Tuesday, May 30, 2023

ಬಂಟ್ವಾಳ: ಪೋಕ್ಸೋ ಪ್ರಕರಣದ ಆರೋಪಿಯ ಅಪರಾಧ ಸಾಬೀತು- 3 ವರ್ಷ ಕಠಿಣ ಜೈಲು

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣದ ಆರೋಪಿಯ ಅಪರಾಧ ಸಾಬೀತಾಗಿದ್ದು,

ಆತನಿಗೆ ನ್ಯಾಯಾಲಯವು 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.


ಆರೋಪಿ ವಿನ್ಸೆಂಟ್ ಪಿಂಟೊ ಯಾನೆ ವಿನ್ಸೆಂಟ್ ರೊನಾಲ್ಡ್ ಪ್ರವೀಣ್ ಪಿಂಟೊ ಶಿಕ್ಷೆ ವಿಧಿಸಲ್ಪಟ್ಟ ಆರೋಪಿಯಾಗಿದ್ದಾನೆ.

ಈತನ ವಿರುದ್ಧ ಬಂಟ್ವಾಳ ನಗರ ಠಾಣೆಯ ಅಂದಿನ ಇನ್ಸ್‌ ಸ್ಪೆಕ್ಟರ್ ಆಗಿದ್ದ ಚೆಲುವರಾಜು ಹಾಗೂ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ರು.

ಆರೋಪಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ತೀರ್ಪು ನೀಡಿದೆ.

LEAVE A REPLY

Please enter your comment!
Please enter your name here

Hot Topics