌ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವಾಟರ್‌ ಮ್ಯಾನ್‌, ಶುಚಿತ್ವ ನೌಕರರು ಹಾಗೂ ಇತರ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸಿದೇ ಹಾಗೂ ಪಂಚಾಯತಿಗಳಲ್ಲಿ ಹುದ್ದೆಗಳ ಗರಿಷ್ಠ ಮೀತಿಯನ್ನು ಮತ್ತು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿದೆ ಜಿಲ್ಲಾ ಪಂಚಾಯತ್ ನಿಂದ ಅನುಮೋದನೆ ನೀಡಬೇಕು.

ಮತ್ತು ಪಂಚಾಯತ್‌ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಡಾಟ ಎಂಟ್ರೀ ಅಪರೇಟರ್‌ ಗಳಿಗೆ ಜಿಲ್ಲಾ ಪಂಚಾಯತ್‌ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು.

ಹಾಗೆಯೇ ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಇತರೆ ಸಮಸ್ಯೆಗಳಿಂದ ಜಿಲ್ಲಾ ಪಂಚಾಯತ್ ಅನುಮೋದನೆಯಾಗದೇ ನಿವೃತ್ತಿಯಾದ ಹಾಗೂ ಮುಂದೆ ನಿವೃತ್ತಿಯಾಗುವ ಎಲ್ಲಾ ಗ್ರಾಮ ಪಂಚಾಯತ್ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು, ಸದ್ರಿ ನಿವೃತ್ತಿ ಉಪಧನ ಪಾವತಿಸಲು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಸರಕಾರವೇ ಒಂದು ಶಾಶ್ವತ ನಿಧಿಯನ್ನು ಕಾಯ್ದಿರಿಸಿ ಪಂಚಾಯತ್‌ ನೌಕರರ ನಿವೃತ್ತಿ ಆದ ಒಂದು ತಿಂಗಳ ಒಳಗಾಗಿ ಗೌರವ ನಿವೃತ್ತಿ ಉಪಧನ ಮಂಜೂರು ಮಾಡಬೇಕು.

1 Comment

1 Comment

  1. Shivaraja RV

    09/12/2022 at 7:04 PM

    ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ ಜಯವಾಗಲಿ

Leave a Reply

Your email address will not be published. Required fields are marked *

bangalore

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕಪಲ್ ‘ರೊಮ್ಯಾನ್ಸ್..’! ಪ್ರಿಯತಮಗೆ ಚುಂಬಿಸಿದ ಯುವತಿ.!!ವೀಡಿಯೋ ವೈರಲ್

Published

on

ಬೆಂಗಳೂರು:  ಅಗಾಗ ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳ ಆಲಿಂಗನದ ವೀಡಿಯೋ ವೈರಲ್ ಆಗುತ್ತಲೇ ಇದೆ.  ಇದೀಗ ಬೆಂಗಳೂರಿನಲ್ಲಿಯೂ ಇಂಥದ್ದೇ ಒಂದು ಘಟನೆ ಮರುಕಳಿಸಿದೆ. ಕಪಲ್ಸ್ ಇಬ್ಬರು ಒಬ್ಬರನೊಬ್ಬರು ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

bangalore metro

ಬೆಂಗಳೂರು ನಮ್ಮ ಮೆಟ್ರೋದ ಬಾಗಿಲಿನ ಬಳಿ ಯುವತಿ-ಯವಕರಿಬ್ಬರೂ ನಿಂತುಕೊಂಡಿದ್ದು ಒಬ್ಬರನೊಬ್ಬರು ತಬ್ಬಿಕೊಂಡಿದ್ದಾರೆ. ಯುವತಿ ಯುವಕನ ಕೆನ್ನೆಗೆ ಮುತ್ತು ನೀಡಿದ್ದಾಳೆ. ಈ ದೃಶ್ಯವನ್ನು ಮೆಟ್ರೋದಲ್ಲಿದ್ದ ಪ್ರಯಾಣಿಕರೋರ್ವರ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋವನ್ನು KPSB 52 ಎಂಬ ಎಕ್ಸ್​ ಖಾತೆಯಲ್ಲಿ ಪೋಸ್ಟ್​​​ ಮಾಡಿದ್ದು ‘ನಮ್ಮ ಮೆಟ್ರೋದಲ್ಲಿ ಇದೇನು ಅಸಭ್ಯವರ್ತನೆ’ ಎಂದು ಪ್ರಶ್ನಿಸಿದ್ದಾರೆ. ಇನ್ನು ಮೆಟ್ರೋದಲ್ಲಿದ್ದ ಇತರ ಪ್ರಯಾಣಿಕರು ಈ ಜೋಡಿಯ ರೋಮ್ಯಾನ್ಸ್‌ನಿಂದಾಗಿ ಮುಜುಗರಕ್ಕೊಳಗಾಗಿದ್ದಾರೆ.

Read More..; 15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!

ದೆಹಲಿಯಲ್ಲೂ ನಡೆದಿತ್ತು ಈ ಘಟನೆ:

ಈ ಹಿಂದೆ ದೆಹಲಿಯ ಮೆಟ್ರೋ ಸ್ಟೇಷನ್‌ ನಲ್ಲಿ ದಂಪಂತಿ ರೊಮ್ಯಾನ್ಸ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ದಂಪತಿ ಮೈಮರೆತು ರೋಮ್ಯಾನ್ಸ್ ಮಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಅಲ್ಲದೇ ಇಬ್ಬರೂ ಲಿಪ್‌ಲಾಕ್‌ ಕೂಡಾ ಮಾಡಿದ್ದಾರೆ. ದಂಪತಿಯ ಸರಸಸಲ್ಲಾಪವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬ ವೀಡಿಯೋ ಮಾಡಿದ್ದಾನೆ. ಇನ್ನು ದೆಹಲಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಜನರನ್ನು ಮುಜುಗರಕ್ಕೆ ಒಳಪಡಿಸುತ್ತಿದೆ. ಈ ಬಗ್ಗೆ ಮೆಟ್ರೋ ಆಡಳಿತ ಮಂಡಳಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದರೂ ಜನರು ಮಾತ್ರ ಕ್ಯಾರೇ ಅನ್ನುತ್ತಿಲ್ಲ.

 

 

Continue Reading

bangalore

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮಳೆಯಾಗಲಿದೆ: ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು : ಬಿಸಿಲಿನ ಉರಿಗೆ ಜನರು ಬೆಂದು ಹೋಗಿದ್ದಾರೆ. ವರುಣ ಕೃಪೆ ತೋರಯ್ಯ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಮಳೆಯಾಗಿದ್ರೂ ಸೂರ್ಯ ತಾಪವೇನೂ ಕಮ್ಮಿಯಾಗಿಲ್ಲ. ಇದೀಗ 8 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

heavy rain
ಎಲ್ಲೆಲ್ಲಿ ಮಳೆ ?
ರಾಜ್ಯದ ಜನತೆ ಮಳೆರಾಯನಿಗಾಗಿ ಕಾಯುತ್ತಿದ್ದಾರೆ. ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಶುಭ ಸುದ್ದಿ ನೀಡಿದೆ. ಏಪ್ರಿಲ್ 24ರಂದು ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಕೊಡಗು, ಹಾಸನ ಸೇರಿ 8 ಜಿಲ್ಲೆಗಳಲ್ಲಿ ಕೆಲವೆಡೆ ಮಳೆ ಬೀಳಬಹುದು ಎಂದು ಹೇಳಿದೆ.

ತಾಪಮಾನ ಹೆಚ್ಚಳ :
ಭಾರತೀಯ ಹವಾಮಾನ ಇಲಾಖೆ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ತೀವ್ರವಾಗಲಿದೆ ಎಂದು ಕೂಡ ಮಾಹಿತಿ ನಡಿದೆ. ಅದರಲ್ಲೂ ಪೂರ್ವ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಗಳು ಹೆಚ್ಚಲಿವೆ ಎಂದಿದೆ. ಏಪ್ರಿಲ್ 25 ರ ವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಏಪ್ರಿಲ್ 27 ರ ವರೆಗೆ ಈ ಪ್ರದೇಶಗಳಲ್ಲಿ ಉಷ್ಣಾಂಶ 2 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಏಪ್ರಿಲ್ 6 ರಂದು ರಾಜಧಾನಿಯಲ್ಲಿ ಗರಿಷ್ಠ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಎಂಟು ವರ್ಷಗಳಲ್ಲಿ ಅತಿ ಹೆಚ್ಚು ಎಂದು ವರದಿಯಾಗಿದೆ.

ಮುಂದಿನವಾರ ನಗರದಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Continue Reading

bangalore

ಮಹಿಳೆಯ ಅತಿಯಾದ ಕಾಮದಾಹ…! ದಾಹಕ್ಕೆ ಅಂತ್ಯ ಹಾಡಿದ ಯುವಕ..!

Published

on

ಬೆಂಗಳೂರು : ಆಕೆ 48 ವರ್ಷ ಪ್ರಾಯದ ಮಹಿಳೆಯಾಗಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿ ಕೊಟ್ಟಿದ್ದಾಳೆ. ಬೆಂಗಳೂರಿನ ಕೊಡಿಗೆ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿದ್ದ ಆಕೆಯ ದೇಹ ನಗ್ನವಾಗಿ ಬೆಡ್‌ರೂಮಿನಲ್ಲಿ ಪತ್ತೆಯಾಗಿತ್ತು. ಎಪ್ರಿಲ್ 19 ರಂದು ನಡೆದಿದ್ದ ಈ ಘಟನೆಯನ್ನು ಭೇದಿಸಿದ ಪೊಲೀಸರಿಗೆ ಶಾಕ್ ಆಗುವಂತ ವಿಚಾರಗಳು ಗೊತ್ತಾಗಿದೆ.

ಕೊಡಿಗೆ ಹಳ್ಳಿಯ ಭದ್ರಪ್ಪ ಲೇಔಟ್‌ನಲ್ಲಿ ನಡೆದಿದ್ದ ಶೋಭಾ ಎಂಬ ಮಹಿಳೆಯ ಕೊ*ಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಕೊಲೆ ಆರೋಪಿಯಾಗಿರುವ ನವೀನ್ ಎಂಬ ಯುವಕನನ್ನು ಕೊಡಿಗೆ ಹಳ್ಳಿಯ ಪೊಲೀಸರು ಬಂದಿಸಿದ್ದಾರೆ. ವಿಚಾರಣೆ ವೇಳೆ ಬಾಯ್ಬಿಟ್ಟ ವಿಚಾರ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ. ಬಳಿಕ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಶೋಭಾಳ ಕಾಮದಾಹ ಬೆಳಕಿಗೆ ಬಂದಿದೆ.

ಇದನ್ನೂ ಓದಿ ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ಶೋಭಾಳಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಿತನಾಗಿದ್ದ ನವೀನ್ ಬಳಿಕ ಸ್ನೇಹಿತನಾಗಿ, ಅದು ಪ್ರೀತಿಗೆ ತಿರುಗಿ ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧದವರೆಗೂ ಬಂದು ನಿಂತಿತ್ತು. ಮಗನ ವಯಸ್ಸಿನ ಹುಡುಗನ ಜೊತೆಯಲ್ಲಿ ನಿರಂತರ ಸೆಕ್ಸ್ ಮಾಡುತ್ತಿದ್ದ ಶೋಭಾಳ ಅತಿಯಾದ ಕಾಮಧಾಹದಿಂದ ಬೇಸತ್ತು ಆಕೆಯನ್ನು ಕೊಲೆ ಮಾಡಿದ್ದಾಗಿ ಹೇರೋಹಳ್ಳಿ ಮೂಲದ ಆರೋಪಿ ನವೀನ್ ಹೇಳಿಕೆ ನೀಡಿದ್ದಾನೆ.

ಕೊಲೆ ನಡೆದ ದಿನವೂ ಶೋಭಾ ಮನೆಗೆ ನವೀನ್ ಬಂದಿದ್ದ. ಏ.19ರಂದು ಇಬ್ಬರು ದೈಹಿಕ ಸಂರ್ಪಕವನ್ನು ಬೆಳೆಸಿದ್ದರು. ಆ ನಂತರ ಶೋಭಾ ಮತ್ತೆ ನವೀನ್‌ಗೆ ಸೆಕ್ಸ್‌ಗೆ ಒತ್ತಾಯಿಸಿದ್ದು ನಿರಾಕರಿಸಿದಾಗ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಈಕೆ ಅತಿಯಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಕ್ಕೆ ಬೇಸರಗೊಂಡ ನವೀನ್‌ ಬೆಡ್‌ ರೂಮಿನಲ್ಲೇ ಆಕೆಯ ಕಥೆ ಮುಗಿಸಿದ್ದ.

48ರ ಮಹಿಳೆಗೆ ಯುವಕರ ಮೇಲೆ ಹುಚ್ಚು

48ರ ಶೋಭಾ ಕೇವಲ ನವೀನ್ ಮಾತ್ರವಲ್ಲದೇ ಅನೇಕ ಯುವಕರ ಸಹವಾಸ ಬೆಳೆಸಿದ್ದಳು. ಒಬ್ಬೊಬ್ಬ ಹುಡುಗರಿಗೂ ಒಂದೊಂದು ಹಣ್ಣಿನ ಹೆಸರಿಟ್ಟಿದ್ದು, ನವೀನ್‌ಗೆ ಆ್ಯಪಲ್ ಎಂದು ಹೆಸರಿಟ್ಟಿದ್ದಳಂತೆ. ಆ್ಯಪಲ್, ಆರೆಂಜ್, ಬನಾನ ಹೆಸರಿನಲ್ಲಿ ಹುಡುಗರ ಹೆಸರು ಸೇವ್ ಮಾಡಿಕೊಳ್ಳುತ್ತಿದ್ದಳು. ಆ್ಯಪ್‌ಗಳಲ್ಲಿಯೂ ಆ್ಯಕ್ಟಿವ್ ಆಗಿದ್ದ ಶೋಭಾ ಸುಮಾರು 20 ಕ್ಕೂ ಹೆಚ್ಚು ಹುಡುಗರನ್ನು ಖೆಡ್ಡಾಗೆ ಬೀಳಿಸಿಕೊಂಡಿದ್ದಳು. ಈಕೆ ಕರೆದಾಗ ಯುವಕರು ಏನಾದರೂ ಬಾರದೆ ಇದ್ದರೆ ಅವರ ಮನೆ ಬಳಿಯೇ ಹೋಗುತ್ತಿದ್ದಳು. ನಂತರ ಕಾರಿನ ಹಾರ್ನ್ ಜೋರಾಗಿ ಹಾಕುತ್ತಿದ್ದಳು. ಇಷ್ಟಕ್ಕೂ ಜಗ್ಗದೆ ಹೋದರೆ ಮನೆಯವರಿಗೆ ಖಾಸಗಿ ಫೋಟೊವನ್ನು ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಅಷ್ಟೇ ಅಲ್ಲದೆ ಆ ಯುವಕರ ಮದುವೆಗೂ ಅಡ್ಡಿ ಪಡಿಸಿ ಮದುವೆ ನಿಲ್ಲಿಸಿದ್ದಳು.

ಇದನ್ನೂ ಓದಿ ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?

ಕೊಲೆಯಾದ ದಿನವೂ ನವೀನ್‌ಗೆ ಬ್ಲಾಕ್ ಮೇಲ್ ಮಾಡಿ ಕರೆಸಿಕೊಂಡಿದ್ದಳು. ನವೀನ್‌ ಎಡಗೈಗೆ ಗಾಯವಾಗಿತ್ತು, ಗಾಯದ ಮೇಲೆ ಕೂತು ನೀನು‌ ಮದುವೆ ಆಗಬಾರದು, ಹೀಗೆ ನನ್ನ ಜತೆ ಇರಬೇಕು. ಮದುವೆ ಆದರೆ ಅಲ್ಲೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದರಿಂದ ಬೇಸತ್ತ ನವೀನ್‌, ಶೋಭಾಳ ಕತ್ತು ಹಿಸುಕಿ ಕೊ*ಲೆ‌ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.

Continue Reading

LATEST NEWS

Trending