Friday, March 31, 2023

ಸನ್ನಿ ಲಿಯೋನ್ ಪಾಲ್ಗೊಳ್ಳಬೇಕಿದ್ದ ಫ್ಯಾಷನ್ ಶೋ ಕಾರ್ಯಕ್ರಮದ ಸನಿಹದಲ್ಲೇ ಬಾಂಬ್ ಸ್ಪೋಟ..!

ಬಾಲಿವುಡ್ ಹಾಟ್ ತಾರೆ ಸನ್ನಿ ಲಿಯೋನ್ ಪಾಲ್ಗೊಳ್ಳಬೇಕಿದ್ದ ಫ್ಯಾಷನ್ ಶೋ ಕಾರ್ಯಕ್ರಮದ ಸನಿಹದಲ್ಲೇ ಬಾಂಬ್ ಸ್ಪೋಟವಾಗಿದೆ.

ಮಣಿಪುರ : ಬಾಲಿವುಡ್ ಹಾಟ್ ತಾರೆ ಸನ್ನಿ ಲಿಯೋನ್ ಪಾಲ್ಗೊಳ್ಳಬೇಕಿದ್ದ ಫ್ಯಾಷನ್ ಶೋ ಕಾರ್ಯಕ್ರಮದ ಸನಿಹದಲ್ಲೇ ಬಾಂಬ್ ಸ್ಪೋಟವಾಗಿದೆ.

ಬಾಂಬ್ ಸ್ಪೋಟದಿಂದ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ, ಸನ್ನಿ ಲಿಯೋನ್ ಮಣಿಪುರದ ರಾಜಧಾನಿ ಹಟ್ಟಾ ಕಾಂಗ್ಜೆಬುಂಗ್ ಪ್ರದೇಶದಲ್ಲಿ ನಡೆಯುತ್ತಿದ್ದ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು.

ಅಷ್ಟರಲ್ಲೇ ಈ ಸ್ಫೋಟ ಸಂಭವಿಸಿದ್ದು ಸಹಜವಾಗಿಯೇ ಆತಂಕ ಮೂಡಿಸಿದೆ.

ಶನಿವಾರ ಬೆಳಗ್ಗೆ 6.30ರ ಹೊತ್ತಿಗೆ ಸನ್ನಿ ಲಿಯೋನ್ ಭಾಗಿಯಾಗಬೇಕಿದ್ದ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿ ಈ ಪ್ರಬಲ ಸ್ಪೋಟ ನಡೆದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಈ ಘಟನೆಯಿಂದ ಯಾವುದೇ ರೀತಿಯ ಜೀವಹಾನಿ ಯಾಗಿಲ್ಲವೆಂದು ತಿಳಿದು ಬಂದಿದ್ದು, ಸಂಬಂಧಿಸಿದ ಘಟನೆ ಕುರಿತಂತೆ ಶೋಧ ಕಾರ್ಯ ಮುಂದುವರೆದಿದೆ.

ಫ್ಯಾಷನ್ ಶೋ ಆಯೋಜಕರು ಸನ್ನಿ ಲಿಯೋನ್ ಅವರಿಗೆ ಈ ಮಾಹಿತಿ ನೀಡಿದ್ದು, ತಮ್ಮ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಅಲ್ಲದೇ ಭದ್ರತೆಯನ್ನು ಹೆಚ್ಚಿಸಿರುವ ಕುರಿತು ಮಾಹಿತಿಯನ್ನು ಅವರು ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics