Home ಪುತ್ತೂರು ಹಂದಿ ಬೇಟೆಗೆ ಸ್ಪೋಟಕ ಇಟ್ಟಿದ್ದು ನಾನಲ್ಲ: ಆರೋಪಿತ ವ್ಯಕ್ತಿ ಜಾನ್ಸನ್‌ ಪಿ.ಜೆ ಸ್ಪಷ್ಟನೆ

ಹಂದಿ ಬೇಟೆಗೆ ಸ್ಪೋಟಕ ಇಟ್ಟಿದ್ದು ನಾನಲ್ಲ: ಆರೋಪಿತ ವ್ಯಕ್ತಿ ಜಾನ್ಸನ್‌ ಪಿ.ಜೆ ಸ್ಪಷ್ಟನೆ

ಹಂದಿ ಬೇಟೆಗೆ ಸ್ಪೋಟಕ ಇಟ್ಟಿದ್ದು ನಾನಲ್ಲ: ಆರೋಪಿತ ವ್ಯಕ್ತಿ ಜಾನ್ಸನ್‌ ಪಿ.ಜೆ ಸ್ಪಷ್ಟನೆ

ಕಡಬ: ಕಡಬದ ಬಲ್ಯ ಗ್ರಾಮದ ಸಂಪಡ್ಕ ಗುಂಡ್ಯ ಹೊಳೆಯ ತಟದಲ್ಲಿ ಹಂದಿ ಬೇಟೆಗೆಂದು ಸ್ಪೋಟಕ ಇಟ್ಟು ಅದನ್ನು ಹಸು ತಿಂದು ಮಾರಣಾಂತಿಕವಾಗಿ ಗಾಯಗೊಂಡಿತ್ತು. ಈ ಹಿನ್ನೆಲೆ ಹಸುವಿನ ಮಾಲಕಿ, ಜೋನ್ಸನ್ ಪಿ.ಜೆ. ಎಂಬವರ ವಿರುದ್ಧ ದೂರು ನೀಡಿದ್ದರು.

ಇದೀಗ ಆರೋಪಿತ ವ್ಯಕ್ತಿ ಜಾನ್ಸನ್‌ ಪತ್ರಿಕಾ ಗೋಷ್ಟಿಯನ್ನು ಆಯೋಜಿಸಿದ್ದು, ನನ್ನ ವಿರುದ್ಧ ವೃಥಾ ಕಾರಣ ಆರೋಪ ಮಾಡಲಾಗುತ್ತಿದೆ. ನಾನು ಸ್ಫೋಟಕವನ್ನು ಇಟ್ಟಿಲ್ಲ. ಯಾವ ಪುಣ್ಯ ಕ್ಷೇತ್ರದಲ್ಲಿ ಬೇಕಾದರೂ ಸತ್ಯ ಪ್ರಮಾಣ ಮಾಡಲಿಕ್ಕೆ ಸಿದ್ದ ಎಂದು ಜೋನ್ಸನ್ ಪಿ.ಜೆ. ಹೇಳಿದ್ದಾರೆ. ಹೊಳೆ ಬದಿಗೆ ಹೋಗಿದ್ದಾಗ ಹಸುವೊಂದರ ಮುಖದಲ್ಲಿ ರಕ್ತ ಹರಿಯುತ್ತಿದ್ದದ್ದು ಕಂಡು, ಕೂಡಲೆ ಬಂದು ಅದರ ಮಾಲಿಕರಿಗೆ ತಿಳಿಸಿದೆ. ಅದೇ ತಪ್ಪಾಯಿತು. ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ.

ನಾನು ಸ್ಫೋಟಕ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಈಗಾಗಲೇ ಪೋಲಿಸರಿಗೆ ಮಾಹಿತಿ ನೀಡಿದ್ದೇವೆ. ನನಗೆ ಎಂಡೋ ಪೀಡಿತನಾಗಿರುವ ಸುಮಾರು ೨೧ ವರ್ಷದ ವಿಕಲಚೇತನ ಮಗನಿದ್ದು ಅವನ ಆರೈಕೆಯೂ ಮಾಡಬೇಕಿದ್ದು, ಇದರಿಂದ ನನಗೆ ತುಂಬಾ ಕಷ್ಟವಾಗುತ್ತಿದೆ. ಈ ಸತ್ಯ ವಿಚಾರವನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಜೋನ್ಸನ್ ಹೇಳಿದರು.

ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ತಾಲೂಕು ಅಧ್ಯಕ್ಷ ಕ್ಸೇವಿಯರ್ ಬೇಬಿ, ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ, ಜೋಣಿ ಪಿ.ಟಿ, ರಾಜು.ಪಿ.ಜೆ, ತೋಮಸ್ ಪಿ.ಯು ಇನ್ನಿತರರು ಉಪಸ್ಥಿತರಿದ್ದರು.

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...