Sunday, July 3, 2022

ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ-ಸಿಎಂ, ರಾಜ್ಯಪಾಲ, ಬಿಜೆಪಿ ರಾಜ್ಯಾಧ್ಯಕ್ಷರಿಂದ ಸ್ವಾಗತ

ಬೆಂಗಳೂರು: ನಾಳೆ ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ.
ಇಂದು ಬೆಳಗ್ಗೆ 11.55ಕ್ಕೆ ಯಲಹಂಕ ವೈಮಾನಿಕ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿಯನ್ನು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್​ಚಂದ್​ ಗೆಲ್ಹೋಟ್​, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​, ಮಾಜಿ ಸಿಎಂ‌ ಬಿ.ಎಸ್​.ಯಡಿಯೂರಪ್ಪ ಪ್ರಧಾನಿ ಅವರನ್ನು ಸ್ವಾಗತಿಸಿದರು.


ನಂತರ ಯಲಹಂಕ ವೈಮಾನಿಕ ವಾಯುನೆಲೆಯಿಂದ ನೇರವಾಗಿ ಭಾರತೀಯ ವಿಜ್ಞಾನ ಸಂಸ್ಥೆಗೆ ತೆರಳಿದ ಅವರು ಮೆದುಳು ಸಂಶೋಧನಾ ಕೇಂದ್ರ ಉದ್ಘಾಟನೆ ಮಾಡಿದರು. ನಂತರ ಬಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಬಳಿಕ,

ಮಧ್ಯಾಹ್ನ 1.45ಕ್ಕೆ ಜ್ಞಾನಭಾರತಿ, ಡಾ.ಬಿ.ಆರ್​.ಅಂಬೇಡ್ಕರ್​ ಸ್ಕೂಲ್​ ಆ​ಕಎಕನಾಮಿಕ್ಸ್​ (ಬೇಸ್​) ವಿವಿ ಕ್ಯಾಂಪಸ್​ ಉದ್ಘಾಟನೆ, ಮೇಲ್ದರ್ಜೆಗೇರಿಸಿದ 150 ಐಟಿಐಗಳ ಲೋಕಾರ್ಪಣೆ ಮಾಡಲಿದ್ದಾರೆ.

ಮಧ್ಯಾಹ್ನ 2.45ಕ್ಕೆ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಸಬ್​ರ್ಬನ್​ ರೈಲ್ವೆ ಮಾರ್ಗ ನಿರ್ಮಾಣ ಸೇರಿ ವಿವಿಧ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಲಿದೆ.
ಮೈಸೂರಿನಲ್ಲಿ ನಾಳೆ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದು ಪ್ರಧಾನಿ ಮೋದಿ ಅವರ ಭೇಟಿಯ ಮುಖ್ಯ ಉದ್ದೇಶವಾಗಿದ್ದು,

ಅದರೊಂದಿಗೆ ಅಭಿವೃದ್ಧಿ ಪಥವನ್ನು ಜೋಡಿಸಿ ಬೆಂಗಳೂರು ಬ್ರಾಂಡ್​ಗೆ ಹೊಸ ಹೊಳಪು ನೀಡಲು ರಾಜ್ಯ ನಾಯಕತ್ವ ಮುಂದಾಗಿದೆ. ಬಹುಸಾವಿರ ಕೋಟಿ ರೂ.ಗಳ ಮೊತ್ತದ ಯೋಜನೆಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಗಳೆಲ್ಲ ಬೆಂಗಳೂರು ಕೇಂದ್ರಿತವಾಗಿದೆ.

ದೆಹಲಿಯಿಂದ ಹೊರಡುವ ವೇಳೆ ಕನ್ನಡ ಭಾಷೆಯಲ್ಲಿ “ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವೆ” ಎಂದು ಟ್ವಿಟ್‌ ಮಾಡಿದ್ದರು.

LEAVE A REPLY

Please enter your comment!
Please enter your name here

Hot Topics

ಮಹಾ ಪಾಲಿಟಿಕ್ಸ್‌: ಮಹಾರಾಷ್ಟ್ರದ ಸ್ಪೀಕರ್‌ ಆಗಿ ಬಿಜೆಪಿಯ ರಾಹುಲ್‌ ಆಯ್ಕೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ಆಗಿ ಬಿಜೆಪಿಯ ರಾಹುಲ್‌ ನರ್ವೇಕರ್‌ ಆಯ್ಕೆಯಾಗಿದ್ದಾರೆ.ಬಿಜೆಪಿಯ ಅಭ್ಯರ್ಥಿ ರಾಹುಲ್‌ 164 ಮತಗಳನ್ನು ಪಡೆದು ಸ್ಪೀಕರ್‌ ಆಗಿ ಆಯ್ಕೆಯಾದರು.ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಶಿವಸೇನಾದ ಶಾಸಕ ರಾಜನ್‌...

ಮರವಂತೆಯಲ್ಲಿ ಸಮುದ್ರಪಾಲಾದ ಕಾರು: ಓರ್ವ ಸ್ಪಾಟ್ ಡೆತ್-ಓರ್ವ ನಾಪತ್ತೆ

ಕುಂದಾಪುರ: ಚಲಿಸುತ್ತಿದ್ದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರ ಪಾಲಾಗಿ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿ ಇಬ್ಬರು ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದಂತಹ ದಾರುಣ ಘಟನೆ ಉಡುಪಿ...

ಕುವೈಟ್‌-ಮಂಗಳೂರು ಪ್ರಯಾಣಿಕನ ಜೊತೆ ಸಿಬ್ಬಂದಿ ಉದ್ಧಟತನ: ಕ್ಷಮೆ ಕೇಳಿದ ಏರ್‌ಇಂಡಿಯಾ

ಮಂಗಳೂರು: ಕುವೈಟ್‌ನಿಂದ ಮಂಗಳೂರಿಗೆ ಹೊರಡುವ ವೇಳೆ ಕುವೈಟ್‌ನ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕ ಉದ್ಧಟತನದ ವರ್ತನೆ ಬಗ್ಗೆ ದೂರಿದ ಮಂಗಳೂರಿಗರೊಬ್ಬರಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಕ್ಷಮೆ ಕೋರಿದ ಘಟನೆ ನಿನ್ನೆ ನಡೆದಿದೆ.ಕುವೈತ್‌ನ ಅನಿವಾಸಿ ಭಾರತೀಯ,...