Connect with us

  DAKSHINA KANNADA

  ಕುಚ್ಚಲಕ್ಕಿ ಕೊಡೋಕೆ ಆಗಿಲ್ಲ-ಕೋಮುವಾದ ಮಾತ್ರ ಇವರ ಚುನಾವಣಾ ಅಜೆಂಡಾ: ಯು.ಟಿ ಖಾದರ್

  Published

  on

  ಮಂಗಳೂರು: ದೊಡ್ಡ ರೀತಿಯಲ್ಲಿ ಬೇಡ. ಕನಿಷ್ಟ ಪಕ್ಷ ಕುಚ್ಚಲಕ್ಕಿ ಭಾಗ್ಯ ಕೂಡಾ ದ.ಕ ಜಿಲ್ಲೆಗೆ ತರಲು ಇವರಿಗೆ ಸಾಧ್ಯವಾಗಲಿಲ್ಲ. ಇವರು ಬೆಂಗಳೂರಿಗೆ ಹೋಗೋದು ಸಿಎಂ ಜೊತೆ ಚರ್ಚಿಸೋದು. ಮಾಧ್ಯಮಗಳಲ್ಲಿ ಹಾಕಿಸೋದು. ಅಲ್ಲಿಗೆ ಜನರು ಕುಚ್ಚಲಕ್ಕಿ ತಿಂದು ಖುಷಿ ಪಡ್ತಿದ್ದಾರೆ ಅಲ್ವಾ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ವ್ಯಂಗ್ಯವಾಡಿದರು.

  ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ‘ಇವರಿಗೆ ಹೇಳಿದನ್ನು ಮಾಡುವ ಸಾಮರ್ಥ್ಯವಿಲ್ಲ. ಕೋಮುವಾದ ಮಾತ್ರ ಇವರ ಚುನಾವಣಾ ಅಜೆಂಡಾ’ ಎಂದು ಹೇಳಿದರು.

  ರಾಜ್ಯ ಸರಕಾರ ಆರ್ಥಿಕವಾಗಿ ದಾರಿದ್ರ್ಯದ ಪರಿಸ್ಥಿತಿಗೆ ಬಂದು ನಿಂತಿದೆ. ಈ ಸಲದ ಅಬ್ಬಕ್ಕ ಉತ್ಸವಕ್ಕೆ ಸರಕಾರದಿಂದ ಬರೀ 10 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಇದು ನಮ್ಮ ಉತ್ಸವಕ್ಕೆ, ವೀರರಾಣಿ ಅಬ್ಬಕ್ಕಳಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಇವರು ದೂರಿದ್ದಾರೆ.


  ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಅಬ್ಬಕ್ಕ ಉತ್ಸವಕ್ಕೆ 2008ರಿಂದ ಪ್ರತೀ ವರ್ಷ 5 ಲಕ್ಷ ರೂಪಾಯಿಯಂತೆ ಜಾಸ್ತಿ ಮಾಡಿ, ಸಿದ್ಧರಾಮಯ್ಯ ಸರಕಾರ ಇರುವಾಗ 50 ಲಕ್ಷ ರೂಪಾಯಿ ಅನುದಾನ ನೀಡಲಾಗಿತ್ತು.

  ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯವರೇ ಕನ್ನಡ ಮತ್ತು ಸಂಸ್ಕೃತಿ ಸಚಿವರು. ಇದು ಅದ್ದೂರಿಯಾಗಿ ನಡೆಯಬೇಕಾಗಿತ್ತು. ಅನುದಾನ ಬರಬೇಕಾಗಿತ್ತು. ಪ್ರತಿಯೊಂದು ವಿಚಾರದಲ್ಲೂ ಆಡಳಿತ ವೈಫಲ್ಯತೆ ಕಂಡಿದೆ.

  ಇನ್ನೂ ಕೂಡಾ ಸರಕಾರ ಬಿಪಿಎಲ್‌ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಏನಾದರೂ ದುರಂತ ನಡೆದರೆ ತುರ್ತು ವಾಹನ 108 ಮಾಡಿ 800 ಅಂಬುಲೆನ್ಸ್ ಮಾಡಿದರೆ ಅದರ ನಿರ್ವಹಣೆ ಇಲ್ಲ, ಹೊಸ ಆಂಬುಲೆನ್ಸ್ ಖರೀದಿ ಮಾಡಿಲ್ಲ, ಡ್ರೈವರ್ ನೇಮಕಾತಿಯೂ ಮಾಡಿಲ್ಲ.

  ಕಾಂಗ್ರೆಸ್ ಸರಕಾರ ಇದ್ದಾಗ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ. 2o ನಿಮಿಷ ಬಿಟ್ಟು 25 ನಿಮಿಷ ಆಗುವಾಗ ನಮ್ಮ ಎಂಕ್ವೈರಿ ಆಗುತ್ತಿತ್ತು. ಪ್ರಶ್ನೆ ಮಾಡ್ಲಿಕ್ಕೆ ಕೂಡಾ ಕಾಲ್ ಮಾಡುತ್ತಿದ್ದರು. ಮೂರು ಕೋವಿಡ್ ಬಂತು. ಮೂರರಲ್ಲಿ ಒಂದು ಕೋವಿಡ್‌ನಲ್ಲಾದರೂ ಇವರು ಆ್ಯಂಬುಲೆನ್ಸ್ ಖರೀದಿ ಮಾಡಿದ್ದಾರಾ? ಎಂದರು.

  ಹೊಸ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿ ಸಿಬ್ಬಂದಿಗೆ ವೇತನ ಕೊಡಲು ನಿಮ್ಮಲ್ಲಿ ದುಡ್ಡಿಲ್ಲದಿದ್ದರೆ ಅನಾವಶ್ಯಕ ದುಡ್ಡು ಯಾಕೆ ಖರ್ಚು ಮಾಡುತ್ತೀರಿ ಎಂದು ಪ್ರಶ್ನಿಸಿದರು.

  ವಿದ್ಯಾರ್ಥಿಗಳಿಗೆ ಒಂದೇ ಒಂದು ಕಾಲೇಜು ಓಪನ್ ಮಾಡಿಲ್ಲ. ಗ್ಯಾಸ್ ರೇಟ್ ಹೆಚ್ಚಾಗ್ತಾ ಇದೆ. ಅದನ್ನು ಕೇಳುವವರು ಕೂಡಾ ಯಾರೂ ಇಲ್ಲ. ಜನವಿರೋಧಿ, ಮಾನವೀಯತೆ ಇಲ್ಲದ ಸರ್ಕಾರದ ಬಗ್ಗೆ ದೊಡ್ಡ ಮಟ್ಟದ ಜನಜಾಗೃತಿ ಮಾಡುವ ನಿಟ್ಟಿನಲ್ಲಿ ನಾಳೆ ಸಿದ್ಧರಾಮಯ್ಯ ಅವರು ಮಂಗಳೂರಿಗೆ ಆಗಮಿಸಿದ್ದಾರೆ. ಇಂದು ಯುವಕರು ನಿರುದ್ಯೋಗಿಗಳಾಗಿದ್ದಾರೆ.

  ಅವರ ಡಬಲ್ ಇಂಜಿನ್ ಇದೆ ಅಲ್ವಾ ಅದು ಕಮ್ಯನಲ್ ಫ್ಯೂಲ್. ಅವರ ಸ್ಯಾಲೆನ್ಸರ್‌ನಿಂದ ಬರುವ ಹೊಗೆ ಅದು ವಿಷ. ವಿಷ ಯಾರನ್ನೂ ಬದುಕಿಸುವುದಿಲ್ಲ. ಅದು ಸಾಯಿಸುತ್ತದೆ. ಅವರ ಇಂಜಿನ್ ಮತ್ತು ಅವರ ಬಾಡಿ ಇದೆಯಲ್ವಾ ಅದು ಕಟ್ಟಿದೆ ಜನರ ಕಣ್ಣೀರು ಮತ್ತು ರಕ್ತದಲ್ಲಿ. ಅದಕ್ಕೆ ಇನ್ನು ಜನರು ಇವರ ಇಂಜಿನ್‌ನ್ನು ಸ್ಕ್ರ್ಯಾಚ್ ಮಾಡಿ ಬಿಸಾಡ್ತಾರೆ. ಅದಕ್ಕೆ ಕಾಲ ಬಂದಿದೆ.

  ಜಾನುವಾರುಗಳ ಚರ್ಮಗಂಟು ರೋಗ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ..? ಮಾಧ್ಯಮಗಳಲ್ಲಿ ನಾನೇ ನೋಡುತ್ತಿದ್ದಂತೆ 21000 ಜಾನುವಾರುಗಳು ಇವತ್ತು ಚರ್ಮಗಂಟು ರೋಗದಲ್ಲಿ ಸಾವನ್ನಪ್ಪಿದೆ. ಅದಕ್ಕೆ ಯಾವುದೇ ಲಸಿಕೆ ಔಷಧಿಗಳನ್ನು ಇವರು ಇನ್ನೂ ಪತ್ತೆಹಚ್ಚಿಲ್ಲ. ಈಗ ನಂದಿನಿಯನ್ನು ಅಮುಲ್ ಜೊತೆ ಸೇರಿಸುವ ಮುನ್ಸೂಚನೆ ನೀಡಿದ್ದೀರಿ ಎಂದರು.

  ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ನೀವು ರಾಜಕೀಯ ಮಾಡುತ್ತಿದ್ದೀರಿ. ಇಂಜಿನಿಯರ್ ಕಲಿತು ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರುವಂತಾಗಿದೆ.

  ಯುವಕರಿಗೆ ಉದ್ಯೋಗವಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಹರೇಕಳ ಕಡವಿನ ಬಳಿ ಮಾಜಿ ಮುಖ್ಯಮಂತ್ರಿ ನಾಳೆ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಲಿದ್ದು, ಹಿರಿಯ ನಾಯಕರು ಭಾಗವಹಿಸಲಿದ್ದಾರೆ ಎಂದರು.

  DAKSHINA KANNADA

  ಸರ್ಕಾರಿ ಬಸ್ ಮತ್ತು ಟ್ಯಾಂಕರ್ ಮಧ್ಯೆ ಅಪ*ಘಾತ; ಹಲವರಿಗೆ ಗಾ*ಯ

  Published

  on

  ಚಿಕ್ಕಮಗಳೂರು: KSRTC ಹಾಗೂ ಟ್ಯಾಂಕರ್ ಮಧ್ಯೆ ಭಯಾನಕ ಡಿ*ಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಹಲವರಿಗೆ ಗಂಭೀರ ಗಾ*ಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

  ಮೂಡಿಗೆರೆ ತಾಲೂಕಿನ ಕಡೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರವಳಲು ಬಳಿ ಈ ಅಪ*ಘಾತ ಸಂಭವಿಸಿದೆ. ಅಪ*ಘಾತದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾ*ಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾ*ನಿ ಸಂಭವಿಸಿಲ್ಲ.

  KSRTC, ಟ್ಯಾಂಕರ್ ಅಪ*ಘಾತದಿಂದ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  Continue Reading

  DAKSHINA KANNADA

  ರಾಷ್ಟಮಟ್ಟದ ಪರ್ವತಾರೋಹಣಕ್ಕೆ ಕರ್ನಾಟಕದ ಏಕೈಕ ವಿದ್ಯಾರ್ಥಿನಿ…!

  Published

  on

  ಪುತ್ತೂರು : ಅಟಲ್ ಬಿಹಾರಿ ವಾಜಪೇಯಿ ಇನ್‍ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್ಸ್ ಆಶ್ರಯದಲ್ಲಿ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಎನ್‍ಸಿಸಿ ಅಖಿಲ ಭಾರತ ವಿಶೇಷ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆರ್ಮಿ ಎನ್‍ಸಿಸಿ ಕೆಡೆಟ್ ಸಮೃದ್ಧಿ ಚೌಟ ಭಾಗವಹಿಸಿ ಮುಂದಿನ ರಾಷ್ಟ್ರಮಟ್ಟದ ಪರ್ವತಾರೋಹಣಕ್ಕೆ ಆಯ್ಕೆಗೊಂಡಿದ್ದಾರೆ.


  2024ನೇ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಎನ್‍ಸಿಸಿ ಹುಡುಗಿಯರ ವಿಭಾಗದಲ್ಲಿ ಸಮೃದ್ಧಿ ಚೌಟ ಏಕೈಕ ಕೆಡೆಟ್ ಆಗಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯ 15,700 ಅಡಿ ಎತ್ತರದ ‘ಶಿಥಿಧರ್’ ಶಿಖರವನ್ನು ಏರಲು ಎನ್.ಸಿ.ಸಿ ಮಹಾನಿರ್ದೇಶಕರು ನವದೆಹಲಿ ವತಿಯಿಂದ ಮೂಲ ಪರ್ವತಾರೋಹಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ದೇಶದ 48 ಮಂದಿ ಎನ್.ಸಿ.ಸಿ. ಕೆಡೆಟ್ ಗಳು ಭಾಗವಹಿಸಿದ್ದರು.

  ಇದನ್ನೂ ಓದಿ : ಬಜೆಟ್ 2024 : ಚಿನ್ನ, ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ನಿರ್ಮಲಾ ಸೀತಾರಾಮನ್

  ಸಮೃದ್ಧಿ ಚೌಟ ಈ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ತರಬೇತಿಯ ‘ಬೆಸ್ಟ್ ರೋಪ್ ಟೀಮ್’ ಪ್ರಶಸ್ತಿಗೆ ಭಾಜನರಿದ್ದಾರೆ. ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾ.ಜೋನ್ಸನ್ ಡೇವಿಡ್ ಸಿಕ್ವೇರಾ ಅವರ ತರಬೇತಿಯಲ್ಲಿ ಪಳಗಿದ ಸಮೃದ್ಧಿ ಚೌಟ ಅವರ ಸಾಧನೆಗೆ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ಫಾ. ಲಾರೆನ್ಸ್ ಮಸ್ಕರೇನಸ್ ಹಾಗೂ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಅವರು ಅಭಿನಂದಿಸಿದ್ದಾರೆ.

  Continue Reading

  DAKSHINA KANNADA

  ಇನ್​ಸ್ಟಾಗ್ರಾಂನಲ್ಲಿ ಈ ರೀಲ್ಸ್​ ನೋಡುವುದರಿಂದಲೂ ನಿಮ್ಮ ತೂಕ ಹೆಚ್ಚಾಗಬಹುದು!

  Published

  on

  ಫೇಸ್​ಬುಕ್, ಇನ್​ಸ್ಟಾಗ್ರಾಂ ಮತ್ತು ಸ್ನಾಪ್​ಚಾಟ್​ನಲ್ಲಿ ನಾವು ನೋಡುವ ರೀಲ್‌ಗಳು ಹೆಚ್ಚು ವ್ಯಸನಕಾರಿ ಎಂದು ಎಲ್ಲಾ ವಯಸ್ಸಿನ ಜನರು ಒಪ್ಪಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಾವು ವೀಕ್ಷಿಸಲು ಇಷ್ಟಪಡುವದನ್ನು ತಮ್ಮ ಆದ್ಯತೆಗಳನ್ನು ಹೊಂದಿದ್ದರೂ, ಒಮ್ಮೆ ನೀವು ಸ್ಕ್ರೋಲಿಂಗ್ ಮಾಡಲು ಪ್ರಾರಂಭಿಸಿದರೆ, ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ನಾವು ಆಹಾರಕ್ಕೆ ಸಂಬಂಧಿಸಿದಂತೆ ಅತಿಯಾಗಿ ರೀಲ್ಸ್ ನೋಡುವುದರಿಂದಲೂ ನಮ್ಮ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

  “ಆಹಾರದ ವೀಡಿಯೊಗಳು ವ್ಯಸನಕಾರಿಯಾಗಿದೆ. ಏಕೆಂದರೆ ಅವು ನಮ್ಮ ಆಹಾರದ ಕಡುಬಯಕೆಗಳೊಂದಿಗೆ ಸಂಯೋಜಿಸಲ್ಪಟ್ಟ ಉತ್ಪನ್ನಕ್ಕೆ ಹಂತ-ಹಂತದ ಪ್ರಕ್ರಿಯೆಯನ್ನು ಪ್ರದರ್ಶಿಸುತ್ತವೆ” ಎಂದು ತಜ್ಞರು ಹೇಳುತ್ತಾರೆ. ನೀವು ರೀಲ್ಸ್​ನಲ್ಲಿ ರುಚಿಯಾದ ಅಡುಗೆ ತಯಾರಿಸುವುದನ್ನು ಹೆಚ್ಚಾಗಿ ನೋಡುತ್ತಿದ್ದರೆ, ಫುಡ್ ವ್ಲಾಗ್​​ಗಳನ್ನು ನೋಡುತ್ತಿದ್ದರೆ ನಿಮಗೂ ಆ ತಿನಿಸನ್ನು ತಿನ್ನಬೇಕೆಂಬ ಬಯಕೆಯಾಗುವುದು ಸಹಜ. ಅದು ನಿಮಗೇ ಗೊತ್ತಿಲ್ಲದಂತೆ ನಿಮ್ಮಲ್ಲಿ ತಿನ್ನುವ ಹಪಹಪಿಯನ್ನು ಹೆಚ್ಚಿಸುತ್ತದೆ.

  ದೆಹಲಿ ಮೂಲದ ಮನಶ್ಶಾಸ್ತ್ರಜ್ಞರಾದ ಶಿವಂಗಿ ರಜಪೂತ್ ಪ್ರಕಾರ, ಆಹಾರದ ರೀಲ್‌ಗಳನ್ನು ನೋಡುವುದು ನಿಮ್ಮ ಮನಸ್ಸಿನ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಈ ರೀಲ್‌ಗಳು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಬಹುದು, ವಿಶ್ರಾಂತಿ ನೀಡಬಹುದು ಮತ್ತು ಅಡುಗೆಮನೆಯಲ್ಲಿ ಸೃಜನಶೀಲತೆಯನ್ನು ಪ್ರೇರೇಪಿಸಬಹುದು. ಇದು ಬಲವಾದ ಕಡುಬಯಕೆಗಳನ್ನು ಪ್ರಚೋದಿಸಬಹುದು, ಇದು ಅತಿಯಾಗಿ ತಿನ್ನುವುದು ಅಥವಾ ಅನಾರೋಗ್ಯಕರ ತಿನ್ನುವ ಮಾದರಿಗಳಿಗೆ ಕಾರಣವಾಗುತ್ತದೆ.

  ಪ್ರಲೋಭನಗೊಳಿಸುವ ಆಹಾರ ಚಿತ್ರಗಳಿಗೆ ನಿರಂತರ ಒಡ್ಡಿಕೊಳ್ಳುವಿಕೆಯು ಮೆದುಳಿನ ಡೋಪಮೈನ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಆಹ್ಲಾದಕರ ಭಾವನೆಗಳನ್ನು ಸೃಷ್ಟಿಸುತ್ತದೆ. ನೀವು ಹಲವಾರು ವಿಭಿನ್ನ ವೀಡಿಯೊಗಳನ್ನು ನೋಡುವುದರಿಂದ, ನಿಮ್ಮ ಬೆರಳುಗಳು ಸ್ಕ್ರೋಲಿಂಗ್ ಮಾಡುತ್ತಲೇ ಇರುತ್ತವೆ, ಇದು ಹೆಚ್ಚಿದ ಪರದೆಯ ಸಮಯ ಮತ್ತು ದೈಹಿಕ ಚಟುವಟಿಕೆಯ ಕೊರತೆಗೆ ಕಾರಣವಾಗುತ್ತದೆ. ನಿಷ್ಕ್ರಿಯತೆಯು ನಿಮ್ಮ ಸಾಮಾನ್ಯ ಹಸಿವಿನ ಸಂಕೇತವನ್ನು ಅಡ್ಡಿಪಡಿಸುತ್ತದೆ ಮತ್ತು ತಿನ್ನಲು ಕಾರಣವಾಗಬಹುದು.

  Continue Reading

  LATEST NEWS

  Trending