Monday, July 4, 2022

ಎಲ್ಲಾ ಖಾಸಗಿ ಬಸ್‌ ಪರವಾನಗಿ ರದ್ದು ಎಂದ ಸಾರಿಗೆ ಸಚಿವ

ಬಳ್ಳಾರಿ: ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಸಂಭವಿಸಿದ ಅಪಘಾತ ದುರದೃಷ್ಟಕರ ಘಟನೆಯಾಗಿದೆ. 8 ಜನರ ಸಾವಾಗಿ, 25 ಜನರಿಗೆ ಗಾಯವಾಗಿದೆ. ಪಾವಗಡ ವ್ಯಾಪ್ತಿಯ ಎಲ್ಲ ಖಾಸಗಿ ಬಸ್‌ ಪರವಾನಗಿ ರದ್ದು ಮಾಡ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.


ಅಲ್ಲಿನ ಬಸ್​ಗಳಿಗೆ ಪರ್ಮಿಟ್ ಹಾಗೂ ಫಿಟ್ನೆಸ್ ಇದೆಯೇ ಅನ್ನೋ ಬಗ್ಗೆ ಪರಿಶೀಲಿಸಲಾಗ್ತಿದೆ.

ಓವರ್ ಲೊಡ್ ಮತ್ತು ಅತಿವೇಗ, ಹಾಗೂ ಟಾಪ್ ಮೇಲೆ ಜನರನ್ನು ಕೂರಿಸಿಕೊಂಡು ಬಂದದ್ದು ಘಟನೆಗೆ ಕಾರಣ ಎನ್ನಲಾಗಿದೆ. ಈ ಭಾಗದಲ್ಲಿ ಖಾಸಗಿ ಬಸ್​ಗಳಿಗೆ ಕಡಿವಾಣ ಹಾಕಿ ಸರ್ಕಾರಿ ಬಸ್ ಬಿಡೋ ಕೆಲಸ ಮಾಡ್ತೇವೆ.

ಎಲ್ಲ ಖಾಸಗಿ ಬಸ್‌( ಪಾವಗಡ ವ್ಯಾಪ್ತಿ) ಪರವಾನಗಿ ರದ್ದು ಮಾಡ್ತೇವೆ. ಮುಖ್ಯಮಂತ್ರಿಗಳಿಗೆ ಘಟನೆ ಬಗ್ಗೆ ವಿವರಣೆ ನೀಡಿದ್ದೇನೆ. ತಿರುವಿನಲ್ಲಿ ಓವರ್ ಸ್ಪೀಡ್ ಆಗಿ ಹೊಗಿರೋದು ಅಪಘಾತ ಕಾರಣ ಎಂದರು.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಕೆರೆಗೆ ಕಾಲು ಜಾರಿ ಬಿದ್ದು ವ್ಯಕ್ತಿ ಕೊನೆಯುಸಿರು

ಬೆಳ್ತಂಗಡಿ: ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಬದ್ಯಾರು ಬಳಿ ಇಂದು ನಡೆದಿದೆ.ಕುಶಾಲಪ್ಪ ಗೌಡ (46) ಮೃತ ವ್ಯಕ್ತಿ. ಮೃತ ಕುಶಾಲಪ್ಪ ಗೌಡ ಮನೆಯ...

ಸಮಾಜವಾದಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ ಅಖಿಲೇಶ್‌ ಯಾದವ್‌

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಎಲ್ಲ ಘಟಕಗಳನ್ನು ಭಾನುವಾರ ವಿಸರ್ಜಿಸಿದ್ದಾರೆ. ಇದರಲ್ಲಿ ಯುವ ಘಟಕ ಮತ್ತು ಮಹಿಳಾ ಘಟಕಗಳು ಕೂಡ ಸೇರಿವೆ.ತಮ್ಮ ಈ...

ಡಿಸಿಪಿ ಹರಿರಾಂ ಶಂಕರ್‌ಗೆ ಮಂಗಳೂರು ನಗರ ಪೊಲೀಸರ ಹೃದಯಸ್ಪರ್ಶಿ ಬೀಳ್ಕೊಡುಗೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಿಂದ ಹಾಸನ ಜಿಲ್ಲೆಗೆ ಎಸ್ಪಿಯಾಗಿ ವರ್ಗಾವಣೆಗೊಂಡ ಡಿಸಿಪಿ ಹರಿರಾಂ ಶಂಕರ್‌ ಅವರನ್ನು ಇಂದು ಮಂಗಳೂರು ನಗರ ಪೊಲೀಸರು ಬೀಳ್ಕೊಟ್ಟರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಿರಾಂ ಶಂಕರ್‌, ಮಂಗಳೂರಿನಲ್ಲಿ ವಿವಿಧ...