Connect with us

BANTWAL

ಪುಂಜಾಲಕಟ್ಟೆ ಪ್ರಾಮಾಣಿಕ S.I ಮೇಲೆ ಸುಳ್ಳು ಆರೋಪ-ಆಕ್ರೋಶಗೊಂಡ ಸಾರ್ವಜನಿಕರಿಂದ ಡಿ.12ರಂದು ಬೃಹತ್ ಪ್ರತಿಭಟನೆ

Published

on

ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸರ ದಕ್ಷತೆ ಹಾಗೂ ಪ್ರಾಮಾಣಿಕತೆ ಬಗ್ಗೆ ಹಲವಾರು ವರ್ಷಗಳಿಂದ ನಾವು ಕೇಳುತ್ತಿದ್ದೇವೆ. ಅಂತಹ ಪೊಲೀಸರ ಬಗ್ಗೆ ಆರೋಪ ಹೊರಿಸುವುದು ನಿರರ್ಥಕ ಹಾಗೂ ಅರ್ಥಹೀನವಾಗಿದ್ದು, ಇದರ ವಿರುದ್ದ ಪುಂಜಾಲಕಟ್ಟೆ ಸಾರ್ವಜನಿಕರು ಪ್ರತಿಭಟನೆಗೆ ಸಿದ್ದರಾಗಿದ್ದಾರೆ ಎಂದು ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.

ನ್ಯಾಯವಾದಿ ಕುಲ್‌ದೀಪ್ ಶೆಟ್ಟಿ ಹಲ್ಲೆ ಆರೋಪದಲ್ಲಿ ಪುಂಜಾಲಕಟ್ಟೆ ಎಸ್‌ಐ ಸುತೇಶ್ ಅವರನ್ನು ವರ್ಗಾವಣೆ ಮಾಡಿರುವ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಡಿ.9 ರಂದು ಮಂಗಳೂರು ಐಜಿಪಿ ಕಚೇರಿಗೆ ದೂರು ನೀಡಿ ಬಳಿಕ ಪ್ರತಿಭಟನೆ ನಡೆಸಲಾಗುವುದು ಎಂದು ನಿರ್ಧರಿಸಿದ್ದಾರೆ.


ಈ ಬಗ್ಗೆ ಮಾತನಾಡಿರುವ ಎಂ ತುಂಗಪ್ಪ ಬಂಗೇರ ಅವರು ‘ಇಲ್ಲಿನ ಎಸ್.ಐ ಅವರನ್ನು ಆಡಳಿತ ವೈಫಲ್ಯ ಕಾರಣ ನೀಡಿ ವರ್ಗಾವಣೆ ‌ನಡೆಸಿರುವುದು ಸರಿಯಾದ ಕ್ರಮವಲ್ಲ.

ಘಟನೆಗೆ ಸಂಬಂಧಿಸಿದಂತೆ ಸರಿಯಾದ ತನಿಖೆ ನಡೆಸಿ ತಪ್ಪು ಸಾಬೀತಾದರೆ ಬಳಿಕ ಅವರನ್ನು ವರ್ಗಾವಣೆ ಮಾಡಬೇಕಿತ್ತು. ಈ ರೀತಿಯಲ್ಲಿ ಯಾರದೋ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿದ್ದು, ಇದು ನ್ಯಾಯವಲ್ಲ ಎಂದು ಅವರು ಆರೋಪಿಸಿದ್ದಾರೆ.

ವಕೀಲ ವೃತ್ತಿಯಲ್ಲಿರುವವರು ಅವರ ಪ್ರಾಮಾಣಿಕತೆಗನುಗುಣವಾಗಿ ಕಾರ್ಯಾಚರಿಸಬೇಕು. ಅವರು ಕೂಡಾ ಗೂಂಡಾಗಿರಿ ಮಾಡಿದರೆ ಮುಖ ನೋಡದೆ ಕೇಸ್ ಜಡಿದು ಜೈಲಿಗಟ್ಟುವುದಾದರೆ ಪೋಲೀಸರ ದಕ್ಷತೆ ಹಾಗೂ ಪ್ರಾಮಾಣಿಕತೆ ಸ್ಪಷ್ಟವಾಗಿ ಎದ್ದು ಕಾಣುವುದರಲ್ಲಿ ಅನುಮಾನವಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಂತಹ ದಕ್ಷ ಪೋಲೀಸಧಿಕಾರಿಗಳ ಮೇಲೆ ವಕೀಲರು ಅವರ ಶೌರ್ಯದಿಂದ ಸುಳ್ಳಾರೋಪ ಹೊರಿಸಿ ಪೋಲೀಸರನ್ನು ಮೂಲೆಗುಂಪುಮಾಡುವುದಾದರೆ ನಾಡಿನ ಪ್ರಬುದ್ದ ಪ್ರಜ್ಞಾವಂತ ನಾಗರಿಕರು ಸುಮ್ಮನಿರಲಾರರು.

ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕಾದದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಅದಕ್ಕೆ ಯಾರೂ ತಡೆಯಾಗಬಾರದು. ಆವಾಗ ಮಾತ್ರ ನಾಡಿನಲ್ಲಿ ಶಾಂತಿ ನೆಮ್ಮದಿ ಸ್ಥಾಪನೆಯಾಗಲು ಸಾಧ್ಯ.

ಅದಕ್ಕಾಗಿ ಜನಪ್ರತಿನಿಧಿಗಳು ಮೇಲಧಿಕಾರಿಗಳು ಕಾರಣವಾಗಬೇಕು. ಪ್ರಕರಣ ತಿರುಚಿದ್ದಾರಾ? ಹಾಗಲ್ಲದಿದ್ದಲ್ಲಿ ಎಸ್.ಐ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಈತ ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಒಬ್ಬ ವಕೀಲನಾಗಿ ಜಡ್ಜ್ ಮುಂದೆ ಯಾಕೆ ಹೇಳಿಲ್ಲ. ಪೊಲೀಸರು ಹಲ್ಲೆ ನಡೆಸಿದರೆ ಠಾಣೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿಲ್ವ.

ಸಾಕ್ಷಿ ಸಮೇತವಾಗಿ ವಕೀಲರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯ ಕೇಳಬಹುದಿತ್ತು. ಅಲ್ಲಿ ಅವರಿಗೆ ನ್ಯಾಯ ಸಿಗುವುದಿಲ್ಲಾ ಅಂತಾ ಗೊತ್ತಿತ್ತಾ? ಸಾರ್ವಜನಿಕರಿಗೆ ನ್ಯಾಯಾಲಯ ದ ಮೂಲಕ ನ್ಯಾಯ ಕೊಡಿಸುವ ವಕೀಲರುಗಳೇ ಬೀದಿಗಿಳಿದು ಹೋರಾಟ ನಡೆಸಿದರೆ ಏನರ್ಥ?

ಜಮೀನು ವಿಚಾರದಲ್ಲಿ ಉಂಟಾದ ಖಾಸಗಿ‌ ಸಂಘರ್ಷದಲ್ಲೂ ಸಂಘಟನೆ ಸೇರಿಕೊಂಡಾಗ, ಸತ್ಯಾಂಶವನ್ನು ತಿಳಿದು ಕೊಂಡಿಲ್ವಾ? ವೈದ್ಯಕೀಯ ತಪಾಸಣೆಯಲ್ಲಿ ಹಲ್ಲೆಯ ಬಗ್ಗೆ ದಾಖಲಿಸಲ್ವಾ? ಈ ಪ್ರಕರಣದ ತನಿಖೆ ನಡೆಸದೆ, ಏಕಾಏಕಿ ವರ್ಗಾವಣೆ ಮಾಡಿದ ಉದ್ದೇಶ ‌ಏನು? ಎಂಬ ಪ್ರಶ್ನೆಯನ್ನು ಪುಂಜಾಲಕಟ್ಟೆ ಸಾರ್ವಜನಿಕರು ಮಾಡಿದ್ದಾರೆ.

BANTWAL

ಹಿಂದೂ ಸಂಘಟನೆಯ ಮುಖಂಡನಿಗೆ ಸ್ನೇಹಿತನಿಂದಲೆ ಚೂ*ರಿ ಇರಿತ

Published

on

ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತನೇ ಚೂ*ರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ಭಾನುವಾರ(ಎ.14) ರಾತ್ರಿ ನಡೆದಿದೆ.

ಹಿಂದೂ ಯುವಸೇನೆಯ ಮುಖಂಡ ಉದ್ಯಮಿಯಾಗಿರುವ ಪುಷ್ಪರಾಜ್ ಎಂಬವರಿಗೆ ಜಕ್ರಿಬೆಟ್ಟು ಎಂಬಲ್ಲಿ ಚೂ*ರಿ ಇರಿತವಾಗಿದೆ. ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ರಿಕ್ಷಾದಲ್ಲಿ ಜತೆಯಾಗಿ ತೆರಳುತ್ತಿದ್ದಾಗಲೇ ಸ್ನೇಹಿತ ರವಿ ಎಂಬಾತ ಚೂ*ರಿಯಿಂದ ಕುತ್ತಿಗೆಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪುಷ್ಪರಾಜ್ ರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ರವಿ ಚೂ*ರಿ ಇರಿದು ಪರಾರಿಯಾಗಿದ್ದಾನೆ. ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ‌ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

BANTWAL

ಬಂಟ್ವಾಳ: ಮಾರ್ಗ ನಡುವೆ ಹೊ*ತ್ತಿ ಉರಿದ ಡಸ್ಟರ್ ಕಾರ್

Published

on

ಬಂಟ್ವಾಳ: ಡಸ್ಟರ್ ಕಾರೊಂದು ಮಾರ್ಗದ ನಡುವೆ ಹೊ*ತ್ತಿ ಉರಿದ ಘಟನೆ ಬಂಟ್ವಾಳ – ಮೂಡುಬಿದಿರೆಯ ಕುದ್ಕೋಳಿ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಕಾರಿನಲ್ಲಿ ಏಕಾಏಕಿ ಬೆಂ*ಕಿ ಕಾಣಿಸಿಕೊಂಡಿದ್ದು ಕಾರಿನಲ್ಲಿದ್ದವರು ಕಾರಿನಿಂದ ಕೆಳಗಿಳಿದಿದ್ದಾರೆ. ಬೆಂ*ಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಮತ್ತು ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂ8ಕಿ ನಂದಿಸುವ ಕಾರ್ಯ ನಿರ್ವಹಿಸಿದರು. ಸುಮಾರು ಒಂದು ಗಂಟೆಯ ಕಾಲ ಬಂಟ್ವಾಳ-ಮೂಡಬಿದ್ರೆ ರೋಡ್ ಬ್ಲಾಕ್ ಆಗಿತ್ತು.

ಕಾರಿನ ಬ್ಯಾಟರಿ ಶಾರ್ಟ್‌ ಸಕ್ಯೂರ್ಟ್‌ನಿಂದಾಗಿ ಬೆಂ*ಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಮಗು ಸೇರಿದಂತೆ ನಾಲ್ಕು ಮಂದಿ ಇದ್ದರು. ಆದರೆ ಯಾರಿಗೂ ಹಾನಿಯಾಗಲಿಲ್ಲ.

Continue Reading

BANTWAL

ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕ ಸಾ*ವು

Published

on

ಬಂಟ್ವಾಳ: ಮೊಬೈಲ್ ನೋಡುತ್ತ ನಡೆದ ಬಾಲಕನೊಬ್ಬ ಮಹಡಿಯ ಮೇಲಿಂದ ಕೆಳಗೆ ಬಿದ್ದು ಮೃ*ತಪಟ್ಟ ಘಟನೆ ಬಂಟ್ವಾಳದ ಜಕ್ರಿ ಬೆಟ್ಟಿನಲ್ಲಿ ನಡೆದಿದೆ. ಬಂಟ್ವಾಳ ಜಕ್ರಿ ಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್ (15) ಮೃತ ಬಾಲಕ.

died

ಆತ ಮನೆಯಲ್ಲಿ ದೊಡ್ಡಮ್ಮನ ಜತೆ ಮಲಗಿದ್ದು, ಮುಂಜಾನೆ ಮೊಬೈಲ್ ಹಿಡಿದುಕೊಂಡು ಹೊರಗೆ ಬಂದಿದ್ದಾನೆ. ಮನೆಮಂದಿ ಬೆಳಗ್ಗೆ ಎದ್ದು ನೋಡುವಾಗ ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಆತ ಮೃ*ತಪಟ್ಟಿದ್ದ ಎನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

Continue Reading

LATEST NEWS

Trending